ಫುಟ್ಬಾಲ್‌ ವೃತ್ತಿ ಬದು​ಕಿ​ನ ಕೊನೆ ಹಂತ​ದ​ಲ್ಲಿ​ದ್ದೇ​ನೆ: ಲಿಯೋನೆಲ್ ಮೆಸ್ಸಿ ನಿವೃತ್ತಿ ಸುಳಿವು

By Kannadaprabha News  |  First Published Jun 20, 2023, 8:26 AM IST

ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
ಫುಟ್ಬಾಲ್‌ ವೃತ್ತಿ ಬದು​ಕಿನ ಕೊನೆ ಹಂತ​ದ​ಲ್ಲಿ​ದ್ದೇನೆ ಎಂದ ಚಾಂಪಿಯನ್ ಆಟಗಾರ
ಎಲ್ಲ​ದ​ರಲ್ಲೂ ಚಾಂಪಿ​ಯನ್‌ ಎಂಬ ಖುಷಿ​ಯಲ್ಲೇ ಈಗ ಆಡು​ತ್ತಿ​ದ್ದೇನೆ ಎಂದ ಮೆಸ್ಸಿ


ಬ್ಯೂನಸ್‌ ಐರಿ​ಸ್‌​(​ಜೂ.20): ಸಾರ್ವ​ಕಾಲಿಕ ಶ್ರೇಷ್ಠ ಫುಟ್ಬಾ​ಲಿ​ಗ​ರಲ್ಲಿ ಓರ್ವ​ರಾದ ಅರ್ಜೆಂಟೀನಾದ ಲಿಯೋ​ನೆಲ್‌ ಮೆಸ್ಸಿ ಫುಟ್ಬಾಲ್‌ ವೃತ್ತಿ ಬದು​ಕಿನ ಕೊನೆ ಹಂತ​ದ​ಲ್ಲಿ​ದ್ದೇನೆ ಎಂದಿ​ದ್ದಾರೆ. 

ಈ ಬಗ್ಗೆ ಸಂದ​ರ್ಶ​ನ​ವೊಂದರಲ್ಲಿ ಮಾತ​ನಾ​ಡಿದ 35 ವರ್ಷದ ಮೆಸ್ಸಿ, ‘ವೃತ್ತಿ ಬದು​ಕಿನ ಕೊನೆ ಹಂತ​ದ​ಲ್ಲಿ​ದ್ದೇನೆ. ಆದರೆ ಎಲ್ಲ​ದ​ರಲ್ಲೂ ಚಾಂಪಿ​ಯನ್‌ ಎಂಬ ಖುಷಿ​ಯಲ್ಲೇ ಈಗ ಆಡು​ತ್ತಿ​ದ್ದೇನೆ. ಫುಟ್ಬಾ​ಲ್‌​ನಲ್ಲಿ ಗೆಲುವು ಮಾತ್ರ​ವಲ್ಲ, ನಮ್ಮ ಪಯ​ಣವೂ ಕೂಡಾ ಜೀವ​ನಕ್ಕೆ ಬೇಕಾದ ಅತ್ಯ​ಮೂಲ್ಯ ಪಾಠ​ಗ​ಳನ್ನು ಕಲಿ​ಸಿ​ಕೊ​ಟ್ಟಿದೆ. ನಾವು ಏನಾ​ದರೂ ಅಂದು​ಕೊಂಡಾಗ, ಯಾವು​ದ​ಕ್ಕಾದರೂ ಪ್ರಯ​ತ್ನಿ​ಸಿ​ ಸಿಗದೆ ಇರುವ ಕ್ಷಣ​ಗಳೂ ನಮಗೆ ಪಾಠ. ನೀವು ಕನಸು ಕಂಡಿ​ದ್ದನ್ನು ಸಾಧಿ​ಸು​ವ​ವ​ರೆಗೂ ಪ್ರಯತ್ನ ಬಿಡ​ಬೇ​ಡಿ’ ಎಂದು ಸಲಹೆ ನೀಡಿ​ದ್ದಾರೆ. ಇತ್ತೀ​ಚೆ​ಗಷ್ಟೇ ಅವರು 2026ರ ವಿಶ್ವ​ಕ​ಪ್‌​ನಲ್ಲಿ ಆಡು​ವು​ದಿಲ್ಲ ಎಂದು ಹೇಳಿ​ದ್ದರು.

Latest Videos

undefined

ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫೈನಲ್‌ನಲ್ಲಿ ಫ್ರಾನ್ಸ್ ಎದುರು ದಿಗ್ವಿಜಯ ಸಾಧಿಸಿತ್ತು. ಈ ಮೂಲಕ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವ ಜೀವಮಾನದ ಕನಸನ್ನು ನನಸಾಗಿಸಿಕೊಂಡಿದ್ದರು. 

