FIFA World Cup 2026: ನಾಲ್ಕು ಬಾರಿಯ ಚಾಂಪಿಯನ್ ಬಲಿಷ್ಠ ಜರ್ಮನಿಯ ಕೆಡವಿ ಈಕ್ವೆಡಾರ್‌ ನಾಕೌಟ್‌ಗೆ!

Kannadaprabha News   | Kannada Prabha
Published : Jun 27, 2026, 08:52 AM IST
Ecuador FIFA World Cup

ಸಾರಾಂಶ

ಫಿಫಾ ವಿಶ್ವಕಪ್‌ನ ಪಂದ್ಯದಲ್ಲಿ, ಈಕ್ವೆಡಾರ್ ತಂಡವು 4 ಬಾರಿಯ ಚಾಂಪಿಯನ್ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿ 2006ರ ಬಳಿಕ ಮೊದಲ ಬಾರಿಗೆ ನಾಕೌಟ್‌ ಹಂತ ಪ್ರವೇಶಿಸಿದೆ. ಈ ಐತಿಹಾಸಿಕ ಗೆಲುವಿಗಾಗಿ ಈಕ್ವೆಡಾರ್‌ನಲ್ಲಿ ರಾಷ್ಟ್ರೀಯ ರಜೆ ಘೋಷಿಸಲಾಯಿತು. ಇನ್ನೊಂದೆಡೆ, ನೆದರ್‌ಲೆಂಡ್ಸ್‌ ಕೂಡ ಟ್ಯುನೀಶಿಯಾ ವಿರುದ್ಧ ಗೆದ್ದು ನಾಕೌಟ್‌ಗೆ ಲಗ್ಗೆಯಿಟ್ಟಿದೆ.

ಈಸ್ಟ್‌ ರುಥರ್‌ಫೋರ್ಡ್‌(ಅಮೆರಿಕ): ಫಿಫಾ ವಿಶ್ವಕಪ್‌ನ 4 ಬಾರಿ ಚಾಂಪಿಯನ್‌ ಜರ್ಮನಿಯನ್ನು ಸೋಲಿಸುವ ಮೂಲಕ ಈಕ್ವೆಡಾರ್‌ ಈ ಬಾರಿ ಟೂರ್ನಿಯಲ್ಲಿ ನಾಕೌಟ್‌ ಹಂತ ತಲುಪಿದೆ. ಗುರುವಾರ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ 2014ರ ಟ್ರೋಫಿ ವಿಜೇತ ಜರ್ಮನಿಯನ್ನು ದಕ್ಷಿಣ ಆಮೆರಿಕಾದ ತಂಡ 2-1 ಗೋಲುಗಳ ಅಂತರದಲ್ಲಿ ಸೋಲಿಸಿತು. ಈ ಮೂಲಕ 2006ರ ಬಳಿಕ ಮೊದಲ ಬಾರಿ ವಿಶ್ವಕಪ್‌ನಲ್ಲಿ ನಾಕೌಟ್‌ ಪ್ರವೇಶಿಸಿತು.

ಪಂದ್ಯದ 2ನೇ ನಿಮಿಷದಲ್ಲೇ ಲೆರೋಯ್‌ ಸೇನ್‌ ಗೋಲು ಬಾರಿಸುವ ಮೂಲಕ ಜರ್ಮನಿಗೆ ಭರ್ಜರಿ ಮುನ್ನಡೆ ಒದಗಿಸಿಕೊಟ್ಟರು. ಇದಕ್ಕೆ ತಿರುಗೇಟು ಕೊಡಲು ಈಕ್ವೆಡಾರ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ. 9ನೇ ನಿಮಿಷದಲ್ಲಿ ನಿಲ್ಸನ್‌ ಆ್ಯಂಗುಲೊ ಗೋಲು ದಾಖಲಿಸಿ 1-1 ಸಮಬಲಕ್ಕೆ ಕಾರಣರಾದರು. ಆ ಬಳಿಕವೂ ಚೆಂಡಿನ ಮೇಲೆ ಜರ್ಮನಿ ಹಿಡಿತ ಸಾಧಿಸಿತಾದರೂ ತಂಡದ ಗೋಲು ಗಳಿಸುವ ಅವಕಾಶಕ್ಕೆ ಈಕ್ವೆಡಾರ್‌ ಗೋಲ್‌ಕೀಪರ್‌ ಅಡ್ಡಿಯಾದರು. 77ನೇ ನಿಮಿಷದಲ್ಲಿ ಗೊಂಜಾಲೊ ಪ್ಲಾಟಾ ಬಾರಿಸಿದ ಗೋಲಿನಿಂದಾಗಿ ಈಕ್ವೆಡಾರ್ ಈ ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿತು.

