ISL Final: ಪ್ರಶಸ್ತಿಗಾಗಿಂದು ಕೇರಳ, ಹೈದರಾಬಾದ್‌ ಫೈನಲ್‌ ಫೈಟ್

By Suvarna News  |  First Published Mar 20, 2022, 8:36 AM IST

* 8ನೇ ಆವೃತ್ತಿಯ ಐಎಸ್‌ಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಫೈನಲ್‌ನಲ್ಲಿ ಕೇರಳ ಬ್ಲಾಸ್ಟರ್ಸ್‌ ಹಾಗೂ ಹೈದರಾಬಾದ್‌ ಎಫ್‌ಸಿ ಕಾದಾಟ

* ಎರಡೂ ತಂಡಗಳು ಚೊಚ್ಚಲ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದೆ. 


ಗೋವಾ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super League) 8ನೇ ಆವೃತ್ತಿಯ ಫೈನಲ್‌ ಪಂದ್ಯ ಕೇರಳ ಬ್ಲಾಸ್ಟರ್ಸ್‌ (Kerala Blasters) ಹಾಗೂ ಹೈದರಾಬಾದ್‌ ಎಫ್‌ಸಿ (Hyderabad FC) ನಡುವೆ ಭಾನುವಾರ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಜಯಗಳಿಸಿದ್ದ ಹೈದರಾಬಾದ್‌ ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸಿದ್ದರೆ, ಜಮ್ಷೆಡ್‌ಪುರ ಎಫ್‌ಸಿಗೆ ಸೋಲುಣಿಸಿದ ಕೇರಳ 3ನೇ ಬಾರಿ ಫೈನಲ್‌ ತಲುಪಿದೆ. 

ಎರಡೂ ತಂಡಗಳು ಚೊಚ್ಚಲ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದೆ. ಕೇರಳ ಈ ಮೊದಲು 2014 ಮತ್ತು 2016ರಲ್ಲಿ ಫೈನಲ್‌ ಪ್ರವೇಶಿಸಿದ್ದರೂ ಎರಡೂ ಬಾರಿ ಎಟಿಕೆ ಮೋಹನ್‌ ಬಗಾನ್‌ ತಂಡದ ವಿರುದ್ಧ ಸೋತಿತ್ತು. ಫೈನಲ್‌ ಪಂದ್ಯ ನಡೆಯುವ ಜವಾಹರ್‌ ಲಾಲ್‌ ನೆಹರು ಕ್ರೀಡಾಂಗಣಕ್ಕೆ ಶೇ.100ರಷ್ಟುಪ್ರೇಕ್ಷಕರಿಗೆ ಪ್ರವೇಶ ನೀಡಲು ಗೋವಾ ಸರ್ಕಾರ ಒಪ್ಪಿಗೆ ನೀಡಿದೆ.

Tap to resize

Latest Videos

undefined

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಬೆಂಗ್ಳೂರು ಟೆನಿಸ್‌: ಖಾಡೆ, ಕ್ಯಾಷ್‌ಗೆ ಡಬಲ್ಸ್‌ ಪ್ರಶಸ್ತಿ

ಬೆಂಗಳೂರು: ಐಟಿಎಫ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ (ITF Bengaluru Open Tennis Tournament) ಪುರುಷರ ಡಬಲ್ಸ್‌ನಲ್ಲಿ ಭಾರತದ ಅರ್ಜುನ್‌ ಖಾಡೆ ಹಾಗೂ ಬ್ರಿಟನ್‌ನ ಜೂಲಿಯನ್‌ ಕ್ಯಾಷ್‌ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ಫೈನಲ್‌ನಲ್ಲಿ ಈ ಜೋಡಿ ಭಾರತದ ಶಶಿಕುಮಾರ್‌ ಮುಕುಂದ್‌-ವಿಷ್ಣು ವರ್ಧನ್‌ ಜೋಡಿ ವಿರುದ್ಧ 7-6(5), 2-6, 10-7 ಸೆಟ್‌ಗಳಿಂದ ಗೆಲುವು ಸಾಧಿಸಿತು. 

All England Badminton ಹಾಲಿ ಚಾಂಪಿಯನ್ ಆಟಗಾರನನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟ ಲಕ್ಷ್ಯ ಸೆನ್!

ಇನ್ನು ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಪೋಲೆಂಡ್‌ನ ಮಾಕ್ಸ್‌ ಕಾನ್ಸಿಕೊಕ್ಸ್‌ ವಿರುದ್ಧ ಗೆದ್ದ ಭಾರತದ ಅರ್ಜುನ್‌ ಖಾಡೆ ಫೈನಲ್‌ ಪ್ರವೇಶಿಸಿದ್ದಾರೆ. ಅವರು ಭಾನುವಾರ ಫೈನಲ್‌ನಲ್ಲಿ ಸಿದ್ಧಾರ್ಥ್ ರಾವತ್‌ ವಿರುದ್ಧ ಸೆಣಸಲಿದ್ದಾರೆ.

