ಹ್ಯೂಸ್ಟನ್/ ಲಾಸ್ ಏಂಜಲೀಸ್: ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಬ್ರೆಜಿಲ್ ಹಾಗೂ ಕೆನಡಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಸೋಮವಾರ ನಡೆದ ಜಪಾನ್ ವಿರುದ್ಧದ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
29ನೇ ನಿಮಿಷದಲ್ಲೇ ಜಪಾನ್ ಮುನ್ನಡೆ ಸಾಧಿಸಿತು. ಕೈಶು ಸಾನೊ ಗೋಲು ಬಾರಿಸಿದರು. ಮೊದಲಾರ್ಧವನ್ನು ಜಪಾನ್ 1-0 ಮುನ್ನಡೆಯೊಂದಿಗೆ ಮುಕ್ತಾಯಗೊಳಿಸಿತು. 56ನೇ ನಿಮಿಷದಲ್ಲಿ ಕ್ಯಾಸಿಮಿರೊ ಬ್ರೆಜಿಲ್‌ಗೆ ಮೊದಲ ಗೋಲು ತಂದುಕೊಟ್ಟರು. ಪಂದ್ಯದ ಕೊನೆ ಕ್ಷಣದಲ್ಲಿ (90+6ನೇ ನಿಮಿಷ), ಗೇಬ್ರಿಯಾಲ್ ಮ್ಯಾರ್ಟಿನೆಲಿ ಬಾರಿಸಿದ ಗೋಲು, ಬ್ರೆಜಿಲ್‌ಗೆ ಜಯ ತಂದುಕೊಟ್ಟಿತು.
3ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೆನಡಾ, ಇದೇ ಚೊಚ್ಚಲ ಬಾರಿಗೆ ಅಂತಿಮ-16ರ ಸುತ್ತು ಪ್ರವೇಶಿಸಿದೆ. ಅಂತಿಮ-32ರ ಸುತ್ತಿನ ನಾಕೌಟ್ ಪಂದ್ಯದಲ್ಲಿ, ಕೆನಡಾ 1-0 ಗೋಲಿನ ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತು.
ಈ ಮೊದಲು 1986, 2022ರಲ್ಲಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದ ಕೆನಡಾ, ಎರಡೂ ಆವೃತ್ತಿಗಳಲ್ಲಿ ಒಂದೂ ಗೆಲುವು ಕಾಣದೆ ಗುಂಪು ಹಂತದಲ್ಲೇ ಹೊರಬಿದ್ದಿತ್ತು.
ನಿಗದಿತ ಸಮಯದಲ್ಲಿ ಗೋಲು ದಾಖಲಾಗುವು ಲಕ್ಷಣಗಳು ಕಾಣಲಿಲ್ಲ. ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಗಬಹುದು ಎನ್ನುವಾಗ ಇಂಜುರಿ ಟೈಮ್‌ನಲ್ಲಿ (92ನೇ ನಿಮಿಷ) ಸ್ಟೀಫನ್ ಯುಸ್ಟಾಕಿಯೊ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಈ ಏಕೈಕ ಗೋಲು ಕೆನಡಾ ತಂಡದ ಐತಿಹಾಸಿಕ ಜಯಕ್ಕೆ ಕಾರಣವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.