FIFA World Cup 2026: ಅರ್ಜೆಂಟಲ್ಲಿ ಮೂರು ಗೋಲು ಗಳಿಸಿ ಗೆದ್ದ ಅರ್ಜೆಂಟೀನಾ!

Kannadaprabha News   | Kannada Prabha
Published : Jul 08, 2026, 10:11 AM IST
Lionel Messi World Cup 2026

ಸಾರಾಂಶ

ತೀವ್ರ ಹಿನ್ನಡೆಯಿಂದ ಚೇತರಿಸಿಕೊಂಡ ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಈಜಿಪ್ಟ್‌ ವಿರುದ್ಧ 3-2 ಗೋಲುಗಳಿಂದ ರೋಚಕ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಇನ್ನೊಂದೆಡೆ, ಸ್ಪೇನ್‌ ವಿರುದ್ಧ 1-0 ಅಂತರದಲ್ಲಿ ಸೋತ ಪೋರ್ಚುಗಲ್‌ ತಂಡ ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಜಾರ್ಜಿಯಾ(ಅಮೆರಿಕ): ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿ ಸೋಲಿನ ಭೀತಿಗೆ ಸಿಲುಕಿದ್ದರೂ ಕೊನೆಯಲ್ಲಿ ತರಾತುರಿಯಲ್ಲೇ 3 ಗೋಲು ದಾಖಲಿಸಿದ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ತಂಡ, ಈಜಿಪ್ಟ್‌ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ 3-2 ಗೋಲುಗಳಿಂದ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ತಂಡ ಸತತ 2ನೇ ಬಾರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.

15ನೇ ನಿಮಿಷದಲ್ಲಿ ಯಾಸರ್‌ ಇಬ್ರಾಹಿಂ, 67ನೇ ನಿಮಿಷದಲ್ಲಿ ಮೊಸ್ತಫಾ ಜಿಕೊ ಗೋಲು ಬಾರಿಸಿ ಈಜಿಪ್ಟ್‌ಗೆ ಮುನ್ನಡೆ ಒದಗಿಸಿದರು. 21ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ ಮೆಸ್ಸಿ, ಕೊನೆಯಲ್ಲಿ ತಂಡಕ್ಕೆ ಆಪತ್ಬಾಂಧವರಾದರು. 58ನೇ ನಿಮಿಷದಲ್ಲಿ ಈಜಿಪ್ಟ್ ಗೋಲು ಗಳಿಸಿತ್ತಾದರೂ, ಅದನ್ನು ಪೌಲ್‌ ಎಂದು ತೀರ್ಪು ನೀಡಲಾಯಿತು. ಇದು ವಿವಾದಕ್ಕೆ ಕಾರಣವಾಗಿದ್ದು, ಈಜಿಪ್ಟ್‌ ಆಟಗಾರರು, ಕೋಚ್‌ಗಳನ್ನು ಕೆರಳುವಂತೆ ಮಾಡಿತು.

ಗ್ರೇಟ್‌ ಕಮ್‌ಬ್ಯಾಕ್‌:

79ನೇ ನಿಮಿಷದವರೆಗೂ ಅರ್ಜೆಂಟೀನಾ 0-2 ಹಿನ್ನಡೆಯಲ್ಲಿತ್ತು. ಇನ್ನೇನು ಈಜಿಪ್ಟ್‌ ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲಿ ಅರ್ಜೆಂಟೀನಾ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿತು. ಕ್ರಿಸ್ಟಿಯನ್‌ ರೊಮೇರೊ ಆಕರ್ಷಕ ಹೆಡರ್‌ ಗೋಲು ದಾಖಲಿಸಿದರೆ, 83ನೇ ನಿಮಿಷದಲ್ಲಿ ಮೆಸ್ಸಿ ಗೋಲು ಹೊಡೆದು ಸಮಬಲಗೊಳಿಸಿದರು. ಇಂಜುರಿ ಸಮಯ(93ನೇ ನಿಮಿಷ)ದಲ್ಲಿ ಎನ್ಜೊ ಫೆರ್ನಾಂಡೆಜ್‌ ಹೊಡೆದ ಬಾರಿಸಿದ ಗೋಲು ಅರ್ಜೆಂಟೀನಾವನ್ನು ಸೋಲಿನಿಂದ ಪಾರು ಮಾಡಿತು. ಇದರೊಂದಿಗೆ ಚೊಚ್ಚಲ ಬಾರಿ ಕ್ವಾರ್ಟರ್‌ ಪ್ರವೇಶಿಸುವ ಈಜಿಪ್ಟ್‌ ಕನಸು ಭಗ್ನಗೊಂಡಿತು.

