ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ!

By Suvarna News  |  First Published Jun 3, 2020, 5:31 PM IST

ಎಲ್ಲರಿಗೂ ಫ್ಲರ್ಟ್ ಮಾಡಲು ಬರಲ್ಲ. ಆದ್ರೆ ಕೆಲವರು ಮಾತ್ರ ಫ್ಲರ್ಟ್ ಮಾಡೋದ್ರಲ್ಲಿ ಎತ್ತಿದ ಕೈ. ಎಂಥವರನ್ನು ಬೇಕಾದ್ರೂ ತಮ್ಮ ಬುಟ್ಟಿಗೆ ಹಾಕಿಕೊಳ್ಳಬಲ್ಲರು. ಇದಕ್ಕೆ ಕಾರಣ ಅವರ ಜನ್ಮರಾಶಿ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.


ನಿಮ್ಮ ಅರಿವಿಗೇ ಬಾರದಂತೆ ಹೃದಯದಲ್ಲಿ ಪ್ರೀತಿಯ ಬೆಳ್ಳಿ ಮೋಡವೊಂದು ಮೂಡುತ್ತೆ. ಆ ವಿಶೇಷ ವ್ಯಕ್ತಿಯನ್ನು ನೋಡಲು, ಮಾತನಾಡಿಸಲು, ಮೆಚ್ಚಿಸಲು ಮನಸ್ಸು ಹಾತೊರೆಯುತ್ತೆ. ನೀವು ಅವರ ಗಮನವನ್ನು ನಿಮ್ಮತ್ತ ಸೆಳೆಯಲು ಏನೆಲ್ಲ ಸರ್ಕಸ್ ಮಾಡುತ್ತೀರಿ. ಇದನ್ನೇ ಫ್ಲರ್ಟಿಂಗ್ ಅನ್ನೋದು. ಕೆಲವರಿಗಂತೂ ಫ್ಲರ್ಟ್ ಮಾಡುವ ಕಲೆ ಹುಟ್ಟಿನಿಂದಲೇ ಕರತಾಮಲಕ. ಇನ್ನೂ ಕೆಲವರು ಈ ಕಲೆ ಸಿದ್ಧಿಸಿಕೊಳ್ಳಲು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಜ್ಯೋತಿಷ್ಯಶಾಸ್ತ್ರವು ರಾಶಿ ಆಧರಿಸಿ ನಿಮ್ಮ ಫ್ಲರ್ಟಿಂಗ್ ಸಾಮಥ್ರ್ಯ ಹಾಗೂ ದೌರ್ಬಲ್ಯಗಳನ್ನು ತಿಳಿಸುತ್ತದೆ. 

ಮೇಷ
ಈ ರಾಶಿಯವರು ಬಹುಬೇಗ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯ ಹೊಂದಿರುತ್ತಾರೆ. ಈ ಗುಣವೇ ವಿರುದ್ಧ ಲಿಂಗಿಗಳನ್ನು ಮೇಷ ರಾಶಿಯವರೆಡೆಗೆ ಆಕರ್ಷಿಸುತ್ತದೆ. ಫ್ಲರ್ಟಿಂಗ್ ಸಮಯದಲ್ಲಿ ಬೇಗ ನಿರ್ಧಾರ ಕೈಗೊಳ್ಳುವ ಹಾಗೂ ತಕ್ಷಣ ಕಾರ್ಯ ಕೈಗೆತ್ತಿಕೊಳ್ಳುವ ಗುಣಗಳೇ ಈ ರಾಶಿಯವರಿಗೆ ಫ್ಲಸ್ ಪಾಯಿಂಟ್. ಆತ್ಮವಿಶ್ವಾಸ ಹಾಗೂ ನಿರ್ಭೀತಿ ಮೇಷ ರಾಶಿಯವರಿಗೆ ಇತರರು ಮನಸೋಲುವಂತೆ ಮಾಡುತ್ತೆ.

ನೀವು ಅವರಿಗಿಂತ ಬೆಟರ್ ಆಗಬೇಕಾ?

