ತವರಿನಲ್ಲಿ ಗೆಲುವಿನ ಖಾತೆ ತೆರೆದ ಜೆಮ್‌ಶೆಡ್‌ಪುರ್ FC!

By Web Desk  |  First Published Oct 22, 2019, 9:56 PM IST

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ  ಜೆಮ್‌ಶೆಡ್‌ಪುರ್ FC ಶುಭಾರಂಭ ಮಾಡಿದೆ. ಒಡಿಶಾ ವಿರುದ್ಧ ಹೋರಾಡಿದ ಜೆಮ್‌ಶೆಡ್‌ಪುರ್ FC ದ್ವಿತಿಯಾರ್ಧದಲ್ಲಿನ ಮಿಂಚಿನ ಆಟದಿಂದ ಗೆಲುವು ಸಾಧಿಸಿತು. ಪಂದ್ಯದ ಹೈಲೈಟ್ಸ್ ಇಲ್ಲಿದೆ. 


ಜೆಮ್‌ಶೆಡ್‌ಪುರ್(ಅ.22): ಫಾರೂಕ್ ಚೌಧರಿ (17ನೇ ನಿಮಿಷ ) ಮತ್ತು  ಸರ್ಗಿಯೊ ಕ್ಯಾಸ್ಟಲ್ ಮಾರ್ಟಿನೇಜ್ (85ನೇ ) ಸಿಡಿಸಿದ ಗೋಲಿನ  ನೆರವಿನಿಂದ ಒಡಿಶಾ FC ತಂಡವನ್ನು 2-1 ಗೋಲಿನಿಂದ ಮಣಿಸಿದ ಜೆಮ್‌ಶೆಡ್‌ಪುರ್ ಈ ಆವೃತ್ತಿಯಲ್ಲಿ ಮೊದಲ ಗೆಲುವಿನ ಖಾತೆ ತೆರೆದಿದೆ.  

ಸಮಬಲದ ಹೋರಾಟ 
 ಜೇಮ್ಶೆಡ್ಪುರದ  ಪರ ಫಾರೂಕ್ ಚೌಧರಿ ಹಾಗೂ ಒಡಿಶಾ ಪರ  ಅರಿದಾನೆ ಸ್ಯಾಂಟನ ಗಳಿಸಿದ ಗೋಲುಗಳ ಮೂಲಕ ಪಂದ್ಯದ ಮೊದಲಾರ್ಧ 1-1 ಗೋಲಿನಿಂದ ಸಮಬಲಗೊಂಡಿತು. ಆದರೆ ಮನೆಯಂಗಣದಲ್ಲಿ ಜೇಮ್ಶೆಡ್ಪುರಕ್ಕೆ ಆರಂಭಿಕ ಹಿನ್ನಡೆ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡದ ಪ್ರಮುಖ ಆಟಗಾರ ಬಿಕಾಶ್ ಜೈರು ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದಿದ್ದೇ ಟಾಟಾ ಪಡೆಯ ಹಿನ್ನಡೆಗೆ ಕಾರಣವಾಯಿತು. 17ನೇ ನಿಮಿಷದಲ್ಲಿ ರಾಣಾ ಘರಾಮಿ ಉಡುಗೊರೆ ಗೋಲು ನೀಡಿದಂತೆ ಕಂಡು ಬಂದರೂ ಅದು ಫಾರೂಕ್ ಅಚ್ಚರಿಯ ಗೋಲಾಗಿತ್ತು. ತಂಡಕ್ಕೆ ಮುನ್ನಡೆ ದಕ್ಕಿತ್ತು. 

Tap to resize

Latest Videos

undefined

ಇದನ್ನೂ ಓದಿ: ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

35ನೇ ನಿಮಿಷದಲ್ಲಿ ಬಿಕಾಶ್ ಜೈರು ಉದ್ದೇಶಪೂರ್ವಕವಾಗಿ ಪ್ರಮಾದವೆಸಗಿದ ಕಾರಣ ರೆಫರಿ ನೇರವಾಗಿ ರೆಡ್ ಕಾರ್ಡ್ ನೀಡಿದರು, ಇದರಿಂದ ಆತಿಥೇಯ ತಂಡ ಕೇವಲ ಹತ್ತು ಆಟಗಾರರಲ್ಲೇ ಪಂದ್ಯ ಆಡುವಂತಾಯಿತು. 40ನೇ ನಿಮಿಷದಲ್ಲಿ ಟಾಟಾ ಪಡೆ ಅದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಅರಿದಾನೆ ಸ್ಯಾಂಟನ ಅಭ್ಭುತ ಗೋಲು ಗಳಿಸಿ ತಂಡ ಸಮಬಲಗೊಳ್ಳುವಂತೆ ಮಾಡಿದರು. ಪ್ರಥಮಾರ್ಧ ಮುಗಿಯಲು ಕೆಲ ಕ್ಷಣಗಳು ಬಾಕಿ ಇರುವಾಗ ಜೆರ್ರಿ ಮೌಹಿಂತಂಗಾ ಒಡಿಶಾ ಪರ ಎರಡನೇ ಗೋಲು ಗಳಿಸುವ ಅವಕಾಶ ಗಳಿಸಿದ್ದರು, ಆದರೆ ಗುರಿ ತಪ್ಪಿದ ಕಾರಣ ಅವಕಾಶದಿಂದ ವಂಚಿತರಾದರು.

ಇದನ್ನೂ ಓದಿ: ವಿಶ್ವಕಪ್ ಅರ್ಹತಾ ಪಂದ್ಯ; ಡ್ರಾಗೆ ತೃಪ್ತಿಪಟ್ಟ ಭಾರತ!

ಬಿಕಾಶ್ ಜೈರು ರೆಡ್ ಕಾರ್ಡ್ ಪಡೆದು ಹೊರ ನಡೆದ ನಂತರ ಒಡಿಶಾ ಪರ  ಅರಿದಾನೆ ಸ್ಯಾಂಟನ (40ನೇ ನಿಮಿಷ) ಗಳಿಸಿದ ಗೋಲಿನಿಂದ ಉಭಯ ತಂಡಗಳ 1-1 ಅಂತರದಿಂದ ಸಮಬಲಗೊಂಡಿತು. ಕೇವಲ ಹತ್ತು ಆಟಗಾರನ್ನು ಒಳಗೊಂಡ ಜೆಮ್‌ಶೆಡ್‌ಪುರ್ ತಂಡಕ್ಕೆ ದ್ವಿತೀಯಾರ್ಧದಲ್ಲಿ  ಹಿನ್ನಡೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಇತ್ತ ಒಡಿಶಾ ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ಲೆಕ್ಕಾಚಾರದಲ್ಲಿತ್ತು. ಆದರೆ  ಕ್ಯಾಸ್ಟಲ್ ಎಲ್ಲರ ನಿರೀಕ್ಷೆಯನ್ನೇ ಹುಸಿಗೊಳಿಸಿ ತಂಡಕ್ಕೆ ಜಯದ ಗೋಲು ಬಾರಿಸಿದರು. 

click me!