ಕೆಲವು ಮಹಿಳೆಯರು ಹೆಚ್ಚು ಪ್ರಯತ್ನಪಡದೇ ನಾಲ್ಕು ಜನರನ್ನು ಸೆಳೆಯುತ್ತಾರೆ. ಅವರ ವ್ಯಕ್ತಿತ್ವವೇ ಎಲ್ಲರನ್ನೂ ಆಕರ್ಷಿಸುವಂತಿರುತ್ತದೆ. ವಿಶಿಷ್ಟ ಗುಣ-ಸ್ವಭಾವ ಹೊಂದಿರುವ ಇಂತಹ ಮಹಿಳೆಯರು ನಿಸರ್ಗದತ್ತವಾಗಿ ವರ್ಚಸ್ಸು ಹೊಂದಿರುತ್ತಾರೆ. 5 ರಾಶಿಗಳ ಮಹಿಳೆಯರಿಗೆ ಈ ಅದೃಷ್ಟ ಸಹಜವಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಕೆಲವು ಮಹಿಳೆಯರನ್ನು ಭೇಟಿಯಾದ ಬಳಿಕ ಅವರ ಪ್ರಭಾವಳಿ ನಮ್ಮಲ್ಲಿ ಕೆಲಕಾಲವಾದರೂ ಹಾಗೆಯೇ ಇರುತ್ತದೆ. ಅವರ ವರ್ಚಸ್ಸು ಎಷ್ಟು ಗಾಢವಾಗಿರುತ್ತದೆ ಎಂದರೆ, ನಾಲ್ಕಾರು ಜನ ಸೇರಿದಾಗಲೂ ಅವರು ವಿಶಿಷ್ಟವಾಗಿ ಭಾಸವಾಗುತ್ತಾರೆ. ಜನಜಂಗುಳಿಯಲ್ಲೂ ಮತ್ತೊಬ್ಬರ ಮೇಲೆ ಪ್ರಭಾವ ಬೀರುತ್ತಾರೆ. ಅವರನ್ನು ಮುಖಾಮುಖಿಯಾದ ಯಾರೇ ಆದರೂ ಅವರ ವಿಶಿಷ್ಟತೆಯನ್ನು ಮೆಚ್ಚಿಕೊಳ್ಳದಿರಲು ಸಾಧ್ಯವಾಗದೇ ಇರುವುದಿಲ್ಲ. ಬಹಳಷ್ಟು ಮಹಿಳೆಯರು ಈ ಸಾಮರ್ಥ್ಯ ಹೊಂದಿರುವುದು ಸಹಜ. ಸ್ವಂತ ಪ್ರಯತ್ನದಿಂದಲೋ, ತಾವು ಅಳವಡಿಸಿಕೊಂಡಿರುವ ಮೌಲ್ಯಗಳಿಂದಲೋ ಅವರು ಆಕರ್ಷಕವಾಗಿದ್ದು, ಇತರರ ಮೇಲೆ ಮರೆಯಲಾಗದ ಇಂಪ್ರೆಷನ್ ಮೂಡಿಸುತ್ತಾರೆ. ಆದರೆ, ಈ ಗುಣ ಕೆಲವರಲ್ಲಿ ನಿಸರ್ಗದತ್ತವಾಗಿ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ರಾಶಿಗಳ ಮಹಿಳೆಯರಲ್ಲಿ ಇಂಥದ್ದೊಂದು ಆಕರ್ಷಣೆ ಅಡಕವಾಗಿರುತ್ತದೆ. ಕಾಸ್ಮಿಕ್ ಎನರ್ಜಿ ಎನ್ನಬಹುದಾದ ವಿಶಿಷ್ಟ ಶಕ್ತಿ ಇವರಲ್ಲಿರುತ್ತದೆ. ಅತ್ಯಂತ ವಿಶಿಷ್ಟ ವ್ಯಕ್ತಿತ್ವನ್ನೂ ಹೊಂದಿರುವ ಇಂತಹ ಮಹಿಳೆಯರು ಮುಖ್ಯವಾಗಿ ಐದು ರಾಶಿಗಳಲ್ಲಿ ಕಂಡುಬರುತ್ತಾರೆ. ಇವರೆಲ್ಲರೂ ವಿಶಿಷ್ಟ ಹಾಗೂ ವಿಭಿನ್ನ ವ್ಯಕ್ತಿತ್ವ ಹೊಂದಿದ್ದು, ಅದರಿಂದಾಗಿಯೇ ಗುರುತಿಸಲ್ಪಡುತ್ತಾರೆ.