ಫಿಫಾ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಮೆಸ್ಸಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ್ದರು. ‘ವಿಶ್ವಕಪ್‌ ಗೆಲ್ಲುವ ಕನಸು ನನಸಾಗಿದೆ. ಇದಕ್ಕಿಂತ ಇನ್ನೇನು ಬೇಕು. ಕೋಪಾ ಅಮೆರಿಕದ ಜೊತೆಗೆ ವಿಶ್ವಕಪ್‌ ಕೂಡಾ ಗೆದ್ದಿದ್ದೇನೆ. ದೇವರು ನನಗೆ ಈ ಉಡುಗೊರೆ ನೀಡುತ್ತಾರೆಂದು ಗೊತ್ತಿತ್ತು. ಇದೊಂದು ಅದ್ಭುತ ಕ್ಷಣ. ರಾಷ್ಟ್ರೀಯ ತಂಡದ ಭಾಗವಾಗಿರಲು ತುಂಬಾ ಸಂತೋಷವಾಗುತ್ತಿದೆ’ ಎಂದು ಫೈನಲ್‌ ಬಳಿಕ ಮೆಸ್ಸಿ ಪ್ರತಿಕ್ರಿಯಿಸಿದ್ದರು.

ಭಾರತ ಫುಟ್ಬಾಲ್‌ ತಂಡ​ಕ್ಕೆ 1 ಕೋಟಿ ರು. ಬಹು​ಮಾ​ನ

ಭುವ​ನೇ​ಶ್ವ​ರ: 2ನೇ ಬಾರಿ ಇಂಟರ್‌ ಕಾಂಟಿ​ನೆಂಟಲ್‌ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಎನಿ​ಸಿ​ಕೊಂಡ ಭಾರತ ತಂಡಕ್ಕೆ ಒಡಿಶಾ ಮುಖ್ಯ​ಮಂತ್ರಿ ನವೀನ್‌ ಪಟ್ನಾ​ಯಕ್‌ 1 ಕೋಟಿ ರು. ಬಹು​ಮಾನ ಘೋಷಿ​ಸಿ​ದ್ದಾರೆ. ಭಾನು​ವಾರ ಇಲ್ಲಿನ ಕಳಿಂಗಾ ಕ್ರೀಡಾಂಗ​ಣ​ದಲ್ಲಿ ನಡೆದ 3ನೇ ಆವೃ​ತ್ತಿಯ ಟೂರ್ನಿಯ ಫೈನ​ಲ್‌​ನಲ್ಲಿ ಭಾರತ, ಲೆಬ​ನಾನ್‌ ವಿರುದ್ಧ 2-0 ಅಂತ​ರ​ದಲ್ಲಿ ಗೆದ್ದು ಪ್ರಶಸ್ತಿ ತನ್ನ​ದಾ​ಗಿ​ಸಿ​ಕೊಂಡಿತ್ತು. ಪಂದ್ಯದ ಬಳಿಕ ವಿಜೇ​ತ​ರಿಗೆ ಟ್ರೋಫಿ ವಿತ​ರಣೆ ಮಾಡಿ ಮಾತ​ನಾ​ಡಿದ ಪಟ್ನಾ​ಯಕ್‌, ಆಟ​ಗಾ​ರ​ರಿಗೆ 1 ಕೋಟಿ ರು. ನಗದು ಬಹು​ಮಾನ ನೀಡು​ವು​ದಾಗಿ ತಿಳಿ​ಸಿ​ದರು.

ಫೆನ್ಸಿಂಗ್‌: ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭವಾನಿ ದೇವಿ

ಒಡಿಶಾ ಸಂತ್ರ​ಸ್ತ​ರಿ​ಗೆ .20 ಲಕ್ಷ: ಒಡಿಶಾ ಸರ್ಕಾ​ರ​ದಿಂದ ತಮಗೆ ಲಭಿ​ಸಿದ 1 ಕೋಟಿ ರು. ಬಹು​ಮಾನ ಮೊತ್ತ​ದಲ್ಲಿ 20 ಲಕ್ಷ ರು.ಗ​ಳನ್ನು ಒಡಿಶಾ ರೈಲು ದುರಂತದ ಸಂತ್ರ​ಸ್ತ​ರಿಗೆ ನೀಡಲು ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶನ್‌ ನಿರ್ಧ​ರಿ​ಸಿದೆ. ಈ ಬಗ್ಗೆ ಭಾರ​ತೀಯ ಫುಟ್ಬಾಲ್‌ ಪ್ರಕ​ಟಣೆ ಮೂಲಕ ಮಾಹಿತಿ ನೀಡಿದೆ. ಇತ್ತೀ​ಚೆಗೆ ನಡೆ​ದಿದ್ದ ಭೀಕರ ರೈಲು ಅವ​ಘ​ಡ​ದಲ್ಲಿ ಸುಮಾರು 300ರಷ್ಟುಮಂದಿ ಮೃತ​ಪ​ಟ್ಟಿ​ದ್ದರೆ, 1000ಕ್ಕೂ ಹೆಚ್ಚು ಮಂದಿ ಗಾಯ​ಗೊಂಡಿ​ದ್ದ​ರು.

