Zodiac signs and Smoking: ಯಾವ ರಾಶಿ ಹೆಚ್ಚು ಧೂಮಪಾನ ಮಾಡುತ್ತದೆ?

By Suvarna News  |  First Published Apr 10, 2023, 10:37 AM IST

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ, ಸ್ಮೋಕಿಂಗ್ ಚಟ ಮಾತ್ರ ಹೆಚ್ಚುತ್ತಲೇ ಹೋಗುತ್ತಿದೆ. ಅತಿ ಹೆಚ್ಚು ಸ್ಮೋಕಿಂಗ್ ಚಟ ಈ 3 ರಾಶಿಗಳಲ್ಲಿರುತ್ತದೆ..


ಮುಂಚೆಯೆಲ್ಲ ಕದ್ದು ಮುಚ್ಚಿ ಸಿಗರೇಟ್ ಸೇದುತ್ತಿದ್ದರು. ಎಲ್ಲೋ ಕೆಲ ಶ್ರೀಮಂತರು ಮಾತ್ರ ದೊಡ್ಡ ಬ್ರ್ಯಾಂಡ್‌ನ ಸಿಗರೇಟ್ ಹಿಡಿದು ಶೋಕಿಗಾಗಿ ಸೇದುತ್ತಿದ್ದರು. ಆದರೆ ಈಗ ಹಾಗಲ್ಲ, ಹೈಸ್ಕೂಲ್ ಮಕ್ಕಳ ಕೈಗೂ ಸಿಗರೇಟ್ ಬಂದಿದೆ. ಅವರಿದನ್ನು 'ಕೂಲ್' ಎಂದು ಪರಿಗಣಿಸಲಾರಂಭಿಸಿದ್ದಾರೆ. ಫ್ಯಾಶನ್ ಎಂದುಕೊಳ್ಳುತ್ತಿದ್ದಾರೆ. ಸಿಗರೇಟ್ ಸೇದುವ ಹುಡುಗಿಯರೆಂದರೆ ಜನದ ಲೆಕ್ಕದಲ್ಲಿ ಆಧುನಿಕರು, ಮುಂದುವರಿದವರು ಎಂಬಂತಾಗಿದೆ. ಮತ್ತೊಂದಷ್ಟು ಜನರಿಗೆ ಸಿಗರೇಟ್ ಎಂಬುದು ಸ್ಟ್ರೆಸ್ ಬಸ್ಟರ್. ಇನ್ನು ಪಡ್ಡೆಗಳಿಗಂತೂ, ಎಲ್ಲರೂ ಸೇದಬೇಡ ಎನ್ನುತ್ತಾರೆಂಬ ಕಾರಣಕ್ಕೆ ಸೇದಬೇಕೆಂಬ ಹಟ ಬರುತ್ತದೆ. 

ಹೌದು, ಸಿಗರೇಟ್ ಅಪಾಯಕಾರಿ ಎಂದು ಎಷ್ಟೇ ಡಂಗುರ ಸಾರಿದರೂ ಈ ವ್ಯಸನ ಫ್ಯಾಶನ್ ಹೆಸರಲ್ಲಿ ಹಬ್ಬುತ್ತಿದೆ. ವ್ಯಸನಗಳಿಗೂ ಜ್ಯೋತಿಷ್ಯಕ್ಕೂ ನಂಟು ಇದೆ ಎಂಬುದು ನಿಮಗೆ ಗೊತ್ತೇ? ಹೌದು, ಗ್ರಹಗಳು ದೋಷಪೂರಿತವಾದಾಗ ವ್ಯಕ್ತಿಯ, ಮತ್ತು ಆತನ ಮನೆಯವರ ನೆಮ್ಮದಿ ಹಾಳು ಮಾಡಲು ವ್ಯಸನಗಳನ್ನೂ ಬಳಸುತ್ತವೆ. ಸಿಗರೇಟ್ ಸ್ಮೋಕಿಂಗ್ ಚಟ ಮೂರು ರಾಶಿಯವರಲ್ಲಿ ಹೆಚ್ಚಾಗಿ ಇರುತ್ತದೆ. ಆ ರಾಶಿಗಳು ಯಾವೆಲ್ಲ ನೋಡೋಣ. 

Tap to resize

Latest Videos

ಮೇಷ ರಾಶಿ (Aries)
ಮೇಷ ರಾಶಿಯವರು ಹೆಚ್ಚು ಧೂಮಪಾನ ಮಾಡುವವರು. ಪ್ರಚೋದನೆಯು ಅದರ ಆಡಳಿತ ಗ್ರಹ ಮಂಗಳದ ಪ್ರಭಾವದಿಂದ ಮತ್ತು ಅದರ ಚಿಹ್ನೆ ಬೆಂಕಿಯಿಂದಾಗಿರಬಹುದು. ಮೇಷ, ನಿಸ್ಸಂದೇಹವಾಗಿ ಹೆಚ್ಚು ಧೂಮಪಾನ ಮಾಡುವ ವ್ಯಕ್ತಿಯನ್ನು ಹೊಂದಿರುತ್ತದೆ. ಮೇಷ ರಾಶಿಯು ಬೆಂಕಿಯನ್ನು ಸಂಕೇತವಾಗಿ ಪಡೆದಿರುವುದರಿಂದ, ಅವರ ಮೊಂಡುತನದ ಸ್ವಭಾವ ಮತ್ತು ಉರಿಯುವಿಕೆಯು ಧೂಮಪಾನ ಮಾಡಲು ಅವರಿಗೆ ಪ್ರೇರೇಪಿಸುತ್ತದೆ. 

