* ಯುರೋ ಕಪ್ ಫೈನಲ್ ವೀಕ್ಷಿಸಲು 1 ಸಾವಿರ ಅಭಿಮಾನಿಗಳು ಲಂಡನ್‌ಗೆ ಬರಲಿದ್ದಾರೆ.
* ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಭಾನುವಾರ(ಜು.11) ರಾತ್ರಿ ಇಂಗ್ಲೆಂಡ್ ಹಾಗೂ ಇಟಲಿ ಪ್ರಶಸ್ತಿಗಾಗಿ ಸೆಣಸಾಟ
* ಪಂದ್ಯ ವೀಕ್ಷಣೆಗೆ ವಿಶೇಷ ವಿಮಾನದಲ್ಲಿ ಇಟಲಿ ಅಭಿಮಾನಿಗಳು ಆಗಮನ
ರೋಮ್(ಜು.10): ಬಹುನಿರೀಕ್ಷಿತ ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ವೀಕ್ಷಣೆಗೆ ಲಂಡನ್‌ಗೆ ತೆರಳಲು ಇಟಲಿಯ ಒಂದು ಸಾವಿರ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.
ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಭಾನುವಾರ(ಜು.11) ರಾತ್ರಿ ಇಂಗ್ಲೆಂಡ್ ಹಾಗೂ ಇಟಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದು, ಪಂದ್ಯ ವೀಕ್ಷಣೆಗೆ ಇಟಲಿಯ 1,000 ಅಭಿಮಾನಿಗಳು ಲಂಡನ್‌ಗೆ ಆಗಮಿಸಲು ಯುರೋಪಿಯನ್ ಫುಟ್ಬಾಲ್ ಸಂಘಗಳ ಒಕ್ಕೂಟ(ಯುಇಎಫ್‌ಎ) ಸಮ್ಮತಿ ಸೂಚಿಸಿದೆ. ಪಂದ್ಯ ವೀಕ್ಷಣೆಗೆ ವಿಶೇಷ ವಿಮಾನದಲ್ಲಿ ಇಟಲಿ ಅಭಿಮಾನಿಗಳು ಆಗಮಿಸಲಿದ್ದು, 12 ತಾಸು ಮಾತ್ರ ಅವರು ಇಂಗ್ಲೆಂಡ್‌ನಲ್ಲಿ ಇರಲಿದ್ದಾರೆ. ಅವರಿಗಾಗಿ ಕ್ರೀಡಾಂಗಣದಲ್ಲಿ ವಿಶೇಷ ವಲಯ ನಿರ್ಮಾಣವಾಗಲಿದೆ.
For the fans. 🙌
Supporter memories captured by the vivo X60 Pro 🤳 pic.twitter.com/FZFy87r57C
😎 The EURO 2020 final is set!
🇮🇹🆚🏴 Italy versus England at Wembley Stadium on Sunday 🔥
Who is lifting the 🏆❓ pic.twitter.com/tYSEzNjAkI
undefined
ಯುರೋ ಕಪ್ ಫುಟ್ಬಾಲ್: ಇಟಲಿ-ಇಂಗ್ಲೆಂಡ್ ಫೈನಲ್‌ಗೆ ಲಗ್ಗೆ
ಯುರೋ ಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ತಂಡವು ಪ್ರಶಸ್ತಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಮತ್ತೊಂದೆಡೆ ಸೆಮಿಫೈನಲ್‌ನಲ್ಲಿ ಬಲಿಷ್ಠ ಸ್ಪೇನ್ ತಂಡಕ್ಕೆ ಸೋಲುಣಿಸಿ ಫೈನಲ್ ಪ್ರವೇಶಿಸಿರುವ ಇಟಲಿ ತಂಡವು ಯುರೋ ಕಪ್ ಟ್ರೋಫಿಗೆ ಮತ್ತಿಕ್ಕಲು ಎದುರು ನೋಡುತ್ತಿದೆ.