
ಜ್ಯೋತಿಷ ಶಾಸ್ತ್ರವನ್ನು ಜ್ಯೋತಿಷ ವಿಜ್ಞಾನ ಎಂದೂ ಕರೆಯುವವರು. ಇದು ಕೂಡ ಒಂದು ರೀತಿಯ ವಿಜ್ಞಾನವೇ. ಆದರೆ ಇಂದು ನಕಲಿ ಜ್ಯೋತಿಷಿಗಳು ಹೆಚ್ಚಾಗಿರುವ ಕಾರಣದಿಂದ ಇದಕ್ಕೂ ಈಗ ಬೆಲೆ ಇಲ್ಲದಾಗಿದೆ. ಆದರೆ ಅಸಲಿಗೆ ಜ್ಯೋತಿಷಾಸ್ತ್ರದ ಪ್ರಕಾರ, ಒಂದೊಂದು ರಾಶಿ, ಆ ರಾಶಿಯಲ್ಲಿನ ನಕ್ಷತ್ರಗಳಿಗೆ ಅದರದ್ದೇ ಆದ ಭಿನ್ನ ರೀತಿಯ ಗುಣಗಳು ಇರುತ್ತವೆ. ರಾಶಿ ಒಂದೇ ಆದರೂ ಇಬ್ಬರು ವ್ಯಕ್ತಿಗಳಲ್ಲಿ ವಿಭಿನ್ನ ಗುಣ ಕಾಣಬಹುದು. ಅದು ಹೇಗೆ ಸಾಧ್ಯ ಎಂದು ಎನ್ನಿಸಲೂ ಬಹುದು. ಅದೇ ರೀತಿ ನಕ್ಷತ್ರ ಒಂದೇ ಆಗಿದ್ದರೂ ಕೆಲವೊಮ್ಮೆ ಇಬ್ಬರ ಸ್ವಭಾವ, ಇಷ್ಟಾನಿಷ್ಟಗಳಲ್ಲಿ ವ್ಯತ್ಯಾಸ ಇರುತ್ತದೆ.ಆ ಸಂದರ್ಭದಲ್ಲಿ ಅದು ಆ ನಕ್ಷತ್ರಗಳ ಪಾದಗಳ ಮೇಲೆ ಅವಲಂಬಿತವಾಗಿರುತ್ತದೆ.
ಅದೇ ರೀತಿ, ಯಾವ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತಮ್ಮ ಪತಿಗೆ ಶ್ರೇಯಸ್ಸು ತರುವುದೂ ಅಲ್ಲದೇ ಅವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತಾರೆ ಎನ್ನುವ ವಿಷಯವೊಂದು ತಿಳಿದುಬಂದಿದೆ. ಅದರ ಪ್ರಕಾರ, ಯಾವ ರಾಶಿಯ ಯಾವ ನಕ್ಷತ್ರ ಹೆಣ್ಣುಮಕ್ಕಳಲ್ಲಿ ಈ ಗುಣ ಇದೆ ಎನ್ನುವುದನ್ನು ಇಲ್ಲಿ ನೋಡೋಣ:
ರೋಹಿಣಿ ನಕ್ಷತ್ರ (ವೃಷಭ ರಾಶಿ)
ವೃಷಭ ರಾಶಿಯಲ್ಲಿ ಕೃತಿಕಾ, ರೋಹಿಣಿ ಹಾಗೂ ಮೃಗಶಿರ ನಕ್ಷತ್ರಗಳು ಇವೆ. ಅವುಗಳ ಪೈಕಿ ರೋಹಿಣಿ ನಕ್ಷತ್ರವು ಈ ವಿಷಯದಲ್ಲಿ ಬಹಳ ಗ್ರೇಟ್. ಹೌದು. ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಹುಡುಗಿಯರು ಆಕರ್ಷಕ, ಬುದ್ಧಿವಂತ ಮತ್ತು ಸೂಪರ್ ಸೃಜನಶೀಲರಾಗಿರುತ್ತಾರೆ. ಅವರ ಉಪಸ್ಥಿತಿಯು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಸಂಪತ್ತು ಅಯಸ್ಕಾಂತದಂತೆ ಅವರನ್ನು ಸೆಳೆಯುತ್ತದೆ. ಐಷಾರಾಮಿ ಮತ್ತು ಆರ್ಥಿಕ ಸ್ಥಿರತೆ ಅವರಿಗೆ ಸ್ವಾಭಾವಿಕವಾಗಿಯೇ ಆಕರ್ಷಿತವಾಗುತ್ತವೆ.
