ಜಗತ್ತಿನ ಶೇ.10ರಷ್ಟು ಜನಸಂಖ್ಯೆ ಈಗ ಕ್ರಿಶ್ಚಿಯಾನೋ ರೊನಾಲ್ಡೋ ಫಾಲೋವರ್ಸ್‌!

By Santosh Naik  |  First Published Nov 21, 2022, 3:25 PM IST

ಮ್ಯಾಂಚೆಸ್ಟರ್‌ ಯುನೈಟೆಡ್‌ನ ಸೂಪರ್‌ ಸ್ಟಾರ್‌ ಪ್ಲೇಯರ್‌ ಹಾಗೂ ಪೋರ್ಚುಗಲ್‌ನ ಸ್ಟಾರ್‌ ಆಟಗಾರ, ಕ್ರಿಶ್ಚಿಯಾನೋ ರೊನಾಲ್ಡೋ, ಇನ್ಸ್‌ಟಾಗ್ರಾಮ್‌ನಲ್ಲಿ 50 ಕೋಟಿ ಫಾಲೋವರ್ಸ್‌ಗಳ ಗಡಿ ಮುಟ್ಟಿದ ವಿಶ್ವದ ಮೊದಲ ವ್ಯಕ್ತಿ ಎನಿಸಿದ್ದಾರೆ. 


ಬೆಂಗಳೂರು (ನ.21): ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಸೂಪರ್‌ ಸ್ಟಾರ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇನ್ಸ್‌ಟಾಗ್ರಾಮ್‌ನಲ್ಲಿ 500 ಮಿಲಿಯನ್‌ ಅಂದರೆ 50 ಕೋಟಿ ಫಾಲೋವರ್ಸ್‌ಗಳ ಗಡಿ ಮುಟ್ಟಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅದರ ಅರ್ಥ ಏನೆಂದರೆ, ಈಗ ಜಗತ್ತಿನ ಶೇ.10ರಷ್ಟು ಜನರು ಇನ್ಸ್‌ಟಾಗ್ರಾಮ್‌ನಲ್ಲಿ ರೊನಾಲ್ಡೋ ಅವರ ಫಾಲೋವರ್‌ಗಳಾಗಿದ್ದಾರೆ. ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಈ ಮೈಲಿಗಲ್ಲು ಮುಟ್ಟಿದ ವಿಶ್ವದ ಮೊದಲ ಪ್ರಖ್ಯಾತ ವ್ಯಕ್ತಿ ಎನ್ನುವ ಶ್ರೇಯ ಅವರದಾಗಿದೆ. ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ ಹೊಂದಿರುವ ಫಾಲೋವರ್‌ಗಳಿಗಿಂತ ದುಪ್ಪಟ್ಟು ಫಾಲೋವರ್ಸ್‌ಗಳನ್ನು ರೊನಾಲ್ಡೊ ಇನ್ಸ್‌ಟಾಗ್ರಾಮ್‌ನಲ್ಲಿ ಹೊಂದಿದ್ದಾರೆ. ಇತ್ತೀಚೆಗೆ ಪೋರ್ಚುಗಲ್‌ನ ಸೂಪರ್‌ ಸ್ಟಾರ್‌ ಆಟಗಾರ ರೊನಾಲ್ಡೋ ಒಂದು ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದರು. ಮತ್ತೊಬ್ಬ ದಿಗ್ಗಜ ತಾರೆ ಲಿಯೋನೆಲ್‌ ಮೆಸ್ಸಿ ಜೊತೆ ಇರುವ ಚಿತ್ರ ವೈರಲ್‌ ಆಗಿತ್ತು. ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಹಾಗೂ ಕ್ರಿಶ್ಚಿಯಾನೋ ರೊನಾಲ್ಡೋ ಆಧುನಿಕ ಫುಟ್‌ಬಾಲ್‌ನ ಇಬ್ಬರು ಶ್ರೇಷ್ಠ ಆಟಗಾರರರೆನಿಸಿದ್ದಾರೆ.

