ರಾಶಿ ಅನುಸಾರ ನಿಮ್ಮ ಈ ಅಂಗಗಳು ಆಕರ್ಷಕವಾಗಿರುತ್ತವೆ!

By Suvarna News  |  First Published May 28, 2020, 5:02 PM IST

ರಾಶಿಗಳು ಕೇವಲ ಮನುಷ್ಯನ ಹಣೆಬರಹವನ್ನಷ್ಟೇ ನಿರ್ಧರಿಸುವುದಿಲ್ಲ. ಅವುಗಳು ಒಬ್ಬ ವ್ಯಕ್ತಿಯ (ಗಂಡು/ಹೆಣ್ಣು) ಅಂದವನ್ನೂ ನಿರ್ಣಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಲ್ಲಿ ಪ್ರತಿಯೊಂದು ರಾಶಿಗೆ ಅದರದ್ದೇ ಆದ ಅಂಗಗಳು ಸುಂದರವಾಗಿರುತ್ತವೆ ಎಂದು ಉಲ್ಲೇಖಿಸಲಾಗಿದೆ. ಕಣ್ಣು, ಮುಖ, ಕೂದಲು, ಕಾಲು, ತ್ವಚೆ, ಕೊನೆಗೆ ಆ ಜಾಗವೂ ಸಹ ರಾಶಿಗಳ ಆಧಾರದ ಮೇಲೆ ಸುಂದರತೆಯನ್ನು ಹೊಂದಿರುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು.


ಸುಂದರತೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇದ್ದೇ ಇರುತ್ತದೆ. ಇಲ್ಲಿ ಬಣ್ಣವೊಂದೇ ಮುಖ್ಯವಾಗಿರುವುದಿಲ್ಲ. ದೇಹದ ವಿವಿಧ ಅಂಗಗಳು ಸೌಂದರ್ಯವನ್ನು ಹೆಚ್ಚು ಮಾಡುತ್ತವೆ. ಕೆಲವರ ಅಂದವನ್ನು ಕೂದಲು ಹೆಚ್ಚಿಸಿದರೆ, ಮತ್ತೆ ಕೆಲವರಿಗೆ ಚಂದುಟಿ, ನಯನಗಳು, ಕೆನ್ನೆ ಇಲ್ಲವೇ ಮೈಮಾಟಗಳು ಚೆಂದ ಕಾಣುವಂತೆ ಮಾಡುತ್ತವೆ. 
ಹೀಗೆ ಚೆಂದ ಕಾಣುವ ವ್ಯಕ್ತಿಗಳಿಗೆ ಪೋಷಕರು, ಅನುವಂಶೀಯತೆಗಳೆಲ್ಲ ಕಾರಣವಾದರೂ ಸಹ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟುವ ಪ್ರತಿ ವ್ಯಕ್ತಿಯ ರಾಶಿಯ ಆಧಾರದ ಮೇಲೆ ಯಾವ ಯಾವ ಅಂಗಗಳು ಸುಂದರವಾಗಿರುತ್ತದೆ ಎಂದು ಧರ್ಮಶಾಸ್ತ್ರ ಹೇಳುತ್ತದೆ. ಈ ನಿಟ್ಟಿನಲ್ಲಿ ಯಾವ ಯಾವ ರಾಶಿಯವರಿಗೆ ಶಾರೀರಿಕವಾಗಿ ಯಾವ ಯಾವ ಅಂಗಗಳು ಸುಂದರವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಅವುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಮೇಷ ರಾಶಿಗರಿಗೆ ಹುಬ್ಬುಗಳೇ ಸುಂದರ
ಮೇಷ ರಾಶಿ ಹೊಂದಿದ್ದವರಿಗೆ ಹುಬ್ಬುಗಳು ಅಂದ ಹಾಗೂ ಆಕರ್ಷಕವಾಗಿರುತ್ತದೆ. ಹುಬ್ಬುಗಳ ಮೂಲಕವೇ ಅವರ ಎದುರಿನವರ ಮನ-ಹೃದಯ ಗೆಲ್ಲುತ್ತಾರೆ. ಅವರ ಕೆಲವು ಹಾವ-ಭಾವ ಹುಬ್ಬಿನ ಮೂಲಕವೇ ವ್ಯಕ್ತಪಡಿಸುತ್ತಾರೆ.

ಇದನ್ನು ಓದಿ: ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!.

