ಝಾಂಬಿ ವೈರಸ್ ಬಗ್ಗೆ ಹೇಳಿದ್ದ Baba Vanga! ಹಾಗಿದ್ರೆ 2023ರಲ್ಲಿ ಸೌರ ಸುನಾಮಿ ಸಂಭವಿಸೋದು ನಿಜಾನಾ?

By Suvarna News  |  First Published Dec 4, 2022, 11:07 AM IST

ಬಲ್ಗೇರಿಯಾದ ನಾಸ್ಟ್ರಡಾಮಸ್ ಎಂದೇ ಖ್ಯಾತಿ ಪಡೆದಿರುವ ಬಾಬಾ ವಾಂಗಾ ಅವರ ವೈರಸ್ ಭವಿಷ್ಯವಾಣಿ 2022ರಲ್ಲಿ ನಿಜವಾಗಿದೆ. ಹಾಗಿದ್ರೆ 2023ಕ್ಕೆ ಅವರು ನುಡಿದಿರುವ ಭವಿಷ್ಯವಾಣಿಗಳೂ ನಿಜವಾಗುತ್ತಾ?


ರಷ್ಯಾದಲ್ಲಿ ಆಳವಾಗಿ ಹೂತುಹೋಗಿದ್ದ 48,000 ವರ್ಷಗಳಷ್ಟು ಹಳೆಯದಾದ 'ಝಾಂಬಿ ವೈರಸ್' ಅನ್ನು ವಿಜ್ಞಾನಿಗಳು ಇತ್ತೀಚೆಗೆ ಪುನಶ್ಚೇತನಗೊಳಿಸಿದ ಸುದ್ದಿ ಓದಿಯೇ ಇರುತ್ತೀರಿ.  ಈ ಸುದ್ದಿ ಬಾಬಾ ವಾಂಗಾ ಭವಿಷ್ಯವಾಣಿಗಳು(Baba Vanga Predictions) ನಿಜವಾಗುತ್ತಿರುವುದಕ್ಕೆ ಮತ್ತೊಂದು ನಿದರ್ಶನವಾಗಿದೆ! 
ಹೌದು, 2022ರಲ್ಲಿ ಸೈಬೀರಿಯಾವು ಜಗತ್ತಿಗೆ ಹೊಸ ವೈರಸ್ ಅನ್ನು ಪ್ರಸ್ತುತಪಡಿಸುತ್ತದೆ ಎಂದು ಬಾಬಾ ವಾಂಗಾ ಹೇಳಿದ್ದ ಭವಿಷ್ಯವಾಣಿ ಈ ಮೂಲಕ ನಿಜವಾಗಿದೆ. ಇದರಿಂದ ಬಾಬಾ ವಾಂಗಾ ಅವರ ಇತರ ಭವಿಷ್ಯ ವಾಣಿಗಳು ಕೂಡಾ ನಿಜವಾಗುವ ಭಯ ಎಲ್ಲೆಡೆ ಆವರಿಸಿದೆ. ಏಕೆಂದರೆ ಅತೀಂದ್ರಿಯ ಜ್ಞಾನಿ ಬಾಬಾ ವಾಂಗಾ ಹೇಳಿದ ಭವಿಷ್ಯವಾಣಿಗಳೆಲ್ಲವೂ ಭಯಾನಕವಾಗಿವೆ. 

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಪರಿಣಾಮಗಳಿಂದಾಗಿ,  48,000 ವರ್ಷಗಳಷ್ಟು ಹಿಂದೆ ಮಂಜುಗಡ್ಡೆಯಲ್ಲಿ ಸೇರಿಹೋಗಿದ್ದ ವೈರಸ್ ಪತ್ತೆಯಾಗಿರುವುದು, ತಾಪಮಾನ ಏರಿಕೆಯಾದರೆ, ಹೀಗೆ ಮಂಜಿನಲ್ಲಿ ಸಿಲುಕಿರುವ ಅನೇಕ ರೀತಿಯ ಚಿತ್ರವಿಚಿತ್ರ ವೈರಸ್‌ಗಳು ಪುನಃಜೀವನ ಪಡೆದು ಜಗತ್ತಿಗೆ ಮಾರಕವಾಗುವ ಭಯ ಹುಟ್ಟಿಸಿವೆ. 

Tap to resize

Latest Videos

Hanuman Jayanti 2022: ಇಷ್ಟಾರ್ಥ ಸಿದ್ಧಿಗೆ ಆಂಜನೇಯನ ಜನ್ಮದಿನ ಈ ಕೆಲಸಗಳನ್ನು ಮಾಡಿ..