ದಿಗ್ಗಜ ಆಟಗಾರರಾಗಿದ್ದರೂ ಇಬ್ಬರ ನಡುವಿನ ಸಂಬಂಧ ಅಷ್ಟಕ್ಕಷ್ಟೇ. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಇಬ್ಬರೂ ಸ್ಪೇನ್‌ನಲ್ಲಿ ಆಡುವ ವೇಳೆ ಎದುರಾಳಿಗಳಾಗಿ ಮುಖಾಮುಖಿಯಾದರೂ ಆಗುತ್ತಿದ್ದರು. ಆದರೆ, ಈಗ ರೊನಾಲ್ಡೋ ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನ ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿದ್ದರೆ, ಫ್ರಾನ್ಸ್‌ನ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ ತಂಡದ ಪರವಾಗಿ ಲಿಯೋನೆಲ್‌ ಮೆಸ್ಸಿ ಅಡುತ್ತಿದ್ದಾರೆ. ಇವರಿಬ್ಬರೂ ಎಂದಿಗೂ ಒಂದೇ ತಂಡದ ಪರವಾಗಿ ಆಡಿಲ್ಲ.

ರೊನಾಲ್ಡೋ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್‌ ಮಾಡುವ ಒಂದು ಸ್ಪಾನ್ಸರ್‌ ಪೋಸ್ಟ್‌ನಿಂದ 2.3 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ 18.82 ಕೋಟಿ ರೂಪಾಯಿ ಹಣ ಪಡೆಯತ್ತಾರೆ. ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ ತಮ್ಮ ಒಂದು ಪೋಸ್ಟ್‌ಗೆ 13.91 ಕೋಟಿ ರೂಪಾಯಿ ಹಣ ಗಳಿಕೆ ಮಾಡುತ್ತಾರೆ.

ಐದು ಬಾರಿಯ ಫಿಫಾದ ವರ್ಷದ ಆಟಗಾರ ಪ್ರಶಸ್ತಿ ಗೆದ್ದಿರುವ ಕ್ರಿಶ್ಚಿಯಾನೋ ರೊನಾಲ್ಡೋ 2020ರಲ್ಲಿ ತಮ್ಮ ಜೀವಮಾನದ ಆದಾಯವನ್ನು 1 ಬಿಲಿಯನ್‌ ಅಂದರೆ 100 ಕೋಟಿಯ ಗರಿ ಮುಟ್ಟಿಸಿದ್ದರು. ಆ ಮೂಲಕ 100 ಕೋಟಿಯ ಆದಾಯದ ಗಡಿ ಬ್ರೇಕ್‌ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿದ್ದರು.

Forbes 2022: ಜಗತ್ತಿನ ಟಾಪ್ 10 ಗರಿಷ್ಠ ಸಂಪಾದನೆ ಮಾಡುವ ಫುಟ್ಬಾಲಿಗರು, ರೊನಾಲ್ಡೋ, ಮೆಸ್ಸಿಗಿಂತ ಶ್ರೀಮಂತ ಈ ಫುಟ್ಬಾಲಿಗ