ಐಎನ್‌ಬಿಎಲ್‌: ಬ್ಯಾಂಕ್‌ ಆಫ್‌ ಬರೋಡಾ ಪ್ರಿ ಕ್ವಾರ್ಟರ್‌ಗೆ

ಬೆಂಗಳೂರು: ಚೊಚ್ಚಲ ಆವೃತ್ತಿಯ 3*3 ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌(ಐಎನ್‌ಬಿಎಲ್‌)ನಲ್ಲಿ ಬ್ಯಾಂಕ್‌ ಆಫ್‌ ಬರೋಡಾ, ಕ್ರೀಡಾ ಹಾಸ್ಟೆಲ್‌ ತಂಡಗಳು 3ನೇ ಸುತ್ತು ಪ್ರವೇಶಿಸಿವೆ. ಶನಿವಾರ ಪುರುಷರ ವಿಭಾಗದಲ್ಲಿ ಬ್ಯಾಂಕ್‌ ಆಫ್‌ ಬರೋಡಾ, ಟೀಂ ರಾಕೆಟ್‌ ವಿರುದ್ಧ ಹಾಗೂ ಕ್ರೀಡಾ ಹಾಸ್ಟೆಲ್‌ ತಂಡ ನೈಂಟಿ ಸಿಕ್ಸ್‌ ವಿರುದ್ಧ ಗೆಲುವು ಸಾಧಿಸಿತು. ಮಹಿಳಾ ವಿಭಾಗದಲ್ಲಿ ಆಲ್‌ ಸ್ಟಾ​ರ್ಸ್‌, ಎಂವೈಎಸ್‌ ಸ್ಪಾರ್ಕರ್ಸ್‌ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

FIH Pro League: ಭಾರತ ಹಾಕಿ ತಂಡಕ್ಕೆ ಆಘಾತಕಾರಿ ಸೋಲು

ಭುವನೇಶ್ವರ: ಭಾರತ ಪುರುಷರ ಹಾಕಿ ತಂಡವು (Indian Men's Hockey Team) ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಅರ್ಜೇಂಟೀನಾ ವಿರುದ್ದ ಶೂಟೌಟ್‌ನಲ್ಲಿ 1-3 ಗೋಲುಗಳಿಂದ ಸೋಲನನ್ನುಭವಿಸಿದೆ. ಶನಿವಾರ ನಡೆದ ಪಂದ್ಯ ನಿಗದಿತ ಸಮಯದಲ್ಲಿ 2-2 ಗೋಲುಗಳಿಂದ ಸಮಗೊಂಡಿತ್ತು. ಮಂದೀಪ್ ಸಿಂಗ್ 59ನೇ ನಿಮಿಷದಲ್ಲಿ ಬಾರಿಸಿದ ಗೋಲು ಪಂದ್ಯ ಟೈ ಆಗಲು ನೆರವಾಯಿತು. ಆದರೆ ಶೂಟೌಟ್‌ನಲ್ಲಿ ಭಾರತ 4 ಪ್ರಯತ್ನಗಳಲ್ಲಿ ಒಂದು ಗೋಲು ಬಾರಿಸಿದರೆ, ಅರ್ಜೇಂಟೀನಾ 3 ಗೋಲು ಬಾರಿಸಿ ಜಯ ಗಳಿಸಿತು. ಇನ್ನು ಎರಡನೇ ಪಂದ್ಯವು ಭಾನುವಾರ(ಏ.20) ನಡೆಯಲಿದೆ

ಪಂಕಜ್‌ಗೆ 8ನೇ ಏಷ್ಯನ್‌ ಪ್ರಶಸ್ತಿ

ದೋಹಾ: ಭಾರತದ ಖ್ಯಾತ ಬಿಲಿಯರ್ಡ್ಸ್‌ ಪಟು ಪಂಕಜ್ ಅಡ್ವಾಣಿ 8ನೇ ಬಾರಿ ಏಷ್ಯನ್ ಬಿಲಿಯರ್ಡ್ಸ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಶನಿವಾರ ಅವರು 19ನೇ ಏಷ್ಯನ್ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದವರೇ ಆದ 2 ಬಾರಿಯ ಚಾಂಪಿಯನ್‌ ದೃವ್ ಸಿತ್ವಾಲಾ ವಿರುದ್ದ 6-2 ಅಂತರದಲ್ಲಿ ಗೆಲುವು ಸಾಧಿಸಿದರು. 
 

click me!