ಲಿಸ್ಬಾನ್(ಫೆ.28): ಪ್ರೈಮಿರಾ ಫುಟ್ಬಾಲ್ ಲೀಗ್ ಟೂರ್ನಿಯ ಬೆನಿಫಿಕಾ ಹಾಗೂ ವಿಟೋರಿಯಾ ಎಸ್‌ಸಿ ನಡುವಿನ ಫುಟ್ಬಾಲ್ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ಪಂದ್ಯದ ನಡುವೆ ಬದಲಿ ಆಟಗಾರನಾಗಿ ಕಣಕ್ಕಿಳಿದ ಉಕ್ರೇನ್ ಸ್ಟ್ರೈಕರ್ ರೊಮನ್ ಯರೆಮ್ಚುಕ್‌ಗೆ ಸಿಕ್ಕಿದ ಅಭೂತಪೂರ್ವ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಫುಟ್ಬಾಲ್ ಪಟು ಭಾವುಕರಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ರೋಮನ್‌ಗೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಬೆಂಬಲ ವ್ಯಕ್ತವಾಗಿದೆ.
ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್‌ಗೆ ವಿಶ್ವದೆಲ್ಲೆಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಇದು ಪ್ರೈಮಿರಾ ಲೀಗಾ ಟೂರ್ನಿಯಲ್ಲಿ ಕಂಡು ಬಂತು. ಪೋರ್ಚುಗಲ್‌ನ ಬೆನಿಫಿಕಾ ಕ್ಲಬ್ ತಂಡದ ಭಾಗವಾಗಿರುವ ಉಕ್ರೇನ್‌ನ ರೋಮನ್ ಯರೆಮ್ಚುಕ್, ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಬೆನಿಫಿಕಾ ಹಾಗೂ ವಿಟೋರಿಯಾ ನಡುವಿನ ಪಂದ್ಯದ ಪ್ಲೇಯಿಂಗ್ 11ನಲ್ಲಿ ರೋಮನ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಪಂದ್ಯದ 62ನೇ ನಿಮಿಷದಲ್ಲಿ ರೋಮನ್ ಬದಲಿ ಆಟಗಾರನಿಗಾ ಕಣಕ್ಕಿಳಿದಿದ್ದಾರೆ. ಈ ವೇಳೆ ಬೆನಿಫಿಕಾ ತಂಡದ ಅಭಿಮಾನಿಗಳು ಮಾತ್ರವಲ್ಲ, ವಿಟೋರಿಯಾ ತಂಡದ ಅಭಿಮಾನಿಗಳು ಎದ್ದು ನಿಂತು ಉಕ್ರೇನ್ ಫುಟ್ಬಾಲ್ ಪಟುಗೆ ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ. ಬಳಿಕ ರಷ್ಯಾ ದಾಳಿಯನ್ನು ನಿಲ್ಲಿಸಿ, ಉಕ್ರೇನ್ ಜೊತೆ ನಾವಿದ್ದೇವೆ. ಉಕ್ರೇನ್‌ಗೆ ನಮ್ಮ ಬೆಂಬಲವಿದೆ ಅನ್ನೋ ಬೋರ್ಡ್‌ಗಳನ್ನು ಪ್ರದರ್ಶಿಸಲಾಗಿತ್ತು. ಸಂಪೂರ್ಣ ಕ್ರೀಡಾಂಗಣ ಎದ್ದು ನಿಂತು ರೋಮನ್‌ಗೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿತ್ತು. ಈ ಸಂದರ್ಭದಲ್ಲಿ ರೋಮನ್ ಭಾವುಕರಾದರು. ಈ ವಿಡಿಯೋ ವೈರಲ್ ಆಗಿದೆ.
undefined
ಹಿಂಸಾಚಾರವನ್ನು ತಕ್ಷಣವೇ ಕೊನೆ ಮಾಡಿ, ಪುಟಿನ್ ಗೆ ಮೋದಿ ಮನವಿ!
ಈ ಪಂದ್ಯದಲ್ಲಿ ಮತ್ತೊಂದು ವಿಶೇಷ ಘಟನೆ ರೋಮನ್ ಕಣ್ಣಂಚಿನಲ್ಲಿ ನೀರು ಜಿನಗಿಸುತ್ತು. ಬದಲಿ ಆಟಗಾರನಾಗಿ ಅಖಾಡಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳು ಉಕ್ರೇನ್ ಆಟಗಾರನ ಬೆಂಬಲಕ್ಕೆ ನಿಂತುಕೊಂಡರು. ಇದೇ ವೇಳೆ ಬೆನಿಫಿಕಾ ತಂಡದ ನಾಯಕ, ಡಿಫೆಂಡರ್ ಜಾನ್ ವೆರ್ಟೋಂಘನ್ ಕ್ಯಾಪ್ಟನ್ ಬ್ಯಾಂಡ್ ತೆಗೆದು ರೋಮನ್‌ಗೆ ಕೈಗೆ ಹಾಕಿದ್ದಾರೆ. ಈ ಮೂಲಕ ಉಕ್ರೇನ್ ಫುಟ್ಬಾಲ್ ಪಟುವಿಗೆ ಬೆನಿಫಿಕಾ ತಂಡ ಅತ್ಯುನ್ನತ ಗೌರವ ನೀಡಿತು.