ಇನ್ನು ಫುಟ್‌ಬಾಲ್‌ ದಾಖಲೆಗಳ ವಿಚಾರದಲ್ಲೂ ರೊನಾಲ್ಡೋ, ಮೆಸ್ಸಿಗಿಂತ ಬಹಳ ಮುಂದೆ ಇದ್ದಾರೆ. ಕ್ಲಬ್‌ ಹಾಗೂ ರಾಷ್ಟ್ರೀಯ ತಂಡದ ಪರವಾಗಿ ಪೋರ್ಚುಗಲ್‌ನ ಫುಟ್‌ಬಾಲ್‌ ಸ್ಟಾರ್‌ ಈವರೆಗೂ 800ಕ್ಕೂ ಅಧಿಕ ಗೋಲು ಬಾರಿಸಿದ್ದಾರೆ. ರಾಷ್ಟ್ರೀಯ ತಂಡದ ಪರವಾಗಿ ಅವರು ಬಾರಿಸಿರುವ 110 ಅಧಿಕ ಗೋಲು, ಪುರುಷ ಹಾಗೂ ಮಹಿಳಾ ಫುಟ್‌ಬಾಲ್‌ನಲ್ಲಿ ರಾಷ್ಟ್ರೀಯ ತಂಡದ ಪರವಾಗಿ ವ್ಯಕ್ತಿಯೊಬ್ಬ ಬಾರಿಸಿದ ಗರಿಷ್ಠ ಗೋಲು ಎನಿಸಿದೆ. ಅದರೊಂದಿಗೆ ತಾವು ಪ್ರತಿನಿಧಿಸಿದ ಕ್ಲಬ್‌ಗಳ ಪರವಾಗಿ 700ಕ್ಕೂ ಅಧಿಕ ಗೋಲು ಬಾರಿಸಿದ್ದಾರೆ. 2022ರಲ್ಲಿ ಕ್ರಿಶ್ಚಿಯಾನೋ ರೊನಾಲ್ಡೋ ಓವರೆಗೂ 1 ಅಂತಾರಾಷ್ಟ್ರೀಯ ಗೋಲು ಬಾರಿಸಿದ್ದರೆ, ಮ್ಯಾಂಚೆಸ್ಟರ್‌ ಯುನೈಟೆಡ್‌ ಪರವಾಗಿ ಆಡಿದ 8 ಪಂದ್ಯಗಳಿಂದ 8 ಗೋಲು ಬಾರಿಸಿದ್ದಾರೆ.

Latest Videos

Cristiano Ronaldo son Death ದಿಗ್ಗಜ ಫುಟ್ಬಾಲಿಗ ರೊನಾಲ್ಡೋ ದಂಪತಿಗೆ ಪುತ್ರ ಶೋಕ..!

2016 ಹಾಗೂ 2017ರಲ್ಲಿ ಕ್ರಿಶ್ಚಿಯಾನೋ ರೊನಾಲ್ಡೋ, ಫೋರ್ಬ್ಸ್‌ ಪಟ್ಟಿಯಲ್ಲಿ ವಿಶ್ವದದ ಶ್ರೀಮಂತ ಅಥ್ಲೀಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು. ವೃತ್ತಿಪರ ಫುಟ್‌ಬಾಲ್‌ನಲ್ಲಿ ರೊನಾಲ್ಡೊ ಈವರೆಗೂ ಏಳು ಬಾರಿ ಲೀಗ್‌ ಕಪ್‌ ಜಯಿಸಿದ್ದಾರೆ. ಪ್ರೀಮಿಯರ್‌ ಲೀಗ್‌, ಲಾ ಲೀಗಾ ಲೀಗ್‌ ಹಾಗೂ ಸೆರೀ ಎ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟವೇರಿದ ವಿಶ್ವದ ಮೊಟ್ಟಮೊದಲ ಆಟಗಾರ ಎನಿಸಿದ್ದಾರೆ. ಇವುಗಳು ಮಾತ್ರವಲ್ಲದೆ, ಮೂರು ಬಾರಿ ಯುಇಎಫ್‌ಎ ಸೂಪರ್‌ ಕಪ್‌ ಚಾಂಪಿಯನ್‌ಷಿಪ್‌, ನಾಲ್ಕು ಬಾರಿ ಫಿಫಾ ಕ್ಲಬ್‌ ವಿಶ್ವಕಪ್‌ ಟ್ರೋಫಿ, ಐದು ಬಾರಿ ಯುಇಎಫ್‌ಎ ಚಾಂಪಿಯನ್‌ ಲೀಗ್‌ ಪ್ರಶಸ್ತಿ ಸಾಕಷ್ಟು ಕ್ಲಬ್‌ ಟೂರ್ನಿಗಳ ಕಪ್‌ಗಳನ್ನು ರೊನಾಲ್ಡೋ ಜಯಿಸಿದ್ದಾರೆ. ಪ್ರಸ್ತುತ ಪೋರ್ಚುಗಲ್‌ ತಂಡದ ಪರವಾಗಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ ಜಯಿಸಬೇಕು ಎನ್ನುವ ಇರಾದೆಯಲ್ಲಿ ಅವರಿದ್ದಾರೆ.

click me!