ಕಿರಿ​ಯರ ಫುಟ್ಬಾ​ಲ್‌: ಇಂದು ಭಾರ​ತ-ಉಜ್ಬೇ​ಕಿ​ಸ್ತಾ​ನ

ಪಥುಂ ಥಾನಿ​(​ಥಾ​ಯ್ಲೆಂಡ್‌​): ಎಎ​ಫ್‌ಸಿ ಅಂಡ​ರ್‌-17 ಏಷ್ಯಾ​ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ಮಂಗ​ಳವಾರ ಉಜ್ಬೇ​ಕಿ​ಸ್ತಾನ ವಿರುದ್ಧ ಸೆಣ​ಸಾ​ಡ​ಲಿದೆ. ‘ಡಿ’ ಗುಂಪಿನ ತನ್ನ ಮೊದಲ ಪಂದ್ಯ​ದಲ್ಲಿ ವಿಯೆಟ್ನಾಂ ವಿರುದ್ಧ 1-1 ಗೋಲಿನ ಡ್ರಾಗೆ ತೃಪ್ತಿ​ಪ​ಟ್ಟು​ಕೊಂಡಿದ್ದ ಭಾರತ ಈ ಪಂದ್ಯ​ದಲ್ಲಿ ಗೆಲು​ವಿನ ನಿರೀ​ಕ್ಷೆ​ಯ​ಲ್ಲಿದೆ. 

ಸದ್ಯ ಗುಂಪಿನ ಎಲ್ಲಾ ತಂಡ​ಗಳೂ ತಲಾ 1 ಅಂಕ ಹೊಂದಿದ್ದು, ಜಪಾನ್‌ ಅಗ್ರ​ಸ್ಥಾನ, ವಿಯೆಟ್ನಾಂ 2, ಉಜ್ಬೇ​ಕಿ​ಸ್ತಾನ 3 ಮತ್ತು ಭಾರತ ಕೊನೆ ಸ್ಥಾನ​ದ​ಲ್ಲಿದೆ. ಹೀಗಾಗಿ ಉಜ್ಬೇ​ಕಿ​ಸ್ತಾನ ವಿರುದ್ಧ ಗೆದ್ದರೆ ಮಾತ್ರ ಭಾರ​ತಕ್ಕೆ ನಾಕೌ​ಟ್‌​ಗೇ​ರುವ ಅವ​ಕಾಶ ಹೆಚ್ಚಿ​ರ​ಲಿದೆ. ಗುಂಪಿನ 2 ತಂಡ​ಗಳು ಮಾತ್ರ ನಾಕೌಟ್‌ ಪ್ರವೇ​ಶಿ​ಸ​ಲಿವೆ.

ಫುಟ್ಬಾಲ್‌: ಚಂಡೀ​ಗ​ಢ ವಿರುದ್ಧ ಗೆದ್ದ ಕರ್ನಾ​ಟ​ಕ

ಅಮೃ​ತ್‌​ಸ​ರ್‌: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಸುತ್ತಿನಲ್ಲಿ ಕರ್ನಾ​ಟಕ ತಂಡ ಮೊದಲ ಗೆಲುವು ಸಾಧಿ​ಸಿದೆ. ಸೋಮ​ವಾರ ‘ಎ’ ಗುಂಪಿನ ನಿರ್ಣಾ​ಯಕ ಪಂದ್ಯ​ದಲ್ಲಿ ರಾಜ್ಯ ತಂಡ, ಚಂಡೀ​ಗಢ ವಿರುದ್ಧ 2-1 ಗೋಲು​ಗ​ಳಿಂದ ಜಯ​ಗ​ಳಿ​ಸಿ​ತು. ಇದ​ರೊಂದಿಗೆ 3 ಪಂದ್ಯ​ಗ​ಳಲ್ಲಿ 4 ಅಂಕ ಸಂಪಾ​ದಿ​ಸಿತು.

58ನೇ ನಿಮಿ​ಷ​ದಲ್ಲಿ ಸುನ​ಲಿಂದಾ ರಾಜ್ಯದ ಪರ ಮೊದಲ ಗೋಲು ಬಾರಿ​ಸಿ​ದರೆ, 78ನೇ ನಿಮಿ​ಷ​ದಲ್ಲಿ ಅರುಷಿ ಸಂತೋಷ್‌ ಹೊಡೆದ ಗೋಲು ರಾಜ್ಯದ ಮುನ್ನಡೆ ಹೆಚ್ಚಿ​ಸಿತು. 88ನೇ ನಿಮಿ​ಷ​ದಲ್ಲಿ ಚಂಡೀ​ಗಢ ಗೋಲು ಬಾರಿ​ಸಿ​ದರೂ ಗೆಲುವು ತಪ್ಪಿ​ಸಲು ಸಾಧ್ಯ​ವಾ​ಗ​ಲಿಲ್ಲ. ಮೊದಲ ಪಂದ್ಯ ಸೋತು, 2ನೇ ಪಂದ್ಯ​ದಲ್ಲಿ ಡ್ರಾಗೆ ತೃಪ್ತಿ​ಪ​ಟ್ಟಿದ್ದ ರಾಜ್ಯ ತಂಡ ಬುಧವಾರ ಒಡಿಶಾ ವಿರುದ್ಧ ಸೆಣ​ಸಾ​ಡ​ಲಿದೆ.

click me!