ಈ 5 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೇ!

By Suvarna News  |  First Published May 22, 2022, 4:10 PM IST

ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಕೆಲವರಿಗೆ ಬಹಳ ಚಿಕ್ಕ ವಯಸ್ಸಲ್ಲೇ ವಿವಾಹವಾಗುವ ಇಚ್ಚೆ ಇದ್ದರೆ, ಮತ್ತೆ ಕೆಲವರಿಗೆ ಮದುವೆ ಬಗ್ಗೆ ಅಷ್ಟೇನು ಆಸಕ್ತಿ ಇರುವುದಿಲ್ಲ. ಮದುವೆ ಜೀವನದ ಒಂದು ಭಾಗವೇ ಹೊರತು ಅದೇ ಜೀವನವಲ್ಲ ಎನ್ನುತ್ತಾರೆ. ಹೀಗೆ ವಿವಾಹದ ಬಗ್ಗೆ ಆಸಕ್ತಿ ಕಡಿಮೆ ಇರುವ ರಾಶಿಚಕ್ರಗಳು ಯಾವುವು ನೋಡೋಣ. 


ಮದುವೆ(marriage) ಎಂದರೆ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ, ಒಂದೊಂದು ಕನಸು.. ಕೆಲವರಿಗೆ ಸಂಗಾತಿ, ಮಕ್ಕಳೇ ಜೀವನ.. ಸುಖೀ ಕುಟುಂಬವೇ ಬದುಕು, ಮತ್ತೆ ಕೆಲವರಿಗೆ ವೈವಾಹಿಕ ಜೀವನ ಏನಂಥ ದೊಡ್ಡದಲ್ಲ, ವೃತ್ತಿ ಜೀವನದಲ್ಲಿ ಬೆಳೆಯುವುದು, ಮತ್ತಷ್ಟು ಓದುವುದು, ಯಶಸ್ಸು ಪಡೆಯುವುದೇ ಮುಖ್ಯವೆನಿಸುತ್ತದೆ. ಅಪರೂಪಕ್ಕೆ ಕೆಲವರು ಮಾತ್ರ ಎರಡನ್ನೂ ಇಷ್ಟ ಪಟ್ಟು ಬ್ಯಾಲೆನ್ಸ್ ಮಾಡುತ್ತಾರೆ. 

ಕೆಲವರು ಹರೆಯದಿಂದಲೇ ಮದುವೆ ಮಕ್ಕಳು ಎಂದು ಕನಸು ಕಂಡರೆ, ಮತ್ತೆ ಕೆಲವರು ಬದುಕಲ್ಲಿ ಬೆಳೆಯುವ ಬಗ್ಗೆಯೇ ಯೋಚಿಸುತ್ತಾರೆ.  ಮತ್ತೆ ಕೆಲವರು ವಿವಾಹವೆಂದರೆ ಕಿರಿಕಿರಿ, ಸ್ವಾತಂತ್ರ್ಯಹರಣ, ಸಮಸ್ಯೆಗಳ ತೋರಣ ಎಂದುಕೊಂಡಿರುತ್ತಾರೆ. ಮದುವೆಯಾದರೆ ಸಂತೋಷ ಪಡಲು ಸಾಧ್ಯವೇ ಇಲ್ಲ, ತಮಗೆ ಬೇಕಾದಂತೆ ಬದುಕುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾರೆ. ಹೀಗೆ ವಿವಾಹದ ಬಗ್ಗೆ ಕಡಿಮೆ ಆಸಕ್ತಿ ಹೊಂದಿರುವ ರಾಶಿಚಕ್ರಗಳು ಯಾವೆಲ್ಲ ನೋಡೋಣ. 