• ಮೇಷ (Aries)
ಮೇಷ ರಾಶಿಯ ಜನರಿಗೆ ಭಯವೆಂದರೇನು (Fear) ಎನ್ನುವುದು ಗೊತ್ತಿರುವುದಿಲ್ಲ. ಧೈರ್ಯಶಾಲಿ (Bold), ಆತ್ಮವಿಶ್ವಾಸಿ (Confidence) ಗಳಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವ (Attractive Personality) ಹೊಂದಿದ್ದು, ಇತರರನ್ನು ಸುಲಭವಾಗಿ ಸೆಳೆಯುತ್ತಾರೆ. ತಮಗೇನು ಮಾಡಬೇಕು ಎನಿಸುತ್ತದೆಯೋ ಅದನ್ನು ಮಾಡಲು ಹಿಂದೇಟು ಹಾಕದ ಗುಣದಿಂದ ಇವರಲ್ಲಿ ಉತ್ಸಾಹ ಹೆಚ್ಚು. ಡೈನಮಿಕ್ ನೇಚರ್ ನಿಂದಾಗಿ ಈ ರಾಶಿಯ ಮಹಿಳೆಯರು (Women) ಹೆಚ್ಚಿನ ಪ್ರಯತ್ನವೇ ಇಲ್ಲವೇ ಎಲ್ಲರಿಂದಲೂ ಮೆಚ್ಚುಗೆ ಗಳಿಸುತ್ತಾರೆ.
ಬುಧ ಸಂಕ್ರಮಣ, ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್
• ಸಿಂಹ (Leo)
ಸಿಂಹ ರಾಶಿಯ ಜನ ಎಲ್ಲಿ ಹೋದರೂ ಕೇಂದ್ರಬಿಂದುವಾಗುತ್ತಾರೆ. ಅಷ್ಟು ವರ್ಚಸ್ಸು (Charm) ಇವರಲ್ಲಿರುತ್ತದೆ. ನೈಸರ್ಗಿಕವಾಗಿ ನಾಯಕತ್ವದ (Natural Leaders) ಗುಣ ಹೊಂದಿರುತ್ತಾರೆ. ಸಿಂಹ ರಾಶಿಯ ಮಹಿಳೆಯರು ಸೌಹಾರ್ದ ಗುಣಭಾವ ಹೊಂದಿದ್ದು, ಉದಾರಿಗಳಾಗಿರುತ್ತಾರೆ. ಸ್ವಯಂ ಭರವಸೆ ವ್ಯಕ್ತಿತ್ವದಲ್ಲಿ ಇಣುಕುತ್ತದೆ. ಹಾಗೆಯೇ, ಇತರರಿಗೂ ಗೌರವ (Respect) ನೀಡುವ ಗುಣದಿಂದ ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗುತ್ತಾರೆ.
