ಸಂತೋಷ್ ಟ್ರೋಫಿ ಸೆಮೀಸ್‌ನಲ್ಲಿಂದು ಕರ್ನಾಟಕಕ್ಕೆ ಸರ್ವಿಸಸ್ ಎದುರಾಳಿ
ಮೊದಲ ಬಾರಿಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸೆಮೀಸ್ ಕದನ
ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 04ರಂದು ನಡೆಯಲಿದೆ
ರಿಯಾದ್(ಮಾ.01): ಪ್ರತಿಷ್ಠಿತ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ನಾಕೌಟ್ ಹಣಾಹಣಿಗೆ ಸೌದಿ ಅರೇಬಿಯಾದ ರಿಯಾದ್ ಕಿಂಗ್ ಫಹದ್ ಕ್ರೀಡಾಂಗಣ ವೇದಿಕೆ ಸಜ್ಜುಗೊಂಡಿದ್ದು, ಬುಧವಾರ ಸೆಮಿಫೈನಲ್ ಕರ್ನಾಟಕ ತಂಡ ಸರ್ವಿಸಸ್ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮೀಸ್ನಲ್ಲಿ ಪಂಜಾಬ್ ಹಾಗೂ ಮೇಘಾಲಯ ತಂಡಗಳು ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿ ಟೂರ್ನಿಯ ಪಂದ್ಯಗಳಿಗೆ ವಿದೇಶಿ ಕ್ರೀಡಾಂಗಣ ಅತಿಥ್ಯ ವಹಿಸಲಿದೆ.
ಟೂರ್ನಿಯ ಅಂತಿಮ ಸುತ್ತಿನಲ್ಲಿ ‘ಎ’ ಗುಂಪಿನಲ್ಲಿದ್ದ ಕರ್ನಾಟಕ ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾದೊಂದಿಗೆ 9 ಅಂಕ ಪಡೆದಿತ್ತು. ಅತ್ತ ಸರ್ವಿಸಸ್ 5 ಪಂದ್ಯಗಳಲ್ಲಿ 4 ಗೆಲುವು, 1 ಡ್ರಾದೊಂದಿಗೆ 13 ಅಂಕ ಸಂಪಾದಿಸಿತ್ತು. ಟೂರ್ನಿಯ ಫೈನಲ್ ಪಂದ್ಯ ಮಾ.4ರಂದು ನಡೆಯಲಿದೆ.
undefined
ಪಂದ್ಯ: ರಾತ್ರಿ 9ಕ್ಕೆ
ರಾಷ್ಟ್ರೀಯ ಬ್ಯಾಡ್ಮಿಂಟನ್: ರಾಜ್ಯದ ಮಿಥುನ್ಗೆ ಪ್ರಶಸ್ತಿ
ಪುಣೆ: 84ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಮಿಥುನ್ ಮಂಜುನಾಥ್ ಪುರುಷರ ಸಿಂಗಲ್ಸ್ನಲ್ಲಿ ಚಾಂಪಿಯನ್ ಆಗಿದ್ದಾರೆ. ಟೂರ್ನಿಯಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸಿದ ಮಿಥುನ್ ಫೈನಲ್ನಲ್ಲಿ ಪ್ರಿಯಾನ್ಶು ರಾಜಾವತ್ರನ್ನು ಸೋಲಿಸಿದರು. ಇನ್ನು ಮಹಿಳಾ ಸಿಂಗಲ್ಸ್ನಲ್ಲಿ ಅನುಪಮಾ ಉಪಾಧ್ಯಾಯ, ಆಕರ್ಷಿ ಕಶ್ಯಪ್ರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಮಹಿಳಾ ಡಬಲ್ಸ್ನಲ್ಲಿ ಗಾಯತ್ರಿ-ತ್ರೀಸಾ ಜಾಲಿ, ಮಿಶ್ರ ಡಬಲ್ಸ್ನಲ್ಲಿ ಹೇಮನಾಗೇಂದ್ರ ಬಾಬು-ಕನಿಕಾ ಕನ್ವಾಲ್, ಪುರುಷರ ಡಬಲ್ಸ್ನಲ್ಲಿ ಕುಶಾಲ್ ರಾಜ್-ಪ್ರಕಾಶ್ ರಾಜ್ ಚಾಂಪಿಯನ್ ಎನಿಸಿಕೊಂಡರು.
