ಪುಟ್ಬಾಲ್ ದಿಗ್ಗಜ ಮರಡೋನಾಗೆ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪದ ಗೌರವ ನಮನ!

By Suvarna News  |  First Published Nov 26, 2020, 9:22 PM IST

ಫುಟ್ಬಾಲ್ ದಂತಕಂತೆ ಡಿಯಾಗೋ ಮರಡೋನಾ ಅಗಲಿಕೆಗೆ ಫುಟ್ಬಾಲ್ ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು ಕಂಬನಿ ಮಿಡಿದ್ದಾರೆ. ಇದೀಗ ವಿಶ್ವ ವಿಖ್ಯಾತ ಮರಳು ಶಿಲ್ಪಗಾರ ಸುದರ್ಶನ್ ಪಟ್ನಾಯಕ್ ಗೌರವ ನಮನ ಸಲ್ಲಿಸಿದ್ದಾರೆ.


ಪುರಿ(ನ.26): ಫುಟ್ಬಾಲ್ ದಿಗ್ಗಜ ಡಿಯಗೋ ಮರಡೋನ(60) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮರಡೋನಾ ಅಗಲಿಕೆ ಕ್ರೀಡಾಭಿಮಾನಿಗಳಿಗೆ ಆಘಾತ ತಂದಿದೆ. ಫುಟ್ಬಾಲ್ ದಿಗ್ಗಜರು, ಕ್ರಿಕೆಟ್ ಲೆಜೆಂಡ್, ಸೆಲೆಬ್ರೆಟಿಗಳು ಸೇರಿದಂತೆ ಪ್ರತಿ ಕ್ಷೇತ್ರದ ಗಣ್ಯರು ಮರಡೋನಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದೀಗ ಖ್ಯಾತ ಮರಳುಶಿಲ್ಪಗಾರ ಸುದರ್ಶನ್ ಪಟ್ನಾಯಕ್ ತಮ್ಮ ಮರಳುಶಿಲ್ಪದ ಮೂಕ ಗೌರವ ನಮನ ಸಲ್ಲಿಸಿದ್ದಾರೆ.

ನಂ 10, ಫುಟ್ಬಾಲ್‌ ದಂತಕಥೆ ಅರ್ಜೆಂಟೀನಾದ ಮರಡೋನಾ ಇನ್ನಿಲ್ಲ

Tap to resize

Latest Videos

undefined

ಪುರಿ ಕಡಲ ಕಿನಾರೆಯಲ್ಲಿ ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಶಿಲ್ಪದ ಮೂಲಕ ಮರಡೋನಾಗೆ ಗೌರವ ನಮಸ ಸಲ್ಲಿಸಿದ್ದಾರೆ. ವಿ ವಿಲ್ ಮಿಸ್ ಯುರ ಗೋಲ್ಸ್(ನಿಮ್ಮ ಗೋಲುಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ) ಎಂಬ ಬರಹದೊಂದಿಗೆ ಸುದರ್ಶನ್ ಮರಡೋನಾ ಪ್ರತಿಕೃತಿಯನ್ನು ಮರಳಿನಲ್ಲಿ ರಚಿಸಿದ್ದಾರೆ.

 

Tribute to the legendary football player Diego . My SandArt at Puri beach in India with message” We will miss your goals” pic.twitter.com/OuVoKYePFc

— Sudarsan Pattnaik (@sudarsansand)

ತಿಂಗಳ ಹಿಂದೆ ಮರಡೋನಾ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುದೀರ್ಘ ಚಿಕಿತ್ಸೆ ಬಳಿಕ ಚೇತರಿಕೊಂಡಿದ್ದರು. ಆದರೆ ಇದೀಗ ಹೃದಯಾಘಾತದಿಂದ ಮರಡೋನಾ ನಿಧನರಾಗಿದ್ದಾರೆ. ಅತಿಯಾದ ಧೂಮಪಾನ ಹಾಗೂ ಮಧ್ಯಪಾನದಿಂದ ಮರಡೋನಾ ಆರೋಗ್ಯ ಹಲವು ಬಾರಿ ಏರುಪೇರಾಗಿತ್ತು. 

1986ರಲ್ಲಿ ಅರ್ಜಂಟೀನಾ ಫುಟ್ಬಾಲ್ ವಿಶ್ವಕಪ್ ಗೆಲುವಿನಲ್ಲಿ ಡಿಯಾಗೋ ಮರಡೋನಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. 4 ಫಿಪಾ ವಿಶ್ವಕಪ್ ಟೂರ್ನಿ ಆಡಿರುವ ಮರಡೋನಾ ಒಟ್ಟು 91 ಪಂದ್ಯದಿಂದ 34 ಗೋಲು ಸಿಡಿಸಿದ್ದಾರೆ. ಹ್ಯಾಂಡ್ ಆಫ್ ಗಾಡ್ ಎಂದೇ ಪ್ರಖ್ಯಾತಿಗೊಂಡಿರುವ ಮರಡೋನಾ ಅಗಲಿಕೆ ಫುಟ್ಬಾಲ್ ಕ್ಷೇತ್ರವನ್ನೇ ಬಡವಾಗಿಸಿದೆ.
 

click me!