Tap to resize

Latest Videos

undefined

ವೃಷಭ
ಫ್ಲರ್ಟಿಂಗ್ ವಿಷಯಕ್ಕೆ ಬಂದ್ರೆ ವೃಷಭ ರಾಶಿಯವರು ಸಾಕಷ್ಟು ಹಿಂದೆ ಉಳಿದಿದ್ದಾರೆ ಎಂದೇ ಹೇಳಬಹುದು. ಅಂದ್ರೆ ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸುವ ಬದಲು ಸೂಚನೆಗಳ ಮೂಲಕ ಸುಳಿವು ನೀಡೋದು ಇವರ ಜಾಯಮಾನ. ಇವರು ಪ್ರೀತಿಸುತ್ತಿರುವ ವ್ಯಕ್ತಿ ಬದುಕಿನಲ್ಲಿ ಕಳೆದುಹೋದ ಖುಷಿಯ ಕ್ಷಣಗಳನ್ನು ನೆನಪಿಸುವ ಮೂಲಕ ಅವರ ಮೊಗದಲ್ಲಿ ನಗು ಅರಳಿಸಲು ಪ್ರಯತ್ನಿಸುವ ಮೂಲಕ ಹೃದಯ ಗೆಲ್ಲುತ್ತಾರೆ.


ಮಿಥುನ
ಫ್ಲರ್ಟಿಂಗ್ ವಿಷಯದಲ್ಲಿ ಮಿಥುನ ರಾಶಿಯವರು ಸಿಕ್ಕಾಪಟ್ಟೆ ಟ್ಯಾಲೆಂಟೆಡ್. ಇವರಿಗೆ ಹುಟ್ಟಿನಿಂದಲೇ ನೈಸರ್ಗಿಕವಾಗಿ ಈ ಕಲೆ ಕರಗತ. ಇವರಾಡುವ ಪ್ರತಿ ಮಾತಿನಲ್ಲೂ ಆತ್ಮವಿಶ್ವಾಸ ತುಂಬಿ ತುಳುಕುತ್ತದೆ. ಇವರು ತಾವು ಪ್ರೀತಿಸುವ ವ್ಯಕ್ತಿಯ ಗಮನ ಸೆಳೆಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಸುಮ್ಮನಿದ್ರೂ ಇವರೆಡೆಗೆ ಜನರು ಆಕರ್ಷಿತರಾಗುತ್ತಾರೆ.

ಕಟಕ
ಈ ರಾಶಿಯವರು ಭಾವನಾತ್ಮಕ ವ್ಯಕ್ತಿಗಳು. ಫ್ಲರ್ಟಿಂಗ್ ವಿಚಾರಕ್ಕೂ ಇದು ಅನ್ವಯಿಸುತ್ತೆ. ಕಟಕ ರಾಶಿಯವರು ಯಾರೊಂದಿಗಾದರೂ ಫ್ಲರ್ಟ್ ಮಾಡುತ್ತಿದ್ರೆ ಆ ವ್ಯಕ್ತಿಯನ್ನು ತುಂಬಾ ಕೇರ್ ಮಾಡುತ್ತಾರೆ. ಈ ರಾಶಿಯವರು ಟೈಂಪಾಸ್‍ಗಾಗಿ ಫ್ಲರ್ಟ್ ಮಾಡೋದಿಲ್ಲ. ಇವರು ಫ್ಲರ್ಟ್ ಮಾಡುತ್ತಿದ್ದಾರೆ ಅಂದ್ರೆ ಆ ವ್ಯಕ್ತಿಯೊಂದಿಗೆ ಇಡೀ ಬದುಕನ್ನೇ ಕಳೆಯಲು ಬಯಸಿದ್ದಾರೆ ಎಂದೇ ಅರ್ಥ.

