ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಎಟಿಕೆ ಇದೀಗ 3ನೇ ಪ್ರಶಸ್ತಿ ಗೆಲುವಿನ ಸೂಚನೆ ನೀಡುತ್ತಿದೆ. ಜೆಮ್‌ಶೆಡ್‌ಪುರ ತಂಡದ ವಿರುದ್ಧ ಅಬ್ಬರಿಸಿದ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಜೆಮ್‌ಶೆಡ್‌ಪುರ(ಫೆ.02: ರಾಯ್ ಕೃಷ್ಣ (2 ಮತ್ತು 75ನೇ ನಿಮಿಚ) ಮತ್ತು ಎಡು ಗಾರ್ಸಿಯಾ (59ನೇ ನಿಮಿಷ) ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 3-0 ಗೋಲಗಳ ಅಂತರದಲ್ಲಿ ಸೋಲಿಸಿದ ಎಟಿಕೆ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರಸ್ಥಾನಕ್ಕೇರಿತು. ಪ್ಲೇ ಆಫ್ ಹಂತ ತಲಪುವ ಜೆಮ್ಷೆಡ್ಪುರದ ಹಾದಿಗೆ ಮತ್ತೊಂದು ತಡೆಯಾಯಿತು.
ಇದನ್ನೂ ಓದಿ: ISL ಫುಟ್ಬಾಲ್: 2ನೇ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ
undefined
ಎರಡು ಬಾರಿ ಚಾಂಪಿಯನ್ ಎಟಿಕೆ ತಂಡ ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದ ಗುರಿಯೊಂದಿಗೆ ಕಣಕ್ಕಿಳಿಯಿತು. ಅದೇ ರೀತಿಯಲ್ಲಿ ದಿಟ್ಟ ಹೋರಾಟ ನೀಡಿದ ಎಟಿಕೆ 2ನೇ ನಿಮಿಷದಲ್ಲೇ ಯಶಸ್ಸು ಕಂಡಿತು. ರಾಯ್ ಕೃಷ್ಣ ಅವರು ಗಳಿಸಿದ ಗೋಲಿನಿಂದ ಎಟಿಕೆ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಿತು.
ಇದನ್ನೂ ಓದಿ: ಐಎಸ್‌ಎಲ್: ಮುಂಬೈ ಎಫ್‌ಸಿ ವಿರುದ್ಧ ಒಡಿಶಾಗೆ ಜಯ
ಜೆಮ್ಷೆಡ್ಪುರ ತಂಡಕ್ಕೆ ಆರಂಭದಲ್ಲೇ ಆಘಾತ. ಸಂದೀಪ್ ಮಂಡಿ ಎಡಭಾಗದಲ್ಲಿ ದೊರಕಿದ ಚೆಂಡನ್ನು ಮೆಮೊ ಮೌರಾ ಅವರಿಗೆ ನೀಡುವವರಿದ್ದರು, ಆದರೆ ಪಾಸ್ ಮಾಡಿದ ಚೆಂಡು ಅನಿರೀಕ್ಷಿತವಾಗಿ ರಾಯ್ ಕೃಷ್ಣ ಅವರ ನಿಯಂತ್ರಣಕ್ಕೆ ಸಿಕ್ಕಿತು. ರಾಯ್ ಕೃಷ್ಣ ಉತ್ತಮ ರೀತಿಯಲ್ಲಿ ಗೋಲು ಗಳಿಸಿ ತನ್ನ ಓಟ್ಟು ಗೋಲುಗಳ ಸಂಖ್ಯೆಯನ್ನಗ 9 ಕ್ಕೇರಿಸಿದರು.
ಮನೆಯಂಗಣದಲ್ಲಿ ಜೆಮ್ಷೆಡ್ಪುರ ತಂಡ ಉತ್ತಮ ರೀತಿಯಲ್ಲಿ ಹೋರಾಟ ನೀಡದ ಕಾರಣ, ಗೋಲ್ ಗಳಿಸಲು ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾದ ಕಾರಣ ಪ್ರಥಮಾರ್ಧ 1-0 ಗೋಲಿನಲ್ಲಿ ಅಂತ್ಯಗೊಂಡಿತು.
ದ್ವಿತಿಯಾರ್ಧದ 59ನೇ ನಿಮಿಷದಲ್ಲಿ ಎಡು ಗಾರ್ಸಿಯಾ ಗೋಲು ಸಿಡಿಸಿ ಎಟಿಕೆ ಅಂತರವನ್ನು ಹೆಚ್ಚಿಸಿದರು. ಇನ್ನು 75ನೇ ನಿಮಿಷದಲ್ಲಿ ರಾಯ್ ಕೃಷ್ಣ ಮತ್ತೆ ಮಿಂಚಿದರು. ಅದ್ಬುತ ಗೋಲು ಸಿಡಿಸೋ ಮೂಲಕ ಎಟಿಕೆಗೆ 3-0 ಮುನ್ನಡೆ ತಂದುಕೊಟ್ಟರು. ಜೆಮ್‌ಶೆಡ್‌ಪುರ ತಂಡ ಗೋಲಿಗಾಗಿ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ.