ರೊನಾಲ್ಡಿನೊ ಹೆಸರು ಕೇಳದ ಯಾವ ಫುಟ್ಬಾಲ್ ಅಭಿಮಾನಿ ಇರಲಾರ. ಕಾರಣ ಬ್ರೆಜಿಲ್‌ನ ಫುಟ್ಬಾಲ್ ಚತುರ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಆದರೆ ಇದೇ ರೊನಾಲ್ಡಿನೊ ಇದೀಗ ಅರೆಸ್ಟ್ ಆಗಿದ್ದಾರೆ.
ಪೆರುಗ್ವೆ(ಮಾ.06): ನಕಲಿ ಪಾಸ್‌ಪೋರ್ಟ್ ಬಳಸಿ ಪೆರುಗ್ವೆ ಪ್ರವೇಶ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಬ್ರೆಜಿಲ್‌ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಮತ್ತು ಅವರ ಸಹೋದರ ರಾಬರ್ಟೊ ಡಿ ಆಸೀಸ್‌ರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಧಾನಿ ಅಸುನ್‌ಸಿಯಾನ್‌ನಿಂದ 15 ಕಿ.ಮೀ.ದೂರದ ಗಾಲ್ಫ್ ಕ್ಲಬ್ ಹೊಂದಿರುವ ರೆಸಾರ್ಟ್‌ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕ್ಸಿಹುನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಎದುರಾಳಿಯ ಜನನಾಂಗಕ್ಕೆ ಕಚ್ಚಿದ ಫುಟ್ಬಾಲ್ ಪಟು; ಹಾಕಬೇಕಾಯ್ತು 10 ಹೊಲಿಗೆ !
undefined
ಖ್ಯಾತ ಫುಟ್ಬಾಲ್ ಆಟಗಾರ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ ರೋನಾಲ್ಡಿನೋ ತಮ್ಮ ಫುಟ್ಬಾಲ್ ಕರಿಯರ್‌ನಲ್ಲಿ ಬಹುತೇಕ ದೇಶ ಸುತ್ತಿದ್ದಾರೆ. ಆದರೆ 2019ರಲ್ಲಿ ರೋನಾಲ್ಡಿನೊ ಬಳಿ ಇದ್ದ ಬ್ರೆಜಿಲ್ ಹಾಗೂ ಸ್ಪೇನ್ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತೆರಿಗೆ ಬಾಕಿ ಹಾಗೂ ದಂಡ ಪಾವತಿಸಲು ವಿಫಲವಾದ ಹಿನ್ನಲೆಯಲ್ಲಿ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಇದನ್ನೂ ಓದಿ: ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ!
ಮುಟ್ಟುಗೋಲು ಹಾಕಿಕೊಂಡ ಪಾಸ್‌ಪೋರ್ಟ್ ನಕಲಿ ಕಾಪಿ ಮಾಡಿದ ರೊನಾಲ್ಡಿನೊ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೊನಾಲ್ಡಿನೊ ಹೊಂದಿರುವ ಪಾಸ್‌ಪೋರ್ಟ್ ನಕಲಿ ಎನ್ನುವುದು ಗಮನಕ್ಕೆ ಬಂದ ಬಳಿಕವೇ ಬಂಧಿಸಲಾಗಿದೆ ಎಂದು ಪೆರುಗ್ವೆ ಗೃಹ ಸಚಿವ ಎಕ್ಲಿಡೆಸ್ ಏಸ್‌ವಿಡೋ ತಿಳಿಸಿದ್ದಾರೆ. ವಿಚಾರಣೆಯಲ್ಲಿ ರೊನಾಲ್ಡಿನೊ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.