Malavya Yog 2023ಯ ಲಾಭ ಪಡೆಯಲು ಯಾವ ರಾಶಿಯವರು ಏನು ಮಾಡಬೇಕು?

By Suvarna News  |  First Published Feb 5, 2023, 1:48 PM IST

ಶುಕ್ರವು 15 ಫೆಬ್ರವರಿ 2023ರಂದು ಕುಂಭ ರಾಶಿಯಿಂದ ತನ್ನ ಉತ್ಕೃಷ್ಟ ರಾಶಿಯಾದ ಮೀನ ರಾಶಿಗೆ ಸಾಗಲಿದೆ. ಇದರಿಂದ ಅತಿ ಉತ್ಕೃಷ್ಟವಾದ ಮಾಲವ್ಯ ಯೋಗ ರಚನೆಯಾಗಲಿದೆ. ಈ ಯೋಗದ ಲಾಭ ಪಡೆಯಲು ಯಾವ ರಾಶಿಯವರು ಏನು ಪರಿಹಾರ ಮಾಡಬೇಕು ತಿಳಿಯಿರಿ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಲವ್ಯ ಯೋಗವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರವು 15 ಫೆಬ್ರವರಿ 2023ರಂದು ಕುಂಭ ರಾಶಿಯಿಂದ ತನ್ನ ಉತ್ಕೃಷ್ಟ ರಾಶಿಯಾದ ಮೀನ ರಾಶಿಗೆ ಸಾಗಲಿದೆ. ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಿದ ಕೂಡಲೇ ಮಾಲವ್ಯ ರಾಜಯೋಗವು ರೂಪುಗೊಳ್ಳುತ್ತದೆ. ಮಾಲವ್ಯ ಯೋಗವನ್ನು ಜ್ಯೋತಿಷ್ಯದಲ್ಲಿ ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  ಏಕೆಂದರೆ ಇದು ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾಗಿದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ಜಾತಕದ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಭಾಗದಲ್ಲಿ ತನ್ನದೇ ಆದ ರಾಶಿಯಾದ ವೃಷಭ ಮತ್ತು ತುಲಾ ಅಥವಾ ಉಚ್ಛ ರಾಶಿಯಾದ ಮೀನದಲ್ಲಿ ಇರಿಸಿದಾಗ ಮಾಲವ್ಯ ಯೋಗವು ರೂಪುಗೊಳ್ಳುತ್ತದೆ. ಮಾಲವ್ಯ ಯೋಗವಿರುವ ವ್ಯಕ್ತಿಗೆ ಸದಾ ಶುಕ್ರನ ಪ್ರಭಾವ ಇರುವುದರಿಂದ ಅಂತಹವರ ಅದೃಷ್ಟ ಬಲವಾಗಿರುತ್ತದೆ. ಇದರ ಲಾಭ ಪಡೆಯಲು 12 ರಾಶಿಯವರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಮನೆಯಿಂದ ಹೊರಡುವ ಮುನ್ನ ಸಕ್ಕರೆ ಬೆರೆಸಿದ ನೀರನ್ನು ಕುಡಿಯಬೇಕು. ಅಗತ್ಯವಿರುವವರಿಗೆ ಕೆಂಪು ಅಥವಾ ಮಾಣಿಕ್ಯ ಬಣ್ಣದ ಬಟ್ಟೆಗಳನ್ನು ದಾನ ಮಾಡಿ.

Tap to resize

Latest Videos

ವೃಷಭ ರಾಶಿ
ವೃಷಭ ರಾಶಿಯವರು ಪ್ರತಿದಿನ ಮನೆಯ ಈಶಾನ್ಯ ಮೂಲೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಸಾಧ್ಯವಾದರೆ ಕನಕಧಾರಾ ಸ್ತೋತ್ರ ಪಠಿಸಿ.

ಈ 8 ರಾಶಿಗಳಿಗೆ ಮಹಾಯೋಗಗಳ ಸುಯೋಗ ತರುವ Mahashivratri 2023

ಮಿಥುನ ರಾಶಿ
ಮಿಥುನ ರಾಶಿಯವರು ಬಡವರಿಗೆ ಅಥವಾ ದೇವಸ್ಥಾನದಲ್ಲಿ ಮೊಸರು, ಹಾಲು ಅಥವಾ ಸಕ್ಕರೆಯನ್ನು ದಾನ ಮಾಡಬೇಕು. ಪ್ರತಿದಿನ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಜನರು ಚಂದ್ರನ ಬೆಳಕಿನಲ್ಲಿ ಕುಳಿತು ಚಂದ್ರದೇವನ ಮಂತ್ರಗಳನ್ನು 108 ಬಾರಿ ಜಪಿಸಬೇಕು. ಇದರೊಂದಿಗೆ ಪ್ರತಿನಿತ್ಯ ಶಿವನ ಪೂಜೆಯನ್ನೂ ಮಾಡಬೇಕು.
 
