ಟರ್ಕಿ ಭೂಕಂಪಕ್ಕೆ ಘಾನ ಫುಟ್ಬಾಲ್ ಪ್ಲೇಯರ್ ಅಟ್ಸು ಬಲಿ, ಖಚಿತಪಡಿಸಿದ ಮ್ಯಾನೇಜರ್!

By Suvarna News  |  First Published Feb 18, 2023, 4:40 PM IST

ಭೂಕಂಪಕ್ಕೂ ಕೆಲವೇ ಗಂಟೆಗೂ ಮುನ್ನ ವಿದೇಶಕ್ಕೆ ಹಾರಲು ಸಜ್ಜಾಗಿದ್ದ ಘಾನದ ಖ್ಯಾತ ಫುಟ್ಬಾಲ್ ಪಟು ಕ್ರಿಸ್ಟಿಯನ್ ಅಟ್ಸು, ಮ್ಯಾನೇಜರ್ ಮನವಿಯಿಂದ ಟರ್ಕಿಯಲ್ಲೇ ಉಳಿದುಕೊಂಡಿದ್ದರು. ಆದರೆ ಭೀಕರ ಭೂಕಂಪದಲ್ಲಿ ಅಟ್ಸು ಬಲಿಯಾಗಿರುವುದು ಖಚಿತವಾಗಿದೆ. ಅವಶೇಷಗಳಡಿಯಿಂದ ಅಟ್ಸು ಮೃತದೇಹ ಹೊರಕ್ಕೆ ತೆಗೆಯಲಾಗಿದೆ.


ಟರ್ಕಿ(ಫೆ.18): ಟರ್ಕಿ ಹಾಗೂ ಸಿರಿಯಾ ಭೂಕಂಪದಲ್ಲಿ ಮಡಿದವರ ಸಂಖ್ಯೆ 42 ಸಾವಿರ ದಾಟಿದೆ. ಘನಘೋರ ಭೂಕಂಪದ ಪರಿಣಾಮ, ನೋವು, ಆಕ್ರಂದನ , ಕಣ್ಣೀರ ಹನಿಗಳೇ ಎಲ್ಲೆಡೆ ಕಾಣುತ್ತಿದೆ. ಈ ಭೀಕರ ಭೂಕಂಪಕ್ಕೆ ಘಾನದ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯನ್ ಅಟ್ಸು ಬಲಿಯಾಗಿದ್ದಾರೆ. ಈ ಸುದ್ದಿಯನ್ನು ಅಟ್ಸು ಮ್ಯಾನಜೇರ್ ಖಚಿತಪಡಿಸಿದ್ದಾರೆ. ಭೂಕಂಪದ ಬಳಿಕ ಅಟ್ಸು ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅಟ್ಸು ಎಲ್ಲಿದ್ದಾರೆ? ಏನಾಗಿದ್ದಾರೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಟರ್ಕಿ ದಕ್ಷಿಣ ಪ್ರಾಂತ್ಯದ ಹಟೆೈ ಬಳಿ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸಿದೆ. ಈ ವೇಳೆ ಕ್ರಿಸ್ಟಿಯನ್ ಅಟ್ಸು ಮೃತದೇಹ ಪತ್ತೆಯಾಗಿದೆ. 

ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಬಹುತೇಕ ಕಟ್ಟಡಗಳು ನೆಲಮಗೊಂಡಿತ್ತು. ತೀವ್ರ ಗಾಯಗೊಂಡು ಕಟ್ಟದೊಳಗೆ ಸಿಲುಕಿದವರನ್ನು ರಕ್ಷಿಸಲು ಸಾಧ್ಯವಾಗದೇ ಹಲವರು ಮೃತಪಟ್ಟಿದ್ದರು. ಇತ್ತ ಕ್ರಿಸ್ಟಿಯಾನ್ ಅಟ್ಸು  ತಮ್ಮ ಮನೆಯಲ್ಲಿರುವಾಗಲೇ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ ಅಟ್ಸು ಮನೆ ನೆಲಸಮಗೊಂಡಿದೆ. ಹಟೈ ಭಾಗದಲ್ಲಿ ರಕ್ಷಣಾ  ತಂಡಗಳು ಕಾರ್ಯಾಚರಣೆ ಮಾಡಿ ಅವಶೇಷಗಳಡಿಯಿಂದ ಕ್ರಿಸ್ಟಿನ್ ಅಟ್ಸು ಮೃತದೇಹ  ಹೊರಕ್ಕೆ ತೆಗೆಯಲಾಗಿದೆ. ಅಸಂಖ್ಯಾತ ಅಭಿಮಾನಿಗಳು ಹಾಗೂ ನಮ್ಮ ಪ್ರಾರ್ಥನೆ ಫಲಿಸಲಿಲ್ಲ ಎಂದು ಮ್ಯಾನೇಜರ್ ಮುರಾತ್ ಉಜುನ್‌ಮೆಹ್ಮೆಟ್ ಹೇಳಿದ್ದಾರೆ.

