ನೀವು ಹೇಗೆ ಚುಂಬಿಸ್ತೀರಾ? ಕಿಸ್‌ ನೀಡೋದ್ರಲ್ಲೂ ಜನ್ಮರಾಶಿಗೆ ತಕ್ಕಂತೆ ವೈವಿಧ್ಯತೆ ಇದೆ ಗೊತ್ತಾ?

By Suvarna News  |  First Published Mar 5, 2024, 5:00 PM IST

ಸಂಗಾತಿಗೆ ಚುಂಬನ ನೀಡುವುದೆಂದರೆ ಎಲ್ಲರಿಗೂ ಇಷ್ಟ. ಚುಂಬಿಸುವುದೊಂದು ಕಲೆ. ಎಲ್ಲರೂ ಒಂದೊಂದು ವಿಧಾನ ಅನುಸರಿಸುತ್ತಾರೆ. ಇಲ್ಲೂ ಜನ್ಮರಾಶಿಗೆ ತಕ್ಕಂತೆ ಚುಂಬಿಸುವ ವಿಧಾನ ಬೇರೆಯಾಗಿರುತ್ತದೆ. 
 


ಪ್ರೀತಿಪಾತ್ರರಿಗೆ ಚುಂಬನ ನೀಡುವುದು ಸುಂದರ ಅನುಭೂತಿ. ಚುಂಬಿಸುವ ಕ್ರಿಯೆಯೇ ಪ್ರೀತಿ-ಪ್ರೇಮವನ್ನು ವ್ಯಕ್ತಪಡಿಸುವಂಥದ್ದು. ಚುಂಬಿಸುವುದರಲ್ಲೂ ಒಬ್ಬೊಬ್ಬರದ್ದು ಒಂದೊಂದು ಸ್ಟೈಲ್.‌ ಎಲ್ಲರೂ ಒಂದೇ ರೀತಿ ಚುಂಬಿಸುವುದಿಲ್ಲ. ತಮ್ಮ ಪ್ರೀತಿಪಾತ್ರರಿಗೆ, ಸಂಗಾತಿಗೆ ಚುಂಬಿಸುವಾಗ ಒಬ್ಬರೊಬ್ಬರು ಒಂದೊಂದು ರೀತಿಯ ಮನಸ್ಥಿತಿ ಹೊಂದಿರುತ್ತಾರೆ ಹಾಗೂ ಅದಕ್ಕೆ ತಕ್ಕಂತೆ ತಮ್ಮದೇ ವಿಧಾನ ಅನುಸರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಯಾ ಜನ್ಮರಾಶಿಗೆ ಅನುಗುಣವಾಗಿ ಜನರು ಚುಂಬಿಸುವ ರೀತಿನೀತಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. 

•    ಮೇಷ (Aries)
ಮೇಷ ರಾಶಿಯ ಜನ ಹೇಳಿಕೇಳಿ ಮುನ್ನುಗ್ಗುವ ಸ್ವಭಾವದವರು. ಒಂದೊಮ್ಮೆ ನಿಮಗೆ ಚುಂಬಿಸಬೇಕು (Kiss) ಎಂದು ಅವರಿಗೆ ಅನಿಸಿದರೆ ಯಾವ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ಹಿಂಜರಿಕೆಯಿಲ್ಲದೇ ತಾವೇ ಮೊದಲ ಹೆಜ್ಜೆಯಿಡುತ್ತಾರೆ. ತಮ್ಮ ಆಳವಾದ ಭಾವನೆ ವ್ಯಕ್ತಪಡಿಸುವಂತೆ ಆತ್ಮವಿಶ್ವಾಸದಿಂದ ಚುಂಬಿಸುತ್ತಾರೆ. 

ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಏನು ಸಂಬಂಧ.. ಶಿವಲಿಂಗವನ್ನು ಮೊದಲು ಪೂಜಿಸಿದವರು ಯಾರು..?

