ಹಣವೋ, ಪ್ರೀತಿಯೋ ಎಂದರೆ ಪ್ರೀತಿಯನ್ನೇ ಆರಿಸಿಕೊಳ್ಳುವ ಭಾವುಕ ರಾಶಿಗಳಿವು..

By Suvarna News  |  First Published Jan 23, 2023, 11:38 AM IST

ಹಣ ಯಾರಿಗೆ ತಾನೇ ಬೇಡ? ಆದರೂ ಕೆಲವರಿಗೆ ಬದುಕಿನ ಪ್ರಿಯಾರಿಟೀಸ್ ಬೇರೇನೇ ಇರುತ್ತದೆ. ಹಣ ಮತ್ತು ಪ್ರೀತಿ ಎರಡನ್ನು ಎದುರಿಟ್ಟು ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳಿ ಎಂದರೆ ಪ್ರೀತಿಯನ್ನು ಕೂಡಾ ಆಯ್ಕೆ ಮಾಡಿಕೊಳ್ಳುವಂತ ಮನಸ್ಥಿತಿ ಇನ್ನೂ ಉಳಿದಿದೆ ಎಂಬುದು ಸಮಾಧಾನಕರ ಸಂಗತಿ. ಹೀಗೆ ಹಣಕ್ಕಿಂತ ಪ್ರೀತಿಯೇ ಹೆಚ್ಚು ಎನ್ನುವವರು ಸಾಮಾನ್ಯವಾಗಿ ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ.
 


ಪ್ರೀತಿಯ ಶಕ್ತಿ ಅಪಾರ. ಇದು ಕಠಿಣವಾದ ಅಡೆತಡೆಗಳನ್ನು ಕೂಡಾ ಬದಿಗೆ ಸರಿಸಿ ಒಬ್ಬ ವ್ಯಕ್ತಿಯನ್ನು ಪ್ರೀತಿಸುವಂತೆ ಮಾಡುತ್ತದೆ. ಪ್ರೀತಿಯು ತುಂಬಾ ಸಾಂತ್ವನದ ಭಾವನೆಯಾಗಿದೆ. ಪ್ರೀತಿಸಿದವರನ್ನೇ ವಿವಾಹವಾಗಲು ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು. ಹಣ ಎಷ್ಟೇ ಶಕ್ತಿಶಾಲಿಯಾಗಿರಲಿ ಅಥವಾ ಪ್ರಭಾವಶಾಲಿಯಾಗಿರಲಿ, ಪ್ರೀತಿಗೆ ಹಣದ ಮುಂದೂ ಗೆಲ್ಲುವ ಶಕ್ತಿ ಇರುತ್ತದೆ.  ಹಣಕ್ಕಿಂತ ಪ್ರೀತಿಯನ್ನು ಆಯ್ಕೆ ಮಾಡುವ ವ್ಯಕ್ತಿಗಳು ಸಾಮಾನ್ಯವಾಗಿ ಈ ರಾಶಿಚಕ್ರಗಳಿಗೆ(zodiac signs) ಸೇರಿರುತ್ತಾರೆ.  

ಕರ್ಕಾಟಕ ರಾಶಿ(Cancer)
ಅವರಿಗೆ ಪ್ರೀತಿಗಿಂತ ಮುಖ್ಯವಾದುದು ಯಾವುದೂ ಇಲ್ಲ. ಅವರು ಭಾವನೆಗಳನ್ನು ಅತ್ಯುನ್ನತ ಕ್ರಮದಲ್ಲಿ ಗೌರವಿಸುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರು ನೋಯುವುದನ್ನು ನೋಡಲಾಗುವುದಿಲ್ಲ. ಅವರು ಸಾವಿರಕ್ಕೂ ಹೆಚ್ಚು ಬಾರಿ ಪ್ರೀತಿಯನ್ನು ಆರಿಸಿಕೊಳ್ಳುವುದರಿಂದ ಹಣವನ್ನು ಆಯ್ಕೆ ಮಾಡುವ ಆಲೋಚನೆ ಅವರ ಹತ್ತಿರವೂ ಬರುವುದಿಲ್ಲ.

Tap to resize

Latest Videos

ಸಿಂಹ  ರಾಶಿ(Leo)
ಅವರು ಕೆಲವೊಮ್ಮೆ ಹಣದ ಬಗ್ಗೆ ದುರಾಸೆ ಹೊಂದಿರಬಹುದು. ಆದರೆ ಹಣ ಮತ್ತು ಪ್ರೀತಿಯ ನಡುವೆ ಆಯ್ಕೆಯನ್ನು ನೀಡಿದರೆ, ಅವರು ಯಾವಾಗಲೂ ಎರಡನೇ ಆಲೋಚನೆಯಿಲ್ಲದೆ ಪ್ರೀತಿಯನ್ನು ಆರಿಸಿಕೊಳ್ಳುತ್ತಾರೆ. ಅವರು ಆರ್ಥಿಕವಾಗಿ ಕಷ್ಟದಲ್ಲಿದ್ದರೂ ಹೆದರುವುದಿಲ್ಲ, ಅವರು ತಮ್ಮ ಸಂಗಾತಿಯ ಭಾವನೆಗೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ ನೀಡುತ್ತಾರೆ.

