FIFA ವಿಶ್ವಕಪ್ ಗೆದ್ರೆ ₹452 ಕೋಟಿ ಬಹುಮಾನ! ಕಳೆದ ಬಾರಿಗಿಂತ 100 ಕೋಟಿ ಹೆಚ್ಚಳ

Naveen Kodase, Kannadaprabha News |   | Kannada Prabha
Published : Dec 18, 2025, 11:07 AM IST
FIFA World Cup 2026 trophy

ಸಾರಾಂಶ

2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ ವಿಜೇತ ತಂಡಕ್ಕೆ ₹452 ಕೋಟಿ ನಗದು ಬಹುಮಾನವನ್ನು ಫಿಫಾ ಘೋಷಿಸಿದೆ. 2022ಕ್ಕೆ ಹೋಲಿಸಿದರೆ ಒಟ್ಟಾರೆ ಬಹುಮಾನದ ಮೊತ್ತದಲ್ಲಿ ಶೇ.50ರಷ್ಟು ಹೆಚ್ಚಳವಾಗಿದ್ದು, ಒಟ್ಟು ₹5925 ಕೋಟಿ ಬಹುಮಾನವನ್ನು ನಿಗದಿಪಡಿಸಲಾಗಿದೆ.  

ನ್ಯೂಯಾರ್ಕ್: 2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಗೆದ್ದ ತಂಡಕ್ಕೆ ಬರೋಬ್ಬರಿ 50 ಮಿಲಿಯನ್‌ ಯುಎಸ್ ಡಾಲರ್‌(452 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾ ಘೋಷಿಸಿದೆ.

ಬುಧವಾರ ದೋಹಾದಲ್ಲಿ ನಡೆದ ಸಭೆ ಬಳಿಕ ಫಿಫಾ ಈ ಪ್ರಕಟನೆ ಹೊರಡಿಸಿತು. 2022ರ ವಿಶ್ವಕಪ್‌ಗಿಂತ ಈ ಬಾರಿ ಒಟ್ಟಾರೆ ಬಹುಮಾನ ಮೊತ್ತದಲ್ಲಿ ಶೇ.50ರಷ್ಟು ಹೆಚ್ಚಿಸಲಾಗಿದೆ. ಕಳೆದ ಬಾರಿ ವಿಶ್ವಕಪ್‌ ಗೆದ್ದಾಗ ಅರ್ಜೆಂಟೀನಾ ತಂಡಕ್ಕೆ ₹347 ಕೋಟಿ ಲಭಿಸಿತ್ತು. ಅದಕ್ಕಿಂತ 100 ಕೋಟಿಗೂ ಹೆಚ್ಚು ಮೊತ್ತ ಮುಂದಿನ ವರ್ಷ ವಿಶ್ವಕಪ್‌ ಗೆದ್ದ ತಂಡಕ್ಕೆ ಸಿಗಲಿದೆ. ಇನ್ನು, ಈ ವಿಶ್ವಕಪ್‌ನ ರನ್ನರ್‌-ಅಪ್‌ ತಂಡಕ್ಕೆ ₹298 ಕೋಟಿ, 3ನೇ ಸ್ಥಾನಿ ತಂಡಕ್ಕೆ ₹262 ಕೋಟಿ, 4ನೇ ಸ್ಥಾನ ಪಡೆದ ತಂಡಕ್ಕೆ ₹244 ಕೋಟಿ ನಗದು ಸಿಗಲಿದೆ.

ಟೂರ್ನಿಯಲ್ಲಿ 33ರಿಂದ 48ರ ನಡುವೆ ಸ್ಥಾನ ಪಡೆದ ತಂಡಗಳಿಗೆ ತಲಾ ₹81 ಕೋಟಿ, 17ರಿಂದ 32ನೇ ಸ್ಥಾನ ಪಡೆದ ತಂಡಗಳಿಗೆ ತಲಾ ₹99 ಕೋಟಿ, 9ರಿಂದ 16ನೇ ಸ್ಥಾನ ಪಡೆದ ತಂಡಗಳಿಗೆ ತಲಾ ₹135 ಕೋಟಿ, ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬೀಳುವ 4 ತಂಡಗಳಿಗೆ ತಲಾ ₹171 ಕೋಟಿ ಸಿಗಲಿದೆ. ಹೆಚ್ಚುವರಿಯಾಗಿ ಎಲ್ಲಾ ತಂಡಗಳಿಗೂ ಸಿದ್ಧತೆಗಾಗಿ ತಲಾ ₹13 ಕೋಟಿ ಸಿಗಲಿದೆ. ಅಂದರೆ ಟೂರ್ನಿಯಲ್ಲಿ ಆಡುವ ಪ್ರತಿ ತಂಡಗಳೂ ಕನಿಷ್ಠ ₹94 ಕೋಟಿ ಮೊತ್ತವನ್ನು ತನ್ನದಾಗಿಸಿಕೊಳ್ಳಲಿವೆ.