Tap to resize

Latest Videos

•    ವೃಷಭ (Taurus)
ವೃಷಭ ರಾಶಿಯ ಜನಕ್ಕೆ ಚುಂಬಿಸುವುದೊಂದು ಕಲೆಯಂತೆ. ಇವರು ಚುಂಬಿಸಲು ಸಮಯ ತೆಗೆದುಕೊಳ್ಳುತ್ತಾರೆ. ಸಂಗಾತಿಗೆ ಚುಂಬನ ನೀಡುವ ಮನಸ್ಸಾದರೂ ರೋಮ್ಯಾಂಟಿಕ್‌ (Romantic) ನಡೆಯ ಮೂಲಕ ಆರಂಭಿಸುತ್ತಾರೆ. ಏಕಾಏಕಿ ಚುಂಬಿಸುವುದು ಇವರಿಂದ ಸಾಧ್ಯವಿಲ್ಲ. ಕಂಫರ್ಟ್‌ ಆದ ವಾತಾವರಣವೂ ಬೇಕಾಗುತ್ತದೆ.

•    ಮಿಥುನ (Gemini)
ಬುದ್ಧಿವಂತಿಕೆ ಮತ್ತು ವಿನೋದದಿಂದ ಚುಂಬಿಸುವಲ್ಲಿ ಮಿಥುನ ರಾಶಿಯ ಜನ ಎತ್ತಿದ ಕೈ. ಒಂದೊಮ್ಮೆ ಅವರು ನಿಮ್ಮನ್ನು ಚುಂಬಿಸಲು ಬಯಸುತ್ತಿದ್ದರೆ ಹಾಸ್ಯಭರಿತ ಮಾತುಗಳು, ಚುರುಕಿನ (Wit) ನಡೆನುಡಿಗಳಿಂದ ಮೋಡಿಗೊಳಿಸುತ್ತಾರೆ. ಅವರ ವ್ಯಕ್ತಿತ್ವದ ಸೆಳೆತದಲ್ಲಿ ನೀವು ಕರಗುತ್ತೀರಿ. ಸರಿಯಾದ ಸಂದರ್ಭ ನೋಡಿಕೊಂಡು ಚುಂಬಿಸುವ ಮೂಲಕ ನಿಮ್ಮನ್ನು ಅಚ್ಚರಿಗೆ ದೂಡುತ್ತಾರೆ. 

•    ಕರ್ಕಾಟಕ (Cancer)
ಭಾವನೆಗಳಿಂದ (Emotions) ಕೂಡಿದ್ದು ಸೂಕ್ಷ್ಮತೆಯಿಂದ ಚುಂಬಿಸುವುದರಲ್ಲಿ ಕರ್ಕಾಟಕ ರಾಶಿಯ ಜನ ಮುಂದೆ. ಕರ್ಕಾಟಕ ರಾಶಿಯ ಜನ ಚುಂಬಿಸಲು ಬಯಸುತ್ತಿರುವ ಸಮಯದಲ್ಲಿ ಅಪರಿಮಿತ ಪ್ರೀತಿ ತೋರುತ್ತಾರೆ. ಸಂಗಾತಿಯಲ್ಲಿ ಸುರಕ್ಷಿತ ಮತ್ತು ಪ್ರೀತಿಯ ಭಾವನೆ ಮೂಡಿಸುತ್ತಾರೆ.

•    ಸಿಂಹ (Leo)
ಪ್ರೀತಿಯನ್ನು ನಾಟಕೀಯವಾಗಿ ವ್ಯಕ್ತಪಡಿಸುವ ಸಿಂಹ ರಾಶಿಯ ಜನ ಚುಂಬಿಸುವುದರಲ್ಲೂ ಚುರುಕು. ಈ ಸಮಯದಲ್ಲಿ ಅವರು ಸಂಗಾತಿಯನ್ನು ಹೊಗಳುತ್ತಾರೆ, ದುಬಾರಿ (Costly) ಗಿಫ್ಟ್‌ ನೀಡುತ್ತಾರೆ. ಚುಂಬನವೆಂದರೆ, ಪ್ರೀತಿಯ ಪ್ರದರ್ಶನವೆಂದು ಭಾವಿಸುತ್ತಾರೆ.

