ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್

Published : Mar 03, 2026, 08:32 PM IST
Cristiano Ronaldo

ಸಾರಾಂಶ

ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್, ಇರಾನ್ ಡ್ರೋನ್ ನೇರವಾಗಿ ರಿಯಾದ್ ಎಂಬಸಿ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ರೋನಾಲ್ಡೋ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳೆ. 

ರಿಯಾದ್ (ಮಾ.03) : ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಇರಾನ್ ಮೇಲಿನ ದಾಳಿ ಇದೀಗ ಮದ್ಯಪ್ರಾಚ್ಯ ದೇಶಗಳ ಆತಂಕ ಹೆಚ್ಚಿಸಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಾದ ಬೆನ್ನಲ್ಲೇ ಇರಾನ್ ಕೆರಳಿದೆ. ಇತ್ತ ದುಬೈ, ಅದುಧಾಬಿ, ಬಹ್ರೈನ್, ಸೌದಿ ಅರೇಬಿಯಾ ಸೇರಿದಂತೆ ಮದ್ಯಪ್ರಾಚ್ಯ ದೇಶಗಳ ಅಮೆರಿಕ ಸೇನಾ ನೆಲೆ, ಅಮೆರಿಕ ಕಚೇರಿಗಳ ಮೇಲೆ ದಾಳಿಮಾಡುತ್ತಿದೆ. ಸೌದಿ ಅರೆಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ ನೆಡೆಸಿದೆ. ಈ ದಾಳಿಯಿಂದ ಸೌದಿ ಅರೆಬಿಯಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಜನ ಆತಂಕಗೊಂಡಿದ್ದಾರೆ. ರಿಯಾದ್‌ನಲ್ಲಿನ ದಾಳಿ ಬೆನ್ನಲ್ಲೇ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೋನಾಲ್ಡೋ ಸೌದ ಅರೆಬಿಯಾ ತೊರೆದಿದ್ದಾರೆ. ತಮ್ಮ 750 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಮೂಲಕ ಸೌದಿ ತೊರೆದೆ ಯೂರೋಪ್ ಸೇರಿಕೊಂಡಿದ್ದಾರೆ.

ಕುಟುಂಬ ಸಮೇತ ಸೌದಿ ತೊರೆದೆ ಕ್ರಿಸ್ಟಿಯಾನೋ

ಕ್ರಿಸ್ಟಿಯಾನೋ ರೋನಾಲ್ಡೋ ತಮ್ಮ ಕುಟುಂಬ ಸಮೇತ ಸೌದಿ ಅರೆಬಿಯಾ ತೊರೆದಿದ್ದಾರೆ. ಇರಾನ್ ಪ್ರತಿದಾಳಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ ದೇಶದಲ್ಲಿ ಅಸುರಕ್ಷಿತ ಆತಂಕ ಸೃಷ್ಟಿಯಾಗಿದೆ. ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ ಎಂದೇ ಗುರುತಿಸಿಕೊಂಡಿದ್ದ ದುಬೈ ಸೇರಿದಂತೆ ಯುಎಇ ಮೇಲೆ ಸತತ ದಾಳಿ ನಡೆಯುತ್ತಿದೆ.