ವೃಷಭದವರಿದ್ದರೆ ಅದರವೇ ಮಧುರ
ವೃಷಭ ರಾಶಿ ಇದ್ದವರಿಗೆ ತುಟಿ ಬಹಳ ಆಕರ್ಷಕವಾಗಿರುತ್ತದೆ. ತುಟಿಯೇ ಇವರ ಸುಂದರತೆಯನ್ನು ನಾಲ್ಕು ಪಟ್ಟು ಹೆಚ್ಚಿಸಿರುತ್ತದೆ, ಎಲ್ಲರ ಕಣ್ಣು ಇವರ ಅದರದತ್ತಲೇ ನೆಟ್ಟಿರುತ್ತದೆ. ಅಷ್ಟರಮಟ್ಟಿಗೆ ಅಂದವಾಗಿ ರೂಪುಗೊಂಡಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.



ಮಿಥುನದಲ್ಲಿ ಅರಳಿದ ಮುಖ
ಮಿಥುನ ರಾಶಿಯವರ ಮುಖದ ರಚನೆಯೇ ಸೊಗಸು. ಇವರ ಮುಖವನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ ಎದುರಿನವರಿಗೆ ಉಂಟಾಗುತ್ತದೆ. ಇವರ ಬಣ್ಣ ಯಾವುದೇ ಇರಲಿ ಸೌಂದರ್ಯ ಮಾತ್ರ ಇವರ ಕಾಲ ಕೆಳಗೆ ಬಿದ್ದಿರುತ್ತದೆ ಎಂದೇ ಹೇಳಲಾಗುತ್ತದೆ. ಇವರಿಗೆ ಮೇಕಪ್ ಮಾಡುವ ಪ್ರಮೇಯವೇ ಇರುವುದಿಲ್ಲ, ನ್ಯಾಚುರಲ್ ಸೌಂದರ್ಯ ಇವರದ್ದಾಗಿರುತ್ತದೆ. 

ಕರ್ಕಾಟಕದವರ ಉದರ ಸುಂದರ
ಕರ್ಕಾಟಕ ರಾಶಿಯವರ ಹೊಟ್ಟೆ ಬಲು ಸುಂದರ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ದಿರಿಸನ್ನು ಇವರು ಧರಿಸಿದರೂ ಹೊಟ್ಟೆ ಮಾತ್ರ ಆಕರ್ಷಕವಾಗಿ ಕಾಣುತ್ತದೆ. ಹೀಗಾಗಿಯೇ ಇವರು ಸೇವಿಸುವ ಆಹಾರದಲ್ಲಿ ಬಹಳ ಕಟ್ಟುನಿಟ್ಟು. 

ಇದನ್ನು ಓದಿ: ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

ಸಿಂಹದವರ ಕೇಶವೇ ಸೊಗಸು
ಸಿಂಹ ರಾಶಿ ಹೊಂದಿದ್ದವರ ಕೇಶ ರಾಶಿ ಬಹಳ ಸೊಗಸಾಗಿರುತ್ತದಂತೆ. ಎಲ್ಲರಿಗೂ ಇವರ ಕೂದಲಿನ ಮೇಲೆ ದೃಷ್ಟಿಹರಿಯುತ್ತದೆ. ಇವರ ಕೂದಲ ರಚನೆ ಹೇಗಿರುತ್ತದೆಂದರೆ ಯಾವ ರೀತಿಯ ಹೇರ್ ಸ್ಟೈಲ್ ಇಲ್ಲವೇ ಹೇರ್ ಕಟ್ ಮಾಡಿದರೂ ಇವರಿಗೆ ಒಪ್ಪುತ್ತದೆ. 

Tap to resize

Latest Videos



ಕನ್ಯಾದವರು ತ್ವಚೆಗೆ ಹೆಸರುವಾಸಿ
ಕನ್ಯಾ ರಾಶಿಯವರ ತ್ವಚೆ ಬಹಳ ಸುಂದರವಾಗಿರುವುದಲ್ಲದೆ, ಪ್ರಾಕೃತಿಕವಾಗಿ ಮೃದುವಾಗಿರಲಿದೆ. ಇವರು ತಮ್ಮ ತ್ವಚೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. 

ತುಲಾದವರ ನಡು ಚೆಂದ
ತುಲಾ ರಾಶಿಯವರ ಸೊಂಟವೇ ಆಕರ್ಷಕವಂತೆ. ಅವರು ನಡೆದಾಡುವ ವೇಳೆ ನಡುವೇ ಸುಂದರವಾಗಿ ಕಾಣುತ್ತದೆ ಎನ್ನಲಾಗಿದೆ. ಅವರ ಸೊಂಟದ ಭಾಗಗಳು ಸೊಗಸಾಗಿರುವುದಲ್ಲದೆ, ದೇಹ ರಚನೆಯು ನುರಿತ ಆಟಗಾರರಂತೆ ರೂಪುಗೊಂಡಿರುತ್ತದೆ. ಅಷ್ಟರ ಮಟ್ಟಿಗೆ ದೃಢತೆಯನ್ನು ಹೊಂದಿರುತ್ತದೆ.