ಬಾಲಿವುಡ್ ಸೆಲೆಬ್ರಿಟಿಗಳಾದ ಇವರ ಯಶಸ್ಸಿನ ಹಿಂದಿನ ಗುಟ್ಟು ಗೊತ್ತಾ?

•    ಕನ್ಯಾ (Virgo)
ವಿಚಾರಪೂರ್ಣವಾಗಿ ಚುಂಬಿಸಲು ಸಿದ್ಧವಾಗುವವರು ಕನ್ಯಾ ರಾಶಿಯ ಜನ. ಒಂದೊಮ್ಮೆ ಇವರು ನಿಮ್ಮನ್ನು ಚುಂಬಿಸಲು ಬಯಸಿದ್ದರೆ ಎಲ್ಲವನ್ನೂ ಮೊದಲೇ ಸರಿಯಾಗಿ ಪ್ಲಾನ್‌ (Plan) ಮಾಡುತ್ತಾರೆ. ನಿಮ್ಮ ಆಸೆ, ಅಗತ್ಯಗಳ ಕಡೆಗೆ ಗಮನ ನೀಡುತ್ತಾರೆ. ನಿಮ್ಮಲ್ಲಿ ಕಂಫರ್ಟ್‌, ರೋಮ್ಯಾಂಟಿಕ್‌ ಭಾವನೆ ಮೂಡಿಸುತ್ತಾರೆ.

•    ತುಲಾ (Libra)
ತುಲಾ ರಾಶಿಯ ಜನ ತಮ್ಮ ವರ್ಚಸ್ಸನ್ನು ಬಳಕೆ ಮಾಡಿಕೊಂಡು ಚುಂಬಿಸುತ್ತಾರೆ. ಸಂಗಾತಿಯನ್ನು (Partner) ಖುಷಿಪಡಿಸುತ್ತಾರೆ. ನಿಮ್ಮೊಂದಿಗೆ ಸಾಕಷ್ಟು ಫ್ಲರ್ಟ್‌ ಮಾಡುತ್ತಾರೆ. ಮಾತುಕತೆ, ವಿನೋದ, ಹಾಸ್ಯದಿಂದ ನಿಮ್ಮೊಂದಿಗೆ ಬೆರೆಯುತ್ತಾರೆ. ಭಾವನಾತ್ಮಕವಾಗಿ ಒಂದಾಗುತ್ತಾರೆ. ಬಳಿಕ, ಸರಿಯಾದ ಸಮಯದಲ್ಲಿ ಚುಂಬಿಸುತ್ತಾರೆ.

•    ವೃಶ್ಚಿಕ (Scorpio)
ಅತ್ಯಂತ ಆಳವಾದ ಮನಸ್ಥಿತಿ ಹಾಗೂ ತೀವ್ರತೆಯುಳ್ಳ (Passionate) ವೃಶ್ಚಿಕ ರಾಶಿಯ ಜನ ಸಂಗಾತಿಯಲ್ಲಿ ರೋಮಾಂಚನ ಮೂಡಿಸುತ್ತಾರೆ. ತಮ್ಮ ಮ್ಯಾಗ್ನೆಟಿಕ್‌ ವ್ಯಕ್ತಿತ್ವದಿಂದ ಸೆಳೆಯುತ್ತಾರೆ. ಆತ್ಮೀಯತೆಯ ಭಾವನೆ ಮೂಡಿದಾಗ ಕಿಸ್‌ ಮಾಡುತ್ತಾರೆ. 

