ISL 7: ಒಡಿಶಾ, ಹೈದರಾಬಾದ್ FC ತಂಡಕ್ಕೆ ಅಗ್ನಿಪರೀಕ್ಷೆ!

By Suvarna NewsFirst Published Nov 23, 2020, 2:22 PM IST
Highlights

ಕಳೆದ ಆವೃತ್ತಿಗಳಲ್ಲಿ ಹೀನಾಯ ಪ್ರದರ್ಶನ ನೀಡಿ ಸೋಲಿನ ಕಹಿ ಅನುಭವಿಸಿದ್ದ ಒಡಿಶಾ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ಇದೀಗ ಗೆಲುವಿಗಾಗಿ ಹೋರಾಟ ನಡೆಸಲಿದೆ. 7ನೇ ಆವೃತ್ತಿ ಐಎಸ್‌ಎಲ್ ಟೂರ್ನಿಯ 4ನೇ ಪಂದ್ಯದಲ್ಲಿ ಗೆಲುವು ಯಾರಿಗೆ? ಇಲ್ಲಿದೆ ವಿವರ.
 

ಗೋವಾ(ನ.23):  ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಒಡಿಶಾ FC ಹಾಗೂ ಹೈದರಾಬಾದ್ FC ತಂಡಗಳಿಗೆ ಹಿಂದಿನ ಇತಿಹಾಸಕ್ಕಿಂತ ಬಂಬೊಲಿಮ್ ಕ್ರೀಡಾಂಗಣದಲ್ಲಿ ಜಯವೊಂದೇ ಮಂತ್ರವಾಗಿದೆ.

ISL 7: ಎರಡೆರಡು ಗೋಲು ಸಿಡಿಸಿದ್ರೂ ಬೆಂಗಳೂರು FC ಗೆಲ್ಲಲಿಲ್ಲ, ಗೋವಾ FC ಸೋಲಲಿಲ್ಲ!

ಎರಡೂ ತಂಡಗಳು ತಮ್ಮ ಹಿಂದಿನ ಋತುವನ್ನು ಮರೆಯಬೇಕಾಗಿದೆ. ಹೈದರಾಬಾದ್ ತಂಡ ತಾನು ಆಡಿರುವ ಪಂದ್ಯಗಳಲ್ಲಿ  12 ಪಂದ್ಯಗಳನ್ನು ಸೋತಿದ್ದು, ಎದುರಾಳಿ ತಂಡಕ್ಕೆ 39 ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿದೆ.ಒಡಿಶಾ ಕೂಡ ಎದುರಾಳಿ ತಂಡದಂತೆ ಉತ್ತಮ ಪ್ರದರ್ಶನ ನೀಡದೆ  31 ಗೋಲುಗಳನ್ನು ಗಳಿಸುವ ಅವಕಾಶ ಕಲ್ಪಿಸಿತ್ತು.

ಆದರೆ ಒಡಿಶಾ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಗೆ ಇದೆಲ್ಲ ಬರೇ ಸಂಖ್ಯೆ ಇದ್ದಂತೆ. , “ಅದು ಇತಿಹಾಸ, ಅದು ಯಾರಿಗೂ ನೆರವಾಗುವುದಿಲ್ಲ. ಈಗ ನಮ್ಮದು ಉತ್ತಮ ಎರಡು ಹೊಸ ತಂಡ.  ಅವರಲ್ಲಿಯೂ ಹೊಸ ಆಟಟಗಾರರು ಸೇರಿದ್ದಾರೆ,  ನಮ್ಮಲ್ಲಿಯೂ ಹೊಸ ಆಟಗಾರರು ಬಂದಿದ್ದಾರೆ. ಆದ್ದರಿಂದ ಎರಡೂ ಕಡೆಗಳಲ್ಲೂ ಬದಲಾವಣೆಗಳಾಗಿವೆ. ನಾವು ಹೊಸ ಹೈದರಾಬಾದ್ ತಂಡದೊಂದಿಗೆ ಆಡಲಿದ್ದೇವೆ,’’ ಎಂದು ಬಾಕ್ಸ್ಟರ್ ಹೇಳಿದ್ದಾರೆ.

ISL 7: ಮುಂಬೈಗೆ ಶಾಕ್ ನೀಡಿದ ನಾರ್ಥ್ ಈಸ್ಟ್; ಹೊಸ ಉತ್ಸಾಹದಲ್ಲಿ ತಂಡ!

