ATK ಮೋಹನ್ ಬಗಾನ್ ಮಣಿಸಿ ಚೊಚ್ಚಲ ISL ಚಾಂಪಿಯನ್ ಪಟ್ಟ ಗೆದ್ದ ಮುಂಬೈ ಸಿಟಿ!

By Suvarna News  |  First Published Mar 13, 2021, 10:18 PM IST

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಸತತ ಹೋರಾಟ ನಡೆಸಿದ ಮುಂಬೈ ಸಿಟಿ ಎಫ್‌ಸಿ ಇದೇ ಮೊದಲ ಬಾರಿಗೆ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದೆ. ಮೊದಲ ಆವೃತ್ತಿಯಿಂದಲೂ ದಿಟ್ಟ ಹೋರಾಟ ನೀಡುತ್ತಿದ್ದ ಮಂಬೈ, ಇದೀಗ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. 
 


ಗೋವಾ(ಮಾ.13):  ಬಲಿಷ್ಠ ಎಟಿಕೆ ಮೋಹನ್ ಬಾಗನ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ಮೊದಲ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದೆ. ಬಿಪಿನ್ ಸಿಂಗ್ 90ನೇ ನಿಮಿಷದಲ್ಲಿ ಗಳಿಸಿದ ಗೋಲು ಮುಂಬೈ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿತು. ಪ್ರಥಮಾರ್ಧದಲ್ಲಿ ತಿರಿ ನೀಡಿದ ಉಡುಗೊರೆ ಗೋಲು ಮುಂಬೈ ತಂಡಕ್ಕೆ ಅದೃಷ್ಟದ ಸಮಬಲ ಸಾಧಿಸುವಂತೆ ಮಾಡಿತು.

 

The 𝐁𝐈𝐆𝐆𝐄𝐒𝐓 goal of the season 💥 https://t.co/rKyXxDkiUV pic.twitter.com/q5BRVRxNYh

— Indian Super League (@IndSuperLeague)

Latest Videos

undefined

ಟೀಂ ಇಂಡಿಯಾ ಫುಟ್ಬಾಲ್ ನಾಯಕ ಸುನಿಲ್ ಚೆಟ್ರಿಗೆ ಕೊರೋನಾ!

1-1 ಸಮಬಲದ ಪ್ರಥಮಾರ್ಧ: 
ಎಟಿಕೆ ಮೋಹನ್ ಬಾಗನ್ ಹಾಗೂ ಮುಂಬೈ ಸಿಟಿ ತಂಡಗಳ ನಡುವಿನ ಫೈನಲ್ ಪಂದ್ಯದ ಪ್ರಥಮಾರ್ಧ 1-1 ರಲ್ಲಿ ಸಮಬಲಗೊಂಡಿದೆ. ಮುಂಬೈ ಪೆನಾಲ್ಟಿ ವಲಯದ ಸಮೀಪ ಮಾಡಿದ ಪ್ರಮಾದದ ಪಾಸ್ ನ ಪರಿಣಾಮ ಡೇವಿಡ್ ವಿಲಿಯಮ್ಸ್ (18ನೇ ನಿಮಿಷ) ಗಳಿಸಿದ ಗೋಲು ಹಾಲಿ ಚಾಂಪಿಯನ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. 

 

A memorable night for & co. in Fatorda! pic.twitter.com/GNOhJQ1I8V

— Indian Super League (@IndSuperLeague)

ಆದರೆ 29ನೇ ನಿಮಿಷದಲ್ಲಿ ತಿರಿ ನೀಡಿದ ಉಡುಗೊರೆ ಗೋಲು ಪ್ರಥಮಾರ್ಧವನ್ನು 1-1ರಿಂದ ಸಮಬಲಗೊಳಿಸಿತು. ತಿರಿ ಈ ಋತುವಿನಲ್ಲಿ ಎರಡನೇ ಬಾರಿಗೆ ಎದುರಾಳಿ ತಂಡಕ್ಕೆ ಉಡುಗೊರೆ ನೀಡಿದರು. 45ನೇ ನಿಮಿಷದಲ್ಲಿ ಅಮೆ ರಣವಾಡೆ ಚೆಂಡನ್ನು ನಿಯಂತ್ರಿಸಲು ಹೋಗಿ ತೀವ್ರವಾಗಿ ಗಾಯಗೊಂಡಿದ್ದು ಪಂದ್ಯವನ್ನು ಕೆಲ ಹೊತ್ತು ನಿಲ್ಲಿಸಬೇಕಾಯಿತು. ಇತ್ತಂಡಗಳ ಆಟಗಾರರು ಆತಂಕದಲ್ಲಿರುವುದು ಕಂಡು ಬಂತು. ರಣವಾಡೆ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

click me!