Tap to resize

Latest Videos

ಮೇಷ ರಾಶಿ(Aries)
ಮೇಷ ರಾಶಿಯವರು ಸ್ವಲ್ಪ ಹಠ ಸ್ವಭಾವದವರು. ನಾಯಕತ್ವ ಗುಣದವರು. ಸ್ವತಂತ್ರರಾಗಿರಲು ಇಷ್ಟಪಡುವವರು ಮತ್ತು ತಮಗೆ ಅನ್ನಿಸಿದ್ದನ್ನು ಮಾಡುವವರು. ಹಾಗಾಗಿ ಈ ರಾಶಿಯವರಿಗೆ ತಮ್ಮನ್ನು ಯಾರಾದರೂ ಪ್ರಶ್ನಿಸುವುದು ಇಷ್ಟವಾಗುವುದಿಲ್ಲ. ತಮ್ಮ ಮೇಲೆ ನಿಯಂತ್ರಣ ಸಾಧಿಸಲು ಬಯಸುವುದು ಕೋಪ ತರಿಸುತ್ತದೆ. ಮತ್ತೊಬ್ಬರಿಗೆ ಸಮಜಾಯಿಷಿ ನೀಡುತ್ತಾ ಕೂರುವುದು ಇವರ ಸ್ವಭಾವವಲ್ಲ. ಹಾಗಾಗಿ ಮದುವೆಯ ಬಗ್ಗೆ ಈ ರಾಶಿಯ ವ್ಯಕ್ತಿಗಳಿಗೆ ಆಸಕ್ತಿ ಕಡಿಮೆ.

Vastu Tips: ತುಪ್ಪದ ದೀಪ ಹಚ್ಚುವ ಮುನ್ನ ತಪ್ಪದೇ ಈ ನಿಯಮ ಪಾಲಿಸಿ

ವೃಶ್ಚಿಕ ರಾಶಿ(Scorpio)
ಈ ರಾಶಿಯವರಿಗೆ ಮದುವೆಯ ಬಗ್ಗೆ ಯಾವುದೇ ರೀತಿಯ ವಿಶೇಷ ಯೋಚನೆಗಳಿರುವುದಿಲ್ಲ. ಮದುವೆಯಾದ ಮೇಲೆ ಜೀವನದಲ್ಲಿ ಬೇಸರ ಮತ್ತು ಏಕತಾನತೆ ಆವರಿಸುತ್ತದೆ, ಏನಾದರೂ ಕೆಡುಕಾದರೆ ಎಂಬ ಅನಗತ್ಯ ಭಯ ಇವರನ್ನು ಕಾಡುತ್ತಿರುತ್ತದೆ. ಸಂಗಾತಿಯ ನಿರ್ಬಂಧಗಳ ಬಗ್ಗೆ ಯೋಚಿಸಿಯೇ ಸುಸ್ತಾಗುವ ಸ್ವಭಾವ ಇವರದ್ದು. ಮತ್ತೊಬ್ಬರಿಗಾಗಿ ತಮ್ಮನ್ನು ಬದಲಾಯಿಸಿಕೊಳ್ಳುವವರಲ್ಲ. ಹಾಗಾಗಿ ಮದುವೆಯನ್ನು ಇವರು ಸಾಧ್ಯವಾದಷ್ಟು ಮುಂದೆ ಹಾಕುತ್ತಿರುತ್ತಾರೆ. 

ಕನ್ಯಾ ರಾಶಿ(Virgo)
ಈ ರಾಶಿಯವರು ತಮ್ಮ ಗುರಿಯನ್ನು ಸಾಧಿಸುವ ಬಗ್ಗೆಯೇ ಸದಾ ಗಮನ ಹರಿಸುತ್ತಿರುತ್ತಾರೆ. ಅದೇ ಅವರ ಪ್ರಪಂಚವಾಗಿರುತ್ತದೆ. ಹಾಗಾಗಿ ಮದುವೆಯ ಬಗ್ಗೆ ಯೋಚಿಸುವುದು ಇವರಿಗೆ ಸಮಯ ವ್ಯರ್ಥದಂತೆ ಅನಿಸುತ್ತದೆ. ಅಷ್ಟೇ ಅಲ್ಲದೆ ಒಮ್ಮೆ ತಾವಂದುಕೊಂಡಿರುವುದನ್ನೆಲ್ಲ ಸಾಧಿಸಿದ ನಂತರ ಮದುವೆಯಾಗೋಣ ಎಂಬುದು ಇವರ ಭಾವನೆ. ವಿವಾಹವಾದ ನಂತರವೂ ಎಲ್ಲ ಕನಸುಗಳನ್ನು ಸಾಧಿಸಬಹುದೆಂಬ ನಂಬಿಕೆ ಇವರಲ್ಲಿ ಕಡಿಮೆ. ಕನ್ಯಾ ರಾಶಿಯವರು ಮದುವೆಯಾಗದೇ ಉಳಿಯುವ ಸಾಧ್ಯತೆ ಕೂಡಾ ಇರುತ್ತದೆ. 