ಸಿಂಹ
ಸಿಂಹ ರಾಶಿಯವರು ಬಲಿಷ್ಠ ವ್ಯಕ್ತಿತ್ವ ಹೊಂದಿರುತ್ತಾರೆ. ಇದೇ ಗುಣ ಇವರ ವ್ಯಕ್ತಿತ್ವವನ್ನು ಆಕರ್ಷಕವಾಗಿಸೋದು. ಫ್ಲರ್ಟಿಂಗ್ ವಿಷಯದಲ್ಲೂ ಈ ರಾಶಿಯವರು ಬಲಿಷ್ಠರು. ಜೊತೆಗೆ ಅಹಂ ಭಾವ ಪ್ರದರ್ಶಿಸುತ್ತಾರೆ. ಆದ್ರೂ ಜನರು ಇವರ ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳುತ್ತಾರೆ. ಇವರಲ್ಲಿರುವ ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳೇ ಜನರನ್ನು ಇವರೆಡೆಗೆ ಸೂಜಿಗಲ್ಲಿನಂತೆ ಸೆಳೆಯುತ್ತವೆ.

ನಿಮ್ಮ ಸುತ್ತ ಪ್ರೇತಾತ್ಮಗಳಿವೆಯಾ?

ಕನ್ಯಾ
ಇವರು ಜನರನ್ನು ಆಯ್ಕೆ ಮಾಡುವ ರೀತಿಯೇ ವಿಶೇಷ. ಇವರ ಆತ್ಮೀಯ ಸ್ನೇಹಿತರ ವಲಯಕ್ಕೆ ಕೆಲವೇ ಕೆಲವು ಜನರಿಗಷ್ಟೇ ಪ್ರವೇಶ. ಇವರೊಡನೆ ಸ್ನೇಹ ಮಾಡೋದು ಕಷ್ಟವಾದ್ರೂ ಒಮ್ಮೆ ಇದ್ರಲ್ಲಿ ಯಶಸ್ವಿಯಾದ್ರೆ ಸಾಕು, ಮತ್ತೆಂದೂ ಯಾವುದೇ ಪರಿಸ್ಥಿತಿಯಲ್ಲೂ ನಿಮ್ಮನ್ನು ಇವರು ಬಿಟ್ಟು ಕೊಡೋದಿಲ್ಲ. ಕನ್ಯಾ ರಾಶಿಯವರು ಬುದ್ಧಿವಂತಿಕೆ ಹಾಗೂ ಆಧುನಿಕ ಮನೋಭಾವದ ಮೂಲಕ ಇಷ್ಟಪಡುವ ವ್ಯಕ್ತಿಯನ್ನು ತನ್ನೆಡೆಗೆ ಸೆಳೆಯುವ ಸಾಮಥ್ರ್ಯ ಹೊಂದಿರುತ್ತಾರೆ.

ತುಲಾ
ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಅದನ್ನು ಚೆನ್ನಾಗಿಯೇ ನಿರ್ವಹಿಸುತ್ತಾರೆ. ಫ್ಲರ್ಟಿಂಗ್ ವಿಚಾರಕ್ಕೂ ಇದು ಅನ್ವಯಿಸುತ್ತೆ. ತುಲಾ ರಾಶಿಯವರ ಸೌಂದರ್ಯ, ಪ್ರೇಮಿಯೊಬ್ಬನಿಗಿರಬೇಕಾದ ವ್ಯಕ್ತಿತ್ವ ಇತರರು ಇವರತ್ತ ಆಕರ್ಷಿತರಾಗಲು ಕಾರಣವಾಗುತ್ತೆ. ಹಾಗಂತ ಫ್ಲರ್ಟ್ ಮಾಡಲೆಂದೇ ಇವರು ಇಂಥ ಗುಣಗಳನ್ನು ಪ್ರದರ್ಶಿಸೋದಿಲ್ಲ. ಪ್ರೀತಿಸುವ ವ್ಯಕ್ತಿಯನ್ನು ಹೊರತುಪಡಿಸಿ ಇತರರೆಡೆಗೂ ಅದೇ ಕಾಳಜಿ ತೋರುವ ಕಾರಣ ವಿಶೇಷ ವ್ಯಕ್ತಿತ್ವದವರೆನಿಸಿಕೊಳ್ಳುತ್ತಾರೆ. 