5925 ಕೋಟಿ: 2026ರ ಫಿಫಾ ವಿಶ್ವಕಪ್‌ಗೆ ನಿಗದಿಪಡಿಸಲಾಗಿರುವ ಬಹುಮಾನ ಮೊತ್ತ ಒಟ್ಟು 5925 ಕೋಟಿ ರು.

ಬಹುಮಾನ ಮೊತ್ತ ವಿವರ

ಸ್ಥಾನ ನಗದು ಮೊತ್ತ

ಚಾಂಪಿಯನ್‌ ₹452 ಕೋಟಿ

ರನ್ನರ್‌-ಅಪ್‌ ₹298 ಕೋಟಿ

3ನೇ ಸ್ಥಾನ ₹262 ಕೋಟಿ

4ನೇ ಸ್ಥಾನ ₹244 ಕೋಟಿ

5-8 ಸ್ಥಾನ ತಲಾ ₹171 ಕೋಟಿ

9-16 ಸ್ಥಾನ ತಲಾ ₹135 ಕೋಟಿ

17-32 ಸ್ಥಾನ ತಲಾ ₹99 ಕೋ ಟಿ

33-48 ಸ್ಥಾನ ತಲಾ ₹81 ಕೋಟಿ

ಒಟ್ಟು ಮೊತ್ತ ₹5925 ಕೋಟಿ

ಭಾರತದಲ್ಲಿ ಫುಟ್ಬಾಲ್‌ಗೆ ಉಜ್ವಲ ಭವಿಷ್ಯವಿದೆ: ಮೆಸ್ಸಿ

ನವದೆಹಲಿ: ಭಾರತ ಭೇಟಿ ಬಳಿಕ ಅರ್ಜೇಂಟಿನಾಗೆ ಮರಳಿರುವ ಫುಟ್ಬಾಲ್‌ ದಿಗ್ಗಜ ಲಿಯೋನಲ್ ಮೆಸ್ಸಿ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದು, ‘ಭಾರತದಲ್ಲಿ ಫುಟ್ಬಾಲ್‌ಗೆ ಉಜ್ವಲ ಭವಿಷ್ಯವಿದೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿಲಿ ಪೋಸ್ಟ್‌ ಮಾಡಿದ್ದಾರೆ. ‘ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್‌ ಭೇಟಿ ಅದ್ಭುತವಾಗಿತ್ತು. ಉತ್ತಮ ಆತಿಥ್ಯ ನೀಡಿದ್ದಕ್ಕೆ ಧನ್ಯವಾದಗಳು. ಪ್ರವಾಸದ ಉದ್ದಕ್ಕೂ ನನ್ನನ್ನು ಸುತ್ತುವರೆದು ನೀವು ತೋರಿದ ಪ್ರೀತಿಗೆ ನಾನು ಅಭಾರಿ. ನನ್ನ ಪ್ರಕಾರ ಭಾರತದಲ್ಲಿ ಫುಟ್ಬಾಲ್‌ಗೆ ಉಜ್ವಲ ಭವಿಷ್ಯವಿದೆ’ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಗತ್ತಿನಲ್ಲಿ ಕೇವಲ 12 ಜನರಲ್ಲಿ ಮಾತ್ರ ಇರುವ ಅಪರೂಪದ ವಾಚ್‌ ಮೆಸ್ಸಿಗೆ ಗಿಫ್ಟ್ ಕೊಟ್ಟ ಅನಂತ್ ಅಂಬಾನಿ!
ಮೆಸ್ಸಿ ಹೈದರಾಬಾದ್ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿಯನ್ನು ಪ್ರಧಾನಿ ಎಂದು ಕರೆದ ಟ್ರಾನ್ಸ್‌ಲೇಟರ್! ವಿಡಿಯೋ ವೈರಲ್