ಧನು ರಾಶಿ(Sagittarius)
ಈ ರಾಶಿಯವರ ಸ್ವಭಾವವೇ ಹಾಗೆ, ಅವರು  ಸ್ವತಂತ್ರರು ಮತ್ತು ಸ್ವಾವಲಂಬಿಗಳು. ಇವರಿಗೆ ಒಬ್ಬರೇ ಇರುವುದೆಂದರೆ ಇಷ್ಟ. ತಮ್ಮಿಚ್ಚೆ ಬಂದಂತೆ ಮಾಡಲಿಷ್ಟ, ಇದ್ದಕ್ಕಿದ್ದಂತೆ ಬ್ಯಾಕ್‌ಪ್ಯಾಕ್ ಏರಿಸಿಕೊಂಡು ತಿರುಗಾಡಲು ಇಷ್ಟ, ಏಕಾಂತದಲ್ಲಿ ಒಬ್ಬರೆ ಕಾಲ ಕಳೆಯುವುದೇ ಅತ್ಯಂತ ಸುಂದರ ಕ್ಷಣ ಎಂದುಕೊಂಡಿರುತ್ತಾರೆ. ಬದುಕಿಗಾಗಿ ಇನ್ನೊಬ್ಬರು ಇರಬೇಕೆಂದು ಇವರಿಗೆ ಅನ್ನಿಸುವುದಿಲ್ಲ, ಅದರಲ್ಲೂ ಸಂಗಾತಿಯ ಅಗತ್ಯವಿಲ್ಲ ಎಂಬುದೆ ಇವರ ಆಲೋಚನೆಯಾಗಿರುತ್ತದೆ. 

Vastu Tips: ಪೊರಕೆ ಹೀಗಿಟ್ರೆ ದಾರಿದ್ರ್ಯ ಒಕ್ಕರಿಸುತ್ತೆ, ಎಚ್ಚರ!

ಕುಂಭ ರಾಶಿ(Aquarius)
ಈ ರಾಶಿಯವರು ಸಂಕೋಚ ಸ್ವಭಾವದವರು. ಇತರರ ಮುಂದೆ ಮನಸ್ಸಿನ ಮಾತನ್ನು ಹೇಳಿಕೊಳ್ಳಲು ಹಿಂಜರಿಯುವ ಇವರಿಗೆ, ಏನಾದರೂ ಹೇಳಿದರೆ ತಮ್ಮ ಭಾವನೆಗಳಿಗೆ ಘಾಸಿಯಾದೀತೆಂಬ ಭಯವಿರುತ್ತದೆ. ತಮ್ಮ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜೊತೆ ನಡೆಯುವವರು ಸಿಗುವುದೇ ಇಲ್ಲವೆಂಬ ಭಾವನೆ ಇವರಲ್ಲಿರುತ್ತದೆ. ಜೀವನ ಪೂರ್ತಿ ಜೊತೆಯಾಗಿದ್ದು ಪ್ರೀತಿಸುವ ಮತ್ತು ಬೆಂಬಲಿಸುವ ಸಂಗಾತಿ ಸಿಗುವ ಬಗ್ಗೆ ಈ ರಾಶಿಯವರಿಗೆ ಸಂಶಯವಿರುತ್ತದೆ. ಹಾಗಾಗಿ ವಿವಾಹದ ಯೋಚನೆಯಿಂದ ದೂರವಿರಲು ಪ್ರಯತ್ನಿಸುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!