90ನೇ ಗೋಲು: ಸಕ್ರಿ​ಯ ಫುಟ್ಬಾ​ಲಿಗರ ಪಟ್ಟಿ​ಯ​ಲ್ಲಿ 4ನೇ ಸ್ಥಾನ​ಕ್ಕೇ​ರಿದ ಚೆಟ್ರಿ!

By Kannadaprabha News  |  First Published Jun 22, 2023, 10:03 AM IST

ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಮಣಿಸಿದ ಭಾರತ
ಪಾಕ್ ಎದುರು ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ಸುನಿಲ್ ಚೆಟ್ರಿ ಪಡೆ
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 90 ಗೋಲು ಬಾರಿಸಿದ ಸುನಿಲ್ ಚೆಟ್ರಿ


ಬೆಂಗ​ಳೂ​ರು(ಜೂ.22): ಪಾಕಿ​ಸ್ತಾನ ವಿರು​ದ್ಧದ ಸ್ಯಾಫ್‌ ಕಪ್‌ ಪಂದ್ಯ​ದಲ್ಲಿ ಹ್ಯಾಟ್ರಿಕ್‌ ಗೋಲು ಬಾರಿ​ಸುವ ಮೂಲಕ ಭಾರ​ತದ ನಾಯಕ ಸುನಿಲ್‌ ಚೆಟ್ರಿ ಅಂತಾ​ರಾ​ಷ್ಟ್ರೀಯ ಫುಟ್ಬಾಲ್‌ನಲ್ಲಿ 90 ಗೋಲು​ಗ​ಳನ್ನು ಪೂರೈ​ಸಿ​ದರು. ಇದ​ರೊಂದಿಗೆ ಸಕ್ರಿಯ ಫುಟ್ಬಾ​ಲಿಗರ ಪೈಕಿ ಅತಿ​ಹೆಚ್ಚು ಗೋಲು ಬಾರಿ​ಸಿದ ಆಟ​ಗಾರರ ಪಟ್ಟಿ​ಯಲ್ಲಿ ಮಲೇ​ಷ್ಯಾದ ಮೊಖ್ತಾರ್‌ ದಹಾರಿ(89) ಅವ​ರನ್ನು ಹಿಂದಿಕ್ಕಿ 4ನೇ ಸ್ಥಾನ​ಕ್ಕೇ​ರಿದರು.

138 ಪಂದ್ಯ​ಗ​ಳನ್ನು ಆಡಿ​ರುವ ಚೆಟ್ರಿ, ಅತಿ​ಹೆಚ್ಚು ಗೋಲು ಬಾರಿ​ಸಿರುವ ಏಷ್ಯಾ ಆಟ​ಗಾ​ರರ ಪೈಕಿ 2ನೇ ಸ್ಥಾನ​ದ​ಲ್ಲಿ​ದ್ದಾರೆ. ಒಟ್ಟಾರೆಯಾಗಿ ಪೋರ್ಚು​ಗಲ್‌ನ ಕ್ರಿಸ್ಟಿ​ಯಾನೋ ರೊನಾಲ್ಡೋ 123 ಗೋಲು​ಗ​ಳೊಂದಿಗೆ ಮೊದಲ ಸ್ಥಾನ​ದ​ಲ್ಲಿ​ದ್ದರೆ, ಇರಾನ್‌ನ ಅಲಿ ಡಾಯಿ 109 ಗೋಲು​ಗ​ಳೊಂದಿಗೆ 2ನೇ ಸ್ಥಾನ ಪಡೆ​ದಿ​ದ್ದಾರೆ. ಅರ್ಜೆಂಟೀ​ನಾದ ಲಿಯೋ​ನೆಲ್‌ ಮೆಸ್ಸಿ 103 ಗೋಲು ಬಾರಿಸಿ 3ನೇ ಸ್ಥಾನ ಪಡೆ​ದಿ​ದ್ದಾರೆ. 2005ರ ಜೂ.12ರಂದು ಭಾರತ ತಂಡಕ್ಕೆ ಪಾದಾ​ರ್ಪಣೆ ಮಾಡಿದ್ದ ಚೆಟ್ರಿ, ತಮ್ಮ ಚೊಚ್ಚಲ ಪಂದ್ಯ​ದಲ್ಲೇ ಮೊದಲ ಅಂತಾರಾಷ್ಟ್ರೀಯ ಗೋಲು ಬಾರಿ​ಸಿ​ದ್ದ​ರು.

Latest Videos

undefined

ಪಂದ್ಯಕ್ಕೆ 6 ಗಂಟೆ ಮೊದಲು ಬೆಂಗ್ಳೂ​ರಿಗೆ ಪಾಕಿ​ಸ್ತಾನ ತಂಡ!