ಪೋರ್ಚುಗಲ್‌, ರೊನಾಲ್ಡೊ ವಿಶ್ವಕಪ್‌ ಕನಸು ಭಗ್ನ!

ಅರ್ಲಿಂಗ್ಟನ್‌(ಅಮೆರಿಕ): ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಓರ್ವರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅವರ ತಂಡ ಪೋರ್ಚುಗಲ್‌ನ ಚೊಚ್ಚಲ ವಿಶ್ವಕಪ್‌ ಕನಸು ನುಚ್ಚುನೂರಾಗಿದೆ. ಸೋಮವಾರ ಮಧ್ಯರಾತ್ರಿ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೋರ್ಚುಗಲ್‌ ವಿರುದ್ಧ ಮಾಜಿ ಚಾಂಪಿಯನ್‌ ಸ್ಪೇನ್‌ 1-0 ಗೋಲಿನಿಂದ ಜಯಭೇರಿ ಬಾರಿಸಿತು. ಈ ಮೂಲಕ 2010ರ ಬಳಿಕ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿತು. ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ಗೆ ಬೆಲ್ಜಿಯಂ ಸವಾಲು ಎದುರಾಗಲಿದೆ.

ಭಾರೀ ರೋಚಕ ಪೈಪೋಟಿ ನಿರೀಕ್ಷಿಸಲಾಗಿದ್ದ ಪಂದ್ಯದಲ್ಲಿ ಉಭಯ ತಂಡಗಳಿಂದ ತೀವ್ರ ಹೋರಾಟ ಕಂಡುಬಂತು. ಆದರೆ ಚೆಂಡಿನ ಮೇಲಿನ ಹಿಡಿತ, ನಿಖರ ಪಾಸ್‌, ಗೋಲ್‌ ಪೋಸ್ಟ್‌ನತ್ತ ಹೊಡೆತದಲ್ಲಿ ಸ್ಪೇನ್‌ ಮೇಲುಗೈ ಸಾಧಿಸಿತು. ಇದರ ಹೊರತಾಗಿಯೂ ತಂಡಕ್ಕೆ ಸುಲಭದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಸೂಪರ್‌ಸ್ಟಾರ್‌ ರೊನಾಲ್ಡೊ ಅವರ ಗೋಲು ಪ್ರಯತ್ನ ಕೂಡಾ ಯಶಸ್ವಿಯಾಗಲಿಲ್ಲ. ಆದರೆ ಹೆಚ್ಚುವರಿ ಅವಧಿ(90+1ನೇ ನಿಮಿಷ)ಯಲ್ಲಿ ಮೈಕಲ್‌ ಮೆರಿನೊ ಬಾರಿಸಿದ ಗೋಲು ಸ್ಪೇನ್‌ಗೆ ಗೆಲುವು ತಂದುಕೊಟ್ಟಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cristiano Ronaldo: ತಂದೆ ತೋಟದ ಮಾಲಿ, ತಾಯಿ ಸೇವಕಿ… ಈತ ಇಂದು ಪ್ರಪಂಚವೇ ಮೆಚ್ಚಿದ ಅತ್ಯಂತ ಶ್ರೀಮಂತ ಕ್ರೀಡಾಪಟು
ಅರ್ಜೆಂಟೀನಾದ ರಕ್ಷಣಾ ಸಾಮರ್ಥ್ಯದ ಮೇಲೆ ಜಿಂಗನ್ ವಿಶ್ವಾಸ; ಈಜಿಪ್ಟ್‌ಗೆ ಕಠಿಣ ಪರೀಕ್ಷೆ