ಬಾಕ್ಸ್ಟರ್ ಅವರಿಗೆ ಅಟ್ಯಾಕ್ ವಿಭಾಗದಲ್ಲಿ ಉತ್ತಮ ಆಯ್ಕೆ ಇದೆ. ಬ್ರೆಜಿಲ್ ಮೂಲಕ ಸ್ಟ್ರೈಕರ್ ಡಿಗೋ ಮೌರಿಸಿಯೊ ಮತ್ತು ಹೈದರಾಬಾದ್ ತಂಡದಲ್ಲಿ ಆಡಡಿದ್ದ ಮಾರ್ಸೆಲಿನೊ ಇಬ್ಬರೂ ತಂಡಕ್ಕೆ ತಿರುವು ನೀಡಬಲ್ಲ ಆಟಗಾರರು. ಆದರೆ ಇಂಗ್ಲೆಂಡ್ ಕೋಚ್ ಯಾವುದೇ ಒಬ್ಬ ಆಟಗಾರನ ಮೇಲೆ ಹೆಚ್ಚು ಅವಲಂಬಿತವಾದೆ ಹೊಸ ರಣತಂತ್ರರಗಳನ್ನು ರೂಪಿಸುವುದಾಗಿ ಹೇಳಿದ್ದಾರೆ. “ಒಬ್ಬ ಆಟಗಾರನನ್ನೇ ಅವಲಂಭಿಸಿರುವುದು ಅಪಾಯಕಾರಿ, ಯಾವುದೇ ಒಬ್ಬ ಆಟಗಾರನ ಮೇಲೆ ಹೆಚ್ಚು ಅವಲಂಭಿತವಾಗದೆ ತಂಡವಾಗಿ ಆಡುವ ಸಾಮರ್ಥ್ಯ ಹೊಂದಿರಬೇಕು. ಫುಟ್ಬಾಲ್ ನಲ್ಲಿ ಯಾವುದೇ ರೀತಿಯ ಸುರಕ್ಷಿತ ವಲಯ ಎಂಬುದಿಲ್ಲ. ನೀವು ಅಂಥ ವಲಯವನ್ನು ದಾಟಿ ಹೋಗುವುದು ನಿಮ್ಮ ಕೆಲಸ,’’ ಎಂದು ಹೇಳಿದರು.

ಕಳೆದ ಋತುವಿನಲ್ಲಿ ಹೈದರಾಬಾದ್  ಕೊನೆಯ ಸ್ಥಾನ ಗಳಿಸಿತ್ತು. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿತ್ತು. ಇದಕ್ಕೆ ಮುಖ್ಯ ಕಾರಣ ಋತುವಿನ ಆರಂಭದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಕಂಡಿರುವುದು. ನೂತನ ಕೋಚ್ ಮಾನ್ವೆಲ್ ಮಾರ್ಕ್ವೆಜ್ ರೊಕಾ ಆ ರೀತಿಯ ಆರಂಭ ಕಾಣದೆ ಜಯ ಆರಂಭದ ಗುರಿ ಹೊಂದಿದ್ದಾರೆ. “ಮೊದಲ ಪಂದ್ಯವನ್ನು ಗೆಲ್ಲುವುದು ಮುಖ್ಯ. ಒಂದು ವೇಳೆ ಮುಂದಿನ 19 ಪಂದ್ಯಗಳನ್ನು ಗೆಲ್ಲುವುದಾದರೆ ಮೊದಲ ಪಂದ್ಯದಲ್ಲಿ ಸೋಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ,’’ ಎಂದರು.

ಸ್ಪೇನ್ ಮೂಲದ ಕೋಚ್  ಬತ್ತಳಿಕೆಯಲ್ಲಿ ಯುವ ಆಟಗಾರರಿದ್ದಾರೆ. ಅವರಿಗೆ ಉತ್ತಮ ರೀತಿಯಲ್ಲಿ ಅವಕಾಶ ಕಲ್ಪಿಸುವುದು ಕೋಚ್ ಗುರಿ, “ರೋಹಿಲ್ ದಾನು, ಲಿಸ್ಟನ್ ಕೊಲಾಕೊ ಮತ್ತು ಆಕಾಶ್ ಮಿಶ್ರಾ ಅವರು ಉತ್ತಮ ಯುವ ಆಟಗಾರರು. ಅವರು ನಿರಂತರವಾಗಿ ಸುಧಾರಣೆಗೊಳ್ಳುತ್ತರೆಂಬ ನಂಬಿಕೆ ನನಗಿದೆ, ಹಾಗಾದಲ್ಲಿ ಹೈದರಾಬಾದ್ ತಂಡಡಕ್ಕೆ ಭವಿಷ್ಯದ ಆಸ್ತಿಯಾಗಲಿದ್ದಾರೆ,’’ ಎಂದರು.

ಒಡಿಶಾ ತಂಡದಲ್ಲಿ ನಾಳೆಯ ಪಂದ್ಯಕ್ಕೆ ಡಿಫೆಂಡರ್ ಗಳಾದ ಜಾಕೊಬ್ ಟ್ರಾಟ್ ಮತ್ತು ಜೆರ್ರಿ ಮಾಹ್ವಿಂಗ್ತಾಂಗ್ ಅವರ ಸೇವೆ ಅಲಭ್ಯ ಇದೆ, ಅದೇ ರೀತಿ ಹೈದರಾಬಾದ್ ನಲ್ಲಿ ಫ್ರಾನ್ಸಿಸ್ಕೋ ಸ್ಯಾಂಡಾಜಾ ಅವರು ಆಡುತ್ತಿಲ್ಲ.

click me!