• ತುಲಾ (Libra)
ಭೇಟಿಯಾದವರ ಮೇಲೆ ಮರೆಯಲಾಗದ ಛಾಪು ಮೂಡಿಸುವಲ್ಲಿ ತುಲಾ ರಾಶಿಯ ಮಹಿಳೆಯರು ಒಂದು ಕೈ ಮೇಲೆ. ಅತ್ಯಂತ ಡಿಪ್ಲೊಮ್ಯಾಟಿಕ್ (Diplomatic) ನಿಲುವು ಹೊಂದಿದ್ದು, ಸೌಹಾರ್ದತೆ (Harmony) ಮೂಡಿಸಲು ಹೆಸರುವಾಸಿಯಾಗಿರುತ್ತಾರೆ. ಸ್ನೇಹಿತರು, ಬಳಗದವರಲ್ಲಿ ಗುರುತಿಸಿಕೊಳ್ಳುತ್ತಾರೆ. ಇತರರ ಬಗ್ಗೆ ಸಹಜವಾಗಿ ಆಸಕ್ತಿ ಇವರಲ್ಲಿರುತ್ತದೆ. ಹೀಗಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮುಂದಿರುತ್ತಾರೆ. ಯಾರೇ ಆದರೂ ಇವರ ಬಳಿ ಸುಲಭವಾಗಿ ತಮ್ಮ ಸಮಸ್ಯೆಗಳನ್ನು (Problems) ಹೇಳಿಕೊಳ್ಳುವ ಆತ್ಮೀಯತೆ ತೋರುತ್ತಾರೆ. ಹೀಗಾಗಿ, ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಾರೆ.
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಮಹಿಳೆಯರಲ್ಲಿ ವಿಶಿಷ್ಟ ಪ್ರಭಾವಳಿ (Aura) ಇರುತ್ತದೆ. ಇವರು ಎಲ್ಲೇ ಹೋದರೂ ಜನ ಇವರನ್ನು ಗುರುತಿಸುತ್ತಾರೆ, ಪ್ರಭಾವಕ್ಕೆ ತುತ್ತಾಗುತ್ತಾರೆ. ಆಕರ್ಷಕ ವ್ಯಕ್ತಿತ್ವ, ಆಳವಾದ ಭಾವನೆಗಳನ್ನು (Deep Feelings) ಹೊಂದಿದ್ದು, ನಿಗೂಢವೆನಿಸುತ್ತಾರೆ. ನಿಗೂಢತೆಯೂ (Mystery) ಇವರ ವರ್ಚಸ್ಸಿಗೆ ಕೊಡುಗೆ ನೀಡುತ್ತದೆ. ಈ ಮಹಿಳೆಯರು ಅತ್ಯಂತ ತೀಕ್ಷ್ಣ ಬುದ್ಧಿ ಹೊಂದಿದ್ದು, ಯಾರೂ ಸಹ ಇವರನ್ನು ತಡೆಯಲು ಸಾಧ್ಯವಾಗುವುದಿಲ್ಲ.
ಚಿನ್ನದಿಂದ ಈ ರಾಶಿಯರು ದೂರವಿರಿ, ನಿಮಗೇ ಒಳ್ಳೆಯದು!
• ಮೀನ (Pisces)
ಮೀನ ರಾಶಿಯ ಮಹಿಳೆಯರಲ್ಲಿ ಮ್ಯಾಜಿಕಲ್ (Magical) ಎನಿಸುವ ವ್ಯಕ್ತಿತ್ವ ಇರುತ್ತದೆ. ಇದು ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇತರರನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಳ್ಳುವುದು ಇವರ ಸಾಮರ್ಥ್ಯ. ಎಲ್ಲರ ಕುರಿತೂ ಸಹಾನುಭೂತಿ (Empathy) ಹೊಂದಿದ್ದು, ಆತ್ಮೀಯತೆಯಿಂದ ವರ್ತಿಸುತ್ತಾರೆ. ಭೇಟಿಯಾದ ಕೆಲವೇ ಸಮಯದಲ್ಲಿ ಇತರರನ್ನು ಅರ್ಥ ಮಾಡಿಕೊಂಡು ಅವರ ಬಗ್ಗೆ ಕಾಳಜಿ ವಹಿಸುವುದು ಇವರಲ್ಲಿರುವ ನೈಸರ್ಗಿಕ ಗುಣ. ಇತರರ ಭಾವನೆಗಳನ್ನು ಗುರುತಿಸುವ ವಿಶಿಷ್ಟ ಗುಣದಿಂದಾಗಿ ಇವರಲ್ಲಿ ಒಂದು ರೀತಿಯ ವರ್ಚಸ್ಸು ಸಹಜವಾಗಿರುತ್ತದೆ.