ಎವರ್ಟನ್ ಮಿಡ್‌ಫೀಲ್ಡರ್ ಡಿಲೆ ಆಲಿಗೆ 27 ವಯಸ್ಸು. ಫುಟ್ಬಾಲ್ ಜಗತ್ತಿನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಆಟಗಾರ. ಕೋಟಿ ಕೋಟಿ ರೂಪಾಯಿ ಆದಾಯ, ಆಸ್ತಿ ಅಂತಸ್ತು ಎಲ್ಲವೂ ಇದೆ. ಆದರೆ ಡಿಲೆ ಆಲಿ ಬಾಲ್ಯದಲ್ಲಿ ನರಕ ಅನುಭವಿಸಿದ್ದಾರೆ. ಈ ಕುರಿತು ಖುದ್ದು ಡಿಲೆ ಆಲಿ ಕರಾಳ ಕತೆಯನ್ನು ಬಿಚ್ಚಿಟ್ಟಿದ್ದಾರೆ
ಲಂಡನ್(ಜು.14) ಕೇವಲ 6ನೇ ವಯಸ್ಸಿಗೆ ತಾಯಿ ಸ್ನೇಹಿತೆಯಿಂದಲೇ ಲೈಂಗಿಕ ಕಿರುಕಳ, 7ನೇ ವಯಸ್ಸಿಗೆ ಸಿಗರೇಟ್ ಸೇವನೆ, 8ನೇ ವರ್ಷಕ್ಕೆ ಡ್ರಗ್ಸ್ ಡೀಲಿಂಗ್. ಸುಂದರ ಬಾಲ್ಯದ ಜೀವನವನ್ನು ಬಹುತೇಕ ಕತ್ತಲು, ಅಮಲಿನಲ್ಲೇ ಕಳೆದು ಹೋದ ಕರಾಳ ಕತೆ ಇದು. ಎವರ್ಟನ್ ಫುಟ್ಬಾಲ್ ತಂಡದ ಮಿಡ್‌ಪೀಲ್ಡರ್ ಡಿಲೆ ಆಲಿ ಖುದ್ದು ತಮ್ಮ ಬಾಲ್ಯದ ಜೀವನ ಕುರಿತು ಹೇಳಿದ್ದಾರೆ. ತಾನು ಯಾವತ್ತೂ ಬಾಲ್ಯದ ಜೀವನವನ್ನು ನೆನೆಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಬ್ರಿಟಿಷ್ ಫುಟ್ಬಾಲರ್ ಸದ್ಯ ಭಾರಿ ಬೇಡಿಕೆಯ ಪಟು. ಆಸ್ತಿ, ಸಂಪಾದನೆ ಸೇರಿದಂತೆ ಎಲ್ಲವೂ ಈತನ ಬಳಿ ಇದೆ. ವಯಸ್ಸು 27. ಯಶಸ್ಸಿನ ಉತ್ತುಂಗದಲ್ಲಿರುವ ಡಿಲೆ ಆಲಿ, ತನ್ನ ಬಾಲ್ಯದ ಕರಾಳ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.
ನನ್ನ ಬಾಲ್ಯದ ಕುರಿತು ನಾನು ಎಲ್ಲೂ ಮಾತನಾಡಿಲ್ಲ. ಕಾರಣ ಈ ಕರಾಳ ಘಟನೆಗಳನ್ನು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ತಾಯಿ ಮದ್ಯದ ವ್ಯಸನಿಯಾಗಿದ್ದರು. ಬೆಳಗ್ಗೆಯಿಂದಲೇ ಕುಡಿತ ಆರಂಭಿಸಿದ್ದರು. ಹೀಗಾಗಿ ನನ್ನ ಬಗ್ಗೆ ಗಮನವಹಿಸಲು ತಾಯಿಗೆ ಸಾಧ್ಯವಾಗುತ್ತಿರಲಿಲ್ಲ. ತಾಯಿಯ ಸ್ನೇಹಿತೆ ನಮ್ಮ ಮನೆಯಲ್ಲೇ ತಂಗಿದ್ದರು. 6ನೇ ವಯಸ್ಸಿಗೆ ನನ್ನನ್ನು ಲೈಂಕಿಗವಾಗಿ ಬಳಸಿಕೊಳ್ಳಲು ಆರಂಭಿಸಿದರು. ತಾಯಿ ಸ್ನೇಹಿತೆಯ ಕಾಮತೃಷೆಗೆ ತಕ್ಕಂತೆ ನಾನು ನಡೆದುಕೊಳ್ಳಬೇಕಿತ್ತು. ಮದ್ಯದ ಅಮಲಿನಲ್ಲಿರುತ್ತಿದ್ದ ನನ್ನ ತಾಯಿಗೆ ಅಂಜಿಕೆಯಿಂದಲೇ ವಿಷಯ ಹೇಳಿದ್ದೆ. ಆದರೆ ತಾಯಿ ಇದ್ಯಾವುದನ್ನು ಗಣನೆಗೆ ತಗೆದುಕೊಳ್ಳಲಿಲ್ಲ. ಇದರಿಂದ 7ನೇ ವಯಸ್ಸಿಗೆ ಸಿಗರೇಟ್ ಚಟ ಆರಂಭಗೊಂಡಿತು. 8ನೇ ವಯಸ್ಸಿಗೆ ಡ್ರಗ್ಸ್ ಡೀಲಿಂಗ್ ಆರಂಭಿಸಿದ್ದೆ ಎಂದು ಡಿಲೆ ಆಲಿ ಹೇಳಿದ್ದಾರೆ.
