ಗಂಡ-ಹೆಂಡತಿ ನಡುವೆ ಪರಸ್ಪರ ತಿಳುವಳಿಕೆ, ಹೊಂದಾಣಿಕೆ (adjustment) , ಕಾಳಜಿ ಹಾಗೂ ಪ್ರೀತಿ ಇರಬೇಕು. ಕೆಲವೊಮ್ಮೆ ಹೊಂದಾಣಿಕೆಯ ಸಮಸ್ಯೆ ಉಂಟಾಗಿ ಸಂಬಂಧ (relationship) ವು ಬಹುಬೇಗ ಹಾಳಾಗುತ್ತದೆ. ಇದಕ್ಕೆ ರಾಶಿ ಚಕ್ರವೂ ಕೂಡ ಒಂದು ಕಾರಣ ಎನ್ನಲಾಗಿದೆ.
ಗಂಡ-ಹೆಂಡತಿ ನಡುವೆ ಪರಸ್ಪರ ತಿಳುವಳಿಕೆ, ಹೊಂದಾಣಿಕೆ (adjustment) , ಕಾಳಜಿ ಹಾಗೂ ಪ್ರೀತಿ ಇರಬೇಕು. ಅಂದಾಗ ಮಾತ್ರ ಉತ್ತಮವಾಗಿ ದಾಂಪತ್ಯ ಜೀವನ (married life) ನಡೆಯಲಿದೆ. ದಂಪತಿಗಳ ನಡುವೆ ಎಂದಿಗೂ ಬೇಸರ, ಮುನಿಸು, ಮನಃಸ್ತಾಪ (Disappointment) ಬರಬಾರದು. ಇದರಿಂದ ಹೊಂದಾಣಿಕೆಯ ಸಮಸ್ಯೆ ಉಂಟಾಗಿ ಸಂಬಂಧ (relationship) ವು ಬಹುಬೇಗ ಹಾಳಾಗುತ್ತದೆ. ಇದಕ್ಕೆ ರಾಶಿ ಚಕ್ರವೂ ಕೂಡ ಒಂದು ಕಾರಣ ಎನ್ನಲಾಗಿದೆ.
ದಾಂಪತ್ಯ ಎನ್ನುವುದು ಅತ್ಯಂತ ಸೂಕ್ಷ್ಮವಾದ ಸಂಬಂಧ. ಅದು ಹೊಂದಾಣಿಕೆ, ನಂಬಿಕೆ, ಪ್ರೀತಿ ಹಾಗೂ ತ್ಯಾಗ (Sacrifice) ದ ಮೇಲೆ ನಿಂತಿರುತ್ತದೆ. ಕೆಲ ರಾಶಿಯವರು ತಮ್ಮ ಮೂರ್ಖತನದಿಂದ ಅದನ್ನು ಹಾಳು ಮಾಡಿಕೊಳ್ಳುತ್ತಾರೆ. ದಾಂಪತ್ಯವನ್ನು ಹಾಳು ಮಾಡುವ ರಾಶಿಚಕ್ರ (Zodiac) ಚಿಹ್ನೆಗಳು ಯಾವುವು ಎಂಬ ಮಾಹಿತಿ ಇಲ್ಲಿವೆ.
ಮೇಷ ರಾಶಿ (Aries)
ಮೇಷ ರಾಶಿಯವರ ದಾಂಪತ್ಯದಲ್ಲಿ ಹೆಚ್ಚು ಬಿರುಕು (crack) ಮೂಡುವ ಸಾಧ್ಯತೆ ಇದೆ. ಈ ರಾಶಿಯವರ ದಿಢೀರ್ ನಿರ್ಧಾರ ಹಾಗೂ ಸ್ವಾತಂತ್ರ್ಯದ ವಿಚಾರವಾಗಿ ಸಂಗಾತಿಯೊಂದಿಗೆ ಕಲಹ (strife) ಶುರುವಾಗಲಿದೆ. ಇದು ವಿಚ್ಚೇದನ (Divorce)ಕ್ಕೂ ಕಾರಣವಾಗಬಹುದು. ಪರಸ್ಪರ ಸರಿಯಾದ ಮಾತುಕತೆ ಮತ್ತು ರಾಜಿ ಮಾಡಿಕೊಳ್ಳುವುದರಿಂದ ಇವರು ತಮ್ಮ ಸಂಬಂಧವನ್ನು ಉಳಿಸಿಕೊಳ್ಳಬಹುದು.
