ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಇಂಗ್ಲೆಂಡ್ ಫುಟ್ಬಾಲ್ ತಂಡ
ಹ್ಯಾರಿ ಕೇನ್ ನೇತೃತ್ವದ ಇಂಗ್ಲೆಂಡ್‌ಗೆ ಸುಲಭ ತುತ್ತಾದ ಇರಾನ್
ಇಂಗ್ಲೆಂಡ್ ಪರ 2 ಗೋಲು ಬಾರಿಸಿ ಮಿಂಚಿದ ಸಾಕಾ
ದೋಹಾ(ನ.22): ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಇಂಗ್ಲೆಂಡ್ ಮೊದಲ ಪಂದ್ಯದಲ್ಲೇ ಅಬ್ಬರಿಸಿದೆ. ಇರಾನ್ ವಿರುದ್ಧ ಸೋಮವಾರ ಇಲ್ಲಿನ ಖಲೀಫಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 6-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲಾರ್ಧದಲ್ಲೇ 3 ಗೋಲು ದಾಖಲಿಸಿದ ಇಂಗ್ಲೆಂಡ್ ಗೆಲುವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಜ್ಯೂಡ್ ಬೆಲ್ಲಿಂಗ್‌ಹ್ಯಾಮ್ 35ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. 43 ನಿಮಿಷದಲ್ಲಿ ಬುಕಾಯೋ ಸಾಕಾ, 45(+1) ನಿಮಿಷದಲ್ಲಿ ರಹೀಮ್ ಸ್ಟರ್ಲಿಂಗ್ ತಂಡದ ಮುನ್ನಡೆಯನ್ನು 3-0ಗೇರಿಸಿದರು.
undefined
ದ್ವಿತೀಯಾರ್ಧದಲ್ಲೂ ಇಂಗ್ಲೆಂಡ್ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಇಂಗ್ಲಿಷ್ ಮಿಡ್‌ಫೀಲ್ಡರ್‌ಗಳು ತಮ್ಮ ಸ್ಟೆ್ರೖಕರ್‌ಗಳಿಗೆ ಗೋಲು ಬಾರಿಸಲು ಹಲವು ಅವಕಾಶಗಳನ್ನು ಕಲ್ಪಿಸಿದರು. 62ನೇ ನಿಮಿಷದಲ್ಲಿ ತಮ್ಮ 2ನೇ ಗೋಲು ಬಾರಿಸಿದ ಸಾಕಾ, ಇರಾನ್ ಮೇಲೆ ಮತ್ತಷ್ಟುಒತ್ತಡ ಹೇರಿದರು. 71ನೇ ನಿಮಿಷದಲ್ಲಿ ಮಾರ್ಕಸ್ ರಾರಯಶ್‌ಫೋರ್ಡ್, 89ನೇ ನಿಮಿಷದಲ್ಲಿ ಜ್ಯಾಕ್ ಗ್ರೇಲಿಶ್ ಗೋಲು ಬಾರಿಸಿ ಇಂಗ್ಲೆಂಡ್ ಅರ್ಧ ಡಜನ್ ಗೋಲು ಪೂರ್ಣಗೊಳಿಸಲು ಕಾರಣರಾದರು.
ಇರಾನ್‌ನ ಎರಡೂ ಗೋಲುಗಳು ದ್ವಿತೀಯಾರ್ಧದಲ್ಲಿ ದಾಖಲಾದವು. ಎರಡೂ ಗೋಲುಗಳನ್ನು ಮೆಹ್ದಿ ತರೆಮಿ ಬಾರಿಸಿದರು. 65ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ಮೆಹ್ದಿ, 90+13 ನಿಮಿಷದಲ್ಲಿ ಪೆನಾಲ್ಟಿ ಮೂಲಕ 2ನೇ ಗೋಲು ದಾಖಲಿಸಿದರು.
