FIFA World Cup ಆಸೀಸ್‌ ಸವಾಲಿಗೆ ಲಿಯೋನೆಲ್ ಮೆಸ್ಸಿ ಪಡೆ ಸಜ್ಜು

By Kannadaprabha NewsFirst Published Dec 3, 2022, 10:14 AM IST
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭ
ಮೊದಲ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್‌ಲೆಂಡ್ಸ್ ತಂಡಕ್ಕೆ ಅಮೆರಿಕ ಸವಾಲು
ಎರಡನೇ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ ಆಸ್ಟ್ರೇಲಿಯಾ ಸವಾಲು

ಅಲ್‌ ರಯ್ಯನ್‌(ಡಿ.03): ಆಸ್ಪ್ರೇಲಿಯಾ ತಂಡದಲ್ಲಿರುವ ಬಹುತೇಕ ಫುಟ್ಬಾಲಿಗರನ್ನು ‘ನಿಮ್ಮ ನೆಚ್ಚಿನ ಆಟಗಾರ ಯಾರು’ ಎಂದು ಪ್ರಶ್ನಿಸಿದರೆ ‘ಲಿಯೋನೆಲ್‌ ಮೆಸ್ಸಿ’ ಎಂ ಹೇಳುತ್ತಾರೆ. ಮೆಸ್ಸಿಯ ಅರ್ಜೆಂಟೀನಾವನ್ನು ವಿಶ್ವಕಪ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಿಸುವ ಅವಕಾಶ ‘ಸಾಕರೂಸ್‌’ ತಂಡಕ್ಕೆ ಸಿಕ್ಕಿದ್ದು, ಶನಿವಾರ ಈ ಎರಡೂ ತಂಡಗಳು ಇಲ್ಲಿನ ಅಹ್ಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಸೆಣಸಲಿವೆ.

ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಅರ್ಜೆಂಟೀನಾ ಪುಟಿದೆದ್ದ ರೀತಿ ಅಭಿಮಾನಿಗಳಲ್ಲಿ ತಂಡದ ಬಗ್ಗೆ ಭರವಸೆ ಮರಳಿದೆ. ಮೆಕ್ಸಿಕೋ ಹಾಗೂ ಪೋಲೆಂಡ್‌ ವಿರುದ್ಧ ಜಯಿಸಿದ ಅರ್ಜೆಂಟೀನಾ, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ ಹಂತಕ್ಕೆ ಪ್ರವೇಶಿಸಿತು.

ಮತ್ತೊಂದಡೆ ಆಸ್ಪ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ಗೆ 1-4ರಲ್ಲಿ ಶರಣಾದರೂ, ಬಳಿಕ ಟ್ಯುನೀಶಿಯಾ ಹಾಗೂ ಡೆನ್ಮಾರ್ಕ್ ವಿರುದ್ಧ ಜಯಿಸಿ ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಗಳಿಸಿತು. ಆಸ್ಪ್ರೇಲಿಯಾ ಚೊಚ್ಚಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ತವಕಿಸುತ್ತಿದೆ. ಇನ್ನು ಅರ್ಜೆಂಟೀನಾ ಸತತ 2ನೇ ಬಾರಿಗೆ ಪ್ರಿ ಕ್ವಾರ್ಟರ್‌ನಲ್ಲಿ ಹೊರಬೀಳುವುದನ್ನು ತಪ್ಪಿಸಿಕೊಳ್ಳುವ ಗುರಿ ಹೊಂದಿದೆ. 2018ರ ವಿಶ್ವಕಪ್‌ನ ಪ್ರಿ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ ವಿರುದ್ಧ 3-4 ಗೋಲುಗಳಲ್ಲಿ ಸೋತು ಹೊರಬಿದ್ದಿದ್ದ ಮೆಸ್ಸಿ ಪಡೆ, ಈ ಬಾರಿ ಆ ತಪ್ಪನ್ನು ಮಾಡದಿರಲು ಎದುರು ನೋಡುತ್ತಿದೆ.

