ಚೆನ್ನೈಯನ್ ಎಫ್‌ಸಿ ವಿರುದ್ಧ ಬಲಿಷ್ಠ ಮೋಹನ್ ಬಗಾನ್ ಪಂದ್ಯವನ್ನ ಡ್ರಾಮಾಡಿಕೊಂಡಿದೆ. ಉಭಯ ತಂಡಗಳ ಕಠಿಣ ಹೋರಾಟ ಅಭಿಮಾನಿಗಳಿಗೆ ಮನರಂಜೆ ನೀಡಿತು. ಇತ್ತ ಅಂಕಪಟ್ಟಿಯಲ್ಲಿ ಮೋಹನ್ ಬಗಾನ್ ಅಗ್ರಸ್ಥಾನಕ್ಕೇರಿತು.
ಗೋವಾ,(ಡಿ.29): ಎಟಿಕೆ ಮೋಹನ್ ಬಗಾನ್ ತಂಡದ ಅಪಾಯಕಾರಿ ಸ್ಟ್ರೈಕರ್‌ಗಳನ್ನು ಗೋಲ್‌ಗಳಿಸದಂತೆ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದ ಚೆನ್ನೈಯಿನ್ ಎಫ್‌ಸಿ ತಂಡ, ಇಲ್ಲಿ ನಡೆದ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿ 42ನೇ ಲೀಗ್ ಪಂದ್ಯದಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತು.
ISL 7: ಜೆಮ್ಶೆಡ್‌ಪುರ ಎದುರು ಗೋವಾಗೆ ರೋಚಕ ಜಯ..
undefined
ಟೂರ್ನಿಯಲ್ಲಿ ಈವರೆಗೆ ಅಂತಿಮ ಗಳಿಗೆಯಲ್ಲಿ ಗೋಲ್ ದಾಖಲಿಸಿ ಜಯ ದಕ್ಕಿಸಿಕೊಳ್ಳುವುದನ್ನು ರೂಢಿಸಿಕೊಂಡಿದ್ದ ಮೋಹನ್ ಬಗಾನ್ ತಂಡ ಚೆನ್ನೈ ತಂಡದ ಭದ್ರ ಕೋಟೆಯನ್ನು ಭೇದಿಸುವಲ್ಲಿ ವಿಫಲವಾಗಿ 0-0 ಗೋಲ್‌ಗಳ ಫಲಿತಾಂಶ ಕಂಡಿತು. ಇದರೊಂದಿಗೆ ಇತ್ತಂಡಗಳು ತಲಾ ಒಂದು ಅಂಕಗಳನ್ನು ಹಂಚಿಕೊಂಡವು.
ಡ್ರಾ ಫಲಿತಾಂಶದೊಂದಿಗೆ ಒಂದು ಅಂಕವನ್ನು ಖಾತೆಗೆ ಸೇರಿಸಿಕೊಂಡ ಮೋಹನ್ ಬಗಾನ್ ತಂಡ ಇದೀಗ ಆಡಿದ ಒಟ್ಟು 8 ಪಂದ್ಯಗಳಿಂದ 17 ಅಂಕಗಳನ್ನು ಅಂಕಗಳನ್ನು ಕಲೆಹಾಕುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರೊಂದಿಗೆ 7 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿರುವ ಮುಂಬೈ ಸಿಟಿ ಎಫ್‌ಸಿ ತಂಡ 2ನೇ ಸ್ಥಾನಕ್ಕೇ ಜಾರಿದೆ.
