ಇವರು ‘ಬಂಗಾರ ಮನುಷ್ಯ’ರು; ಆದರ್ಶವೇ ಈ ರಾಶಿಯವರ ಜೀವಾಳ..!

By Sushma HegdeFirst Published Jun 26, 2023, 12:38 PM IST
Highlights

ಕೆಲವು ಜನರು ತುಂಬ ಆದರ್ಶವಾಗಿ ಬದುಕುತ್ತಾರೆ. ಎಂತಹ ಸಂದರ್ಭ ಬಂದರೂ ತಮ್ಮ ನೈತಿಕತೆಯನ್ನು ಬಿಟ್ಟುಕೊಡಲ್ಲ. ತಮ್ಮ ನಿಲುವುಗಳಿಗೆ ಅವರು ಸದಾ ಬದ್ಧರಾಗಿರುತ್ತಾರೆ. ಅದಕ್ಕೆ ಕಾರಣ ರಾಶಿ ಚಕ್ರ.

ಕೆಲವು ಜನರು ತುಂಬ ಆದರ್ಶವಾಗಿ ಬದುಕುತ್ತಾರೆ. ಎಂತಹ ಸಂದರ್ಭ ಬಂದರೂ ತಮ್ಮ ನೈತಿಕತೆಯನ್ನು ಬಿಟ್ಟುಕೊಡಲ್ಲ. ತಮ್ಮ ನಿಲುವುಗಳಿಗೆ ಅವರು ಸದಾ ಬದ್ಧರಾಗಿರುತ್ತಾರೆ. ಅದಕ್ಕೆ ಕಾರಣ ರಾಶಿ ಚಕ್ರ. ಈ ಕುರಿತು ಇಲ್ಲಿದೆ ಮಾಹಿತಿ.

ಮನುಷ್ಯನಿಗೆ ಆದರ್ಶ ಎಂಬುದು ನಹು ಮುಖ್ಯ. ಅವನ ಆ ಗುಣ ಎತ್ತರದ ಸ್ಥಾನಕ್ಕೆ ತಲುಪಿಸುತ್ತದೆ. ಕೆಲವರು ನೈತಿಕತೆಗೆ ಬದ್ಧರಾಗಿ ಇರುತ್ತಾರೆ. ತಾವು ನಂಬಿದ ತತ್ವ-ಸಿದ್ಧಾಂತಗಳನ್ನು ಎಂತಹ ಸಂದರ್ಭ ಬಂದರೂ ಬಿಡಲ್ಲ. ಅಂತಹ ಬಂಗಾರದ ಗುಣ ಇರುವ ರಾಶಿ ಚಕ್ರಗಳು ಯಾವುವು? ಇಲ್ಲಿದೆ ಡಿಟೇಲ್ಸ್. 

Latest Videos

 

ಕನ್ಯಾ ರಾಶಿ (Virgo) 

ಕನ್ಯಾ ರಾಶಿಯವರು ಜವಾಬ್ದಾರಿಯುತ ವ್ಯಕ್ತಿಗಳು. ಇವರು ಪ್ರಾಮಾಣಿಕತೆ (Honesty) , ನ್ಯಾಯಸಮ್ಮತೆ ಮತ್ತು ಸಮಗ್ರತೆಯನ್ನು ಗೌರವಿಸುತ್ತಾರೆ. ಮತ್ತು ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಈ ತತ್ವಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಇವರು ಕೆಲವೊಮ್ಮೆ ಗಂಭೀರ ಮತ್ತು ಶಾಂತವಾಗಿರಬಹುದು. ಆದರೆ ನಾವು ನಂಬಿದ ಸಿದ್ಧಾಂತ (theory) ಗಳನ್ನು ಎಂದಿಗೂ ಬಿಡಲ್ಲ.

 

ತುಲಾ ರಾಶಿ (Libra) 

ತುಲಾ ರಾಶಿಯವರು ಶಾಂತಿ (Shanti)  ಪಾಲಕರು. ಅವರು ನ್ಯಾಯ ಮತ್ತು ಸಾಮರಸ್ಯವನ್ನು ಗೌರವಿಸುತ್ತಾರೆ. ಅವರು ನ್ಯಾಯದ ಕುರಿತು ತುಂಬಾ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಇತರರನ್ನು ಗೌರವ ಮತ್ತು ಸಮಾನತೆಯಿಂದ ನೋಡುತ್ತಾರೆ. ಇವರು ಬಹು ದೃಷ್ಟಿಕೋನಗಳನ್ನು ನೋಡುವ ಸಾಮರ್ಥ್ಯ (ability) ಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ನೈತಿಕವಾಗಿ ನ್ಯಾಯಯುತ ಮತ್ತು ಸಮತೋಲಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾವಾಗಲೂ ಇತರರ ಯೋಗಕ್ಷೇಮ (well-being) ವನ್ನು ತಮ್ಮ ಸ್ವಂತಕ್ಕಿಂತ ಜಾಸ್ತಿ ವಿಚಾರಿಸುತ್ತಾರೆ. ಬೇರೆಯವರ ಕಾಳಜಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. 