ತನ್ನ ದೇಶದ ವಿರುದ್ಧವೇ ಇರಾನ್ ತಂಡ ಪ್ರತಿಭಟನೆ!
ಇತ್ತೀಚೆಗೆ ಶಿರವಸ್ತ್ರವನ್ನು ಸರಿಯಾಗಿ ಧರಿಸಿಲ್ಲ ಎನ್ನುವ ಕಾರಣಕ್ಕೆ ಮಾಶಾ ಅಮೀನಿ ಎನ್ನುವ 22 ವರ್ಷದ ಯುವತಿಯನ್ನು ಬಂಧಿಸಲಾಗಿತ್ತು. ಆಕೆ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಳು. ಈ ದುರ್ಘಟನೆಯನ್ನು ಖಂಡಿಸಿ ಇರಾನ್ ಫುಟ್ಬಾಲಿಗರು ಸೋಮವಾರದ ಪಂದ್ಯದ ವೇಳೆ ರಾಷ್ಟ್ರಗೀತೆಯನ್ನು ಹಾಡಲಿಲ್ಲ.
ತವರಲ್ಲಿ ಕ್ರೀಡಾಂಗಣಕ್ಕಿಲ್ಲ ಪ್ರವೇಶ: ವಿಶ್ವಕಪ್ ನೋಡಲು ಕತಾರ್‌ಗೆ ಬಂದ ಇರಾನ್ ಮಹಿಳೆ!
ದೋಹಾ: 27 ವರ್ಷದ ಮರಿಯಮ್ ತಮ್ಮ ತಂಡ ಫುಟ್ಬಾಲ್ ಆಡುವುದನ್ನು ನೋಡಲು ತೆಹ್ರಾನ್‌ನಿಂದ ದೋಹಾಗೆ ಆಗಮಿಸಿ ಸೋಮವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇರಾನ್ ತಂಡವನ್ನು ಬೆಂಬಲಿಸಿದರು. ಇದು ಫುಟ್ಬಾಲ್ ಅಭಿಮಾನಿ ಮರಿಯಮ್ ಕ್ರೀಡಾಂಗಣದಲ್ಲಿ ವೀಕ್ಷಿಸಿದ ಮೊದಲ ಪಂದ್ಯವಂತೆ. ಇರಾನ್‌ನಲ್ಲಿ ಮಹಿಳೆಯರು ಪುರುಷರ ಪಂದ್ಯಗಳನ್ನು ನೋಡಲು ಕ್ರೀಡಾಂಗಣಕ್ಕೆ ಬರುವುದನ್ನು ನಿಷೇಧಿಸಲಾಗಿದೆ.
ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ವಿವಾದ, ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್!
ಬಿಯರ್‌ಗಾಗಿ ಕತಾರ್‌ನ ಶೇಖ್ ಮನೆಗೆ ಫ್ಯಾನ್ಸ್!
ದೋಹಾ: ಕತಾರ್‌ನಲ್ಲಿ ಮದ್ಯ ಸೇವನೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದ್ದು, ಯುರೋಪ್ ಹಾಗೂ ದಕ್ಷಿಣ ಅಮೆರಿಕದ ಅಭಿಮಾನಿಗಳು ಸಂಕಷ್ಟದಲ್ಲಿದ್ದಾರೆ. ಭಾನುವಾರ ಇಂಗ್ಲೆಂಡ್‌ನ ಕೆಲ ಅಭಿಮಾನಿಗಳು ಬಿಯರ್ ಹುಡುಕಿಕೊಂಡು ಕತಾರ್‌ನ ಶೇಖ್(ಶ್ರೀಮಂತ ವ್ಯಕ್ತಿ) ಒಬ್ಬರ ನಿವಾಸಕ್ಕೆ ತೆರಳಿದ್ದು, ಈ ಬಗ್ಗೆ ಸ್ವತಃ ಅಭಿಮಾನಿಗಳೇ ತಮ್ಮ ಅನುಭವಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.