Santosh Trophy: ಕರ್ನಾಟಕ ಫುಟ್ಬಾಲ್ ತಂಡ ಸೆಮಿಫೈನಲ್‌ಗೆ ಲಗ್ಗೆ

By Kannadaprabha News  |  First Published Feb 20, 2023, 9:40 AM IST

ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಸೆಮೀಸ್ ಪ್ರವೇಶ
4 ಬಾರಿ ಚಾಂಪಿ​ಯನ್‌ ಕರ್ನಾ​ಟಕ ಅಂತಿಮ ನಾಲ್ಕರ ಘಟ್ಟ ಪ್ರವೇಶ
‘ಎ’ ಗುಂಪಿ​ನಲ್ಲಿ 9 ಅಂಕ​ದೊಂದಿಗೆ 2ನೇ ಸ್ಥಾನ​ ಪಡೆದ ಕರ್ನಾಟಕ ಫುಟ್ಬಾಲ್ ತಂಡ


ಭುವ​ನೇ​ಶ್ವ​ರ(ಫೆ.20): ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾ​ಲ್‌ ಟೂರ್ನಿ​ಯ​ಲ್ಲಿ 4 ಬಾರಿ ಚಾಂಪಿ​ಯನ್‌ ಕರ್ನಾ​ಟಕ ಸೆಮಿ​ಫೈ​ನ​ಲ್‌ಗೆ ಲಗ್ಗೆ ಇಟ್ಟಿದೆ. ಟೂರ್ನಿ​ಯ ಅಂತಿಮ ಸುತ್ತಿನ ಕೊನೆಯ ಪಂದ್ಯ​ದಲ್ಲಿ ಭಾನು​ವಾರ ಒಡಿಶಾ ವಿರುದ್ಧ 2-2 ಗೋಲು​ಗ​ಳಿಂದ ಡ್ರಾ ಸಾಧಿ​ಸಿದ ರಾಜ್ಯ ತಂಡ ‘ಎ’ ಗುಂಪಿ​ನಲ್ಲಿ 9 ಅಂಕ​ದೊಂದಿಗೆ 2ನೇ ಸ್ಥಾನ​ ಪಡೆ​ಯಿತು. 

ನಿರ್ಣಾ​ಯಕ ಪಂದ್ಯ​ದಲ್ಲಿ ಪಂಜಾಬ್‌ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟ ಹಾಲಿ ಚಾಂಪಿ​ಯ​ನ್‌ ಕೇರ​ಳ​(8 ಅಂಕ) ಟೂರ್ನಿ​ಯಿಂದ ಹೊರ​ಬಿ​ತ್ತು. ಪಂಜಾಬ್‌(11 ಅಂಕ​) ಅಗ್ರ​ಸ್ಥಾ​ನಿ​ಯಾಗಿ ಸೆಮೀ​ಸ್‌​ಗೇ​ರಿ​ತು. ಭಾನು​ವಾ​ರದ ಪಂದ್ಯ​ದಲ್ಲಿ ಕರ್ನಾ​ಟಕ ಪರ ಸುನಿಲ್‌ ಕುಮಾ​ರ್‌​(17ನೇ ನಿಮಿ​ಷ) ಮೊದಲ ಗೋಲು ಬಾರಿ​ಸಿ​ದರು. ಬಳಿಕ ಒಡಿಶಾ 2 ಗೋಲು ದಾಖ​ಲಿಸಿ ಮುನ್ನಡೆ ಸಾಧಿ​ಸಿ​ದರೂ 50ನೇ ನಿಮಿ​ಷ​ದಲ್ಲಿ ಶಾಜನ್‌ ಫ್ರಾಂಕ್ಲಿನ್‌ ಬಾರಿಸಿದ ಗೋಲು ರಾಜ್ಯಕ್ಕೆ ಸೋಲು ತಪ್ಪಿ​ಸಿತು. ಸೆಮಿ​ಫೈ​ನಲ್‌, ಫೈನ​ಲ್‌ ಮಾ.1ರಿಂದ 4ರ ವರೆಗೆ ಸೌದಿ ಅರೇ​ಬಿ​ಯಾದ ರಿಯಾ​ದ್‌​ನಲ್ಲಿ ನಡೆ​ಯ​ಲಿದೆ.