ಬೆಂಗ​ಳೂ​ರು: ಪಾಕಿ​ಸ್ತಾನ ಆಟ​ಗಾ​ರರು 2 ಬ್ಯಾಚ್‌ಗಳಲ್ಲಿ ಬೆಂಗ​ಳೂ​ರಿಗೆ ಆಗ​ಮಿ​ಸಿ​ದರು. ಬುಧ​ವಾರ ಬೆಳ​ಗ್ಗಿನ ಜಾವ 1 ಗಂಟೆ ವೇಳೆಗೆ ಮಾರಿ​ಷಸ್‌ನಿಂದ ಮುಂಬೈಗೆ ಬಂದಿ​ಳಿದ ತಂಡದಲ್ಲಿ ಆಟ​ಗಾ​ರರು, ಕೋಚಿಂಗ್‌ ಸಿಬ್ಬಂದಿ ಸೇರಿ ಒಟ್ಟು 32 ಸದ​ಸ್ಯ​ರಿದ್ದು ಎಲ್ಲ​ರಿಗೂ ಒಂದೇ ವಿಮಾ​ನ​ದಲ್ಲಿ ಟಿಕೆಟ್‌ ಹೊಂದಿ​ಸಲು ಸಾಧ್ಯ​ವಾ​ಗ​ಲಿಲ್ಲ. ಈ ಕಾರ​ಣಕ್ಕೆ 2 ಬ್ಯಾಚ್‌ಗಳಲ್ಲಿ ತಂಡವು ಬೆಂಗ​ಳೂರು ತಲು​ಪಿತು. ಮೊದಲ ಬ್ಯಾಚ್‌ ಬೆಳಗ್ಗೆ 4 ಗಂಟೆಗೆ ಬೆಂಗ​ಳೂ​ರಿಗೆ ಹೊರ​ಟರೆ, 2ನೇ ಬ್ಯಾಚ್‌ ಬೆಳಗ್ಗೆ 9.15ರ ವಿಮಾ​ನ​ದಲ್ಲಿ ಪ್ರಯಾ​ಣಿಸಿತು. 2ನೇ ಬ್ಯಾಚ್‌ನಲ್ಲಿದ್ದ ಸದ​ಸ್ಯರು ಕಂಠೀ​ರವ ಕ್ರೀಡಾಂಗ​ಣದ ಬಳಿ ನಿಗ​ದಿ​ಯಾ​ಗಿ​ರುವ ಹೋಟೆಲ್‌ ತಲು​ಪಿ​ದಾಗ ಮಧ್ಯಾಹ್ನ 1 ಗಂಟೆ. ಅಂದರೆ ಪಂದ್ಯ ಆರಂಭ​ಗೊ​ಳ್ಳಲು ಕೇವಲ 6 ಗಂಟೆ ಮೊದಲು.

SAFF ಚಾಂಪಿಯನ್‌ಶಿಪ್ ಫುಟ್ಬಾಲ್, ಪಾಕಿಸ್ತಾನ ವಿರುದ್ಧ 4-0 ಅಂತರದಿಂದ ಭಾರತಕ್ಕೆ ಗೆಲುವು!

ಪಾಕ್‌ ತಂಡಕ್ಕೆ ಬಿಗಿ ಭದ್ರತೆ

ಬೆಂಗ​ಳೂ​ರಿಗೆ ಆಗ​ಮಿ​ಸಿ​ರುವ ಪಾಕಿ​ಸ್ತಾನ ತಂಡಕ್ಕೆ ಭಾರೀ ಭದ್ರತೆ ಒದ​ಗಿಸ​ಲಾ​ಗಿದೆ. ನಗ​ರದ ಪೊಲೀ​ಸರ ಸರ್ಪ​ಗಾ​ವ​ಲಿ​ನಲ್ಲಿ ತಂಡವು ಹೋಟೆಲ್‌ನಿಂದ ಪಂದ್ಯ, ಅಭ್ಯಾಸಕ್ಕೆ ತೆರ​ಳ​ಲಿದೆ. ಹೋಟೆಲ್‌ ಸುತ್ತಮು​ತ್ತಲು ನೂರಾರು ಪೊಲೀ​ಸ​ರನ್ನು ಭದ್ರತೆಗೆ ನಿಯೋ​ಜಿ​ಸ​ಲಾ​ಗಿದೆ. ಭದ್ರತಾ ತಂಡಕ್ಕೆ ಮಾಹಿತಿ ನೀಡದೆ, ಅವರ ಅನು​ಪ​ಸ್ಥಿ​ತಿ​ಯಲ್ಲಿ ಎಲ್ಲೂ ಹೊರ​ಹೋ​ಗ​ದಂತೆ ಪಾಕ್‌ ತಂಡ​ದ​ಲ್ಲಿ​ರುವ ಎಲ್ಲಾ ಸದ​ಸ್ಯ​ರಿಗೂ ಸೂಚಿ​ಸ​ಲಾ​ಗಿದೆ ಎಂದು ತಿಳಿ​ದು​ಬಂದಿದೆ.

