Fifa World cup ಅರ್ಜೆಂಟೀನಾ ಬಳಿಕ ಮತ್ತೊಂದು ಶಾಕ್, 2ನೇ ಶ್ರೇಯಾಂಕಿತ ಬೆಲ್ಜಿಯಂ ತಂಡ ಮಣಿಸಿದ ಮೊರಕ್ಕೊ!

By Suvarna News  |  First Published Nov 27, 2022, 8:53 PM IST

ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಭಿಮಾನಿಗಳ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆಗುತ್ತಿದೆ. ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ಮುಗ್ಗರಿಸಿದ ಬಳಿಕ ಇದೀಗ ವಿಶ್ವದ 2ನೇ ರ‍್ಯಾಂಕ್‌ ತಂಡ ಬೆಲ್ಜಿಯಂ ಶಾಕ್ ಎದುರಾಗಿದೆ.
 


ಖತಾರ್(ನ.27): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಅಗ್ರ ಸ್ಥಾನದಲ್ಲಿರುವ ಬಲಿಷ್ಠ ತಂಡಗಳು ಮಕಾಡೆ ಮಲಗುತ್ತಿದೆ. ಅರ್ಜೆಂಟೀನಾ ತಂಡ ಸೌದಿ ಅರೆಬಿಯಾ ವಿರುದ್ಧ ಮುಗ್ಗರಿಸಿ ತೀವ್ರ ಆಘಾತಕ್ಕೆ ಒಳಗಾಗಿದೆ.  ಇದರ ಬೆನ್ನಲ್ಲೇ ಇದೀಗ ವಿಶ್ವದ 2ನೇ ಶ್ರೇಯಾಂಕಿತ ಬೆಲ್ಜಿಯಂ ತಂಡಕ್ಕೆ ಶಾಕ್ ಎದುರಾಗಿದೆ. ಮೊರಕ್ಕೊ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 0-2 ಅಂತರದಲ್ಲಿ ಸೋಲು ಕಂಡಿದೆ.  ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊರಕ್ಕೊಗೆ 22ನೇ ಸ್ಥಾನ. ಫಿಫಾ ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಮೊರಕ್ಕೊ ರೌಂಡ್ 16 ಹಂತದಿಂದ ಹೊರಬಿದ್ದಿದೆ. ಆದರೆ ಈ ಬಾರಿ ಬೆಲ್ಜಿಯಂ ತಂಡವನ್ನೇ ಮಣಿಸುವ ಮೂಲಕ ಹೊಸ ಇತಿಹಾಸ ರಚಿಸುವ ಸೂಚನೆ ನೀಡಿದೆ.

ಖತಾರ್‌ನ ತುಮಾಮ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊರಕ್ಕೊ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇತ್ತ ಬೆಲ್ಜಿಯಂ ತನ್ನ ಎಂದಿನ ಶೈಲಿಯಲ್ಲಿ ಆಟ ಆರಂಭಿಸಿತ್ತು. ಆದರೆ ಮೊರಕ್ಕೊ ಆಟಗಾರರ ಅಗ್ರೆಸ್ಸೀವ್ ಆಟಕ್ಕೆ ಬೆಲ್ಜಿಯಂ ಪತರುಗುಟ್ಟಿತು. 73ನೇ ನಿಮಿಷದಲ್ಲಿ ಅಬ್ದೆಲ್ಹಾಮಿದ್ ಸಬೀರಿ ಫ್ರೀ ಕಿಕ್ ಅವಕಾಶವನ್ನು ಅದ್ಬುತವಾಗಿ ಬಳಿಸಿಕೊಂಡು ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಮೊರಕ್ಕೊ ಮೊದಲ ಗೋಲು ಸಿಡಿಸಿ ಸಂಭ್ರಮಿಸಿತು.

Tap to resize

Latest Videos

undefined

FIFA World Cup ಡೆನಾರ್ಕ್‌ ಮಣಿಸಿ ನಾಕೌಟ್‌ಗೆ ಲಗ್ಗೆಯಿಟ್ಟ ಫ್ರಾನ್ಸ್..!

ಬೆಲ್ಜಿಯಂ ತಂಡದ ಸತತ ಪ್ರಯತ್ನಗಳನ್ನು ಮೊರಕ್ಕೊ ಯಶಸ್ವಿಯಾಗಿ ತಡೆಯಿತು.  90+2 ನಿಮಿಷದಲ್ಲಿ ಝಕಾರಿಯಾ ಅಬೌಕ್ಲಾಲ್ ಸಿಡಿಸಿದ ಮತ್ತೊಂದು ಗೋಲಿನಿಂದ ಮೊರಕ್ಕೊ 2-0 ಅಂತರದ ಮುನ್ನಡೆ ಪಡೆಯಿತು. ಇಷ್ಟೇ ಅಲ್ಲ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹೊಸ ಇತಿಹಾಸ ರಚಿಸಿತು. ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿ ಸಂಭ್ರಮಿಸಿತು.

ಎಫ್ ಗುಂಪಿನಲ್ಲಿ ಮೊರಕ್ಕೊ ಇದೀಗ ಮೊದಲ ಸ್ಥಾನಕ್ಕೇರಿದೆ. ಇತ್ತ ಬೆಲ್ಜಿಯಂ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನು 3ನೇ ಸ್ಥಾನದಲ್ಲಿ ಕ್ರೋವೇಶಿಯಾ ಹಾಗೂ ನಾಲ್ಕನೇ ಸ್ಥಾನದಲ್ಲಿ ಕೆನಾಡ ತಂಡಗಳು ಹೋರಾಟ ನಡಸುತ್ತಿದೆ.

click me!