ಸಿಂಹ ರಾಶಿ
ಈ ಯೋಗದ ಸಮಯದಲ್ಲಿ, ಸಿಂಹ ರಾಶಿಯ ಜನರು ನೀರಿನಲ್ಲಿ ಬೆಲ್ಲವನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ಲಕ್ಷ್ಮಿಯನ್ನು ಪ್ರತಿದಿನ ಪೂಜಿಸಿ.

ಕನ್ಯಾ ರಾಶಿ 
ಕನ್ಯಾ ರಾಶಿಯವರು ಮಾಲವ್ಯ ಯೋಗದಲ್ಲಿ ಹಸುವಿಗೆ ಹಸಿರು ಸೊಪ್ಪು ತಿನ್ನಿಸಿ. ಇದರೊಂದಿಗೆ, ಮಾ ಲಕ್ಷ್ಮಿಯನ್ನು ನಿಯಮಿತವಾಗಿ ಪೂಜಿಸುವಾಗ, ಅವಳಿಗೆ ಕೆಂಪು ಹೂವುಗಳನ್ನು ಅರ್ಪಿಸಿ.

ತುಲಾ ರಾಶಿ
ತುಲಾ ರಾಶಿಯವರು ಪ್ರತಿನಿತ್ಯ ಬಿಳಿ ಬಟ್ಟೆ ಧರಿಸಿ ಶಿವನಿಗೆ ರುದ್ರಾಭಿಷೇಕ ಮಾಡಬೇಕು.

Sankashti Chaturthi 2023: ದಿನಾಂಕ, ಮುಹೂರ್ತ, ವ್ರತ ಕತೆ ಇಲ್ಲಿದೆ..

ವೃಶ್ಚಿಕ ರಾಶಿ
ಮಾಲವ್ಯ ಯೋಗದ ಸಮಯದಲ್ಲಿ, ವೃಶ್ಚಿಕ ರಾಶಿಯವರು ಚಂದ್ರನಿಗೆ ಅರ್ಘ್ಯವನ್ನು ಸಲ್ಲಿಸಿ. ಈ ಸಂದರ್ಭದಲ್ಲಿ ನೀರಿನಲ್ಲಿ ಎರಡು ಚಮಚ ಹಸಿ ಹಾಲನ್ನು ಸೇರಿಸಿ ಚಂದ್ರ ದೇವನ ಮಂತ್ರಗಳನ್ನು ಪಠಿಸಬೇಕು.

ಧನು ರಾಶಿ
ಧನು ರಾಶಿಯವರು ಮಾಲವ್ಯ ಯೋಗದ ಸಮಯದಲ್ಲಿ ತುಳಸಿಯನ್ನು ಪ್ರತಿದಿನ ಪೂಜಿಸಬೇಕು ಮತ್ತು ಮನೆಯ ಈಶಾನ್ಯ ಮೂಲೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು.

ಮಕರ ರಾಶಿ
ಮಕರ ರಾಶಿಯವರು ಮಾಲವ್ಯ ಯೋಗದ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ನಿಜವಾದ ಹೃದಯದಿಂದ ಕೆಂಪು ಹೂವುಗಳನ್ನು ಅರ್ಪಿಸಿ ಪೂಜಿಸಬೇಕು. ಇದರ ನಂತರ, ನೀರಿನಲ್ಲಿ ಹಸಿ ಹಾಲನ್ನು ಬೆರೆಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ.

ಕುಂಭ ರಾಶಿ
ಕುಂಭ ರಾಶಿಯವರು ಈ ಯೋಗದ ಸಮಯದಲ್ಲಿ ಪ್ರತಿದಿನ ಶಿವನನ್ನು ಪೂಜಿಸಬೇಕು ಮತ್ತು ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಬಡವರಿಗೆ ಕಪ್ಪು ಬಟ್ಟೆ ದಾನ ಮಾಡಿ.

ಮೀನ ರಾಶಿ
ಮೀನ ರಾಶಿಯವರು ಮಾಲವ್ಯ ಯೋಗದ ಸಮಯದಲ್ಲಿ ಬಿಳಿ ಚಂದನ, ತುಪ್ಪ, ಹಾಲು, ಮೊಸರು ಇತ್ಯಾದಿಗಳನ್ನು ಬಡವರಿಗೆ ಅಥವಾ ದೇವಸ್ಥಾನದಲ್ಲಿ ದಾನ ಮಾಡಬೇಕು. ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ ಮತ್ತು ಹಣೆಯ ಮೇಲೆ ಕುಂಕುಮ ತಿಲಕವನ್ನು ಹಚ್ಚಿ.

click me!