 

ಮಕರ ರಾಶಿ (Capricorn)

ಮಕರ ರಾಶಿಯವರು ತಮ್ಮ ಶಿಸ್ತಿನ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಸಮಗ್ರತೆ (Integrity) ಯನ್ನು ಗೌರವಿಸುತ್ತಾರೆ ಮತ್ತು ಅವರ ತತ್ವಗಳನ್ನು ಎತ್ತಿಹಿಡಿಯಲು ಬದ್ಧರಾಗಿದ್ದಾರೆ. ಇವರು ಸರಿ ಮತ್ತು ತಪ್ಪು ಯಾವುದು ಎಂಬ ಸ್ಪಷ್ಟ ಪ್ರಜ್ಞೆಯನ್ನು ಹೊಂದಿರುತ್ತಾರೆ. ಇವರು ಸವಾಲಿನ ಸಂದರ್ಭಗಳಲ್ಲಿ ಸಹ ನೈತಿಕವಾಗಿ ಸರಿಯಾದದ್ದನ್ನು ಮಾಡುತ್ತಾರೆ. ಇವರು ಸಾಮಾನ್ಯವಾಗಿ ತುಂಬಾ ಒಳ್ಳೆಯವರು ಮತ್ತು ಉದಾರ ಜನರು. ಪ್ರೀತಿಪಾತ್ರ (lovable) ರಿಗೆ ಸಹಾಯ ಮಾಡಲು ಯಾವಾಗಲೂ ಮುಂದಿರುತ್ತಾರೆ.

ಇವರು ಬೆಕ್ಕು-ನಾಯಿಯಂತೆ ಕಚ್ಚಾಡೋ ಗಂಡ-ಹೆಂಡತಿ; ಇದು ಯಾವ ರಾಶಿಯವರ ದೋಷ ಗೊತ್ತಾ?

 

ಕುಂಭ ರಾಶಿ (Aquarius) 

ಇವರು ಸಾಮಾಜಿಕ ನ್ಯಾಯದ ಬಲವಾದ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಸಮಾನತೆ (Equality) ಗಾಗಿ ಹೋರಾಡುತ್ತಾರೆ. ಕುಂಭ ರಾಶಿಯವರು ಮುಕ್ತ ಮನಸ್ಸಿನವರು ಮತ್ತು ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ. ಆಗಾಗ್ಗೆ ತಮ್ಮ ತತ್ವಗಳನ್ನು ಉತ್ತಮ ಶಕ್ತಿಯಾಗಿ ಬಳಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಆದ್ಯತೆ ನೀಡುತ್ತಾರೆ ಮತ್ತು ಅವರಿಗಾಗಿ ಅರ್ಥಪೂರ್ಣ (Meaningful) ವಾದ ಕೆಲಸಗಳನ್ನು ಮಾಡಲು ತಯಾರಿರುತ್ತಾರೆ.

 

ಮೀನ (fish) 

ಇವರು ಸಹಾನುಭೂತಿ (Sympathy) ಹೊಂದಿರುವ ಜನರು. ಇವರಿಗೆ ತುಂಬಾ ನೈತಿಕತೆ ಇರುತ್ತದೆ. ಮತ್ತು ಇತರರ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ. ಮೀನ ರಾಶಿಯವರು ಅಗತ್ಯವಿರುವವರಿಗೆ ಸಹಾಯ ಮಾಡುವ ಇಚ್ಛೆ ಹೊಂದಿದ್ದಾರೆ. ಇವರು ಪ್ರೀತಿ, ಸಹಾನುಭೂತಿ ಮತ್ತು ತಿಳುವಳಿಕೆ (understanding) ಯಿಂದ ಜೀವನ  ನಡೆಸುತ್ತಾರೆ.

 

ಇವರು ನೈತಿಕತೆ ಪಾಲಿಸಲ್ಲ

ಮೇಷ, ವೃಷಭ (Taurus) , ಮಿಥುನ, ಕರ್ಕ, ಸಿಂಹ (lion) , ವೃಶ್ಚಿಕ ಮತ್ತು ಧನು ರಾಶಿ (Sagittarius) ಯವರು ನಿಜವಾಗಿಯೂ ನೈತಿಕತೆಯನ್ನು ಪಾಲಿಸುವುದಿಲ್ಲ. ಅವರು ತಮಗೆ ಅನಿಸಿದ್ದನ್ನು ಮಾತ್ರ ಮಾಡುತ್ತಾರೆ.

click me!