Ati Rudra Maha Yaga: ಭಯದ ಬದಲು ದೇವರನ್ನು ಭಕ್ತಿಯಿಂದ ಪೂಜಿಸಿ

By Ravi Janekal  |  First Published Feb 25, 2023, 3:14 PM IST

ಎತ್ತು ಗಾಣಕ್ಕೆ ಸುತ್ತದಿದ್ದರೆ ಪೆಟ್ಟು ಬೀಳುವಂತೆ ಭಯದಿಂದ ದೈವ, ದೇವರ ಆರಾಧನೆ ಬದಲು ಭಕ್ತಿ, ಪ್ರೀತಿಯಿಂದ ಮಾಡುವುದನ್ನು ಅರಿತು ಬದುಕು ಮುನ್ನಡೆಸಬೇಕು  ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ತಿಳಿಸಿದರು.


ಉಡುಪಿ (ಫೆ.25) : ಎತ್ತು ಗಾಣಕ್ಕೆ ಸುತ್ತದಿದ್ದರೆ ಪೆಟ್ಟು ಬೀಳುವಂತೆ ಭಯದಿಂದ ದೈವ, ದೇವರ ಆರಾಧನೆ ಬದಲು ಭಕ್ತಿ, ಪ್ರೀತಿಯಿಂದ ಮಾಡುವುದನ್ನು ಅರಿತು ಬದುಕು ಮುನ್ನಡೆಸಬೇಕು  ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ತಿಳಿಸಿದರು.

ಅವರು ಮಣಿಪಾಲ(Manipal) ಸಮೀಪದ ಶಿವಪಾಡಿ ಶ್ರೀಉಮಾಮಹೇಶ್ವರ ದೇವಳ(Shivapadi umamaheshwar devala)ದಲ್ಲಿ ನಡೆಯುತ್ತಿರುವ ಅತಿ ರುದ್ರ ಮಹಾಯಾಗ(ati rudra mahayaga) ಧಾರ್ಮಿಕ‌ ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರ ಉಪನ್ಯಾಸ ನೀಡಿದರು. 

Tap to resize

Latest Videos

undefined

Ballari : ದೇವರು ಕೇಳಿದನೆಂದು ನಾಲಿಗೆಯನ್ನೇ ಕೊಯ್ದುಕೊಟ್ಟ ಭೂಪ

ನಮಗಿಂದು ಹಕ್ಕಿಯಾಗಿ ಹಾರುವುದು,ಮೀನಾಗಿ ಈಜಲು‌ ಗೊತ್ತಿದೆ. ಆದರೆ‌ ಮನುಷ್ಯನಾಗಿ ಬದುಕುವುದೇ ಗೊತ್ತಿಲ್ಲ.ದೇಶಪ್ರೇಮ, ಪ್ರಕೃತಿ ಉಳಿಸುವುದೇ ದೇವರ ಸೃಷ್ಟಿ, ಆರಾಧನೆ ಹಿಂದಿರುವ‌ ಗುಟ್ಟು. ಪ್ರಕೃತಿ‌ ಜತೆಗೆ ಬದುಕುವುದೇ ಆಧ್ಯಾತ್ಮಿಕ ಜೀವನ. ಅಭಿವೃದ್ಧಿ ಹೆಸರಲ್ಲಿ ಯಂತ್ರ ರಕ್ಕಸರಿಂದ ಪ್ರಕೃತಿ ನಾಶವಾಗುತ್ತಿದೆ.

ವೇದ ಮಂತ್ರಗಳನ್ನು ಯಾವ ಉದ್ದೇಶಕ್ಕೆ ಬಳಸುತ್ತೇವೆಯೋ ಅದರ ಆಧಾರದಲ್ಲಿ ಮಹತ್ವ ಪಡೆಯುತ್ತದೆ, ಇದುವೇ ಮಂತ್ರ ಶಕ್ತಿ. ಸಮಾಜ‌ ತಿದ್ದುವ ಕೆಲಸವನ್ನು ಹಿರಿಯರು ಧಾರ್ಮಿಕ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟಿದ್ದಾರೆ. 84ಲಕ್ಷ‌ ಜೀವರಾಶಿಗೂ ಬದುಕುವ ಹಕ್ಕಿದೆ, ಹೀಗಾಗಿ ಅನ್ಯರನ್ನೂ ಬದುಕಲು ಬಿಡಬೇಕು ಎಂದರು. 