ಕುವೈತ್‌ ಶುಭಾ​ರಂಭ

ಟೂರ್ನಿಯ ಉದ್ಘಾ​ಟನಾ ಪಂದ್ಯ​ದಲ್ಲಿ ನೇಪಾಳ ವಿರುದ್ಧ 3-1 ಗೋಲು​ಗ​ಳಿಂದ ಗೆದ್ದು ಕುವೈತ್‌ ಶುಭಾ​ರಂಭ ಮಾಡಿ​ತು. ಪಂದ್ಯ​ದು​ದ್ದಕ್ಕೂ ಚೆಂಡಿನ ಮೇಲೆ ಹಿಡಿ​ತ ಸಾಧಿ​ಸಿದ್ದ ಕುವೈತ್‌, ಮೊದ​ಲಾ​ರ್ಧ​ದಲ್ಲೇ 2 ಗೋಲು ಬಾರಿಸಿತು. ಬಳಿಕ 65ನೇ ನಿಮಿ​ಷ​ದಲ್ಲಿ ಮತ್ತೊಂದು ಗೋಲಿನ ಮೂಲಕ 3-0 ಮುನ್ನಡೆ ಪಡೆ​ಯಿತು. ಬಳಿಕ 4 ನಿಮಿ​ಷ​ಗಳ ನಂತರ ನೇಪಾಳ ಗೋಲು ಬಾರಿ​ಸಿ​ದರೂ ಸೋಲು ತಪ್ಪಿ​ಸ​ಲಾ​ಗ​ಲಿ​ಲ್ಲ.

ಇಂದಿನ ಪಂದ್ಯ​ಗ​ಳು

ಲೆಬ​ನಾ​ನ್‌-ಬಾಂಗ್ಲಾ​ದೇಶ, ಮಧ್ಯಾಹ್ನ 3.30ಕ್ಕೆ

ಮಾಲ್ಡೀ​ವ್‌್ಸ-ಭೂತಾನ್‌, ಸಂಜೆ 7.30ಕ್ಕೆ

ರೊನಾ​ಲ್ಡೋ​ 200 ಅಂತಾರಾಷ್ಟ್ರೀಯ ಪಂದ್ಯ: ಗಿನ್ನೆಸ್‌ ದಾಖ​ಲೆ!

ರೇಕ್‌​ಜಾ​ವಿ​ಕ್‌​(​ಐ​ಸ್‌​ಲೆಂಡ್‌​): ಫುಟ್ಬಾಲ್‌ ಮಾಂತ್ರಿಕ, ಪೋರ್ಚು​ಗ​ಲ್‌​ನ ಕ್ರಿಸ್ಟಿ​ಯಾನೋ ರೊನಾಲ್ಡೊ 200 ಅಂತಾ​ರಾ​ಷ್ಟ್ರೀಯ ಪಂದ್ಯ​ಗ​ಳ​ನ್ನಾ​ಡಿದ ಮೊದಲ ಆಟ​ಗಾರ ಎಂಬ ಹೆಗ್ಗ​ಳಿ​ಕೆಗೆ ಪಾತ್ರ​ರಾ​ಗಿದ್ದು, ಗಿನ್ನೆಸ್‌ ಬುಕ್‌ ಆಫ್‌ ರೆಕಾ​ರ್ಡ್‌ಗೆ ಸೇರ್ಪ​ಡೆ​ಗೊಂಡಿ​ದ್ದಾರೆ. 2003ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾ​ರ್ಪಣೆ ಮಾಡಿದ್ದ ರೊನಾಲ್ಡೋ ಮಂಗ​ಳ​ವಾರ ಐಸ್‌​ಲೆಂಡ್‌ ವಿರು​ದ್ಧದ ಯುರೋ​ಪಿ​ಯನ್‌ ಚಾಂಪಿ​ಯ​ನ್‌​ಶಿಪ್‌ ಅರ್ಹತಾ ಪಂದ್ಯ​ದ ಮೂಲಕ ಈ ಮೈಲಿ​ಗಲ್ಲು ಸಾಧಿ​ಸಿ​ದರು. 38 ವರ್ಷದ ರೊನಾಲ್ಡೋ ಪಂದ್ಯ​ದಲ್ಲಿ 1 ಗೋಲು ಬಾರಿ​ಸಿದ್ದು, ಒಟ್ಟು ಗೋಲು ಗಳಿ​ಕೆ​ಯನ್ನು 123ಕ್ಕೆ ಏರಿ​ಸಿ​ದರು

click me!