ನಾಳೆ ಕರ್ನಾಟಕದಲ್ಲೆಡೆ ಹನುಮ ಜಯಂತಿ ಸಂಭ್ರಮ. ಹನುಮಂತನ ಹುಟ್ಟಿನ ಪುರಾಣ ಕತೆಯೇನು, ಹನುಮದ್ವ್ರತದಂದು ಯಾವ ಕ್ರಮ ಕೈಗೊಳ್ಳುವುದರಿಂದ ವರ ಸಿದ್ಧಿಯಾಗುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕದಲ್ಲಿ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಹನುಮದ್ವ್ರತ (Hanumadvratha 2022)ಯನ್ನು ಆಚರಿಸಲಾಗುತ್ತದೆ. ಈ ಬಾರಿ ಹನುಮದ್ವ್ರತವನ್ನು ಡಿಸೆಂಬರ್ 5ರಂದು ಕರ್ನಾಟಕದೆಲ್ಲೆಡೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ದಿನ ಪವನ ಪುತ್ರ ಹನುಮಂತನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಆತನನ್ನು ಸಂಕಟ ಮೋಚನ ಎಂದೇ ಕರೆಯಲಾಗುತ್ತದೆ. ಭಕ್ತರ ಕರೆಗೆ ಬೇಗ ಓಗೊಡುವವನು ಹನುಮಂತ. ಈಶ್ವರನ ಸ್ವರೂಪ. ಈ ಬಾರಿಯ ಹನುಮದ್ವ್ರತ ವಿಶೇಷವಾಗಿದೆ. ಏಕೆಂದರೆ, ಈಶ್ವರ(Lord Shiva)ನ ದಿನವಾದ ಸೋಮವಾರ ಈ ವಿಶೇಷ ದಿನ ಬರುತ್ತಿದೆ.
ಈ ದಿನದಂದು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಭಜರಂಗ ಬಲಿಯನ್ನು ಪೂಜಿಸುವ ಜೊತೆಗೆ ಈ ಕ್ರಮಗಳನ್ನು ಮಾಡುವುದು ಮಂಗಳಕರವಾಗಿರುತ್ತದೆ. ಪ್ರತಿ ಕೆಲಸದಲ್ಲಿ ಯಶಸ್ಸು ಪಡೆಯಲು ಮತ್ತು ಸಂತೋಷ ಮತ್ತು ಸಮೃದ್ಧಿಗೆ ಹನುಮದ್ವ್ರತದ ಪರಿಹಾರ ಕ್ರಮಗಳು(remedies) ಪ್ರಯೋಜನಕಾರಿಯಾಗಿವೆ.
ಹನುಮದ್ವ್ರತ ದಿನದಂದು ಈ ವಿಶೇಷ ಕ್ರಮಗಳನ್ನು ಕೈಗೊಳ್ಳಿ..
ಹನುಮಂತನ ಜನನದ ಕತೆ(Birth story of Lord Hanuman)
ಭಗವಾನ್ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ ಮತ್ತು ಅವನ ಜನ್ಮ ವೃತ್ತಾಂತವನ್ನು ಪುರಾಣಗಳಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಹನುಮಂತನ ಜನ್ಮ ಕಥೆಯ ಪ್ರಕಾರ, ಅಗ್ನಿದೇವನು ರಾಜ ದಶರಥ ಮತ್ತು ಅವನ ಮೂವರು ಹೆಂಡತಿಯರಿಗೆ ಅವರ ಯಜ್ಞದಿಂದ ಸಂತೋಷಗೊಂಡ ನಂತರ ಖೀರ್ ಅನ್ನು ಅರ್ಪಿಸಿದಾಗ, ಪಾಯಸದ ಒಂದು ಭಾಗವನ್ನು ಹದ್ದು ತೆಗೆದುಕೊಂಡು ಹಾರುತ್ತದೆ.
ಈ ವೇಳೆ ಅಂಜನಾ ಮಾತೆ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಳು. ಹದ್ದಿನಿಂದ ತಪ್ಪಿ ಬಿದ್ದ ಖೀರು ಆಕೆಯ ಬಾಯನ್ನು ಸೇರುತ್ತದೆ. ಖೀರ್ ಸೇವಿಸಿದ ನಂತರ, ಅವಳು ಗರ್ಭಿಣಿಯಾದಳು ಮತ್ತು ಶಿವನ 11ನೇ ರೂಪವಾದ ಹನುಮಂತನಿಗೆ ಜನ್ಮ ನೀಡಿದಳು.