ಕ್ರಿಸ್ಟಿಯಾನೋ ರೋನಾಲ್ಡೋ ಕಾರು ಅಪಘಾತ, 17 ಕೋಟಿ ರೂ ಬುಗಾಟ್ಟಿ ವೆಯ್ರಾನ್ ಪುಡಿ ಪುಡಿ!

By Suvarna News  |  First Published Jun 21, 2022, 10:30 PM IST
  • ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಕಾರು ಅಪಘಾತ
  • ಕೌಂಪೌಂಡ್‌ಗೆ ಡಿಕ್ಕಿ ಹೊಡೆದ ಬುಗಾಟಿ ವೆಯ್ರಾನ್ ಕಾರು
  • 17 ಕೋಟಿ ರೂಪಾಯಿ ಮೌಲ್ಯದ ಕಾರು ಪುಡಿ ಪುಡಿ
     

ಸ್ಪೇನ್(ಜೂ.21): ಸತತ ಪಂದ್ಯಗಳಿಂದ ಬಿಡುವು ಮಾಡಿಕೊಂಡು ವಿಶ್ರಾಂತಿಗೆ ಜಾರಿದ್ದ ಪೋರ್ಚುಗಲ್ ಹಾಗೂ ಮ್ಯಾಂಚೆಸ್ಟರ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋಗೆ ಶಾಕ್ ಎದುರಾಗಿದೆ. ರೆಸ್ಟ್‌ನಲ್ಲಿದ್ದ ರೋನಾಲ್ಡೋಗೆ ಬರೋಬ್ಬರಿ 17 ಕೋಟಿ ರೂಪಾಯಿ ಲಾಸ್ ಆಗಿದೆ. ಇದಕ್ಕೆ ಕಾರಣ ರೋನಾಲ್ಡೋ ಅವರ 17 ಕೋಟಿ ರೂಪಾಯಿ ಮೌಲ್ಯದ ಬುಗಾಟ್ಟಿ ವೆಯ್ರಾನ್ ಕಾರು ತಮ್ಮದೇ ಮನೆಯ ಕೌಂಪೌಂಡ್‌ಗೆ ಡಿಕ್ಕಿ ಹೊಡೆದು ಜಖಂ ಆಗಿದೆ.

ಯುಕೆನಿಂದ ಸ್ಪೇನ್‌ಗೆ ಹಿಂತಿರುಗಿದ ರೋನಾಲ್ಡೋ ಸ್ಪೇನ್‌ ಮಾಲೋರ್ಕಾದಲ್ಲಿರುವ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಈ ವೇಳೆ ರೋನಾಲ್ಡೋ ಉದ್ಯೋಗಿ ಸೂಪರ್ ಕಾರಾದ ಬುಗಾಟ್ಟಿ ವೆಯ್ರಾನ್ ಕಾರನ್ನು ಮನೆಯಿಂದ ಹೊರಗಡೆ ತೆಗೆದಿದ್ದಾರೆ. ರೊನಾಲ್ಡೋ ಸೂಚನೆ ಮೇರೆಗೆ ವೆಯ್ರಾನ್ ಕಾರಿನಲ್ಲಿ ಹೊರಗಡೆ ತೆರಳಿದ್ದಾರೆ. ಮರಳಿ ಮನೆಗೆ ಬಂದ ಉದ್ಯೋಗಿ ಕಾರನ್ನು ಪಾರ್ಕ್ ಮಾಡುವ ಬದಲು ನೇರವಾಗಿ ಬಂದು ಮನೆಯ ಮುಂಭಾಗದಲ್ಲಿರುವ ಕೌಂಪೌಂಡ್‌ಗೆ ಗುದ್ದಿದ್ದಾರೆ.

Tap to resize

Latest Videos

undefined

ಪ್ರೇಯಸಿಗೆ ತಿಂಗಳಿಗೆ 82 ಲಕ್ಷ ರೂ. ಸ್ಯಾಲರಿಯಾಗಿ ಕೊಡುತ್ತಾನೆ ಈ ಬಾಯ್‌ಫ್ರೆಂಡ್‌ !