Tap to resize

Latest Videos

undefined

ಏಷ್ಯಾ ಬ್ಯಾ​ಡ್ಮಿಂಟನ್‌: ಭಾರ​ತಕ್ಕೆ ಕಂಚಿನ ಪದ​ಕ

ದುಬೈ: ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ಐತಿ​ಹಾ​ಸಿಕ ಕಂಚಿನ ಪದಕ ಗೆದ್ದಿದೆ. ಶನಿ​ವಾರ ಚೀನಾ ವಿರು​ದ್ಧದ ಸೆಮಿ​ಫೈ​ನ​ಲ್‌​ನಲ್ಲಿ ಭಾರತ 2-3 ಅಂತ​ರ​ದಲ್ಲಿ ಸೋಲ​ನು​ಭ​ವಿಸಿ ಚೊಚ್ಚಲ ಬಾರಿ ಫೈನಲ್‌ ಪ್ರವೇ​ಶಿಸುವ ಅವ​ಕಾಶ ಕಳೆ​ದು​ಕೊಂಡಿತು.

ಆರಂಭಿಕ 2 ಪಂದ್ಯ​ಗ​ಳಲ್ಲಿ ಸೋತು 0-2 ಹಿನ್ನಡೆ ಅನು​ಭ​ವಿ​ಸಿ​ದರೂ ಬಳಿಕ ಪುಟಿ​ದೆದ್ದ ಭಾರತ ಕೊನೆ​ವ​ರೆಗೂ ಹೋರಾಟ ಪ್ರದ​ರ್ಶಿ​ಸಿತು. ಪುರು​ಷರ ಸಿಂಗ​ಲ್ಸ್‌​ನಲ್ಲಿ ಎಚ್‌.​ಎ​ಸ್‌.​ಪ್ರ​ಣಯ್‌, ಮಹಿಳಾ ಸಿಂಗ​ಲ್ಸ್‌​ನಲ್ಲಿ ಪಿ.ವಿ.​ಸಿಂಧು ಪರಾ​ಭ​ವ​ಗೊಂಡರು. ಆದರೆ ಪುರು​ಷರ ಡಬ​ಲ್ಸ್‌​ನಲ್ಲಿ ಧ್ರುವ್‌ ಕಪಿಲಾ-ಚಿರಾಗ್‌ ಶೆಟ್ಟಿಗೆಲುವು ಸಾಧಿ​ಸಿ​ದರೆ, ಮಹಿಳಾ ಡಬ​ಲ್ಸ್‌​ನಲ್ಲಿ ತೀಸಾ ಜಾಲಿ-ಗಾಯತ್ರಿ ಗೋಪಿ​ಚಂಗ್‌ ರೋಚ​ಕ​ವಾಗಿ ಗೆದ್ದರು. ಆದರೆ ಮಿಶ್ರ ಡಬ​ಲ್ಸ್‌​ನಲ್ಲಿ ಇಶಾ​ನ್‌ ಭಾಟ್ನ​ಗ​ರ್‌-ತನಿಶಾ ಕ್ರಾಸ್ಟೊಸೋಲ​ನು​ಭ​ವಿ​ಸಿ​ದ​ರು.

ಇಂದಿ​ನಿಂದ ಬೆಂಗ್ಳೂರು ಓಪನ್‌ ಟೆನಿಸ್‌ ಟೂರ್ನಿ

ಬೆಂಗ​ಳೂ​ರು: 5ನೇ ಆವೃ​ತ್ತಿಯ ಬೆಂಗ​ಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿ ಸೋಮ​ವಾರ ಕರ್ನಾ​ಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ​(​ಕೆ​ಎ​ಸ್‌​ಎ​ಲ್‌​ಟಿ​ಎ​)​ಯಲ್ಲಿ ಆರಂಭ​ವಾ​ಗ​ಲಿದ್ದು, ದಿಗ್ಗಜ ಆಟ​ಗಾರ ಸ್ವಿಡ​ನ್‌ನ ಬ್ಯೊರ್ನ್‌ ಬೊರ್ಗ್‌ ಅವರ ಪುತ್ರ ಲಿಯೊ ಬೊರ್ಗ್‌ ಸೇರಿ​ದಂತೆ ಹಲವು ತಾರೆಯ​ರು ಕಣ​ಕ್ಕಿ​ಳಿ​ಯ​ಲಿ​ದ್ದಾರೆ. 