ತಂಡ 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿ, ‘ಇ’ ಗುಂಪಿನಲ್ಲಿ 3ನೇ ಸ್ಥಾನಿಯಾಗಿ ಅಂತಿಮ 32ರ ಘಟ್ಟ ಪ್ರವೇಶಿಸಿತು. ಈ ಸೋಲಿನ ಹೊರತಾಗಿಯೂ ಜರ್ಮನಿ 6 ಅಂಕದೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ನಾಕೌಟ್‌ ತಲುಪಿತು.

ಈಕ್ವೆಡಾರ್‌ನಲ್ಲಿ ರಾಷ್ಟ್ರೀಯ ರಜೆ!

ಗುರುವಾರ ರಾತ್ರಿ ಜರ್ಮನಿ ವಿರುದ್ಧ ಗೆದ್ದಿದ್ದಕ್ಕೆ ಈಕ್ವೆಡಾರ್‌ನಲ್ಲಿ ಶುಕ್ರವಾರ ರಾಷ್ಟ್ರೀಯ ರಜೆ ಸಾರಲಾಗಿತ್ತು. ಅಲ್ಲಿನ ಅಧ್ಯಕ್ಷ ಡೇನಿಯಲ್‌ ನೊಬೊವಾ ಸಾಮಾಜಿಕ ತಾಣಗಳಲ್ಲಿ ಖುಷಿ ವ್ಯಕ್ತಪಡಿಸಿ, ಶುಕ್ರವಾರ ರಾಷ್ಟ್ರೀಯ ರಜೆ ಎಂದು ಘೋಷಿಸಿದರು.

ನೆದರ್‌ಲೆಂಡ್ಸ್‌ಗೆ 2ನೇ ಜಯ

ಕಾನ್ಸಸ್‌ ಸಿಟಿ(ಅಮೆರಿಕ): ಟ್ಯುನೀಶಿಯಾ ವಿರುದ್ಧ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದ ನೆದರ್‌ಲೆಂಡ್ಸ್‌, ‘ಎಫ್‌’ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್‌ ತಲುಪಿದೆ. ತಂಡ 3 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು. ತಂಡ 1974ರ ಬಳಿಕ ಆಡಿರುವ ಎಲ್ಲಾ ವಿಶ್ವಕಪ್‌ನಲ್ಲೂ ನಾಕೌಟ್‌ ಹಂತ ಪ್ರವೇಶಿಸಿದೆ. ಟ್ಯುನೀಶಿಯಾ ಸತತ 3ನೇ ಸೋಲಿನೊಂದಿಗೆ ವಿಶ್ವಕಪ್‌ ಅಭಿಯಾನ ಕೊನೆಗೊಳಿಸಿತು.

ಇಂದಿನ ಪಂದ್ಯಗಳು

ಸೌದಿ-ಕೇಪ್‌ ವರ್ಡೆ, ಬೆಳಗ್ಗೆ 5.30ಕ್ಕೆ

ಉರುಗ್ವೆ-ಸ್ಪೇನ್‌, ಬೆಳಗ್ಗೆ 5.30ಕ್ಕೆ

ನ್ಯೂಜಿಲೆಂಡ್-ಬೆಲ್ಜಿಯಂ, ಬೆಳಗ್ಗೆ 8.30ಕ್ಕೆ

ಈಜಿಪ್ಟ್‌-ಇರಾನ್‌, ಬೆಳಗ್ಗೆ 8.30ಕ್ಕೆ

ಪನಾಮ-ಇಂಗ್ಲೆಂಡ್‌, ರಾತ್ರಿ 2.30ಕ್ಕೆ

ಕ್ರೊವೇಷಿಯಾ-ಘಾನಾ, ರಾತ್ರಿ 2.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA ವಿಶ್ವಕಪ್ 2026ರಲ್ಲಿ ಹೊಸ ದಾಖಲೆ ಬರೆದ ಫ್ಯಾನ್ಸ್, ಅಭಿಮಾನಿಗಳ ಹಾಜರಾತಿ ಏಷ್ಟಾಗಿದೆ ಗೊತ್ತಾ?
ವಿನಿಶಿಯಸ್ ಜೂನಿಯರ್ ಡಬಲ್ ಗೋಲು ಮ್ಯಾಜಿಕ್! ಬ್ರೆಜಿಲ್ ಅಜೇಯವಾಗಿ ಫಿಫಾ ವಿಶ್ವಕಪ್ ನಾಕೌಟ್‌ಗೆ