•    ಧನು (Sagittarius)
ಸಾಹಸಮಯ ಮತ್ತು ಕುತೂಹಲದಿಂದ ಚುಂಬಿಸಲು ಬಯಸುವ ಜನ ಧನು ರಾಶಿಯವರು. ಚುಂಬಿಸಲು ಬಯಸಿದ್ದರೆ ವಿವಿಧ ಅನುಭವಗಳಿಗೆ ನಿಮ್ಮನ್ನೂ ಒಳಪಡಿಸುತ್ತಾರೆ. ಚುರುಕು ಜೋಕ್‌ (Joke) ಮಾಡುತ್ತಾರೆ. ವಿಪರೀತ ಉತ್ಸಾಹಿತರಾಗಿದ್ದು, ಸರಿಯಾದ ಸಂದರ್ಭ ನೋಡಿಕೊಂಡು ಕಿಸ್‌ ಮಾಡಿ, ನಿಮ್ಮನ್ನು ಅಚ್ಚರಿಗೆ ತಳ್ಳುತ್ತಾರೆ.

•    ಮಕರ (Capricorn)
ಮಕರ ರಾಶಿಯ ಜನ ದೃಢ ನಿರ್ಧಾರ ಹಾಗೂ ಕೇಂದ್ರೀಕೃತ ಧೋರಣೆಯಿಂದ ಚುಂಬಿಸುತ್ತಾರೆ. ತಮ್ಮ ಮಹತ್ವಾಕಾಂಕ್ಷೆ ಹಾಗೂ ಚಾಲನಾ ಶಕ್ತಿಯಿಂದ ನಿಮ್ಮನ್ನು ಆಕರ್ಷಿಸುತ್ತಾರೆ. ಬದ್ಧತೆಯಿಂದ (Commit) ಸೆಳೆಯುತ್ತಾರೆ. ಸ್ವಲ್ಪ ಸಮಯ ತೆಗೆದುಕೊಂಡು ಆಳವಾದ ಭಾವನೆಯಿಂದ ಚುಂಬಿಸುತ್ತಾರೆ.

•    ಕುಂಭ (Aquarius)
ಅನ್ವೇಷಣಾ ಭಾವ ಮತ್ತು ನೈಜತೆಯಿಂದ ಚುಂಬಿಸುವ ಕುಂಭ ರಾಶಿಯ ಜನ ಅಸಾಂಪ್ರದಾಯಿಕ ವಿಧಾನದ ಮೂಲಕ ಸಂಗಾತಿಯನ್ನು ಅಚ್ಚರಿಪಡಿಸುತ್ತಾರೆ. ಆಳವಾದ ಮಾತುಕತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮನಸ್ಸು, ಹೃದಯಬಿಚ್ಚಿ ಮಾತನಾಡಲು ಪ್ರೇರೇಪಿಸುತ್ತಾರೆ. ಕುಂಭದವರಂತೆಯೇ ಅವರ ಚುಂಬನ ಸಹ ವಿಶಿಷ್ಟವಾಗಿರುತ್ತದೆ.

•    ಮೀನ (Pisces)
ಫ್ಯಾಂಟಸಿ ಮತ್ತು ರೋಮ್ಯಾನ್ಸ್‌ ಅನ್ನು ಒಳಗೊಂಡಿರುವ ಚುಂಬನ ಮೀನ ರಾಶಿಯವರದ್ದು. ಅವರು ನಿಮ್ಮನ್ನು ಚುಂಬಿಸಲು ಬಯಸಿದ್ದರೆ ಕ್ರಿಯಾಶೀಲತೆ, ಕನಸುಗಳ (Dream) ಲೋಕಕ್ಕೆ ಕರೆದೊಯ್ಯುತ್ತಾರೆ. ಪ್ರೇಮಪತ್ರ ಬರೆಯುತ್ತಾರೆ, ಕವನ ನೀಡುತ್ತಾರೆ. ರೋಮ್ಯಾಂಟಿಕ್‌ ವಿಧಾನಗಳನ್ನು ಅನುಸರಿಸುತ್ತಾರೆ. ಅವರ ಚುಂಬನ ನಿಮ್ಮ ಹೃದಯವನ್ನು ಸೂರೆಗೊಳ್ಳುತ್ತದೆ.


 

click me!