ಬಾಬಾ ವಾಂಗಾ ಏನು ಭವಿಷ್ಯ ನುಡಿದಿದ್ದರು?
ಸಂಶೋಧಕರ ತಂಡವು ಸೈಬೀರಿಯಾದಲ್ಲಿ ಹೆಪ್ಪುಗಟ್ಟಿದ ಮತ್ತು ಆಳವಾಗಿ ಹೂತುಹೋಗಿರುವ ವೈರಸ್ ಅನ್ನು ಕಂಡುಹಿಡಿಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ, ಅದೇ ವೈರಸ್ 'ಶೀಘ್ರವಾಗಿ ನಿಯಂತ್ರಣದಿಂದ ಹೊರಗುಳಿಯುತ್ತದೆ', ಮತ್ತೊಂದು ಸಾಂಕ್ರಾಮಿಕ ರೋಗವನ್ನು ಉಂಟುಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ ಎಂಬುದು ಹೆಚ್ಚು ಭಯಾನಕವಾಗಿದೆ. 
ಇದಲ್ಲದೆ, 2022ರಲ್ಲಿ ಪ್ರಪಂಚದಾದ್ಯಂತದ ಪ್ರಮುಖ ನಗರಗಳು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತದೆ ಎಂದು ವಾಂಗಾ ಹೇಳಿದ್ದು ಕೂಡಾ ನಿಜವಾಗಿತ್ತು. ಇದರೊಂದಿಗೆ 2022ರಲ್ಲಿ ಆಸ್ಟ್ರೇಲಿಯಾವು ತೀವ್ರ ಪ್ರವಾಹದ ಹೊಡೆತಕ್ಕೆ ಒಳಗಾಗುತ್ತದೆ ಎಂದು ಹೇಳಿದ್ದು ಕೂಡಾ ನಿಜವಾಗಿದೆ. 

2023ಕ್ಕೆ ಬಾಬಾ ವಾಂಗಾ ಇನ್ನೇನು ಭವಿಷ್ಯ ನುಡಿದಿದ್ದಾರೆ?
1. ದೊಡ್ಡ ದೇಶವು ಜೈವಿಕ ಶಸ್ತ್ರಾಸ್ತ್ರಗಳಿಂದ ಜನರ ಮೇಲೆ ದಾಳಿ ಮಾಡುತ್ತದೆ.
2. 2023ರಲ್ಲಿ ಸೌರ ಚಂಡಮಾರುತ ಅಥವಾ ಸೌರ ಸುನಾಮಿ ಸಂಭವಿಸುತ್ತದೆ, ಇದು ಗ್ರಹದ ಕಾಂತೀಯ ಗುರಾಣಿಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. 
3. 2023ರಲ್ಲಿ ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗುತ್ತದೆ. ಪರಗ್ರಹವಾಸಿಗಳು ಭೂಮಿಯ ಮೇಲೆ ದಾಳಿ ಮಾಡಬಹುದು ಮತ್ತು ಲಕ್ಷಾಂತರ ಜನರು ಅದರಲ್ಲಿ ಸಾಯುತ್ತಾರೆ.
4. ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಬಹುದು, ಇದರಿಂದಾಗಿ ವಿಷಕಾರಿ ಮೋಡಗಳು ಏಷ್ಯಾ ಖಂಡವನ್ನು ಆವರಿಸುತ್ತವೆ, ಇದರ ಪರಿಣಾಮವಾಗಿ ಅನೇಕ ದೇಶಗಳು ಗಂಭೀರ ಕಾಯಿಲೆಗಳಿಂದ ಬಳಲುತ್ತವೆ.
5. 2023ರ ಹೊತ್ತಿಗೆ, ಮಾನವರು ಪ್ರಯೋಗಾಲಯಗಳಲ್ಲಿ ಜನಿಸುತ್ತಾರೆ. ಇಲ್ಲಿಂದ ಜನರ ನೋಟ, ಚರ್ಮದ ಬಣ್ಣ ನಿರ್ಧರಿಸಲಾಗುತ್ತದೆ. ಅಂದರೆ, ಲ್ಯಾಬ್‌ನಲ್ಲಿ ಮನುಷ್ಯನಿಗೆ ಬೇಕಾದಂತೆ ಮಗುವಿನ ಸೃಷ್ಟಿ ಮಾಡಬಹುದು.

Weekly Love Horoscope: ಅರಳಲಿದೆ ಈ ರಾಶಿಯ ಪ್ರಣಯ ಜೀವನ

ಯಾರು ಈ ಬಾಬಾ ವಾಂಗಾ?
ಬಾಬಾ ವಾಂಗಾ 1911ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಆಕೆಯ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ಆಕೆ 12ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಅಪಘಾತದಲ್ಲಿ ಕಣ್ಣು  ಕಳೆದುಕೊಂಡಳು. ಆಗಿನಿಂದ ತನಗೆ ಅತೀಂದ್ರಿಯ ದೃಷ್ಟಿ ಒಲಿಯಿತೆಂದು ಹೇಳಿದ್ದಾಳೆ. 1996ರಲ್ಲಿ ಸಾಯುವ ಮೊದಲು, ಆಕೆ ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಳು, ಅವೆಲ್ಲವೂ ಈಗ ನಿಜವಾಗುತ್ತಿವೆ. ಅವರು ಅತಿಮಾನುಷ ಸಾಮರ್ಥ್ಯಗಳನ್ನು ಹೊಂದಿದ್ದರು ಎಂದು ನಂಬಲಾಗಿದೆ. 5079ನೇ ಇಸವಿವರೆಗೂ ಬಾಬಾ ವಾಂಗಾ ಭವಿಷ್ಯ ಹೇಳಿದ್ದಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!