Latest Videos

undefined

ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

ನೆಲಸಮಗೊಂಡ ಮನೆಯ ಅವಶೇಷಗಳಡಿ ಅಟ್ಸು ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಜೊತೆಗೆ ಅಟ್ಸು ಅವರ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಈ ಕುರಿತು ಘಾನಾ ಫುಟ್ಬಾಲ್ ಎಜೆಂಟ್ ನಾನಾ ಸೆಕೇರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅತೀವ ಭಾರ ಮನಸ್ಸಿನಿಂದ ಘೋಷಿಸುತ್ತಿದ್ದೇನೆ. ಟರ್ಕಿ ಭೂಕಂಪದ ಬಳಿಕ ನಾಪತ್ತೆಯಾಗಿದ್ದ ಫುಟ್ಬಾಲ್ ಕ್ರಿಸ್ಟಿಯನ್ ಅಟ್ಸು ಮೃತದೇಹ ಪತ್ತೆಯಾಗಿದೆ. ಈ ವಿಷಯ ಹೇಳಲು ತೀವ್ರ ನೋವಾಗುತ್ತಿದೆ. ಅಟ್ಸು ಕಳೆದುಕೊಂಡು ನೋವಿನಲ್ಲಿರುವ ಅವರ ಕುಟುಂಬ, ಆಪ್ತರು, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ, ಧೈರ್ಯ ತೆಗೆದುಕೊಳ್ಳಲಿ. ಇದೇ ವೇಳೆ ಅಟ್ಸುಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ನಾನೆ ಸೆಕೇರ್ ಹೇಳಿದ್ದಾರೆ.

2022ರ ಸೆಪ್ಟೆಂಬರ್ ತಿಂಗಳಲ್ಲಿ ಕ್ರಿಸ್ಟಿಯನ್ ಅಟ್ಸು ಟರ್ಕೀಶ್ ಸೂಪರ್ ಲಿಗ್ ಕ್ಲಬ್ ಹೈಟೈಸ್ಪೋರ್ ಸೇರಿಕೊಂಡಿದ್ದರು. ಅಟ್ಸು ಭೂಕಂಪ ಸಂಭವಿಸುವ ಕೆಲವೇ ಗಂಟೆಗಳ ಮೊದಲು ಲೀಗ್ ಟೂರ್ನಿಗಾಗಿ ವಿದೇಶಕ್ಕೆ ತೆರಲು ಸಜ್ಜಾಗಿದ್ದರು. ಆದರೆ ಘಾನಾ ಫುಟ್ಬಾಲ್ ಮ್ಯಾನೇಜರ್ ಮನವಿ ಮೇಲೆ ಟರ್ಕಿಯಲ್ಲಿ ಉಳಿದುಕೊಂಡಿದ್ದರು. ಸೂಪರ್ ಲಿಗ್ ಟೂರ್ನಿಯಲ್ಲಿ ಅಟ್ಸು ಅದ್ಭುತ ಗೋಲಿನಿಂದ ಹೈಟೈಸ್ಪೋರ್ ಗೆಲುವು ದಾಖಲಿಸಿತ್ತು. ಹೀಗಾಗಿ ಹೈಟೈಸ್ಪೋರ್ ಫುಟ್ಬಾಲ್ ಕ್ಲಬ್‌‌ಗಾಗಿ ಆಡುವಂತೆ ಮನವಿ ಮಾಡಿದ್ದರು. ಹೀಗಾಗಿ ಅಟ್ಸು ಟರ್ಕಿಯ ತಮ್ಮ ನಿವಾಸದಲ್ಲೇ ಉಳಿದುಕೊಂಡಿದ್ದರು. ಆದರೆ ಭೀಕರ ಭೂಕಂಪ ಅದ್ಬುತ ಆಟಗಾರನನ್ನು ಬಲಿಪಡೆದುಕೊಂಡಿತು.

1939ರ ಮರಣ ದಾಖಲೆ ಮುರಿದ ಟರ್ಕಿ ಭೂಕಂಪ: 35 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

ಟರ್ಕಿ ಹಾಗೂ ಸಿರಿಯಾದಲ್ಲಿ ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರವಾದ ಭೂಕಂಪ ಸಂಭವಿಸಿ 10 ದಿನಗಳು ಕಳೆದಿದ್ದರೂ ಮೃತದೇಹಗಳು ಪತ್ತೆಯಾಗುವುದು ಮಾತ್ರ ಮುಂದುವರೆದಿದೆ. ಗುರುವಾರ ಟರ್ಕಿಯಲ್ಲಿ ಸಾವಿಗೀಡಾದವರ ಸಂಖ್ಯೆ 36,187ಕ್ಕೆ ತಲುಪಿದ್ದು, ಸಿರಿಯಾದಲ್ಲಿ 5,900 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 42 ಸಾವಿರಕ್ಕೆ ಏರಿಕೆಯಾಗಿದೆ.

click me!