ಉತ್ತರ ಫಲ್ಗುಣಿ ನಕ್ಷತ್ರ (ಸಿಂಹ ಮತ್ತು ಕನ್ಯಾರಾಶಿ)
ಸಿಂಹ ರಾಶಿಯಲ್ಲಿ ಮಘ ನಕ್ಷತ್ರ, ಹುಬ್ಬ ನಕ್ಷತ್ರ ಮತ್ತು ಉತ್ತರ ಫಲ್ಗುಣಿಯ 1 ನೇ ಪಾದ ಇರುತ್ತದೆ. ಇನ್ನು ಕನ್ಯಾ ರಾಶಿಯಲ್ಲಿ, ಉತ್ತರ ಫಲ್ಗುಣಿಯ 2,3,4 ನೇ ಪಾದ, ಹಸ್ತ ನಕ್ಷತ್ರ ಮತ್ತು ಚಿತ್ತಾ ನಕ್ಷತ್ರದ 1,2 ನೇ ಪಾದವಿರುತ್ತದೆ. ಈ ಪೈಕಿ ಸಿಂಹ ಮತ್ತು ಕನ್ಯಾ ಎರಡಕ್ಕೂ ಸೇರಿರುವ ಉತ್ತರ ಫಲ್ಗುಣಿ ನಕ್ಷತ್ರ ಮಹಿಳೆಯರ ಪಾಲಿಗೆ ವಿಶೇಷವಾಗಿದೆ. ಇವರು, ನಾಯಕತ್ವದ ಗುಣಗಳು ಮತ್ತು ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಅವರಿಗೆ ಇರುವ ಶಕ್ತಿ. ಈ ನಕ್ಷತ್ರದ ಮಹಿಳೆ ತನ್ನ ಪತಿಗೆ ಆರ್ಥಿಕ ಮತ್ತು ವ್ಯವಹಾರ ವಿಷಯಗಳಲ್ಲಿ ಬೆಂಬಲ ನೀಡುವ ಮೂಲಕ ಅವನನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಾಳೆ.
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
ಸ್ವಾತಿ ನಕ್ಷತ್ರ (ತುಲಾ ರಾಶಿ)
ತುಲಾ ರಾಶಿಯಲ್ಲಿ ಚಿತ್ತಾ ನಕ್ಷತ್ರದ 3,4 ನೇ ಪಾದ, ಸ್ವಾತಿ ನಕ್ಷತ್ರ ಮತ್ತು ವಿಶಾಖ ನಕ್ಷತ್ರದ 1,2,3 ನೇ ಪಾದ ಇರುತ್ತದೆ. ಆದರೆ ಈ ಪೈಕಿ ಸ್ವಾತಿ ನಕ್ಷತ್ರದ ಮಹಿಳೆಯರು ಸ್ವತಂತ್ರರು ಮತ್ತು ಆರ್ಥಿಕ ಅದೃಷ್ಟ ಅವರ ಬಲವಾದ ಅಂಶವಾಗಿದೆ. ಇಂಥ ಮಹಿಳೆಯರು ತಮ್ಮ ಸಂಗಾತಿಯ ಸಂಪತ್ತಿನ ಬೆಳವಣಿಗೆಗೆ ಘನ ಬೆಂಬಲವನ್ನು ನೀಡುತ್ತಾರೆ. ರಾಜತಾಂತ್ರಿಕ ಸ್ವಭಾವದಿಂದಾಗಿ, ಇದು ಉತ್ತಮ ವ್ಯವಹಾರ ವ್ಯವಹಾರಗಳು ಮತ್ತು ಸ್ಥಿರತೆಯನ್ನು ಆಕರ್ಷಿಸುತ್ತದೆ.