ಟರ್ಕಿ ಭೂಕಂಪಕ್ಕೆ ಘಾನ ಫುಟ್ಬಾಲ್ ಪ್ಲೇಯರ್ ಅಟ್ಸು ಬಲಿ, ಖಚಿತಪಡಿಸಿದ ಮ್ಯಾನೇಜರ್!

ಭಾರ​ತದ ತಾರಾ ಟೆನಿಸಿಗ ಸುಮಿ​ತ್‌ ನಗಾಲ್‌ ಜೊತೆ ಕರ್ನಾ​ಟ​ಕದ ನಂ.1 ಆಟ​ಗಾರ ಪ್ರಜ್ವಲ್‌ ದೇವ್‌ ಟೂರ್ನಿಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆ​ದಿ​ದ್ದಾರೆ. ರಾಮ್‌​ಕು​ಮಾರ್‌ ರಾಮ​ನಾ​ಥನ್‌, ಅರ್ಜುನ್‌ ಖಾಡೆ, ಅನಿ​ರುದ್ಧ್ ಚಂದ್ರ​ಶೇ​ಕರ್‌ ಸೇರಿ​ದಂತೆ 6 ಮಂದಿ ಡಬ​ಲ್ಸ್‌​ಗೆ ನೇರ ಅರ್ಹತೆ ಪಡೆ​ದು​ಕೊಂಡಿ​ದ್ದಾ​ರೆ. ಹಾಲಿ ವಿಂಬ​ಲ್ಡನ್‌ ಡಬಲ್ಸ್‌ ಚಾಂಪಿ​ಯನ್‌ ಆಸ್ಪ್ರೇ​ಲಿ​ಯಾದ ಮ್ಯಾಕ್ಸ್‌ ಪರ್ಸೆಲ್‌ ಕೂಡಾ ಆಡ​ಲಿ​ದ್ದಾರೆ. ಟೂರ್ನಿಯ ಫೈನಲ್‌ ಫೆಬ್ರವರಿ 26ಕ್ಕೆ ನಡೆ​ಯ​ಲಿ​ದೆ.

ರಾಷ್ಟ್ರೀಯ ಮಹಿಳಾ ಹಾಕಿ: ಕ್ವಾರ್ಟ​ರ್‌ಗೆ ರಾಜ್ಯ ತಂಡ

ಕಾಕೀ​ನಾ​ಡ(ಆಂಧ್ರ ​ಪ್ರ​ದೇ​ಶ​): 13ನೇ ಆವೃ​ತ್ತಿಯ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಕರ್ನಾ​ಟಕ ಸತ​ತ 2 ಗೆಲುವು ಸಾಧಿ​ಸಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿದೆ. ಶನಿ​ವಾರ ಗೋವಾ ವಿರುದ್ಧ 10-0 ಭರ್ಜರಿ ಗೆಲುವು ಸಾಧಿ​ಸಿದ್ದ ರಾಜ್ಯ ತಂಡ, ಭಾನು​ವಾ​ರ ಚಂಡೀ​ಗಢ ವಿರುದ್ಧ 2-1 ಗೋಲು​ಗ​ಳಿಂದ ಜಯ​ಗ​ಳಿ​ಸಿತು. ಇದ​ರೊಂದಿಗೆ ‘ಬಿ’ ಗುಂಪಿ​ನಲ್ಲಿ ಕರ್ನಾ​ಟಕ ಅಗ್ರ​ಸ್ಥಾನ ಪಡೆ​ಯಿತು. ಫೆ.23ಕ್ಕೆ ಕ್ವಾರ್ಟರ್‌ ಫೈನಲ್‌ ನಡೆ​ಯ​ಲಿ​ದೆ.

click me!