
ಸಾವೊಪೌಲೊ(ಸೆ.07): ಆಟಗಾರರು ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನ ಬ್ರೆಜಿಲ್-ಅರ್ಜೆಂಟಿನಾ ನಡುವಿನ ಪಂದ್ಯವನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಅರ್ಜೆಂಟೀನಾದ ನಾಲ್ವರು ಆಟಗಾರರು ಇಂಗ್ಲೆಂಡ್‌ನಿಂದ ಬ್ರೆಜಿಲ್‌ಗೆ ಬರುವ ಮೊದಲು ಕ್ವಾರಂಟೈನ್ ಪೂರೈಸಿದ್ದೇವೆ ಎಂದು ಸುಳ್ಳು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಪಂದ್ಯ ನಡೆಯುತ್ತಿರುವಾಗಲೇ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೈದಾನಕ್ಕೆ ಆಗಮಿಸಿ ಪಂದ್ಯವನ್ನು ನಿಲ್ಲಿಸಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಫುಟ್ಬಾಲ್: ಡುರಾಂಡ್ ಕಪ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಸ್ಪರ್ಧೆ
ಡುರಾಂಡ್ ಕಪ್: ಬೆಂಗಳೂರು ಯುನೈಟೆಡ್ ಶುಭಾರಂಭ
ಕೋಲ್ಕತ್ತಾ: ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಪಂದ್ಯಾವಳಿ ಎನಿಸಿರುವ ಡುರಾಂಡ್ ಕಪ್‌ನಲ್ಲಿ, ಚೊಚ್ಚಲ ಬಾರಿಗೆ ಸ್ಪರ್ಧಿಸಿರುವ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಗೆಲುವಿನ ಶುಭಾರಂಭ ಮಾಡಿದೆ.
ಪೆಡ್ರೊ ಮಾಂಜಿ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಸಿಆರ್‌ಪಿಎಫ್ ವಿರುದ್ಧ 1-0 ಅಂತರದಿಂದ ಬೆಂಗಳೂರು ಯುನೈಟೆಡ್ ಜಯ ಸಾಧಿಸುವ ಮೂಲಕ, ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು. ಬೆಂಗಳೂರು ಯುನೈಟೆಡ್ ಸೆ.9ರಂದು ಭಾರತೀಯ ವಾಯು ಸೇನೆ ವಿರುದ್ಧ ಮುಂದಿನ ಪಂದ್ಯ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.