ಯುರೋ ಕಪ್‌: ಸೆಮೀಸ್‌ಗೆ ಇಂಗ್ಲೆಂಡ್‌, ಡೆನ್ಮಾರ್ಕ್ ಲಗ್ಗೆ

By Kannadaprabha News  |  First Published Jul 5, 2021, 9:27 AM IST

* ಯುರೋ ಕಪ್‌ನಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್ ಹಾಗೂ ಡೆನ್ಮಾರ್ಕ್ ಫುಟ್ಬಾಲ್ ತಂಡ

* ಕ್ವಾರ್ಟರ್‌ ಫೈನಲ್‌ನಲ್ಲಿ ಜೆಕ್‌ ಗಣರಾಜ್ಯ, ಉಕ್ರೇನ್‌ಗೆ ನಿರಾಸೆ

* ಮೊದಲ ಸೆಮೀಸ್‌ನಲ್ಲಿ ಇಟಲಿ ಹಾಗೂ ಸ್ಪೇನ್‌ ತಂಡಗಳು ಮುಖಾಮುಖಿ


ರೋಮ್(ಜು.05): 2020ರ ಯುರೋ ಕಪ್‌ ಫುಟ್ಬಾಲ್‌ ಟೂರ್ನಿ ನಿರ್ಣಾಯಕ ಹಂತ ತಲುಪಿದೆ. ಸೆಮಿಫೈನಲ್‌ನಲ್ಲಿ ಸೆಣಸಲಿರುವ ತಂಡಗಳು ಯಾವ್ಯಾವು ಎನ್ನುವುದು ನಿರ್ಧಾರವಾಗಿದೆ. ಕ್ವಾರ್ಟರ್‌ ಫೈನಲ್‌ ಕದನದಲ್ಲಿ ಜೆಕ್‌ ಗಣರಾಜ್ಯದ ವಿರುದ್ಧ ಡೆನ್ಮಾರ್ಕ್ 2-1 ಗೋಲುಗಳಲ್ಲಿ ಗೆದ್ದರೆ, ಉಕ್ರೇನ್‌ ವಿರುದ್ಧ ಇಂಗ್ಲೆಂಡ್‌ 4-0 ಗೋಲುಗಳಲ್ಲಿ ಜಯಭೇರಿ ಬಾರಿಸಿ ಅಂತಿಮ 4ರ ಸುತ್ತು ಪ್ರವೇಶಿಸಿವೆ.

ಬಾಕುನಲ್ಲಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್ ಪರ ಥಾಮಸ್‌ ಡೆಲಾನೆ(5ನೇ ನಿ.,) ಹಾಗೂ ಕ್ಯಾಸ್ಪರ್‌ ಡೋಲ್ಬರ್ಗ್‌(42ನೇ ನಿ,.) ಗೋಲು ಬಾರಿಸಿದರು. ಚೆಕ್‌ ಗಣರಾಜ್ಯದ ಪರ ಪ್ಯಾಟ್ರಿಕ್‌ ಸಿಹಿಕ್‌ 49ನೇ ನಿಮಿಷದಲ್ಲಿ ಗೋಲು ಗಳಿಸಿದರು.

EURO 2020 semi-finals set ✅

🇮🇹🆚🇪🇸 Italy vs Spain
🏴󠁧󠁢󠁥󠁮󠁧󠁿🆚🇩🇰 England vs Denmark

Who are you backing to lift the 🏆❓ pic.twitter.com/SjjvZ6PSAb

— UEFA EURO 2020 (@EURO2020)

Tap to resize

Latest Videos

undefined

ಇನ್ನು ರೋಮ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌, ಉಕ್ರೇನ್‌ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ನಾಯಕ ಹ್ಯಾರಿ ಕೇನ್‌ (4ನೇ ನಿ., ಹಾಗೂ 50ನೇ ನಿ.,) 2 ಗೋಲು ಗಳಿಸಿದರೆ, ಹ್ಯಾರಿ ಮಾಗ್ಯುರಿ (46ನೇ ನಿ.,) ಹಾಗೂ ಜೊರ್ಡನ್‌ ಹೆಂಡರ್‌ಸನ್‌ (63ನೇ ನಿ.,) ಗೋಲು ಗಳಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಯುರೋ ಕಪ್‌: ಕ್ವಾರ್ಟರ್‌ಗೆ ಇಂಗ್ಲೆಂಡ್‌, ಉಕ್ರೇನ್‌ ಪ್ರವೇಶ

ಮೊದಲ ಸೆಮೀಸ್‌ನಲ್ಲಿ ಇಟಲಿ ಹಾಗೂ ಸ್ಪೇನ್‌ ತಂಡಗಳು ಎದುರಾದರೆ, 2ನೇ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ಹಾಗೂ ಡೆನ್ಮಾರ್ಕ್ ತಂಡಗಳು ಮುಖಾಮುಖಿಯಾಗಲಿವೆ.

click me!