ಅನುರಾಧಾ ನಕ್ಷತ್ರ (ವೃಶ್ಚಿಕ ರಾಶಿ)
ವೃಶ್ಚಿಕ ರಾಶಿಯಲ್ಲಿ ವಿಶಾಖ ನಕ್ಷತ್ರದ 4 ನೇ ಪಾದ, ಅನುರಾಧ ನಕ್ಷತ್ರ ಮತ್ತು ಜೇಷ್ಠಾ ನಕ್ಷತ್ರ ಬರುತ್ತದೆ. ಆ ಪೈಕಿ ಅನುರಾಧಾ ನಕ್ಷತ್ರದ ಮಹಿಳೆಯರು ಕಠಿಣ ಪರಿಶ್ರಮ, ಅರ್ಥಗರ್ಭಿತ ಮತ್ತು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಇದರಿಂದ ಸಮೃದ್ಧಿ ಪಡೆಯುತ್ತಾರೆ. ಬಲವಾದ ಅಂತಃಪ್ರಜ್ಞೆಯು ಅವರ ಸಂಗಾತಿಗೆ ಪರಿಪೂರ್ಣ ಆರ್ಥಿಕ ಮಾರ್ಗದರ್ಶಿಯನ್ನಾಗಿ ಮಾಡುತ್ತದೆ. ಅವರಿಂದಾಗಿ ವ್ಯವಹಾರ ಮತ್ತು ವೃತ್ತಿ ಎರಡೂ ಬೆಳೆಯುತ್ತವೆ.
ನಿಮ್ಮ ಹುಟ್ಟಿದ ದಿನಕ್ಕೆ ಅನುಗುಣವಾಗಿ 2025 ಹೇಗಿದೆ? ಉದ್ಯೋಗ, ಪ್ರೀತಿ, ಮದುವೆ, ಲಾಭ- ನಷ್ಟ ಹೇಗಿದೆ?
ಮೂಲಾ ನಕ್ಷತ್ರ (ಧನು ರಾಶಿ)
ಧನು ರಾಶಿಯಲ್ಲಿ ಮೂಲ ನಕ್ಷತ್ರ, ಪೂರ್ವಾಷಾಡ ನಕ್ಷತ್ರ ಮತ್ತು ಉತ್ತರಾಷಾಡ ನಕ್ಷತ್ರವಿದೆ. ಇದರಲ್ಲಿ ಮೂಲ ನಕ್ಷತ್ರದ ಹುಡುಗಿಯರು ಪರಿವರ್ತನೆ ತರುತ್ತಾರೆ. ಅಡೆತಡೆಗಳನ್ನು ತೆಗೆದುಹಾಕುವುದರಿಂದ ಮನೆಗೆ ಸಮೃದ್ಧಿ ಬರುತ್ತದೆ. ಅವರ ಆಧ್ಯಾತ್ಮಿಕ ಶಕ್ತಿಯು ತುಂಬಾ ಶಕ್ತಿಯುತವಾಗಿದ್ದು ಅದು ಸಂಪತ್ತು ಮತ್ತು ಬುದ್ಧಿವಂತಿಕೆ ಎರಡನ್ನೂ ಆಕರ್ಷಿಸುತ್ತದೆ.
ಉತ್ತರ ಭಾದ್ರ ನಕ್ಷತ್ರ (ಮೀನ)
ಮೀನ ರಾಶಿಯಲ್ಲಿ ಪೂರ್ವಭಾದ್ರ 4 ನೇ ಪಾದ, ಉತ್ತರಭಾದ್ರ ನಕ್ಷತ್ರ ಮತ್ತು ರೇವತಿ ನಕ್ಷತ್ರ ಬರುತ್ತದೆ. ಆ ಪೈಕಿ ಉತ್ತರಭಾದ್ರ ನಕ್ಷತ್ರದ ಮಹಿಳೆಯರು ಶಾಂತ, ಬುದ್ಧಿವಂತ ಮತ್ತು ಆಧ್ಯಾತ್ಮಿಕವಾಗಿ ಒಗ್ಗಿಕೊಂಡಿರುತ್ತಾರೆ. ಅವರ ಉಪಸ್ಥಿತಿಯು ಮನೆಗೆ ದೀರ್ಘಾವಧಿಯ ಆರ್ಥಿಕ ಯಶಸ್ಸು ಮತ್ತು ಶಾಂತಿಯನ್ನು ತರುತ್ತದೆ. ಅವರ ಸಮತೋಲಿತ ಶಕ್ತಿಯ ಮೂಲಕ ಸಂಪತ್ತು ಸ್ವಾಭಾವಿಕವಾಗಿ ಹರಿಯುತ್ತದೆ.
ಎರಡನೇ ಮಗು ಹೆಸರು ಬರೆದಿಟ್ಟ ಆಲಿಯಾ ಭಟ್ ಭವಿಷ್ಯವೇನು? ಸೆಲೆಬ್ರಿಟಿ ಸಂಖ್ಯಾಶಾಸ್ತ್ರಜ್ಞ ಹೇಳ್ತಿರೋದೇನು?