undefined
ನಾನು 10,000 ಮಹಿಳೆಯರ ಜತೆ ಮಲಗಿದ್ದೇನೆ ಎಂದ ಈ ಫುಟ್ಬಾಲ್ ತಾರೆ..! ಯಾರು ಈ ಭೂಪ?
ಫುಟ್ಬಾಲ್‌ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದೆ. ಹಣದ ಅವಶ್ಯಕತೆ, ಕುಟುಂಬ ನಿರ್ಲಕ್ಷ್ಯಗಳಿಂದ ನಾನು ಏಕಾಂಗಿಯಾದೆ. ತಾಯಿ ವಿಪರೀತ ಕುಡಿತ ಆರಂಭಿಸಿದ್ದರು. ಹೀಗಾಗಿ 12ನೇ ವಯಸ್ಸಿಗೆ ನನ್ನನ್ನು ಅತ್ಯಂತ ಸುಂದರ ಕುಟುಂಬ ದತ್ತು ಪಡೆದುಕೊಂಡಿತು. ಇದು ನನ್ನ ಜೀವನದಲ್ಲಿ ನಡೆದ ತಿರುವು. ನನ್ನನ್ನು ಸರಿದಾರಿಗೆ ಬರಲು ಈ ಕುಟುಂಬ ಬಹಳ ನೆರವು ನೀಡಿತು. ಹಂತ ಹಂತವಾಗಿ ನಾನು ಬದಲಾದೆ. ಫುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಯಿತು. ನನ್ನ ಆಸಕ್ತಿಗೆ ಪ್ರೋತ್ಸಾಹ ಸಿಕ್ಕಿತು. 16ನೇ ವಯಸ್ಸಿಗೆ ವೃತ್ತಿಪರ ಫುಟ್ಬಾಲ್ ಪಟುವಾಗಿ ಬದಲಾದೆ ಎಂದು ಡಿಲೆ ಆಲಿ ಹೇಳಿದ್ದಾರೆ.
ಆದರೆ ಡ್ರಗ್ಸ್ ಚಟ ಸುಲಭವಾಗಿ ಬಿಡಲು ಸಾಧ್ಯವಾಗಲಿಲ್ಲ. ನಾನು ನಿದ್ದೆ ಮಾತ್ರೆ ತೆಗೆದುಕೊಳ್ಳುವ ಚಟಕ್ಕೆ ಬಿದ್ದೆ. ಹೀಗಾಗಿ ವೃತ್ತಿಪರ ಪಟುವಾಗಿ ನಾನು ಪುನರ್ವಸತಿ ಕೇಂದ್ರ ಸೇರುವಂತಾಗಿತ್ತು. 24ನೇ ವಯಸ್ಸಿಗೆ ಫುಟ್ಬಾಲ್‌ನಿಂದ ನಿವೃತ್ತಿಯ ನಿರ್ಧಾರಕ್ಕೂ ಬಂದಿದ್ದೆ. ಪ್ರತಿ ಭಾರಿ ನಾನು ತೀವ್ರ ಸಂಕಷ್ಟಕ್ಕೆ ಸಿಲುಕಿದಾಗ ನೆರವು ಸಿಕ್ಕಿದೆ. ಹೀಗಾಗಿ ಬದುಕು ಮತ್ತೆ ತಿರುವು ಪಡೆದುಕೊಳ್ಳುತ್ತಿತ್ತು. ಇವೆಲ್ಲ ಮೆಟ್ಟಿ ನಿಂತು ಇದೀಗ ಎವರ್ಟನ್ ತಂಡದ ಫುಟ್ಬಾಲ್ ಪಟುವಾಗಿದ್ದೇನೆ ಎಂದು ಡಿಲೆ ಆಲಿ ಹೇಳಿದ್ದಾರೆ.
ದಾಖಲೆಯ 9ನೇ ಬಾರಿಗೆ ಸ್ಯಾಫ್ ಫುಟ್‌ಬಾಲ್ ಟೂರ್ನಿಯಲ್ಲ ಭಾರತ ಚಾಂಪಿಯನ್