ISL 2019: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ ಪಂದ್ಯ ಡ್ರಾ!

By Web Desk  |  First Published Dec 5, 2019, 10:17 PM IST

ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಳ್ಳುತ್ತಿವೆ. ಇದೀದ ಕೇರಳ ಹಾಗೂ ಮುಂಬೈ ನಡುವಿನ ಪಂದ್ಯ ಕೂಡ ಇದಕ್ಕೆ ಹೊರತಾಗಿಲ್ಲ. 


ಮುಂಬೈ(ಡಿ.05): ಕೇರಳ ರಫಾಯೆಲ್  ಮೆಸ್ಸಿ ಬೌಲಿ ( 75ನೇ ನಿಮಿಷ)  ಹಾಗೂ ಮುಂಬೈ ಸಿಟಿ ಎಫ್ ಸಿ ಪರ  ಅಮೈನ್ ಚೇರ್ಮಿತಿ  ( 77ನೇ ನಿಮಿಷ)  ತಲಾ ಒಂದು ಗೋಲು ಗಳಿಸುವುದರೊಂದಿಗೆ  ಇಂಡಿಯನ್ ಸೂಪರ್ ಲೀಗ್ ನ  37ನೇ ಪಂದ್ಯ ಸಮಬಲದಲ್ಲಿ ಕೊನೆಗೊಂಡಿತು. ಇದರೊಂದಿಗೆ ಕೇರಳ ಹಾಗೂ ಮುಂಬೈ ಸತತ ಆರು ಪಂದ್ಯಗಳಲ್ಲಿ ಜಯ ಗೆಲುವು ಕಾಣದೇ ಸೊರಗಿದೆ.

ಇದನ್ನೂ ಓದಿ: ISL ಫುಟ್ಬಾಲ್: ಅಗ್ರ​ಸ್ಥಾನಕ್ಕೆ ಏರಿದ ಬೆಂಗಳೂರು ಎಫ್‌ಸಿ

Tap to resize

Latest Videos

ಪಂದ್ಯ ಕುತೂಹಲದಿಂದ ಕೂಡಿದ್ದರೂ ಗೋಲಿನಲ್ಲಿ ಕೊನೆಗೊಳ್ಳದಿದ್ದರೆ ಆಟಗಾರರರಿಗೆ ನಿರಾಸೆಯಾಗುವುದು ಸಹಜ. ಕೇರಳ ಬ್ಲಾಸ್ಟರ್ಸ್ ಹಾಗೂ ಮುಂಬೈ ಸಿಟಿ ಎಫ್ ಸಿ ನಡುವಿನ ಪಂದ್ಯದ ಪ್ರಥಮಾರ್ಧ ಕುತೂಹಲದಿಂದ ಕೂಡಿತ್ತು. ಉಭಯ ತಂಡಗಳಿಗೂ ಜಯದ ಅನಿವಾರ್ಯತೆ ಇದ್ದಿತ್ತು. ಹೀಗಾಗಿ ಕೇರಳ ಹಾಗೂ ಮುಂಬೈ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದವು. 

ಅಮರಿಂದರ್ ಸಿಂಗ್  ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದ್ದು ಕೇರಳ ಬ್ಲಾಸ್ಟರ್ಸ್ ತಂಡದ ಗೋಲು ಗಳಿಕೆಗೆ ತಡೆಯಾಯಿತು. ಮೆಸ್ಸಿ ಬೌಲಿ  ಅವರಿಗೆ ಅದ್ಭುತ ಗೋಲು ಗಳಿಸುವ ಅವಕಾಶ ಇದ್ದಿತ್ತು. ಅದು ಒಂದು ವೇಳೆ ಗೋಲಾಗಿರುತ್ತಿದ್ದರೆ ಋತುವಿನ ಉತ್ತಮ  ಗೋಲಾಗಿ ದಾಖಲಾಗಿರುತ್ತಿತ್ತು. ಆದರೆ ಅಮರಿಂದರ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದು ಕೇರಳದ ಮುನ್ನಡೆಗೆ ಅಡ್ಡಿಯಾದರು. ಮುಂಬೈ ಪರ ಮೊದೌ ಸೌಗೌ  ಅವರಿಗೆ ಕೊನೆಯ ಕ್ಷಣದಲ್ಲಿ  ಗೋಲು ಗಳಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದರು. ಇತ್ತಂಡಗಳಿಗೆ ಜಯದ ತೀವ್ರತೆ ಎಷ್ಟಿತ್ತೆಂಬುದು ಮೊದಲಾರ್ಧದಿಂದ ಸ್ಪಷ್ಟವಾಯಿತು.

ದ್ವಿತಿಯಾರ್ಧದಲ್ಲಿ ಕೇರಳಾ ಹಾಗೂ ಮುಂಬೈ ತಲಾ ಒಂದೊಂದು ಗೋಲು ಸಿಡಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. 

click me!