ವೃಶ್ಚಿಕದವರ ಆ ಜಾಗ ಬೆಸ್ಟ್ ಅಂತೆ
ವೃಶ್ಚಿಕ ರಾಶಿಯವರು ಶಾರೀರಿಕ ಸಂಬಂಧಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಾರಂತೆ. ಇದಕ್ಕೆ ತಕ್ಕಂತೆ ಇವರ ಗುಪ್ತಾಂಗ ಸಹ ಬಹಳ ಸುಂದರವಾಗಿರುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಅಲ್ಲದೆ, ಇವರಿಗೂ ಸಹ ಆ ಜಾಗದ ಬಗ್ಗೆ ವಿಶೇಷ ಆಸಕ್ತಿ ಇರುತ್ತದಲ್ಲದೆ, ಬಹಳ ಆಸ್ಥೆ ವಹಿಸಿ ಶುಚಿಯಾಗಿಟ್ಟುಕೊಳ್ಳುತ್ತಾರಂತೆ. 

ಧನುದವರ ಹಿಂಭಾಗವೇ ಸುಂದರ
ಧನು ರಾಶಿಯವರ ಹಿಂಭಾಗವು ಸುಂದರವಂತೆ. ಇದಕ್ಕಾಗಿಯೇ ಹೇಳುವುದಿರಬಹುದು. ಕೆಲವರು ಹಿಂಬದಿಯಿಂದ ಬಹಳ ಸುಂದರ ಹಾಗೂ ಆಕರ್ಷಕವಾಗಿ ಕಾಣುತ್ತಿರುತ್ತಾರೆ. ಇವರ ಹಿಂಭಾಗ ಫ್ಲಾಟ್ ಆಗಿ ಸೆಕ್ಸಿಯಾಗಿ ಕಾಣುತ್ತದೆ ಎನ್ನಲಾಗಿದೆ. 

ಮಕರ ರಾಶಿಗರ ಕಾಲು ಆಕರ್ಷಕ
ಮಕರ ರಾಶಿಯವ ಕಾಲುಗಳು ಬಹಳ ನೀಳವಾಗಿ ಆಕರ್ಷಕವಾಗಿರುವುದಲ್ಲದೆ, ನೋಡುಗರನ್ನು ಸೆಳೆಯುತ್ತದೆ. ಅದರಲ್ಲೂ ಎತ್ತರ ಇರುವವರ ಕಾಲಂತೂ ಬಹಳ ಸುಂದರವಾಗಿ ಕಾಣುತ್ತದೆ.

ಇದನ್ನು ಓದಿ: ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಕುಂಭದವರ ಪಾದ-ತ್ವಚೆ ಹೀಗಿರುತ್ತೆ
ಕುಂಭ ರಾಶಿಯವರ ಕಾಲುಗಳೂ ಸುಂದರವಾಗಿರುವುದಲ್ಲದೆ, ಪಾದ ಹಾಗೂ ತ್ವಚೆ ಸಹ ಅಷ್ಟೇ ಆಕರ್ಷಕವಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ. ಅಂದರೆ, ಇವರು ತ್ವಚೆಯೂ ಸಹ ಮೃದುವಾಗಿ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.

ಮೀನದವರ ನಯನ ಮನೋಹರ
ಮೀನ ರಾಶಿಯವರ ಕಣ್ಣುಗಳೇ ಅದ್ಭುತ ಎಂದು ಹೇಳಲಾಗುತ್ತದೆ. ಇವರ ಕಣ್ಣುಗಳೇ ಮೊದಲು ನೋಡುಗರನ್ನು ಸೆಳೆಯುತ್ತದೆ. ಕಣ್ಣು ಸುಂದರವಾಗಿದ್ದರೆ ಸಹಜವಾಗಿ ಮುಖದ ಅಂದವನ್ನು ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಈ ರಾಶಿಯವರು ಹೆಚ್ಚು ಭಾಗ್ಯಶಾಲಿಯಾಗಿರುವುದಲ್ಲದೆ, ಮೀನಿನಂತೆ ನಯನಗಳು ಕಾಣುತ್ತವೆ.

click me!