ವೃಶ್ಚಿಕ
ಫ್ಲರ್ಟಿಂಗ್ ವಿಚಾರದಲ್ಲಿ ವೃಶ್ಚಿಕ ರಾಶಿಯವರು ಪ್ರಾಮಾಣಿಕರು. ಜನರಿಗೆ ಯಾವುದು ಇಷ್ಟ ಹಾಗೂ ಅವರನ್ನು ಆಕರ್ಷಿಸೋದು ಹೇಗೆ ಎಂಬುದು ಈ ರಾಶಿಯವರಿಗೆ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಇವರು ಫ್ಲರ್ಟ್ ಮಾಡಲು ಅವಕಾಶ ಸಿಕ್ಕರೆ ಸಾಕು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬಲ್ಲರು. ಮೊಗದಲ್ಲಿನ ಸುಂದರ ನಗು ಹಾಗೂ ಇನ್ನೊಬ್ಬರ ಹೃದಯಕ್ಕೆ ನಾಟಬಲ್ಲ ನೋಟವೇ ಇವರ ಫ್ಲಸ್ ಪಾಯಿಂಟ್.

ಧನು
ಈ ರಾಶಿಯವರು ವಿನೋದಪ್ರಿಯರು ಹಾಗೂ ಸಾಹಸಿಗಳು. ಇವರು ತಮ್ಮ ಹಾಸ್ಯ ಚಟಾಕಿಗಳಿಂದಲೇ ಎದುರಿಗಿರುವ ವ್ಯಕ್ತಿಯ ಮನಸ್ಸು ಗೆಲ್ಲುವ ಜೊತೆಗೆ  ಅವರನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡಬಲ್ಲರು. ಆಕರ್ಷಕ ಜೀವನಶೈಲಿ ಹಾಗೂ ಉತ್ಸಾಹಭರಿತ ಮಾತುಗಳೇ ಇವರ ಸಾಮಥ್ರ್ಯ.

ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!

ಮಕರ
ಈ ರಾಶಿಯವರು ತುಂಬಾ ಪ್ರ್ಯಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಇದೇ ಕಾರಣಕ್ಕೆ ಇವರು ಇತರರಿಗೆ ಇಷ್ಟವಾಗುತ್ತಾರೆ. ಫ್ಲರ್ಟಿಂಗ್ ಮಾಡುವಾಗಲೂ ತಮ್ಮ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುತ್ತಾರೆ. ಪ್ರಾಮಾಣಿಕತೆ ಹಾಗೂ ಸತ್ಯವೇ ಇವರ ವ್ಯಕ್ತಿತ್ವದ ಆಕರ್ಷಣೆ. 

ಕುಂಭ
ಕುಂಭ ರಾಶಿಯವರು ಸ್ವತಂತ್ರ ವ್ಯಕ್ತಿತ್ವದವರಾಗಿರುತ್ತಾರೆ. ಇವರು ನಿರ್ಭೀತಿಯಿಂದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಉತ್ಸಾಹ ಹಾಗೂ ಪ್ರಾಮಾಣಿಕತೆಯೇ ಇವರ ಫ್ಲಸ್ ಪಾಯಿಂಟ್ 

ಮೀನ
ಈ ರಾಶಿಯವರು ಸಂಕೋಚದ ವ್ಯಕ್ತಿತ್ವ ಹೊಂದಿರುವ ಕಾರಣ ಫ್ಲರ್ಟ್ ಮಾಡೋದ್ರಲ್ಲಿ ಇವರು ಉಳಿದ ರಾಶಿಯವರಿಗಿಂತ ಹಿಂದೆ. ಆದ್ರೆ ಇವರು ಹೃದಯದ ಭಾವನೆಗಳನ್ನು ಹೊರಹಾಕದೆಯೂ ಇತರರನ್ನು ಸೆಳೆಯುವ ಸಾಮಥ್ರ್ಯ ಹೊಂದಿದ್ದಾರೆ. ಮೌನವೇ ಇವರ ಸಾಮಥ್ರ್ಯವಾಗಿದ್ದು, ಸಹನೆ ಹಾಗೂ ಇನ್ನೊಬ್ಬರ ಮಾತನ್ನು ತಾಳ್ಮೆಯಿಂದ ಆಲಿಸುವ ಗುಣಗಳೇ ಇವರ ವ್ಯಕ್ತಿತ್ವಕ್ಕೆ ಮೆರುಗು. 

click me!