ಮದ್ವೆಯಾದ ಒಂದೇ ವಾರಕ್ಕೆ ಕ್ರಿಸ್ಟಿಯಾನೋ ರೋನಾಲ್ಡೋ ಟೀಮ್‌ಮೇಟ್ ಕಾರು ಅಪಘಾತದಲ್ಲಿ ಸಾವು

Published : Jul 03, 2025, 03:41 PM IST
Diogo Jota

ಸಾರಾಂಶ

ಕ್ರಿಸ್ಟಿಯಾನೋ ರೋನಾಲ್ಡೋ ಟೀಮ್‌ಮೇಟ್, ಲಿವರ್‌ಪೂಲ್ ತಂಡದ ಫಾರ್ವರ್ಡ್ ಪ್ಲೇಯರ್ ಡಿಯೋಗೊ ಜೋಟಾ ದುರಂತ ಅಂತ್ಯಕಂಡಿದ್ದಾರೆ. 28 ವಯಸ್ಸಿನ ಜೋಟಾ ಮದುವೆಯಾದ ಮರುದಿನವೇ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಸ್ಪೇನ್ (ಜು.03) ಲಿವರ್‌ಪೂಲ್ ತಂಡದ ಸ್ಟಾರ್ ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡ ಘಟನೆ ಸ್ಪೇನ್‌ನಲ್ಲಿ ನಡೆದಿದೆ. 28ರ ಹರೆಯದ ಜೋಟಾ ಮದುವೆಯಾಗಿ ಒಂದು ವಾರವಾಗಿದೆ ಅಷ್ಟೇ. ತನ್ನ ಸಹೋದರನ ಜೊತೆ ಫುಟ್ಬಾಲ್ ಪಂದ್ಯಕ್ಕಾಗಿ ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಭೀಕರ ಅಪಘಾತದಲ್ಲಿ ಡಿಯೋಗೋ ಜೋಟಾ ಹಾಗೂ ಆತನ ಸಹದೋರ ಆ್ಯಂಡ್ರೆ ಸಿಲ್ವಾ ಕೂಡ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮದುವೆಯಾಗಿ ಕೆಲವೇ ದಿನ ಕಳೆದಿದ್ದ ಜೋಟಾ

ಪೋರ್ಚುಗಲ್ ತಂಡದಲ್ಲಿ ಕ್ರಿಸ್ಟಿಯಾನೋ ರೋನಾಲ್ಡ್ ತಂಡದ ಟೀಮ್‌ಮೇಟ್ ಆಗಿದ್ದ ಜೋಟಾ, UEFA ನ್ಯಾಷನಲ್ ಲೀಗ್ ಗೆದ್ದುಕೊಂಡಿದ್ದರು. ಜೂನ್ 22 ರಂದು ಡಿಯೋಗೋ ಜೋಟಾ ತನ್ನ ಬಹುಕಾಲದ ಗೆಳತಿಯನ್ನು ಮದುವೆಯಾಗಿದ್ದರು. ಮದುವೆಗೂ ಮೊದಲೇ ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಜೂನ್ 22ರಂದು ಮದುವೆಯಾಗಿದ್ದ ಜೋಟಾ ಕೆಲವೇ ದಿನ ಮಾತ್ರ ಫುಟ್ಬಾಲ್‌ನಿಂದ ದೂರ ಉಳಿದಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ದಿನ ಕಳೆದಿದ್ದ ಜೋಟಾ ಬಳಿಕ ಫುಟ್ಬಾಲ್ ಪಂದ್ಯದ ಅಭ್ಯಾಸ ಆರಂಭಿಸಿದ್ದರು.

ಜೋಟಾ ಜೊತೆಗೆ ಸಹೋದರನ ಸಾವು

ಝಮೋರಾ ನಗರದಲ್ಲಿ ಜೋಟಾ ಹಾಗೂ ಆತನ ಸಹೋದರ ಫುಟ್ಬಾಲ್ ಪಟು ಸಂಚರಿಸುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಫುಟ್ಬಾಲ್ ಪಂದ್ಯಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರು ಅಪಘಾತಕ್ಕೀಡಾದ ಬೆನ್ನಲ್ಲೆ ಬೆಂಕಿ ಕಾಣಿಸಿಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜೋಟಾ ಸೆಪ್ಟೆಂಬರ್ 2020 ರಲ್ಲಿ ವೂಲ್ವ್ಸ್‌ನಿಂದ 40 ಮಿಲಿಯನ್ ಯೂರೋಗಿಂತ ಹೆಚ್ಚಿನ ಶುಲ್ಕಕ್ಕೆ ಲಿವರ್‌ಪೂಲ್‌ಗೆ ಸೇರಿದ್ದರು. ಅವರ ಸಹೋದರ ಆಂಡ್ರೆ ಸಿಲ್ವಾ, ವೃತ್ತಿಪರ ಫುಟ್ಬಾಲ್ ಆಟಗಾರರೂ ಸಹ ಈ ದುರಂತದಲ್ಲಿ ನಿಧನರಾದರು. ಅವರು ಪತ್ನಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.

ಆಘಾತ ವ್ಯಕ್ತಪಡಿಸಿದ ಲಿವರ್‌ಪೂಲ್

ಡಿಯೊಗೊ ಜೋಟಾ ಅವರ ದುರಂತ ಸಾವಿನಿಂದ ತಂಡವು ದುಃಖಿತವಾಗಿದೆ ಎಂದು ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ಹೇಳಿದೆ. “ಲಿವರ್‌ಪೂಲ್ ಎಫ್‌ಸಿ ಈ ಸಮಯದಲ್ಲಿ ಯಾವುದೇ ಹೆಚ್ಚಿನ ಕಾಮೆಂಟ್‌ಗಳನ್ನು ಮಾಡುವುದಿಲ್ಲ ಮತ್ತು ಡಿಯೊಗೊ ಮತ್ತು ಆಂಡ್ರೆಯ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಕ್ಲಬ್ ಸಿಬ್ಬಂದಿಯ ಗೌಪ್ಯತೆಯನ್ನು ಗೌರವಿಸಬೇಕೆಂದು ವಿನಂತಿಸುತ್ತದೆ. ಊಹಿಸಲಾಗದ ನಷ್ಟವನ್ನು ಅವರು ಎದುರಿಸಲು ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ,” ಎಂದು ಅವರು ಹೇಳಿದರು.

2019ರಿಂದ ರಾಷ್ಟ್ರೀಯ ಪೋರ್ಚುಗಲ್ ತಂಡದ ಭಾಗವಾಗಿದ್ದ ಜೋಟಾ ಇದೀಗ ದುರಂತ ಸಾವು ಕಂಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?
ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!