Name astro: ಈ ಹೆಸರಿನ ಹುಡುಗಿಯರು ಅದೃಷ್ಟದ ಬೆಡಗಿಯರು

ಕನ್ಯಾ ರಾಶಿ(Virgo)
ಅವರು ಪ್ರಾಯೋಗಿಕ ಮತ್ತು ತಾರ್ಕಿಕ ಸ್ವಭಾವದವರು. ಆದರೆ ಇದು ಹೃದಯದ ವಿಷಯಗಳನ್ನು ಒಳಗೊಂಡಿದ್ದರೆ, ಕನ್ಯಾ ರಾಶಿಯವರು ಯಾವುದೇ ದಿನ ಪ್ರೀತಿಯನ್ನು ಆರಿಸಿಕೊಳ್ಳುತ್ತಾರೆ. ತಮ್ಮ ಪ್ರೀತಿಪಾತ್ರರು ಅಪಾಯದಲ್ಲಿದ್ದರೆ ಅಥವಾ ಅವರಿಗೆ ಹಣದ ಅಗತ್ಯವಿದ್ದರೆ ಅವರು ಲಕ್ಷಾಂತರ ರುಪಾಯಿಗಳನ್ನು ಕಳೆದುಕೊಳ್ಳಲೂ ಹೆದರುವುದಿಲ್ಲ. ಕನ್ಯಾ ರಾಶಿಯವರು ತಾವಿಷ್ಟ ಪಡುವವರಿಗಾಗಿ ಪ್ರಾಯೋಗಿಕತೆಯನ್ನು ಬದಿಗಿಡಬಲ್ಲರು. 

ಧನು ರಾಶಿ(Sagittarius)
ಅವರು ಪ್ರೀತಿ ಮತ್ತು ಬಯಕೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಅವರು ಹಣದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಹಣವು ಒಂದು ದಿನ ಖಾಲಿಯಾಗುತ್ತದೆ, ಪ್ರೀತಿ ಮಾತ್ರ ಕಡೆವರೆಗೂ ಉಳಿಯುತ್ತದೆ ಎಂದು ಅವರು ನಂಬುತ್ತಾರೆ. ಪ್ರೀತಿಯನ್ನೂ ಎಂದಿಗೂ ಕಳೆದುಕೊಳ್ಳುವುದಿಲ್ಲ. ಇವರು ಹುಡುಕುವ ನಿರಂತರ ಒಡನಾಡಿ ಪ್ರೀತಿ. ಯಾರಾದರೂ ತಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ತಿಳಿದುಕೊಳ್ಳುವುದರಲ್ಲಿ ಅವರು ಆರಾಮವನ್ನು ಕಂಡುಕೊಳ್ಳುತ್ತಾರೆ.

ಕುಂಭ ರಾಶಿ(Aquarius)
ಅವರು ತಮ್ಮ ಆತ್ಮೀಯರನ್ನು ಒಳಗೊಂಡಿರುವ ತಮ್ಮದೇ ಆದ ಪುಟ್ಟ ಜಗತ್ತಿನಲ್ಲಿ ಉಳಿಯಲು ಇಷ್ಟಪಡುತ್ತಾರೆ. ಅವರು ಆರಾಮದಾಯಕ ಮತ್ತು ಉತ್ತಮ ಜೀವನಶೈಲಿಯನ್ನು ಪ್ರೀತಿಸುತ್ತಿದ್ದರೂ ಸಹ, ಅವರು ತಮ್ಮ ಪ್ರೀತಿಪಾತ್ರರನ್ನು ಹಣಕ್ಕಾಗಿ ತ್ಯಾಗ ಮಾಡುವುದಿಲ್ಲ. ಅವರು ತುಂಬಾ ಮುಗ್ಧರು ಮತ್ತು ಹೃದಯವಂತರು. ಪ್ರೀತಿಯ ವಿಷಯದಲ್ಲಿ ಪ್ರಬುದ್ಧರು. ತಮ್ಮ ಪ್ರೀತಿಪಾತ್ರರ ಸಂತೋಷಕ್ಕಾಗಿ ತಮ್ಮ ಉಳಿತಾಯದ ಹಣವನ್ನೆಲ್ಲ ಕ್ಷಣವೂ ಯೋಚಿಸದೆ ನೀಡಬಲ್ಲ ಗುಣ ಇವರದು.

Venus transit: ಇಂದು ಕುಂಭಕ್ಕೆ ಶುಕ್ರ ಪ್ರವೇಶ, 3 ರಾಶಿಗಳಿಗೆ ಶುರು ಶುಭದಿನ

ಈ ರಾಶಿ ಚಕ್ರದ ಚಿಹ್ನೆಗಳು ಪ್ರೀತಿಗಿಂತ ಹಣವನ್ನು ಆಯ್ಕೆ ಮಾಡುತ್ತವೆ
ಮೇಷ, ವೃಷಭ, ಮಿಥುನ, ತುಲಾ, ವೃಶ್ಚಿಕ ರಾಶಿ, ಮಕರ ಮತ್ತು ಮೀನ ರಾಶಿಯವರು ತಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಹೆಚ್ಚು ಗಮನ ಹರಿಸಿರುವುದರಿಂದ ಪ್ರೀತಿಗಿಂತ ಹಣವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅವರು ತಮ್ಮ ಮತ್ತು ಯಶಸ್ಸಿನ ನಡುವೆ ಭಾವನೆಗಳು ಮತ್ತು ಪ್ರೀತಿ ಬರಲು ಬಯಸುವುದಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!