ಮತ್ತೊಂದೆಡೆ ಚೆನ್ನೈಯಿನ್ ಎಫ್‌ಸಿ ಒಂದು ಅಂಕ ಗಳಿಕೆಯೊಂದಿಗೆ 8 ಪಂದ್ಯಗಳಿಂದ ಒಟ್ಟು 10 ಅಂಕಗಳನ್ನು ಸಂಪಾದಿಸಿದಂತ್ತಾಗಿದೆ. ಆದರೆ ಅಂಕಪಟ್ಟಿಯಲ್ಲಿ ಚೆನ್ನೈಯಿನ್ ತಂಡದ ಸ್ಥಾನದಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ. ಬದಲಿಗೆ ತನ್ನ 7ನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಮೊದಲಾರ್ಧದಲ್ಲಿ ನೋ ಆಕ್ಷನ್
ಪಂದ್ಯದ ಆರಂಭದಿಂದಲೂ ಎರಡೂ ತಂಡಗಳು ಡಿಫೆನ್ಸ್ ಕಡೆಗೆ ಹೆಚ್ಚು ಒತ್ತು ಕೊಟ್ಟಂತ್ತಿತ್ತು. ಆಕ್ರಮಣಕಾರಿ ಆಟದ ಸುಳಿವೇ ಇಲ್ಲದ ಕಾರಣ ಮೊದಲಾರ್ಧ ನೀರಸ ಅಂತ್ಯ ಕಂಡಿತು. ಈ ನಡುವೆ ಒಂದೆರಡು ಬಾರಿ ಇತ್ತಂಡಗಳಿಗೆ ಗೋಲ್ ಗಳಿಕೆಗೆ ಅವಕಾಶ ಸಿಕ್ಕಿತ್ತಾದರೂ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಸ್ಟ್ರೈಕರ್‌ಗಳು ವಿಫಲರಾದರು. ಇಲ್ಲಿ ಚೆನ್ನೈ ತಂಡದ ಗೋಲ್ ಕೀಪರ್ ಅರಿಂದಮ್ ಭಟ್ಟಾಚಾರ್ಯ ಅವರ ಚಾಕಚಕ್ಯತೆಯನ್ನು ಮೆಚ್ಚಿಕೊಳ್ಳಲೇ ಬೇಕು. ಏಕೆಂದರೆ ಎಟಿಕೆ ತಂಡದ ಪ್ರಯತ್ನಗಳನ್ನು ಅವರು ವಿಫಲವಾಗಿಸಿ ಚೆನ್ನೈ ಪರ ತಡೆಗೋಡೆಯಂತೆ ನಿಂತಿದ್ದರು.
ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿನ ಪೈಪೋಟಿ
ಪ್ರಥಮಾರ್ಧದಲ್ಲಿ ಎರಡೂ ತಂಡ ಡಿಫೆನ್ಸ್ ಕಡೆಗೆ ಹೆಚ್ಚಿನ ಒಲವು ಕೊಟ್ಟು ಮಾಡಿದ ತಪ್ಪನ್ನು ಕೂಡಲೇ ಅರಿತು, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಚೆಂಡಿನ ಮೇಲಿನ ನಿಯಂತ್ರಣ ಸಲುವಾಗಿ ನಡೆದ ಕಿತ್ತಾಟದಲ್ಲಿ ಎಟಿಕೆ ತಂಡದ ಮಿಡ್‌ಫೀಲ್ಡ್ ಲಾಲ್‌ರಿನ್ಜುವಾಲ ಮತ್ತು ಚೆನ್ನೈ ತಂಡದ ಮಿಡ್‌ಫೀಲ್ಡರ್ ಹಾಲ್ಡರ್ ರೆಫ್ರಿಯಿಂದ ಯೆಲ್ಲೋ ಕಾರ್ಡ್ ಕೂಡ ಸ್ವೀಕರಿಸಿದರು. ಎರಡನೇ ಅವಧಿಯಲ್ಲಿ ಇತ್ತಂಡಗಳು 3 ಆಟಗಾರರನ್ನು ಬದಲಾವಣೆ ಮಾಡಿದರೂ ಕೂಡ ಗೋಲ್ ಸ್ಕೋರ್ ಶೂನ್ಯದಿಂದ ಮೇಲೆ ಏಳಲೇ ಇಲ್ಲ. ಅಂತಿ,ವಾಗಿ ಎರಡೂ ತಂಡಗಳು ತಲಾ ಒಂದು ಅಂಕಕ್ಕೆ ತೃಪ್ತಿಪಟ್ಟವು.