
ಭುವನೇಶ್ವರ್(ಜ.12): ಇಂಡಿಯನ್ ಸೂಪರ್ ಲೀಗ್ 6ನೇ ಆವೃತ್ತಿಯ 57ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಒಡಿಶಾ ಟೂರ್ನಿಯಲ್ಲಿ 5ನೇ ಗೆಲುವು ಪಡೆದು, 18 ಅಂಕಗಳಿಂದ 4ನೇ ಸ್ಥಾನಕ್ಕೇರಿದೆ. ಸೋತ ಮುಂಬೈ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಒಡಿಶಾ ಎಫ್‌ಸಿ ಕಳಿಂಗಾ ಸ್ಟೇಡಿಯಂನಲ್ಲಿ ಆಡಿದ 3 ಪಂದ್ಯಗಳಲ್ಲೂ ಭರ್ಜರಿ ಗೆಲುವು ದಾಖಲಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಮೊದಲಾರ್ಧದಲ್ಲಿ ಗೋಲುಗಳಿಸಲು ಯಶಸ್ವಿಯಾಗಿರಲಿಲ್ಲ. ದ್ವಿತೀಯಾರ್ಧದ ಆಟದಲ್ಲಿ ಆಕ್ರಮಣಾಕಾರಿ ಆಟಕ್ಕಿಳಿದ ಒಡಿಶಾ, ಅರಿಡಾನೆ ಸ್ಯಾಂಟನಾ (48ನೇ ನಿ.), ಕ್ಸಿಸ್ಕೊ ಹೆರ್ನಾಂಡೆಜ್ (74ನೇ ನಿ.) ಗೋಲುಗಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.