🇺🇦 This moment... Speachless! 🙌 pic.twitter.com/EpgNydnZer
— SL Benfica (@slbenfica_en)ಉಕ್ರೇನ್ ಮೇಲಿನ ದಾಳಿಗೆ ಕ್ರೀಡಾಂಗಣದಲ್ಲೂ ಹಲವರು ಬೋರ್ಡ್‌ಗಳ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಪೂರ್ಣ ಪಂದ್ಯದಲ್ಲಿ ಉಕ್ರೇನ್ ಪಟು ರೋಮನ್‌ಗೆ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಲೇ ಪ್ರೋತ್ಸಾಹ ನೀಡಿದರು. ಈ ಘಟನೆ ರೋಮನ್‌ನ್ನು ಮತ್ತಷ್ಟು ಭಾವುಕರನ್ನಾಗಿ ಮಾಡಿತು.
Russia- Ukraine Crisis: ಭಾರತೀಯರ ಏರ್‌ಲಿಫ್ಟ್‌ಗೆ ನಾಲ್ವರು ಸಚಿವರಿಗೆ ಹೊಣೆ
ಈ ಪಂದ್ಯದಲ್ಲಿ ಬೆನಿಫಿಕಾ ತಂಡ ದಿಟ್ಟ ಹೋರಾಟ ನೀಡಿತು. ಇಷ್ಟೇ ಅಲ್ಲ 3-0 ಅಂತರಿಂದ ವಿಟೋರಿಯಾ ತಂಡವನ್ನು ಮಣಿಸಿತು. ಪಂದ್ಯ ಮುಗಿದ ಬಳಿಕವೂ ರೋಮನ್‌ಗೆ ಅಭಿಮಾನಿಗಳು ಮತ್ತಷ್ಟು ಧೈರ್ಯ ನೀಡಿದ್ದಾರೆ. ಕ್ರೀಡಾ ಜಗತ್ತಿನ ಅಭಿಮಾನಿಗಳು ಉಕ್ರೇನ್ ಜೊತೆಗಿದೆ. ಎದೆಗುಂದಬೇಡಿ ಎಂಬ ಸಂದೇಶವನ್ನು ಅಭಿಮಾನಿಗಳು ಸಾರಿದ್ದಾರೆ.
ಬೆಲಾರಸ್‌ನಲ್ಲಿ ಸಂಧಾನಕ್ಕೆ ಉಕ್ರೇನ್ ಒಪ್ಪಿಗೆ
ಭಾರೀ ರಕ್ತಪಾತ ಮತ್ತು ಸಾವು-ನೋವಿಗೆ ಕಾರಣವಾಗಿರುವ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಭಾನುವಾರ ರಾತ್ರಿ ಮಹತ್ವದ ತಿರುವು ಪಡೆದುಕೊಂಡಿದೆ. ಸಂಧಾನಕ್ಕಾಗಿ ಬೆಲಾರಸ್‌ಗೆ ಬಂದಿರುವ ರಷ್ಯಾದ ನಿಯೋಗದ ಜತೆ ಉಕ್ರೇನ್ ನಿಯೋಗ ಶಾಂತಿ ಮಾತುಕತೆ ನಡೆಸಲಿದೆ ಎಂದು ಉಕ್ರೇನ್ ಅಧ್ಯಕ್ಷರ ಕಾರ್ಯಾಲಯ ಘೋಷಿಸಿದೆ.ಇನ್ನೂ ನಿಶ್ಚಯವಾಗದ ಬೆಲಾರಸ್ ಗಡಿಯ ಪ್ರದೇಶವೊಂದರಲ್ಲಿ ರಷ್ಯಾ ಮತ್ತು ಉಕ್ರೇನ್ ನಿಯೋಗಗಳು ಭೇಟಿಯಾಗಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರ ಕಚೇರಿ ತಿಳಿಸಿದೆ. ಆದರೆ ಈ ಸಂಧಾನ ಸಭೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಈ ನಡುವೆ, ಉಕ್ರೇನ್ ನಿಯೋಗದ ಭೇಟಿ ವೇಳೆ ಈ ಭಾಗದಲ್ಲಿ ಯಾವುದೇ ಯುದ್ಧವಿಮಾನಗಳ ಹಾರಾಟ ನಡೆಯುವುದಿಲ್ಲ ಹಾಗೂ ಯುದ್ಧ ಸಲಕರಣೆಗಳ ಬಳಕೆ ನಡೆಯುವುದಿಲ್ಲ ಎಂದು ಉಕ್ರೇನ್‌ಗೆ ಬೆಲಾರಸ್ ಭರವಸೆ ನೀಡಿದೆ.