Weekly Love Horoscope: ಅನೈತಿಕ ಯೋಚನೆ, ಯೋಜನೆಗಳಿಂದ ಈ ರಾಶಿಗೆ ಅವಮಾನ

ಮೇಷ ರಾಶಿಯು ಅಗ್ನಿ ತ್ರಿಕೋನದ ಕಾರ್ಡಿನಲ್ ಚಿಹ್ನೆ. ಇದು ಬೆಂಕಿಯ ಚಿಹ್ನೆಯಾಗಿರುವುದರಿಂದ, ಧೂಮಪಾನವು ಅವರನ್ನು ಬಹಳಷ್ಟು ಆಕರ್ಷಿಸುವ ಸಂಗತಿಯಾಗಿದೆ. ಅವರು ಧೂಮಪಾನ ಪ್ರಕ್ರಿಯೆಯ ಪ್ರತಿಯೊಂದು ಭಾಗವನ್ನು ಆನಂದಿಸುತ್ತಾರೆ. ಅವರು ಧೂಮಪಾನದ ವಿಷಕಾರಿ ಫಲಿತಾಂಶಗಳ ಬಗ್ಗೆ ಹೆದರುವುದಿಲ್ಲ. ಆದಾಗ ನೋಡಿಕೊಳ್ಳೋಣ ಎಂಬ ಉಡಾಫೆ ಹೊಂದಿರುತ್ತಾರೆ. ವ್ಯಸನವನ್ನು ಬಿಡುವುದು ಅವರಿಗೆ ಕಷ್ಟ. ಬದಲಿಗೆ ಅವರು ಧೂಮಪಾನವನ್ನು ಫ್ಯಾಶನ್ ಎಂದೋ ಅಥವಾ ಖಿನ್ನತೆ ದೂರ ತಳ್ಳುವ ಸಾಧನವೆಂದೋ ಪರಿಗಣಿಸುತ್ತಾರೆ. 

ಮಿಥುನ ರಾಶಿ (Gemini)
ಮಿಥುನ ರಾಶಿಯವರ ಸ್ವಭಾವ ಚಡಪಡಿಕೆ ಮತ್ತು ತುರಿಕೆ. ಬುಧದ ಆಡಳಿತ ಗ್ರಹದ ನಕಾರಾತ್ಮಕ ಶಕ್ತಿಯಲ್ಲಿ, ಮಿಥುನ ರಾಶಿಯ ಜನರು ಧೂಮಪಾನದ ಕಡೆಗೆ ಬಲವಾದ ಆಕರ್ಷಣೆಯನ್ನು ಹೊಂದಿದ್ದಾರೆ. ಅವರು ತಮ್ಮ ಸ್ವಭಾವದಲ್ಲಿ ಸಹಜವಾದ ಚಡಪಡಿಕೆಯಿಂದ ತಪ್ಪಿಸಿಕೊಳ್ಳಲು ಸರಣಿ-ಧೂಮಪಾನವನ್ನು(Chain-smoking) ಆರಿಸಿಕೊಳ್ಳುತ್ತಾರೆ. ಆದ್ದರಿಂದ, ಮಿಥುನ ರಾಶಿಯವರು ಧೂಮಪಾನವನ್ನು ದುರಂತವೆಂದು ಗ್ರಹಿಸುವುದಿಲ್ಲ. ಮಿಥುನದ ಅವಳಿ ಚಿಹ್ನೆಯ ದ್ವಿಮುಖವು ನಕಾರಾತ್ಮಕ ಗುಣಲಕ್ಷಣಗಳನ್ನು ಹೆಚ್ಚಿಸುತ್ತದೆ. ಅವರು ಇಂಥ ಸುಖ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. 

ದಾರಿಯಲ್ಲಿ ಹಣ ಸಿಗುವುದು ಅದೃಷ್ಟವೋ ದುರದೃಷ್ಟವೋ?

ಸಿಂಹ ರಾಶಿ (Leo)
ಐದನೇ ರಾಶಿಚಕ್ರದ ಚಿಹ್ನೆಯಾದ ಸಿಂಹ, ಈ ಜನರು ತಮ್ಮನ್ನು ತಾವು ಸೆಲೆಬ್ರಿಟಿ ಎಂದು ಪರಿಗಣಿಸುತ್ತಾರೆ. ಅವರ ಆಳುವ ಗ್ರಹವು ಸೂರ್ಯವಾಗಿದ್ದು, ದುರ್ಬಲವಾಗಿದ್ದಾಗ ಬೆಂಕಿಯ ಸಂಗತಿಯಾದ ಸ್ಮೋಕಿಂಗನ್ನು ಹೆಚ್ಚು ಪ್ರೇರೇಪಿಸುತ್ತದೆ. ಧೂಮಪಾನ ಮಾಡುವಾಗ, ಅವರು ತಮ್ಮ ಶ್ವಾಸಕೋಶದ ಸುತ್ತಲೂ ಬೆಚ್ಚಗಿನ ಹೊದಿಕೆಯನ್ನು ಅನುಭವಿಸುತ್ತಾರೆ! ಸಿಂಹ ರಾಶಿಯವರು ಇತರರ ಗಮನ ಸೆಳೆಯಲು ಕೂಡಾ ಧೂಮಪಾನಿಗಳಾಗುವ ಸಾಧ್ಯತೆ ಇದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!