ದಶರಥ ನಗರ(Dasharat nagar) ಅರ್ಬಿಕೋಡಿ‌ ಶ್ರೀ ವೈಷ್ಣವಿ ದುರ್ಗಾದೇವಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಜ್ ಹೆಗ್ಡೆ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. 

ಆರೆಸ್ಸೆಸ್ ಉಡುಪಿ ಜಿಲ್ಲಾ ಸಂಘ ಚಾಲಕ ಡಾ.ನಾರಾಯಣ ಶೆಣೈ ಅಧ್ಯಕ್ಷತೆ‌ ವಹಿಸಿದ್ದರು. 

ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಉಡುಪಿ ಶಾಸಕ ಕೆ.ರಘುಪತಿ ಭಟ್, ಪರ್ಕಳ‌ ಶ್ರೀಮಹಾಲಿಂಗೇಶ್ವರ‌ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಉಪಾಧ್ಯಾಯ, ರಾಜಾಪುರ ಸಾರಸ್ವತ‌ ಸಮಾಜದ‌ ಅಧ್ಯಕ್ಷ ಪೆರ್ಣಂಕಿಲ‌ ಶ್ರೀಶ ನಾಯಕ್,  ಉದ್ಯಮಿ‌ ದೇವಿ‌‌ಚರಣ ಕಾವಾ,ಪದ್ಮಶಾಲಿ ಸಮಾಜದ ಅಧ್ಯಕ್ಷ. ರಾಮದಾಸ್ ಶೆಟ್ಟಿಗಾರ್,  ಶಿವರಾಯ, ಮನೋಜ್ ಪ್ರಭು, ಸತೀಶ್ ಪಾಟೀಲ್, ಪ್ರಕಾಶ್ ಕುಕ್ಕೆಹಳ್ಳಿ, ಟ್ರಸ್ಟಿ ಸಂಜಯ್ ಪ್ರಭು, ಪ್ರದೀಪ್ ಮಡಿವಾಳ ಹೆರ್ಗ, ಎನ್.ಎಂ.ಪೂಜಾರಿ, ಡಾ.ಎಚ್.ಎನ್.ಉದಯಶಂಕರ್, ದೇವಳ ಅಭಿವೃದ್ಧಿ ಟ್ರಸ್ಟಿನ‌ ವಿಶ್ವಸ್ಥರಾದ ಶುಭಕರ ಸಾಮಂತ್, ದಿನೇಶ್ ಪ್ರಭು, ದಿನೇಶ್ ಶ್ರೀಧರ ಸಾಮಂತ್, ರಮಾನಂದ ಸಾಮಂತ್ ಎಸ್., ಉಮೇಶ್ ಪೆರ್ಡೂರು ಉಪಸ್ಥಿತರಿದ್ದರು.  ವೀಣಾ ಗಣೇಶ್ ಪಾಟೀಲ್ ಪ್ರಾರ್ಥಿಸಿದರು. 

ದೇವರು ನೀಡಿದ ಶಿಕ್ಷೆಯನ್ನೇ ಉತ್ಸವವಾಗಿಸಿದ ಜನ: ಲಕ್ಷ್ಮಿ ರಂಗನಾಥಸ್ವಾಮಿಯ ಅನ್ನದಕೋಟೆ ಉತ್ಸವ ಇದು

ಶಿವಪಾಡಿ ಶ್ರೀಉಮಾಮಹೇಶ್ವರ ದೇವಳ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ಡಾ.ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು. ರತ್ನಾಕರ ಇಂದ್ರಾಳಿ ವಂದಿಸಿದರು.

click me!