Indian Super League: ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ

By Suvarna NewsFirst Published Feb 6, 2022, 9:34 AM IST
Highlights

* ಐಎಸ್‌ಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ

* ಜಮ್ಶೇಡ್‌ಪುರ ಎಫ್‌ಸಿ ವಿರುದ್ಧ ಬಿಎಫ್‌ಸಿಗೆ 3-1 ಅಂಕಗಳ ಜಯ

* 2 ಗೋಲು ಬಾರಿಸಿ ಮಿಂಚಿದ ಬಿಎಫ್‌ಸಿ ಸ್ಟಾರ್ ಫುಟ್ಬಾಲಿಗ ಕ್ಲೀಟನ್‌ ಸಿಲ್ವಾ 

ಬಾಂಬೊಲಿಮ್(ಫೆ.06)‌: 8ನೇ ಆವೃತ್ತಿಯ ಐಎಸ್‌ಎಲ್‌ (Indian Super League) ಫುಟ್ಬಾಲ್‌ ಲೀಗ್‌ನಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ (Bengaluru FC) ಹ್ಯಾಟ್ರಿಕ್‌ ಗೆಲುವು ದಾಖಲಿಸಿದೆ. ಶನಿವಾರ ಜಮ್ಶೇಡ್‌ಪುರ ಎಫ್‌ಸಿ (Jamshedpur FC) ವಿರುದ್ಧ ನಡೆದ ಪಂದ್ಯದಲ್ಲಿ ಬಿಎಫ್‌ಸಿ 3-1 ಗೋಲುಗಳಿಂದ ಜಯಭೇರಿ ಬಾರಿಸಿತು. ಪಂದ್ಯದ ಮೊಲದ ನಿಮಿಷದಲ್ಲೇ ಜಮ್ಶೇಡ್‌ಪುರ ಪರ ಡೇನಿಯಲ್‌ ಚಿಮಾ ಗೋಲು ಹೊಡೆದು ಮುನ್ನಡೆ ಸಾಧಿಸಿದರು. 

ಇದಾದ ಬಳಿಕ ಬಿಎಫ್‌ಸಿ ಪರ ನಾಯಕ ಸುನಿಲ್‌ ಚೆಟ್ರಿ (Sunil Chhetri) 55ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಕ್ಲೀಟನ್‌ ಸಿಲ್ವಾ 62 ಮತ್ತು 90ನೇ ನಿಮಿಷದಲ್ಲಿ ಗೋಲು ಹೊಡೆದು ತಂಡವನ್ನು ಗೆಲ್ಲಿಸಿದರು. 15 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಬಿಎಫ್‌ಸಿ 23 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದ್ದು, ಜಮ್ಶೇಡ್‌ಪುರ 4ನೇ ಸ್ಥಾನಕ್ಕೆ ಜಾರಿದೆ.

ಐಎಸ್‌ಎಲ್‌ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಮಾರ್ಗೋ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಪರಿಷ್ಕೃತ ವೇಳಾಪಟ್ಟಿಯನ್ನು ಆಯೋಜಕರು ಪ್ರಕಟಿಸಿದ್ದು, ಫೆಬ್ರವರಿ 9ರಿಂದ ಮಾರ್ಚ್ 7ರ ವರೆಗೆ ಒಟ್ಟು 25 ಪಂದ್ಯಗಳು ನಡೆಯಲಿವೆ. ಕೊರೋನಾ ವೈರಸ್ (Coronavirus) ಹಿನ್ನೆಲೆಯಲ್ಲಿ ಹಲವು ಪಂದ್ಯಗಳು ಮುಂದೂಡಿಕೆಯಾಗಿರುವುದರಿಂದ ಆಯೋಜಕರು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಎಟಿಕೆ ಮೋಹನ್‌ ಬಗಾನ್‌ ಹಾಗೂ ಜಮ್ಶೇಡ್‌ಪುರ ಎಫ್‌ಸಿ ನಡುವೆ ಮಾ.7ಕ್ಕೆ ಕೊನೆ ಪಂದ್ಯ ನಡೆಯಲಿದೆ. ಫೆಬ್ರವರಿ 19, ಫೆಬ್ರವರಿ 26 ಮತ್ತು ಮಾರ್ಚ್‌ 5ಕ್ಕೆ ಎರಡೆರಡು ಪಂದ್ಯಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

GET IN THERE, BENGALURU! 🔥

The Blues have come from behind to stop Jamshedpur's juggernaut and claim three points at the Bambolim. ⚡ pic.twitter.com/tOlvuWhpOO

— Bengaluru FC (@bengalurufc)

ಬೆಂಗಳೂರು ಓಪನ್‌ ಎಟಿಪಿ ಟೆನಿಸ್ ಟೂರ್ನಿ ಇಂದಿನಿಂದ ಆರಂಭ

ಬೆಂಗಳೂರು: 4ನೇ ಆವೃತ್ತಿಯ ಬೆಂಗಳೂರು ಓಪನ್‌ (Bengaluru Open) ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಗೆ ಭಾನುವಾರ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಂಗಣದಲ್ಲಿ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ 2 ಇವೆಂಟ್‌ಗಳಿದ್ದು, ಬೆಂಗಳೂರು ಓಪನ್‌ 1 ಫೆಬ್ರವರಿ 7ರಿಂದ 13ರ ವರೆಗೆ ನಡೆಯಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರ ಆರಂಭವಾಗಲಿದೆ. ಬಳಿಕ 2ನೇ ಇವೆಂಟ್‌ ಫೆಬ್ರವರಿ 14ರಿಂದ 20ರ ವರೆಗೆ ನಿಗದಿಯಾಗಿದೆ.