ವೃಷಭ ರಾಶಿ (Taurus)
ಇವರು ಹಠಮಾರಿ (Stubborn) ಗಳಾಗಿದ್ದು, ಯಾವುದೇ ಬದಲಾವಣೆಗೆ ಒಪ್ಪಿಕೊಳ್ಳುವುದಿಲ್ಲ ಹಾಗೂ ಹೊಂದಿಕೊಂಡು ಹೋಗುವುದಿಲ್ಲ. ಇದು ಮದುವೆಯಲ್ಲಿ ಜಗಳಕ್ಕೆ ಕಾರಣವಾಗಬಹುದು. ಆದರೆ ಮುಕ್ತ ಮನಸ್ಸಿನಿಂದ ಮತ್ತು ಹೊಂದಿಕೊಳ್ಳುವ ಮನಸ್ಸು ಮಾಡಿದರೆ ಸಮಸ್ಯೆ (problem) ಯಿಂದ ಪಾರಾಗಬಹುದು.
ಚಾಣಕ್ಯ ನೀತಿ: ಪ್ರೇಮ ಬಂಧ ಗಟ್ಟಿಯಾಗಲು ಏನು ಮಾಡಬೇಕು?
ಸಿಂಹ ರಾಶಿ (Leo)
ಈ ರಾಶಿಯವರಿಗೆ ಗಮನ ಮತ್ತು ಗುರುತಿಸುವಿಕೆಗೆ ಬಲವಾದ ಅವಶ್ಯಕತೆಯಿದೆ. ಈ ಅಗತ್ಯವು ಅವರ ಸಂಗಾತಿಯು ಸರಿಯಾಗಿ ಗಮನಿಸದಿದ್ದರೆ ಅದು ಜಗಳಕ್ಕೆ ಕಾರಣವಾಗಬಹುದು. ಹಾಗೂ ವಿಚ್ಚೇದನದವರೆಗೂ ಹೋಗಬಹುದು. ದಂಪತಿ (couple) ನಡುವೆ ಪರಸ್ಪರ ಬೆಂಬಲ ಮತ್ತು ಮೆಚ್ಚುಗೆ ಇರಲಿ.ಇದರಿಂದ ನಿಮ್ಮ ದಾಂಪತ್ಯ ಜೀವನ (life) ಸುಗಮವಾಗಿ ಸಾಗಲಿದೆ.
ವೃಶ್ಚಿಕ ರಾಶಿ (Scorpio)
ಈ ರಾಶಿಯವರು ಸಿಕ್ಕಾಪಟ್ಟೆ ಪ್ರಾಮಾಣಿಕ (honest) ರು, ಅಷ್ಟೇ ಕಹಿ ಮಾತುಗಳಿಗೆ ಹೆಸರುವಾಸಿ. ಇದರಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ನಂಬಿಕೆ, ಮುಕ್ತ ಸಂವಹನ ಮತ್ತು ಅಭದ್ರತೆಗಳ ಮೂಲಕ ಈ ಸಮಸ್ಯೆ (problem) ಪರಿಹರಿಸಿಕೊಳ್ಳಬಹುದು.
ಗರುಡ ಪುರಾಣದ ಪ್ರಕಾರ ಜೀವನದ ಯಶಸ್ಸಿನ ಮಂತ್ರ ಯಾವುದು ?
ಧನು ರಾಶಿ (Sagittarius)
ಈ ರಾಶಿಯವರು ಕೆಲವೊಮ್ಮೆ ಅಸಭ್ಯ ವರ್ತನೆ (rude behavior) ತೋರಬಹುದು, ಉತ್ತಮ ಸಲಹೆಗಳನ್ನು ತಿರಸ್ಕರಿಸಬಹುದು. ಮದುವೆಗೆ ಬದ್ಧತೆಯೊಂದಿಗೆ ಈ ಅಗತ್ಯಗಳನ್ನು ಗೌರವಿಸದಿದ್ದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಉತ್ತಮ ಸಂವಹನ (Good communication), ರಾಜಿಯಿಂದ ತಮ್ಮ ಸಂಬಂಧ ಗಟ್ಟಿಗೊಳಿಸಬಹುದು.
ದಾಂಪತ್ಯದ ಬಗ್ಗೆ ಜಾಗರೂಕರಾಗಿರುವ ರಾಶಿ ಚಕ್ರಗಳು
ಮಿಥುನ (Gemini) , ಕರ್ಕ (Cancer), ಕನ್ಯಾ (Virgo), ತುಲಾ (Libra), ಮಕರ, ಕುಂಭ ಮತ್ತು ಮೀನ ರಾಶಿಯವರು ತಮ್ಮ ದಾಂಪತ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಅವರು ತಮ್ಮ ದಾಂಪತ್ಯ (marriage) ವನ್ನು ಹಾಳು ಮಾಡಲು ಯಾವುದನ್ನೂ ಅಥವಾ ಯಾರನ್ನೂ ಬಿಡುವುದಿಲ್ಲ.