ಬುಗಾಟಿ ವೆಯ್ರಾನ್ ಸೂಪರ್ ಕಾರಿನ ಗರಿಷ್ಠ ವೇಗ 410 ಕಿ.ಮೀ ಪ್ರತಿ ಗಂಟೆಗೆ. ಇನ್ನು ಕೇವಲ 2 ಸೆಕೆಂಡ್‌‌ನಲ್ಲಿ ಈ ಕಾರು 100 ಕಿ.ಮೀ ವೇಗ ತಲುಪಲಿದೆ. ಹೀಗಾಗಿ ಈ ಕಾರು ಚಲಾಯಿಸಲು ಅಭ್ಯಾಸ ಬೇಕೆ ಬೇಕು. ಕಾರಣ ಇದರ ವೇಗ ಹಾಗೂ ಅದನ್ನು ನಿಯಂತ್ರಿಸಬಲ್ಲ ಕೌಶಲ್ಯವೂ ಗೊತ್ತಿರಬೇಕು. ಪ್ರತಿ ಬಾರಿ ಈ ಕಾರನ್ನು ನಿರ್ವಹಣೆ ಮಾಡಲು ಕೊಂಡೊಯ್ಯುತ್ತಿದ್ದ ಉದ್ಯೋಗಿಯಿಂದ ಈ ಬಾರಿ ಎಡವಟ್ಟವಾಗಿದೆ. ಕಾರು ವೇಗವಾಗಿ ಬಂದು ಕೌಂಪೌಂಡ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಆದರೆ ಕಾರು ಚಲಾಯಿಸುತ್ತಿದ್ದ ಉದ್ಯೋಗಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇಷ್ಟೇ ಅಲ್ಲ ರೋನಾಲ್ಡೋ ಮನೆಯ ಕೌಂಪೌಂಡ್‌ಗೂ ಹಾನಿಯಾಗಿದೆ.

ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ವಿಶ್ವದ ಅತ್ಯಂತ ದುಬಾರಿ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್, ಫೆರಾರಿ F12 TDF, ಲ್ಯಾಂಬೋರ್ಗಿನಿ ಅವೆಂಟಾಡೋರ್, ಬುಗಾಟ್ಟಿ ಸೆಂಟೋಡೈಸಿ ಮಾಡಿಫೈಡ್ ಕಾರು, ಮೆಸರಾತಿ ಗ್ರ್ಯಾನ್‌ಕ್ಯಾಬ್ರಿಯೋ, ಪೋರ್ಶೆ 911 ಟರ್ಬೋ S, ಫೆರಾರಿ F430, ಮರ್ಸಿಡಿಸ್ ಬೆಂಜ್ ಬ್ರೆಬಸ್ G65, ಬುಗಾಟ್ಟಿ ಚಿರೋನ್, ಆಡಿ RS7, ಮರ್ಸಿಡಿಸ್ ಬೆಂಜ್ GLE63s AMG, ರೋಲ್ಸ್ ರಾಯ್ಸ್ ಫ್ಯಾಂಟಮ್, ಫೆರಾರಿ 599 GTO, ಮೆಕ್ಲೆರನ್ ಸೆನ್ನಾ, ಬೆಂಟ್ಲಿ ಕಾಂಟಿನೆಂಟಲ್ ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ.

Most Followed Instagram: ಟಾಪ್‌ 10ರಲ್ಲಿ ರೊನಾಲ್ಡೊ, ಕೈಲಿ ಜೆನ್ನರ್‌, ಮೆಸ್ಸಿ!

ರೋನಾಲ್ಡೋ ಅತೀ ಹೆಚ್ಚು ಫ್ಯಾನ್ಸ್ ಫಾಲೋವಿಂಗ್ ಹೊಂದಿದ ಕ್ರೀಡಾಪಟು.  ಕ್ರಿಸ್ಟಿಯಾನೊ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿ ಅತಿಹೆಚ್ಚು ಫಾಲೋವರ್ಸ್‌ ಹೊಂದಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಹಂಚಿಕೊಂಡಿದ್ದಾರೆ. ರೊನಾಲ್ಡೊ 450 ಮಿಲಿಯನ್‌(45 ಕೋಟಿ), ಮೆಸ್ಸಿ 333 ಮಿಲಿಯನ್‌(33 ಕೋಟಿ) ಇನ್‌ಸ್ಟಾಗ್ರಾಂ ಹಿಂಬಾಲಕರನ್ನು ಹೊಂದಿದ್ದಾರೆ.

ವಿಶ್ವದ ಶ್ರೀಮಂತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಪ್ರೇಯಸಿ ಜಾರ್ಜಿನಾ ರೋಡ್ರಿಗಸ್‌ರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ವಿಶ್ವದ ಅತಿ ಎತ್ತರದ ಕಟ್ಟದ ದುಬೈನ ಬುಜ್‌ರ್‍ ಖಲೀಫಾದ ಮೇಲೆ ಜಾರ್ಜಿನಾರ ಫೋಟೋಗಳನ್ನು ಪ್ರದರ್ಶಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಕಟ್ಟಡದ ಮೇಲೆ ಫೋಟೋ, ವಿಡಿಯೋ ಪ್ರದರ್ಶಿಸಲು 3 ನಿಮಿಷಗಳ ಅವಧಿಗೆ ಅಂದಾಜು 50 ಲಕ್ಷ ರು. ಖರ್ಚಾಗುತ್ತದೆ.
 

click me!