ಐಎಸ್‌ಎಲ್‌: ಹೈದ್ರಾಬಾದ್‌ ವಿರುದ್ಧ ಬೆಂಗಳೂರಿಗೆ ಜಯ

By Kannadaprabha NewsFirst Published Feb 25, 2024, 10:17 AM IST
Highlights

71ನೆ ನಿಮಿಷದಲ್ಲಿ ಗೋಲು ಬಾರಿಸಿ ಜಾವಿ ಹೆರ್ನಾಂಡೆಜ್‌ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರೂ, 80ನೇ ನಿಮಿಷದಲ್ಲಿ ಹೈದರಾಬಾದ್ ಸಮಬಲ ಸಾಧಿಸಿತು. ಆದರೆ ಶಿವಶಕ್ತಿ ನಾರಾಯಣನ್‌ 87ನೇ ನಿಮಿಷದಲ್ಲಿ ಹೊಡೆದ ಗೋಲು ಬೆಂಗಳೂರಿಗೆ ಜಯ ತಂದುಕೊಟ್ಟಿತು. ಮಾ.2ರಂದು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗ್ಳೂರು ತಂಡ ಬದ್ಧವೈರಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಸೆಣಸಾಡಲಿದೆ.

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಹೈದರಾಬಾದ್ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ 2-1 ಗೋಲುಗಳ ಗೆಲುವು ಸಾಧಿಸಿದೆ. ಇದರೊಂದಿಗೆ 17 ಪಂದ್ಯಗಳಲ್ಲಿ 4ನೇ ಜಯದೊಂದಿಗೆ ಒಟ್ಟು 18 ಅಂಕ ಸಂಪಾದಿಸಿದ ಸುನಿಲ್‌ ಚೆಟ್ರಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

71ನೆ ನಿಮಿಷದಲ್ಲಿ ಗೋಲು ಬಾರಿಸಿ ಜಾವಿ ಹೆರ್ನಾಂಡೆಜ್‌ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರೂ, 80ನೇ ನಿಮಿಷದಲ್ಲಿ ಹೈದರಾಬಾದ್ ಸಮಬಲ ಸಾಧಿಸಿತು. ಆದರೆ ಶಿವಶಕ್ತಿ ನಾರಾಯಣನ್‌ 87ನೇ ನಿಮಿಷದಲ್ಲಿ ಹೊಡೆದ ಗೋಲು ಬೆಂಗಳೂರಿಗೆ ಜಯ ತಂದುಕೊಟ್ಟಿತು. ಮಾ.2ರಂದು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗ್ಳೂರು ತಂಡ ಬದ್ಧವೈರಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಸೆಣಸಾಡಲಿದೆ.

ಸಂತೋಷ್‌ ಟ್ರೋಫಿ: 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡ ಕರ್ನಾಟಕ

ಯೂಪಿಯಾ(ಅರುಣಾಚಲ ಪ್ರದೇಶ): ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್‌ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಸತತ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಶನಿವಾರ ಮಿಜೋರಾಂ ವಿರುದ್ಧ ನಡೆದ ‘ಬಿ’ ಗುಂಪಿನ 2ನೇ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು. ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಮಿಜೋರಾ, 47 ನಿಮಿಷದ ವೇಳೆಗೆ 2 ಗೋಲು ಬಾರಿಸಿ ಮುನ್ನಡೆಯಲ್ಲಿತ್ತು.

Ranji Trophy: ಕರ್ನಾಟಕದ ವಿರುದ್ಧ ವಿದರ್ಭ ಬೃಹತ್‌ ಮೊತ್ತ

ಆದರೆ ಬಳಿಕ ಪ್ರಬಲ ಪೈಪೋಟಿ ನೀಡಿದ ರಾಜ್ಯ ತಂಡದ ಪರ ಪ್ರಬಿನ್‌ ಟಿಗ್ಗ(67ನೇ ನಿಮಿಷ) ಹಾಗೂ ವಿಶಾಲ್‌(69ನೇ ನಿಮಿಷ) 2 ಗೋಲು ಬಾರಿಸಿ ಪಂದ್ಯವನ್ನು ಡ್ರಾಗೊಳಿಸಿತು. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ಮುಂದಿನ ಪಂದ್ಯದಲ್ಲಿ ಸೋಮವಾರ ಮಣಿಪುರ ವಿರುದ್ಧ ಸೆಣಸಾಡಲಿದೆ.

ಏಷ್ಯಾ ಆರ್ಚರಿ: 3 ಚಿನ್ನ ಸೇರಿ ಭಾರತಕ್ಕೆ 4 ಪದಕ

ಬಗ್ದಾದ್‌: ಇಲ್ಲಿ ನಡೆಯುತ್ತಿರುಗ ಏಷ್ಯನ್‌ ಕಪ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ 3 ಚಿನ್ನ ಸೇರಿ 4 ಪದಕ ಗೆದ್ದಿದೆ. ಜೊತೆಗೆ ಇನ್ನೂ 3 ಚಿನ್ನ ಸೇರಿ 10 ಪದಕಗಳನ್ನು ಖಚಿತಪಡಿಸಿಕೊಂಡಿದೆ. ಕಾಂಪೌಂಡ್ ವಿಭಾಗದಲ್ಲಿ ಭಾರತ ಪುರುಷ, ಮಹಿಳಾ ಹಾಗೂ ಮಿಶ್ರ ತಂಡಗಳು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡವು. ಫೈನಲ್‌ನಲ್ಲಿ ಮೂರೂ ತಂಡಗಳು ಇರಾನ್‌ನ ತಂಡಗಳನ್ನು ಸೋಲಿಸಿತು. ಇದೇ ವೇಳೆ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮಹಿಳಾ IPL ಒಪನಿಂಗ್ ಸೆರಮನಿಯಲ್ಲಿ ಕೆಲಸ ಮಾಡಿದ ಕ್ಯಾಮೆರಾಮೆನ್ ಹೃದಯಾಘಾತದಿಂದ ಸಾವು!

ಪ್ರೊ ಲೀಗ್: ಶೂಟೌಟ್‌ನಲ್ಲಿ ಆಸೀಸ್‌ಗೆ ಭಾರತ ಶರಣು

ರೂರ್ಕೆಲಾ: 2023-24ರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಪಂದ್ಯದಲ್ಲೂ ಸೋಲುಂಡಿದೆ. ಶನಿವಾರ ಭಾರತಕ್ಕೆ ಶೂಟೌಟ್‌ನಲ್ಲಿ 0-3 ಸೋಲು ಎದುರಾಯಿತು. 7 ಪಂದ್ಯಗಳನ್ನಾಡಿರುವ ಭಾರತ 4 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರೆದಿದೆ. 

ನಿಗದಿತ ಸಮಯದಲ್ಲಿ ಇತ್ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಶೂಟೌಟ್‌ನಲ್ಲಿ ಭಾರತದ ಮೂರು ಪ್ರಯತ್ನಗಳಲ್ಲೂ ಗೋಲು ದಾಖಲಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಭಾನುವಾರ ಭಾರತಕ್ಕೆ ಐರ್ಲೆಂಡ್ ಸವಾಲು ಎದುರಾಗಲಿದೆ.

click me!