ಆಸೀಸ್‌ ವಿರುದ್ಧ ಅರ್ಜೆಂಟೀನಾ ಈ ವರೆಗೂ ಒಟ್ಟು 7 ಪಂದ್ಯಗಳಲ್ಲಿ ಸೆಣಸಿದ್ದು, 5ರಲ್ಲಿ ಗೆದ್ದಿದೆ. ತಲಾ 1 ಸೋಲು, ಡ್ರಾ ಕಂಡಿದೆ.

ಪಂದ್ಯ ಆರಂಭ: ರಾತ್ರಿ 12.30ಕ್ಕೆ

ಡಚ್‌ಗೆ ಆಘಾತ ನೀಡುತ್ತಾ ಅಮೆರಿಕ..?

ದೋಹಾ: ಫಿಫಾ ಫುಟ್ಬಾಲ್‌ ವಿಶ್ವಕಪ್‌ ನಾಕೌಟ್‌ ಹಂತ ತಲುಪಿದ್ದು, ಶನಿವಾರ ಮೊದಲ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 3 ಬಾರಿ ರನ್ನರ್‌-ಅಪ್‌ ನೆದರ್‌ಲೆಂಡ್‌್ಸಗೆ ಅಮೆರಿಕ ಎದುರಾಗಲಿದೆ. ಈ ಬಾರಿ ಯುವ ತಂಡದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಿರುವ ಅಮೆರಿಕ ಹಂತ ಹಂತಗಳಲ್ಲಿ ಉತ್ಕೃಷ್ಟಪ್ರದರ್ಶನ ತೋರಿ ಭರವಸೆ ಮೂಡಿಸಿದೆ. 2002ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಅಮೆರಿಕ ಎದುರು ನೋಡಿತ್ತಿದೆ.

2010ರಲ್ಲಿ ಘಾನಾ ವಿರುದ್ಧ, 2014ರಲ್ಲಿ ಬೆಲ್ಜಿಯಂ ವಿರುದ್ಧ ಸೋತು ಪ್ರಿ ಕ್ವಾರ್ಟರ್‌ನಲ್ಲಿ ಹೊರಬಿದ್ದಿದ್ದ ಅಮೆರಿಕಕ್ಕೆ ಈ ಬಾರಿಯೂ ಕಠಿಣ ಸವಾಲು ಎದುರಾಗಲಿದೆ. ನೆದರ್‌ಲೆಂಡ್‌್ಸ ಅತ್ಯುತ್ತಮ ಫಾಮ್‌ರ್‍ನಲ್ಲಿದ್ದು, ಟೂರ್ನಿಯಲ್ಲಿ ಈ ವರೆಗೂ ಆಡಿರುವ 3 ಪಂದ್ಯಗಳು ಸೇರಿ ಕಳೆದ 16 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ.

FIFA World Cup ಪೋರ್ಚುಗಲ್‌ಗೆ ಕೊರಿಯಾ ಆಘಾತ, ನಾಕೌಟ್‌ಗೆ ಲಗ್ಗೆ..!

ಕೊಡಿ ಗಾಕ್ಪೊ ಹಾಗೂ ಫ್ರೆಂಕಿ ಡಿ ಜೊಂಗ್‌ ಭರವಸೆ ಮೂಡಿಸಿದ್ದಾರೆ. ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು ಎನಿಸಿರುವ ಲೂಯಿ ವಾನ್‌ ಗಾಲ್‌ರ ಮಾರ್ಗದರ್ಶನ ಡಚ್‌ ಪಡೆಯನ್ನು ಕ್ವಾರ್ಟರ್‌ ಫೈನಲ್‌ಗೇರಿಸಲಿದೆ ಎನ್ನುವುದು ಅಭಿಮಾನಿಗಳ ನಂಬಿಕೆ. ಈ ವರೆಗೂ 5 ಸ್ನೇಹಾರ್ಥ ಪಂದ್ಯಗಳಲ್ಲಿ ಉಭಯ ತಂಡಗಳ ಮುಖಾಮುಖಿಯಾಗಲಿವೆ. 4ರಲ್ಲಿ ಡಚ್‌, 1ರಲ್ಲಿ ಅಮೆರಿಕ ಜಯ ಕಂಡಿವೆ.

ಪಂದ್ಯ ಆರಂಭ: ರಾತ್ರಿ 8.30ಕ್ಕೆ

click me!