2023ರಿಂದ ಸೌದಿಯಲ್ಲಿ ರೋನಾಲ್ಡೋ ವಾಸ

41 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ 2023ರಿಂದ ಸೌದಿ ಅರೆಬಿಯಾದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಲ್ ನಾಸರ್ ಫುಟ್ಬಾಲ್ ಕ್ಲಬ್. 2023ರಲ್ಲಿ ರೋನಾಲ್ಡೋ ಅಲ್ ನಾಸರ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸೌದಿ ಲೀಗ್‌ನಲ್ಲಿ ಆಡುತ್ತಿರುವ ಕಾರಣ ರೋನಾಲ್ಡೋ ಸೌದಿಯಲ್ಲೇ ಬೀಡು ಬಿಟ್ಟಿದ್ದಾರೆ. ಇದೀಗ ಅಲ್ ನಾಸರ್ ಕ್ಲಬ್‌ಗೆ ತಾತ್ಕಾಲಿಕ ಬ್ರೇಕ್ ನೀಡಿ ಯೂರೋಪ್‌ಗೆ ಹಾರಿದ್ದಾರೆ. ಈ ಬೆಳವಣಿಗೆಯು ಸೌದಿ ಪ್ರೊ ಲೀಗ್‌ನಲ್ಲಿ ಆಡುತ್ತಿರುವ ಅಂತರಾಷ್ಟ್ರೀಯ ಆಟಗಾರರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ. ರೊನಾಲ್ಡೊ ಮಾತ್ರವಲ್ಲದೆ, ಸಾದಿಯೊ ಮಾನೆ, ಜೋ ಫೆಲಿಕ್ಸ್ ಮತ್ತು ಕರೀಂ ಬೆಂಜೆಮಾ ಅವರಂತಹ ದಿಗ್ಗಜ ಆಟಗಾರರು ಕೂಡ ಸೌದಿ ಲೀಗ್‌ನಲ್ಲಿದ್ದಾರೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಫೆಬ್ರವರಿ 28 ರಂದು ರಿಯಾದ್‌ನಲ್ಲಿ ಹಲವು ಸ್ಫೋಟಗಳು ನಡೆದಿದ್ದವು. ಇರಾನ್, ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಘಟನೆಗಳ ನಂತರ ರೊನಾಲ್ಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರೋನಾಲ್ಡೋ ಸೌದಿ ಫುಟ್‌ಬಾಲ್‌ನ ಜಾಗತಿಕ ರಾಯಭಾರಿಯೂ ಹೌದು. ಇದೀಗ ಅವರು ತಮ್ಮ ಗಲ್ಫ್‌ಸ್ಟ್ರೀಮ್ G650 ಮಾಡೆಲ್‌ನ ಖಾಸಗಿ ಜೆಟ್‌ನಲ್ಲಿ ಸೌದಿ ಬಿಟ್ಟಿದ್ದಾರೆ. ಈ ಜೆಟ್‌ನ ಬೆಲೆ ಬರೋಬ್ಬರಿ 67 ಮಿಲಿಯನ್ ಪೌಂಡ್, ಅಂದರೆ ಸುಮಾರು 750 ಕೋಟಿ ರೂಪಾಯಿ. 'ಹಾರುವ ಅರಮನೆ' ಎಂದೇ ಖ್ಯಾತಿಯಾಗಿರುವ ಈ ಜೆಟ್, ವಿಶ್ವದ ಅತ್ಯಂತ ಐಷಾರಾಮಿ ಖಾಸಗಿ ವಿಮಾನಗಳಲ್ಲಿ ಒಂದು. ಇದರಲ್ಲಿ ಒಟ್ಟು 19 ಮಂದಿ ಪ್ರಯಾಣಿಸಬಹುದು. ತಡೆ ರಹಿತ 7,000 ಮೈಲಿಗಳಿಗಿಂತ ಹೆಚ್ಚು ದೂರ ಹಾರುವ ಸಾಮರ್ಥ್ಯ ಹೊಂದಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫುಟ್‌ಬಾಲ್ ಅಂಗಳಕ್ಕೆ ತಟ್ಟಿದ ಯುದ್ಧದ ಬಿಸಿ; ಅಮೆರಿಕದ ಮಣ್ಣಿನಲ್ಲಿ ಫಿಫಾ ವಿಶ್ವಕಪ್ ಆಡಲ್ಲ ಎಂದ ಇರಾನ್?
ಈ ಫುಟ್ಬಾಲಿಗನ ಬಳಿ ಇದೆ ಬರೋಬ್ಬರಿ 91 ಕೋಟಿ ರೂಪಾಯಿ ಕಾರು ಕಲೆಕ್ಷನ್