ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್‌ 55 ಲಕ್ಷ ರುಪಾಯಿಗೆ ಹರಾಜು!

Published : Apr 03, 2021, 12:00 PM IST
ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್‌ 55 ಲಕ್ಷ ರುಪಾಯಿಗೆ ಹರಾಜು!

ಸಾರಾಂಶ

ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ, ಸಿಟ್ಟಿನಲ್ಲಿ ಎಸೆದ ಆರ್ಮ್‌ಬ್ಯಾಂಡ್‌ ಬರೋಬ್ಬರಿ 55 ಲಕ್ಷ ರುಪಾಯಿ ಹರಾಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಲ್ಗ್ರೇಡ್‌(ಏ.03)‌: ಕಳೆದ ವಾರ ಇಲ್ಲಿ ಸರ್ಬಿಯಾ ವಿರುದ್ಧ ನಡೆದ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದ ವೇಳೆ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ, ಸಿಟ್ಟಿನಲ್ಲಿ ಎಸೆದ ಆರ್ಮ್‌ಬ್ಯಾಂಡ್‌ ಬರೋಬ್ಬರಿ 64,000 ಯುರೋಸ್‌(ಅಂದಾಜು 55.27 ಲಕ್ಷ ರು.)ಗೆ ಹರಾಜಾಗಿದೆ. 

ಮಾನವೀಯ ವಿಚಾರಗಳಿಗೆ ನೆರವಾಗುವ ಸರ್ಬಿಯಾದ ಸಂಸ್ಥೆಯೊಂದು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 6 ತಿಂಗಳ ಮಗುವೊಂದರ ಚಿಕಿತ್ಸೆಗೆ ಹಣ ಸಂಗ್ರಹಿಸಲು ಆನ್‌ಲೈನ್‌ನಲ್ಲಿ ನಡೆಸಿದ ಹರಾಜಿನಲ್ಲಿ, ಆರ್ಮ್‌ಬ್ಯಾಂಡ್‌ ಬಿಕರಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಲಿಯೋನೆಲ್ ಮೆಸ್ಸಿ ಒಂದು ವರ್ಷದ ಸಂಬಳ 1200 ಕೋಟಿ ರುಪಾಯಿ!

ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ರೊನಾಲ್ಡೊ: 
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿದ ಕ್ರೀಡಾಪಟು ಎನ್ನುವ ದಾಖಲೆ ಪೋರ್ಚುಗಲ್‌ ಫುಟ್ಬಾಲ್‌ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದೆ.ಪೋರ್ಚುಗಲ್‌ ತಾರಾ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (26.5 ಕೋಟಿ) ಅಗ್ರ ಸ್ಥಾನದಲ್ಲಿದ್ದಾರೆ. ಅರ್ಜೆಂಟಿನಾ ಫುಟ್‌ಬಾಲ್‌ ತಂಡದ ನಾಯಕ(18.6 ಕೋಟಿ) ಹಾಗೂ ಬ್ರೆಜಿನ್‌ನ ನೇಯ್ಮರ್‌(14.7 ಕೋಟಿ) ಕ್ರಮವಾಗಿ 2 ಮತ್ತು 3ನೇ ಸ್ಥಾನ ಹಂಚಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Virat Kohli: ಕೇನ್‌ಗೆ ವಿರಾಟ್ ಕೊಹ್ಲಿ ಹೃತ್ಪೂರ್ವಕ ಅಭಿನಂದನೆ: ಫುಟ್‌ಬಾಲ್ ದಿಗ್ಗಜನಿಗೆ ಕಿಂಗ್‌ ಕೊಹ್ಲಿ ಶ್ಲಾಘನೆ
Indian Super League: ISL ಪಂದ್ಯದಲ್ಲಿ ಕರ್ನಾಟಕದ ಅಪರೂಪದ ಸಾಧನೆ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮ್ಯಾಚ್!