ಅಂಡರ್- 17 ಸ್ಯಾಫ್ ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ 2ನೇ ಜಯದೊಂದಿಗೆ ಸೆಮೀಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತ ಕಾಯುತ್ತಿದೆ.
ಥಿಂಪು(ಭೂತಾನ್): ಈ ಬಾರಿ ಅಂಡರ್- 17 ಸ್ಯಾಫ್ ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ 5 ಬಾರಿ ಚಾಂಪಿಯನ್ ಭಾರತ ತಂಡ, ಗುಂಪು ಹಂತದ 2ನೇ ಪಂದ್ಯದಲ್ಲಿ ಗುರುವಾರ ಮಾಲೀವ್ ವಿರುದ್ಧ ಸೆಣಸಾಡಲಿದೆ.
ಸತತ 2ನೇ ಜಯದೊಂದಿಗೆ ಸೆಮೀಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತ ಕಾಯುತ್ತಿದೆ. 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 1-0 ಗೋಲಿನ ಅಂತರದಲ್ಲಿ ಗೆದ್ದಿತ್ತು. ಆ ಬಳಿಕ ಮಾಲೀವ್ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ 1-1 ಗೋಲಿನಿಂದ ಡ್ರಾಗೊಂಡ ಕಾರಣ, ಬಾಂಗ್ಲಾ ಟೂರ್ನಿಯಿಂದಲೇ ಹೊರಬಿದ್ದಿದೆ. ಭಾರತ ಹಾಗೂ ಮಾಲೀವ್ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿವೆ.
ಸಬ್ ಜೂನಿಯರ್ ಫುಟ್ಬಾಲ್: ಚೊಚ್ಚಲ ಬಾರಿ ಕರ್ನಾಟಕ ಚಾಂಪಿಯನ್
ಮತ್ತೊಂದು ಗುಂಪಿನಲ್ಲಿ ಪಾಕಿಸ್ತಾನ ಸೇರಿ 4 ತಂಡಗಳಿದ್ದು, ಅಗ್ರ-2 ತಂಡಗಳು ಸೆಮೀಸ್‌ಗೇರಲಿವೆ. ಸೆ.28ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಪಿ.ವಿ.ಸಿಂಧುಗೆ ಅನೂಪ್ ಶ್ರೀಧರ್ ಹೊಸ ಕೋಚ್
ನವದೆಹಲಿ: ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಇನ್ನು ಮುಂದೆ ಹೊಸ್ ಕೋಚ್ ಜೊತೆ ತರಬೇತಿ ಪಡೆಯಲಿದ್ದಾರೆ. ಈ ಬಗ್ಗೆ ಸಿಂಧು ತಂದೆ ಪಿ.ವಿ. ರಮಣ ಮಾಹಿತಿ ನೀಡಿದ್ದು, ಅನೂಪ್ ಶ್ರೀಧರ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ.
‘ಸಿಂಧು ಇನ್ನು ಬೆಂಗಳೂರು ಬದಲು ಹೈದರಾಬಾದ್‌ನಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಅ.8ರಿಂದ ಆರ್ಕ್‌ಟಿಕ್ ಓಪನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರೆಗೆ ಕೋಚ್ ಆಗಿದ್ದ ಇಂಡೋನೇಷ್ಯಾದ ಆಗುಸ್ ಡ್ವಿ ಸಾಂಟೊಸ್ ಅವಧಿ ಮುಕ್ತಾಯಗೊಳ್ಳುತ್ತಿದ್ದೆ. ಹೀಗಾಗಿ ಅನೂಪ್ ಶ್ರೀಧರ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದಿದ್ದಾರೆ. 2 ಬಾರಿ ಒಲಿಂಪಿಕ್ಸ್ ಪದಕ ವಿಜೇಥ ಸಿಂಧು ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು.
ಪಾದ್ರಿಯಾಗಬೇಕೆಂದು ಬಯಸಿದ್ದ ಈ ಕ್ರಿಕೆಟಿಗ ವಿಶ್ವದ ಅಪಾಯಕಾರಿ ವೇಗಿ; ಈತನ ದಾಳಿಗೆ ಎದುರಾಳಿ ಪಡೆ 38 ರನ್‌ಗೆ ಆಲೌಟ್!
ಚಿನ್ನ ಗೆದ್ದ ಚೆಸ್ ಸಾಧಕರು
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳ ಆಟಗಾರರು ಟ್ರೋಫಿ ಜೊತೆ ಸಂಭ್ರಮಿಸಿದರು.
INDIA BECAME OLYMPIAD CHAMPIONS FOR THE FIRST TIME EVER. 🇮🇳
- They did "Rohit Sharma walk" while receving the Trophy.pic.twitter.com/rItbI45M8z
ಭಾರತ ಚಾಂಪಿಯನ್‌ಶಿಪ್‌ನಲ್ಲಿ ಮುಕ್ತ, ಮಹಿಳಾ ವಿಭಾಗದ ಜೊತೆ ಸಮಗ್ರ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಡಿ.ಗುಕೇಶ್, ಅರ್ಜುನ್ ಎರಿಗೈಸಿ, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್‌ವಾಲ್ ಚಿನ್ನದ ಪದಕ ಗೆದ್ದರು.