* ಅಂಡರ್ 17 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಪಂದ್ಯದಲ್ಲೇ ಶಾಕ್
* ಭಾರತ ಬಲಿಷ್ಠ ಅಮೆರಿಕ ವಿರುದ್ಧ 0-8 ಗೋಲುಗಳಿಂದ ಸೋಲು
* ಅಗ್ರ ಸ್ಥಾನದಲ್ಲಿರುವ ಅಮೆರಿಕಕ್ಕೆ 58ನೇ ರ‍್ಯಾಂಕಿಂಗ್‌ನ ಭಾರತ ಯಾವ ಕ್ಷಣದಲ್ಲೂ ಪೈಪೋಟಿ ನೀಡಲಿಲ್ಲ
ಭುವನೇಶ್ವರ್(ಅ.12): ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಆತಿಥ್ಯ ಭಾರತ ಸೋಲಿನ ಆರಂಭ ಪಡೆದಿದೆ. ಮಂಗಳವಾರ ಭುವನೇಶ್ವರ್‌ದಲ್ಲಿ ನಡೆದ ಪಂದ್ಯದಲ್ಲಿ ಭಾರತ ಬಲಿಷ್ಠ ಅಮೆರಿಕ ವಿರುದ್ಧ 0-8 ಗೋಲುಗಳಿಂದ ಪರಾಭವಗೊಂಡಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕಕ್ಕೆ 58ನೇ ರ‍್ಯಾಂಕಿಂಗ್‌ನ ಭಾರತ ಯಾವ ಕ್ಷಣದಲ್ಲೂ ಪೈಪೋಟಿ ನೀಡಲಿಲ್ಲ. ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಭಾರತ ಒಂದೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಅಮೆರಿಕದ ವೇಗಕ್ಕೆ ನಡುಗಿದ ಭಾರತೀಯ ಆಟಗಾರ್ತಿಯರು, ಚೆಂಡಿನ ಮೇಲೆ ಹಿಡಿತ ಸಾಧಿಸಲು ತಿಣುಕಾಡಿದರು.
ಅಮೆರಿಕ ಪರ 9 ಹಾಗೂ 31 ನಿಮಿಷದಲ್ಲಿ ಮೆಲಿನಾ ರೆಬಿಂಬಾಸ್ 2 ಗೋಲು ಬಾರಿಸಿದರೆ, ಶಾರ್ಲೊಟ್ ಕೊಹ್ಲೆರ್(15ನೇ ನಿ.), ಒನ್ಯೆಕ(23ನೇ ನಿ.), ಥಾಂಪ್ಸನ್(39ನೇ ನಿ.), ಎಲ್ಲಾ ಎಮ್ರಿ(51ನೇ ನಿ.), ಸುಯರೆಜ್(59ನೇ ನಿ.) ಹಾಗೂ ಬುಟಾ 62ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯತಂದುಕೊಟ್ಟರು. ಮಂಗಳವಾರ ನಡೆದ ‘ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮೊರಕ್ಕೊ ವಿರುದ್ಧ ಬ್ರೆಜಿಲ್ 1-0 ಗೋಲಿನ ಜಯ ಸಾಧಿಸಿತು.
The much awaited U-17 Women’s World Cup India 2022 kicks off to a fiery start at the .