ಮೇ 21ಕ್ಕೆ ಬೆಂಗ್ಳೂರು 10ಕೆ ಮ್ಯಾರಥಾನ್
ಬೆಂಗಳೂರು: 15ನೇ ಆವೃತ್ತಿಯ ಪ್ರತಿಷ್ಠಿತ ಬೆಂಗಳೂರು 10ಕೆ ಮ್ಯಾರಥಾನ್ ಮೇ 21ರಂದು ನಡೆಯಲಿದೆ ಎಂದು ಆಯೋಜಕರು ಘೋಷಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಮ್ಯಾರಥಾನ್ನಲ್ಲಿ ದೇಶ ಹಾಗೂ ವಿದೇಶದ ಹಲವು ಎಲೈಟ್ ಅಥ್ಲೀಟ್ಗಳು ಸೇರಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮಾ.1ರಿಂದ ನೋಂದಣಿ ಆರಂಭಗೊಂಡಿದ್ದು, ಏ.28ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
IPL 2023 ಟೂರ್ನಿ ಆರಂಭಕ್ಕೂ ಮುನ್ನ ಮುಂಬೈಗೆ ಶಾಕ್, ಜಸ್ಪ್ರೀತ್ ಬುಮ್ರಾ ಔಟ್!
ವಿಚಾರಣೆಗೆ ಹಾಜರಾದ ಬ್ರಿಜ್ಭೂಷಣ್ ಸಿಂಗ್
ನವದೆಹಲಿ: ಕುಸ್ತಿಪಟುಗಳಿಂದ ಲೈಂಗಿಕ ದೌರ್ಜನ್ಯ ಸೇರಿದಂತೆ ಕೆಲ ಗಂಭೀರ ಆರೋಪಗಳನ್ನು ಹೊತ್ತುಕೊಂಡಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಮಂಗಳವಾರ ತನಿಖಾ ಸಮಿತಿ ಮುಂದೆ ಹಾಜರಾಗಿ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಸುಮಾರು 20ರಷ್ಟುಕಾರ್ಯಕರ್ತರ ಜೊತೆ ಆಗಮಿಸಿದ ಅವರನ್ನು, ಸಮಿತಿಯು 3 ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಅತಿ ಹೆಚ್ಚು ವಾರ ನಂ.1 ಸ್ಥಾನ: ಜೋಕೋ ದಾಖಲೆ
ಲಂಡನ್: 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ ಟೆನಿಸ್ ವಿಶ್ವ ರಾರಯಂಕಿಂಗ್‌ನಲ್ಲಿ ನಂ.1 ಆಟಗಾರನಾಗಿ 378ನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟಾರೆ ಪುರುಷ, ಮಹಿಳಾ ಟೆನಿಸ್ನಲ್ಲಿ ಅತಿಹೆಚ್ಚು ವಾರ ನಂ.1 ಸ್ಥಾನ ಪಡೆದ ಟೆನಿಸಿಗ ಎಂಬ ದಾಖಲೆ ಬರೆದಿದ್ದಾರೆ.
2011ರ ಜುಲೈನಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದ ಜೋಕೋ ಸದ್ಯ 6,980 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ. ಅವರು 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ, ಜರ್ಮನಿಯ ಸ್ಟೆಫಿ ಗ್ರಾಫ್(377 ವಾರ) ಅವರ ದಾಖಲೆ ಮುರಿದಿದ್ದಾರೆ. ಮಾರ್ಟಿನಾ ನವ್ರಾಟಿಲೋವಾ 332, ಸೆರೆನಾ ವಿಲಿಯಮ್ಸ್ 319, ರೋಜರ್ ಫೆಡರರ್ 310 ವಾರಗಳ ಕಾಲ ರಾರಯಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.