Pro Kabaddi League: ಫೆಬ್ರವರಿ 13ರ ವರೆಗಿನ ಪಂದ್ಯಗಳ ವೇಳಾಪಟ್ಟಿ ಪ್ರಕಟ

ಭಾರತದ ರಾಮನಾಥನ್‌ ರಾಮ್‌ಕುಮಾರ್‌ ಹಾಗೂ 2018ರ ಚಾಂಪಿಯನ್‌ ಪ್ರಜ್ಞೇಶ್‌ ಗುಣೇಶ್ವರನ್‌ ಪ್ರಧಾನ ಸುತ್ತಿಗೆ ನೇರ ಅರ್ಹತೆ ಗಿಟ್ಟಿಸಿದ್ದಾರೆ. ಸಾಕೇಶ್‌ ಮೈನನಿ ಹಾಗೂ ರಾಜ್ಯದ ಯುವ ಆಟಗಾರರಾದ ರಿಷಿ ರೆಡ್ಡಿ ಮತ್ತು ಎಸ್‌.ಡಿ ಪ್ರಜ್ವಲ್‌ ದೇವ್‌ ಅವರು ವೈಲ್ಡ್‌ ಕಾರ್ಡ್‌ ಮೂಲಕ ಅರ್ಹತೆ ಪಡೆದಿದ್ದಾರೆ. ಯೂಕಿ ಬಾಂಬ್ರಿ ಡಬಲ್ಸ್‌ನಲ್ಲಿ ಆಡಲಿದ್ದಾರೆ. ಚೆಕ್‌ ಗಣರಾಜ್ಯದ ಜಿರಿ ವೆಸ್ಲಿ, ಇಟಲಿಯ ಸ್ಟೆಫಾನೊ ಟ್ರವಾಗ್ಲಿಯಾ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. 26 ಮಂದಿ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದು, ಉಳಿದ 6 ಮಂದಿ ಅರ್ಹತಾ ಸುತ್ತಿನ ಮೂಲಕ ಪ್ರವೇಶಿಸಲಿದ್ದಾರೆ.

ಆಸೀಸ್‌ ಕೋಚ್‌ ಲ್ಯಾಂಗರ್‌ ದಿಢೀರ್‌ ರಾಜೀನಾಮೆ

ಮೆಲ್ಬರ್ನ್‌: ಆಸ್ಪ್ರೇಲಿಯಾ ಕ್ರಿಕೆಟ್‌ ತಂಡದ ಯಶಸ್ವಿ ಕೋಚ್‌ ಎನಿಸಿಕೊಂಡಿದ್ದ ಜಸ್ಟಿನ್‌ ಲ್ಯಾಂಗರ್‌ (Justin Langer) ತಮ್ಮ ಹುದ್ದೆಗೆ ಶನಿವಾರ ದಿಢೀರ್‌ ರಾಜೀನಾಮೆ ಘೋಷಿಸಿದ್ದಾರೆ. ಈ ಕುರಿತು ಕ್ರಿಕೆಟ್‌ ಆಸ್ಪ್ರೇಲಿಯಾ (Cricket Australia) ಮಾಹಿತಿ ನೀಡಿದ್ದು, ಲ್ಯಾಂಗರ್‌ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅಲ್ಪಾವಧಿಗೆ ಲ್ಯಾಂಗರ್‌ ಒಪ್ಪಂದ ವಿಸ್ತರಿಸಲಾಗಿತ್ತು. ಆದರೆ ಈ ಪ್ರಸ್ತಾಪವನ್ನು ಲ್ಯಾಂಗರ್‌ ನಿರಾಕರಿಸಿದ್ದಾರೆ ಎಂದು ತಿಳಿಸಿದೆ. 

ಸಹಾಯಕ ಕೋಚ್‌ ಆ್ಯಂಡ್ರೂ ಮೆಕ್‌ಡೊನಾಲ್ಡ್‌ರನ್ನು ಹಂಗಾಮಿ ಕೋಚ್‌ ಆಗಿ ನೇಮಿಸಲಾಗಿದೆ. 2018ರಲ್ಲಿ ಚೆಂಡು ವಿರೂಪ ಪ್ರಕರಣದ ಬಳಿಕ ಲ್ಯಾಂಗರ್‌ ಕೋಚ್‌ ಹುದ್ದೆ ಅಲಂಕರಿಸಿದ್ದರು. ಇವರ ಅವಧಿಯಲ್ಲೇ ಆಸೀಸ್‌ ತಂಡ ಟಿ20 ವಿಶ್ವಕಪ್‌ ಹಾಗೂ ಆ್ಯಷಸ್‌ ಸರಣಿ ಗೆದ್ದಿತ್ತು.

click me!