Union Ministers , , & CM grace the inaugural of the tournament. pic.twitter.com/aWH96u0lLM
undefined
ಇನ್ನು ಭಾರತ ಕಿರಿಯರ ಮಹಿಳಾ ಫುಟ್ಬಾಲ್ ತಂಡವು ಅಕ್ಟೋಬರ್ 14ರಂದು ಮೊರಾಕ್ಕೊ, ಅಕ್ಟೋಬರ್ 17ರಂದು ಬಲಿಷ್ಠ ಬ್ರೆಜಿಲ್ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಒರಿಸ್ಸಾದ ಭುವನೇಶ್ವರ, ಮಹಾರಾಷ್ಟ್ರದ ನವಿ ಮುಂಬೈ ಮತ್ತು ಗೋವಾದ ಮಾರ್ಗೋ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ‘ಬಿ’ ಗುಂಪಿನಲ್ಲಿ ಜರ್ಮನಿ, ನೈಜೀರಿಯಾ, ಚಿಲಿ, ನ್ಯೂಜಿಲೆಂಡ್, ‘ಸಿ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಸ್ಪೇನ್, ಕೊಲಂಬಿಯಾ, ಮೆಕ್ಸಿಕೋ, ಚೀನಾ ತಂಡಗಳಿವೆ. ‘ಡಿ’ ಗುಂಪಿನಲ್ಲಿ ಜಪಾನ್, ತ್ಯಾಂಜೇನಿಯಾ, ಕೆನಡಾ ಮತ್ತು ಫ್ರಾನ್ಸ್ ತಂಡಗಳು ಸ್ಥಾನ ಪಡೆದಿವೆ.
ಮಗಳ ಹೆಸರಲ್ಲಿ ನಿರ್ಮಾಣವಾಗ್ತಿರೋ ರಸ್ತೆಗೆ, ಆಕೆಯ ತಾಯಿಯೇ ದಿನಗೂಲಿ ವರ್ಕರ್!
ಅಕ್ಟೋಬರ್ 30ರಂದು ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ. 2020ರಲ್ಲೇ ಭಾರತ ಟೂರ್ನಿ ಆಯೋಜಿಸಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಟೂರ್ನಿ ರದ್ದಾಯಿತು. ಹೀಗಾಗಿ 2022ರ ಆವೃತ್ತಿಯ ಆತಿಥ್ಯ ಹಕ್ಕನ್ನು ಭಾರತಕ್ಕೆ ನೀಡಲಾಯಿತು. ಕೆಲ ವರ್ಷಗಳ ಹಿಂದೆ ಪುರುಷರ ಅಂಡರ್-17 ವಿಶ್ವಕಪ್‌ಗೂ ಭಾರತ ಆತಿಥ್ಯ ವಹಿಸಿತ್ತು.
2023ರ ಎಎಫ್‌ಸಿ ಕಪ್‌ಗೆ ಭಾರತ ಕಿರಿಯರ ತಂಡ
ದಮ್ಮಾನ್(ಸೌದಿ ಅರೇಬಿಯಾ): 2023ರ ಎಎಫ್‌ಸಿ ಅಂಡರ್-17 ಏಷ್ಯನ್ ಕಪ್ ಟೂರ್ನಿಗೆ ಭಾರತ ಫುಟ್ಬಾಲ್ ತಂಡ ಅರ್ಹತೆ ಪಡೆದಿದೆ. ಅರ್ಹತಾ ಟೂರ್ನಿಯ ಅಂತಿಮ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಲ್ಲಿ ಸೋತರೂ, ಟೂರ್ನಿಯಲ್ಲಿ ಗಳಿಸಿದ ಒಟ್ಟು ಗೆಲುವುಗಳ ಪರಿಣಾಮ ಪ್ರಧಾನ ಹಂತಕ್ಕೆ ಪ್ರವೇಶ ಪಡೆಯಿತು. ಟೂರ್ನಿಯಲ್ಲಿ ಭಾರತ ಮಾಲ್ಡೀವ್ಸ್, ಕುವೈಟ್ ಹಾಗೂ ಮ್ಯಾನ್ಮಾರ್ ವಿರುದ್ಧ ಗೆಲುವು ಸಾಧಿಸಿತ್ತು.
ಇಂಡಿಯನ್ ಸೂಪರ್ ಲೀಗ್: ಒಡಿಶಾಗೆ ರೋಚಕ ಗೆಲುವು
ಜಮ್ಷೆಡ್‌ಪುರ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಒಡಿಶಾ ಎಫ್‌ಸಿ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಒಡಿಶಾ, ಜಮ್ಷೆಡ್‌ಪುರ ಎಫ್‌ಸಿ ವಿರುದ್ದ 3-2 ಗೋಲುಗಳಿಂದ ಜಯ ಗಳಿಸಿತು